Narendra Modi: ಮೋದಿ ದಿನನಿತ್ಯ ಏನು ಯೋಚಿಸ್ತಾರೆ; ರಾಹುಲ್ ಗಾಂಧಿ ಹೇಳಿದ್ದೇನು?

 ಮೋದಿ- ರಾಹುಲ್​ ಗಾಂಧಿ

ಮೋದಿ- ರಾಹುಲ್​ ಗಾಂಧಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಪ್ರತಿ ನಿತ್ಯ ಯಾವ ವಿಷಯಗಳ ಬಗ್ಗೆ ಯೋಚಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

  • Share this:

ನವದೆಹಲಿ(ಮಾ. 30): ದೇಶದಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ (Praise Hike) ಮತ್ತು ಹಣದುಬ್ಬರ (Inflation) ಹಾಗೂ ಪಾತಾಳಮುಖಿಯಾಗಿರುವ ದೇಶದ ಆರ್ಥಿಕತೆ (Declining Economy) ಬಗ್ಗೆ ಸದಾ ಖಚಿತವಾಗಿ ಮಾತನಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ಮತ್ತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ (Crude Oil) ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದ ದೇಶದ ಜನರಿಗೆ ಹೊರೆಯಾಗುವ ಸಾಧ್ಯತೆ ಇದೆ. ಕೂಡಲೇ ಕೇಂದ್ರ ಸರ್ಕಾರ (Union Government) ಅಗತ್ಯ ಕ್ರಮ‌ ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಪ್ರತಿ ನಿತ್ಯ ಯಾವ ವಿಷಯಗಳ ಬಗ್ಗೆ ಯೋಚಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


ಲಿಸ್ಟ್ ಬಿಡುಗಡೆ ಮಾಡಿದ ರಾಹುಲ್ ಗಾಂಧಿ


ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರವನ್ನು ಎಷ್ಟು ಹೆಚ್ಚಿಸಬೇಕು? ಯುವಕರಿಗೆ ಉದ್ಯೋಗದ ಖಾಲಿ ಕನಸುಗಳನ್ನು ತೋರಿಸುವುದು ಹೇಗೆ? ಇಂದು ಯಾವ ಸರ್ಕಾರಿ ಕಂಪನಿಯನ್ನು ಮಾರಾಟ ಮಾಡಬೇಕು? ರೈತರನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು ಹೇಗೆ? ಎಂಬ ವಿಷಯಗಳ ಬಗ್ಗೆ ಯೋಚಿಸುತಾರೆ. ಇವು ಪ್ರಧಾನ ಮಂತ್ರಿಗಳ ದೈನಂದಿನ ಪಟ್ಟಿಯಲ್ಲಿರುತ್ತವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವಿಟರ್ ಮೂಲಕ ವ್ಯಂಗ್ಯ ಮಾಡಿದ್ದಾರೆ.


ಕಚ್ಛಾ ತೈಲದ ಬೆಲೆ ಬ್ಯಾರಲ್ ಒಂದಕ್ಕೆ 100 ಡಾಲರ್ ಆಗಲಿದೆ


'ಹಣದುಬ್ಬರದ ಭಾರ ಎಲ್ಲಾ ಭಾರತೀಯರಿಗೂ‌‌ ಹೊರೆಯಾಗಿ ಪರಿಣಮಿಸಿದೆ. ಅಶಕ್ತ ರಾಷ್ಟ್ರ ಉಕ್ರೇನ್ ಮೇಲೆ ಬಲಾಢ್ಯ ರಷ್ಯಾ ಯುದ್ಧ ಘೋಷಿಸುವ ಮುನ್ನವೇ ದಾಖಲೆಯ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿತ್ತು. ಇದರಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಹೊರೆಯಾಗಿತ್ತು. ಬೆಲೆ ಏರಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರಲ್ ಒಂದಕ್ಕೆ 100 ಡಾಲರ್ ಆಗಲಿದೆ.


ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಕುರಿತು Kejriwal​​​ ಹೇಳಿಕೆ; ತೇಜಸ್ವಿ ಸೂರ್ಯ ನೇತೃತ್ವದಲ್ಲಿ Delhi CM ಮನೆ ಮುಂದೆ BJP ಪ್ರತಿಭಟನೆ


ಆಹಾರದ ಬೆಲೆಗಳಲ್ಲಿ ಶೇಕಡಾ  22ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದಲ್ಲದೆ ಕೋವಿಡ್-19 ಮಹಾಮಾರಿ ಜಾಗತಿಕ ಪೂರೈಕೆ ಸರಪಳಿಗೆ ತಡೆಯೊಡ್ಡಲಿದೆ. ಈ‌‌ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಲೆ ಏರಿಕೆಯ ಬಿಸಿಯಿಂದ ಜನರನ್ನು ರಕ್ಷಿಸಬೇಕು ಎಂದು ಮಾರ್ಚ್ 22ರಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು.



ಬೆಲೆ ಏರಿಕೆ ವಿರುದ್ಧ ಗಂಟೆ ಭಾರಿಸುವ ಪ್ರತಿಭಟನೆ


ಕಳೆದ ಒಂಭತ್ತು ದಿನಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂಟು ಬಾರಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದೆ. ನಡುವೆ ಅಡುಗೆ ಅನಿಲದ ಬೆಲೆಯನ್ನೂ ಏರಿಸಲಾಗಿದೆ. ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷವು ಮಾರ್ಚ್ 31 ರಂದು ಗಂಟೆ ಭಾರಿಸುವ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.



ಇದನ್ನೂ ಓದಿ: Hydrogen Car: ಸಂಸತ್​ಗೆ ಹೈಡ್ರೋಜನ್ ಕಾರ್​ನಲ್ಲಿ ಸುಯ್​ ಎಂದು ಬಂದಿಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ!


ಮಾರ್ಚ್ 31 ರಂದು ಬೆಳಿಗ್ಗೆ 11 ಗಂಟೆಗೆ- ಗ್ಯಾಸ್, ಪೆಟ್ರೋಲ್, ಬೆಲೆಗಳ ದುಸ್ತರ ಏರಿಕೆ ವಿರುದ್ಧ ಕಿವುಡ ಬಿಜೆಪಿ ಸರ್ಕಾರದ ಗಮನ ಸೆಳೆಯಲು ಜನರು ತಮ್ಮ ಮನೆ ಮತ್ತು ಸಾರ್ವಜನಿಕ ಸ್ಥಳಗಳ ಹೊರಗೆ ಗ್ಯಾಸ್ ಸಿಲಿಂಡರ್ ಮತ್ತು ಡ್ರಮ್-ಬೆಲ್ಸ್, ಇತರ ವಾದ್ಯಗಳೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.

First published: