2019 ಕೇಂದ್ರ ಬಜೆಟ್; ಸ್ಟಾರ್ಟ್​ಅಪ್​, ರೈತರು, ಸಾಮಾನ್ಯ ಜನರಿಗೆ ಬಂಪರ್​ ಕೊಡುಗೆ ನಿರೀಕ್ಷೆ!

ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಈ ಬಾರಿಯ ಬಜೆಟ್​ನಲ್ಲಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ, 2.5 ಲಕ್ಷದಿಂದ 5 ಲಕ್ಷದವರೆಗೂ ಆದಾಯ ತೆರಿಗೆ ರಿಯಾಯಿತಿ ನೀಡಬಹುದು ಎನ್ನಲಾಗಿದೆ.

HR Ramesh | news18
Updated:January 29, 2019, 5:15 PM IST
2019 ಕೇಂದ್ರ ಬಜೆಟ್; ಸ್ಟಾರ್ಟ್​ಅಪ್​, ರೈತರು, ಸಾಮಾನ್ಯ ಜನರಿಗೆ ಬಂಪರ್​ ಕೊಡುಗೆ ನಿರೀಕ್ಷೆ!
ಸಾಂದರ್ಭಿಕ ಚಿತ್ರ
HR Ramesh | news18
Updated: January 29, 2019, 5:15 PM IST
ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಕೇಂದ್ರ ಸರ್ಕಾರ ಕೊನೆಯ ಬಜೆಟ್​ ಫೆಬ್ರವರಿ ಒಂದರಂದು ಮಂಡನೆಯಾಗಲಿದ್ದು, ಈ ಬಜೆಟ್​ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ಹಣಕಾಸು ರಾಜ್ಯ ಖಾತೆ ಸಚಿವ ಪಿಯೂಷ್​ ಗೊಯೆಲ್​ ಬಜೆಟ್​ ಮಂಡಿಸಲಿದ್ದಾರೆ. ಕೊನೆಯ ಬಜೆಟ್​ನಲ್ಲಿ ಬಡಜನರ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.

ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಈ ಬಾರಿಯ ಬಜೆಟ್​ನಲ್ಲಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರೈತರ ಪ್ರತಿವರ್ಷದ ಆದಾಯದಲ್ಲಿ ಹೆಚ್ಚಳ ಹಾಗೂ ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವಂತಹ ಯೋಜನೆಗೆ ಹೆಚ್ಚಿನ ಆಸಕ್ತಿ ನೀಡಲಾಗುವುದು ಎನ್ನಲಾಗಿದೆ. ಅಲ್ಲದೇ, 2.5 ಲಕ್ಷದಿಂದ 5 ಲಕ್ಷದವರೆಗೂ ಆದಾಯ ತೆರಿಗೆ ರಿಯಾಯಿತಿ ನೀಡಬಹುದು ಎನ್ನಲಾಗಿದೆ. ಸಣ್ಣ, ಅತಿ ಸಣ್ಣ ಕೈಗಾರಿಕೋದ್ಯಮಗಳಿಗೂ ಕೆಲ ಸಕಾರಾತ್ಮಕ ಯೋಜನೆಗಳನ್ನು ಜಾರಿಗೆ ತರಬಹುದು ಎಂದು ನಿರೀಕ್ಷಿಸಲಾಗಿದೆ.

ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ 2016ರಲ್ಲಿ ಸ್ಟಾರ್ಟ್​ಅಪ್​ಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಟಾರ್ಟ್​ಅಪ್​ ಇಂಡಿಯಾ ಅಭಿಯಾನಕ್ಕೆ ಆರಂಭಿಸಿತು. ಉದ್ಯೋಗ ಸೃಷ್ಟಿ, ಹೊಸ ಆವಿಷ್ಕಾರ, ಸಂಪತ್ತು ಹೆಚ್ಚಳ ಇದರ ಮುಖ್ಯ ಆಶಯವಾಗಿತ್ತು.

ಸರ್ಕಾರ ಉದ್ಯೋಗ ಸೃಷ್ಟಿಸುತ್ತಿಲ್ಲ. 2022ರ ವೇಳೆಗೆ ಭಾರತದ ಜನಸಂಖ್ಯೆಯ ಶೇಕಡ 35ರಷ್ಟು ಯುವಕರೇ ಇರುತ್ತಾರೆ. ಅವರೆಲ್ಲರಿಗೂ ಉದ್ಯೋಗ ಎಲ್ಲಿದೆ? ಎಂಬ ಚಿಂತನ-ಮಂಥನ ಆಗಾಗ ನಡೆಯುತ್ತಿರುತ್ತದೆ. ಈ ನಿಟ್ಟಿನಲ್ಲಿ ಯುವಕರಿಗೆ ಉದ್ಯೋಗ ನೀಡಲು ಸ್ಟಾರ್ಟ್ಅಪ್​ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎನ್ನಲಾಗಿದೆ.

ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಅರ್ಥಾತ್ ಯೂನಿವರ್ಸಲ್ ಬೇಸಿಕ್ ಇನ್​ಕಮ್ (ಯುಬಿಐ) ಯೋಜನೆ ಜಾರಿಗೊಳಿಸುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸಿಕ್ಕಿಂ ರಾಜ್ಯ ಇದನ್ನು ಜಾರಿಗೊಳಿಸಲು ಮುಂದಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಯುಬಿಐ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜ್ಯ-ಕೇಂದ್ರ ಸರ್ಕಾರಗಳು ಬಡತನ ಮತ್ತು ನಿರುದ್ಯೋಗ ಹೋಗಲಾಡಿಸಲು ಹಲವು ಯೋಜನೆ ಘೊಷಿಸುತ್ತಿವೆ. ಆದರೆ ಅನುಷ್ಠಾನದ ಕೊರತೆಯಿಂದ ಅವು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಆ ಹಲವು ಯೋಜನೆಗಳ ಬದಲು, ದೇಶದಲ್ಲಿ ಬಿಪಿಎಲ್ ವ್ಯಾಪ್ತಿಗೆ ಬರುವ ಶೇ. 27.5ರಷ್ಟು ಮಂದಿಗೆ ನೇರವಾಗಿ ಕನಿಷ್ಠ ಆದಾಯ ನೀಡಿದರೆ ಹೇಗೆ ಎನ್ನುವ ಚರ್ಚೆ- ಚಿಂತನೆ ನಡೆದಿದೆ. ಒಟ್ಟಾರೆಯಾಗಿ ನಿರುದ್ಯೋಗ, ಬಡತನ ಮುಂತಾದ ಕಾರಣಗಳಿಂದಾಗಿ ಮಾಸಿಕವಾಗಿ ಖಚಿತ ಆದಾಯ ಇಲ್ಲದಿರುವವರಿಗೆ ಪ್ರತಿತಿಂಗಳು ನಿರ್ದಿಷ್ಟ (ಸುಮಾರು 2,500 ರೂ.) ಹಣವನ್ನು ನೇರವಾಗಿ ವರ್ಗಾವಣೆ ಮಾಡುವುದು ಈ ಯೋಜನೆಯ ಉದ್ದೇಶ. ವಾರ್ಷಿಕವಾಗಿ ಈ ಯೋಜನೆಗೆ 32 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಹಣಕಾಸು ಇಲಾಖೆ ಅಂದಾಜು ಮಾಡಿದೆ.
First published:January 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ