ಗತ್ತು ಕೋವಿಡ್ -19 (COVID-19) ಸಾಂಕ್ರಾಮಿಕ ರೋಗದ ನಂತರ ಚೇತರಿಸಿಕೊಳ್ಳುತ್ತಿದ್ದಂತೆ ಅದರ ಬೆನ್ನಲ್ಲೇ ಮಂಕಿಪಾಕ್ಸ್ (Monkeypox) ಭೀತಿಯನ್ನು ಎದುರಿಸುವಂತಾಗಿದೆ. ಹೊಸ ಹೊಸ ರೀತಿಯ ರೋಗಗಳಿಂದ ಜನ ಹೈರಾಣಾಗಿದ್ದು, ಪ್ರಸ್ತುತ ವೆಸ್ಟ್ ನೈಲ್ ವೈರಸ್ (West Nile Virus) ಆತಂಕ ಎದುರಾಗುತ್ತಿದೆ. ನ್ಯೂಯಾರ್ಕ್ ನಗರದ ಸ್ಥಳೀಯ ಕಾಯಿಲೆ ಎಂದೇ ಕರೆಯಲಾಗುವ ʼವೆಸ್ಟ್ ನೈಲ್ ಜ್ವರʼ ಸದ್ಯ ನ್ಯೂಯಾರ್ಕ್ ನಗರದಲ್ಲಿ (New York City) ಭೀತಿಯನ್ನು ಉಂಟುಮಾಡುತ್ತಿದೆ. ನ್ಯೂಯಾರ್ಕ್ ನಲ್ಲಿ ಈಗಾಗ್ಲೇ ಇಬ್ಬರಲ್ಲಿ ವೆಸ್ಟ್ ನೈಲ್ ವೈರಸ್ ಪತ್ತೆಯಾಗಿದೆ. ಈ ವರ್ಷ 50 ವೆಸ್ಟ್ ನೈಲ್ ವೈರಸ್ ಸೋಂಕುಗಳು ಮತ್ತು ನಾಲ್ಕು ಸಾವುಗಳು (Death) ವರದಿಯಾಗಿವೆ. ಯುರೋಪಿನಲ್ಲಿ ವೆಸ್ಟ್ ನೈಲ್ ವೈರಸ್ ಹಾವಳಿ ಮಾಡುತ್ತಿದ್ದು, ಈ ವರ್ಷವೇ 100ಕ್ಕೂ ಹೆಚ್ಚು ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ಈ ವೈರಸ್ ಮೂಲವು ತುಂಬಾ ಹಳೆಯದಾಗಿದ್ದು, 1937ರಲ್ಲಿಯೇ ಈ ವೈರಸ್ ಪತ್ತೆಯಾಗಿತ್ತು ಎನ್ನಲಾಗಿದೆ. ಉಗಾಂಡಾದ ವೆಸ್ಟ್ ನೈಲ್ ಜಿಲ್ಲೆಯಲ್ಲಿ ವೈರಸ್‌ನ ಆರಂಭಿಕ ಪ್ರಕರಣವನ್ನು ಈ ಹಿಂದೆ ದಾಖಲಿಸಲಾಗಿತ್ತು.
ಸೋಂಕಿತ ಸೊಳ್ಳೆ ಕಡಿತದ ಮೂಲಕ ವೈರಸ್ ಹರಡುತ್ತದೆ
ವೈರಸ್ ಪ್ರಾಥಮಿಕವಾಗಿ ಸೊಳ್ಳೆಗಳಿಂದ ಹರಡುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲೂ ಸೋಂಕಿತ ಸೊಳ್ಳೆ ಕಡಿತದಿಂದಾಗಿ ವೈರಸ್ ಹರಡುತ್ತಿದೆ. ಸೋಂಕಿತ ಸೊಳ್ಳೆಯ ಕಡಿತದಿಂದ ಇದು ಸಾಮಾನ್ಯವಾಗಿ ಜನರಿಗೆ ಹರಡುವ ಕಾಯಿಲೆಯಾಗಿದೆ. ವೆಸ್ಟ್ ನೈಲ್ ಜ್ವರದ ಪ್ರಕರಣಗಳು ಸೊಳ್ಳೆಗಳು ಹೆಚ್ಚಾಗಿ ಕಂಡುಬರುವ ಋತುವಿನಲ್ಲಿ ಸಂಭವಿಸುತ್ತವೆ.
ವೆಸ್ಟ್ ನೈಲ್ ವೈರಸ್ ಲಕ್ಷಣಗಳು
ವೈರಸ್ ಸೋಂಕಿಗೆ ಒಳಗಾದ ಐದು ಜನರಲ್ಲಿ ಒಬ್ಬರು ಜ್ವರ, ದೇಹ ನೋವು, ವಾಂತಿ, ಅತಿಸಾರ, ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ, ದೃಷ್ಟಿ ನಷ್ಟ, ಮರಗಟ್ಟುವಿಕೆ ಮತ್ತು ಪಾರ್ಶ್ವವಾಯು ಮತ್ತು ದದ್ದುಗಳಂತಹ ಲಕ್ಷಣಗಳನ್ನು ತೋರಿಸುತ್ತಾರೆ. ಸೋಂಕಿತ 150 ಜನರಲ್ಲಿ ಒಬ್ಬರು ಗಂಭೀರವಾದ, ಕೆಲವೊಮ್ಮೆ ಮಾರಣಾಂತಿಕ ಪರಿಣಾಮ ಬೀರುವ ಅನಾರೋಗ್ಯವನ್ನು ಎದುರಿಸುವ ಸಾಧ್ಯತೆಗಳಿವೆ. ಈ ವೈರಸ್ ಕೇಂದ್ರ ನರಮಂಡಲಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: Heart Disease: ಮಹಿಳೆಯರಲ್ಲಿ ಹೃದಯಾಘಾತ ಸಂಖ್ಯೆ ಹೆಚ್ಚಳ; ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ
ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ ಮತ್ತು ಅಂಗಾಂಗ ಕಸಿ ಪಡೆದ ಜನರು ಹಾಗೂ ಕೆಲವು ವೈದ್ಯಕೀಯ ಪರಿಸ್ಥಿತಿಗಳಿರುವ ಜನರು ಸಹ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ವೈರಸ್ ಸಾಂಕ್ರಾಮಿಕವಲ್ಲದಿದ್ದರೂ, ರಕ್ತ ವರ್ಗಾವಣೆ ಅಥವಾ ಅಂಗ ಕಸಿ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹರಡುವ ಹೆಚ್ಚಿನ ಸಾಧ್ಯತೆಯಿದೆ. ಜ್ವರ ಸುಮಾರು 3 ರಿಂದ 14 ದಿನಗಳವರೆಗೆ ಇರುತ್ತದೆ. ಪ್ರಸ್ತುತ, ಸೋಂಕುಗಳಿಗೆ ಚಿಕಿತ್ಸೆ ನೀಡಲು ಯಾವುದೇ ಲಸಿಕೆಗಳು ಅಥವಾ ಔಷಧಿಗಳು ಲಭ್ಯವಿಲ್ಲ. ಆದರೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಇದು ಹರಡದಂತೆ ಅಥವಾ ತಾಕದಂತೆ ಸುರಕ್ಷಿತವಾಗಿರಿಸಿಕೊಳ್ಳಬಹುದಾಗಿದೆ.
ನ್ಯೂಯಾರ್ಕ್ ನ ಸ್ಥಳೀಯ ಕಾಯಿಲೆ
ವೆಸ್ಟ್ ನೈಲ್ ವೈರಸ್ ಅನ್ನು ಮೊದಲು ನ್ಯೂಯಾರ್ಕ್ ನಗರದಲ್ಲಿ 20 ವರ್ಷಗಳ ಹಿಂದೆ ಕಂಡುಹಿಡಿಯಲಾಯಿತು. ಇದನ್ನು ಈಗ ನ್ಯೂಯಾರ್ಕ್ ರಾಜ್ಯದಲ್ಲಿ ಸ್ಥಳೀಯವೆಂದು ಪರಿಗಣಿಸಲಾಗಿದೆ. ಈ ಬಾರಿ ನಗರದಾದ್ಯಂತ ದಾಖಲೆ ಸಂಖ್ಯೆಯ ಸೊಳ್ಳೆಗಳು ವೈರಸ್‌ನ ಕುರುಹುಗಳನ್ನು ಹೊಂದಿವೆ ಎಂದು ನಗರದ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Lumpy Skin Disease: ಜಾನುವಾರುಗಳಿಗೆ ಚರ್ಮ ಗಂಟುರೋಗದ ಕಂಟಕ! ಭಾರತದಲ್ಲಿ ಹೈನುಗಾರಿಕೆಯ ಭವಿಷ್ಯವೇನು?
ನಗರದಾದ್ಯಂತ ಇದುವರೆಗೆ 1,060 ಕ್ಕೂ ಹೆಚ್ಚು ಸೊಳ್ಳೆ ಪೂಲ್‌ಗಳನ್ನು ಗುರುತಿಸಲಾಗಿದೆ. ಇದು ಈವರೆಗಿನ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ.
ಎಚ್ಚರಿಕೆ ಕ್ರಮಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ