ಪ್ರೇಮಿಗಳ ದಿನ ಎಂದರೆ ಅರವಿಂದ್​ ಕೇಜ್ರಿವಾಲ್​ಗೆ ಬಲು ವಿಶೇಷ; ಕಾರಣ ಗೊತ್ತಾ!

ಪ್ರೇಮಿಗಳ ದಿನದಂದು ಮೂರನೇ ಬಾರಿ ಸಿಎಂ ಆಗುತ್ತಿರುವ ಅವರು ಈ ವರ್ಷ ಮಾತ್ರವಲ್ಲ ಕಳೆದ 2013, 2015 ಹಾಗೂ 2018ರ ಇದೇ ದಿನ ಅಧಿಕಾರ ಚುಕ್ಕಾಣಿ ಹಿಡಿದಿರುವುದು ವಿಶೇಷ.

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​​

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​​

  • Share this:
ನವದೆಹಲಿ (ಫೆ.11): ಪ್ರೇಮಿಗಳ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಇಡೀ ವಿಶ್ವವೇ ಈ ಸಂಭ್ರಮಾಚಾರಣೆಗೆ ಸಿದ್ಧವಾಗಿದೆ. ಭಾರತದಲ್ಲಿ ಕೂಡ ಈ ವಾಲೆಂಟೆನ್ಸ್​ ಡೇ ಆಚರಣೆ ಮಾಡುವವರ ಸಂಖ್ಯೆ ಕಡಿಮೆ ಇಲ್ಲ. ಇನ್ನು ಈ ಹಬ್ಬಕ್ಕೂ ಆಪ್​ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ಗೂ ಅವಿನಾಭಾವ ಸಂಬಂಧವಿದೆ ಎಂದರೆ ನೀವು ನಂಬಲೇಬೇಕು.

ವಾಲೆಟೆಂನ್ಸ್​ ಡೇಗೆ ಇನ್ನೇನು ಮೂರು ದಿನ ಬಾಕಿ ಇದೆ ಎನ್ನುವ ಸಂದರ್ಭದಲ್ಲಿ ದೆಹಲಿ ಮತದಾರರು ಕೇಜ್ರಿವಾಲ್​ಗೆ ದೊಡ್ಡ ಉಡುಗೊರೆ ನೀಡಿದ್ದಾರೆ. ದೆಹಲಿ ಆಡಳಿತ ಚುಕ್ಕಾಣಿಯನ್ನು ಮೂರನೇ ಬಾರಿ ಏರಲು ಅವರಿಗೆ ಅವಕಾಶ ಮಾಡಿಕೊಂಡಿದ್ದಾರೆ. ಪ್ರೇಮಿಗಳ ದಿನದಂದೇ ಅವರು ಪ್ರಮಾಣವಚನ ಸ್ವೀಕಾರ ಕೂಡ ಮಾಡುವ ಸಾಧ್ಯತೆ ಇದೆ.

ಪ್ರೇಮಿಗಳ ದಿನದಂದು ಮೂರನೇ ಬಾರಿ ಸಿಎಂ ಆಗುತ್ತಿರುವ ಅವರು ಈ ವರ್ಷ ಮಾತ್ರವಲ್ಲ ಕಳೆದ 2013, 2015 ಹಾಗೂ 2018ರ ಇದೇ ದಿನ ಅಧಿಕಾರ ಚುಕ್ಕಾಣಿ ಹಿಡಿದಿರುವುದು ವಿಶೇಷ.

2013ರ ಪ್ರೇಮಿಗಳ ದಿನ

2013ರಲ್ಲಿ ಮೊದಲ ಬಾರಿಗೆ ಆಪ್​ ಸರ್ಕಾರ ದೆಹಲಿಯಲ್ಲಿ ಸರ್ಕಾರ ರಚಿಸಿತ್ತು. 28 ಸ್ಥಾನ ಗೆದ್ದ ಕೇಜ್ರಿವಾಲ್​​,  ಕಾಂಗ್ರೆಸ್​ ಜೊತೆಗೂಡಿ ಆಗ ಸರ್ಕಾರ ರಚಿಸಿದ್ದರು.  ಡಿ. 28 ರಂದು ಮೊದಲ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಅವರ ಈ ಸರ್ಕಾರ 49 ದಿನಗಳಲ್ಲಿ ಪತನವಾಗಿತ್ತು. ಇದಾದ ಬಳಿಕ ಫೆ. 14ರಂದು ರಾಜೀನಾಮೆ ನೀಡಿ ಅಧಿಕಾರ​ದಿಂದ ಅವರು ಕೆಳಗಿಳಿದರು. ಅದು ಅವರ ಮುಂದಿನ ಮಹೋನ್ನತ ದಿಗ್ವಿಜಯಕ್ಕೆ ಇಟ್ಟ ಅಡಿಯಾಗಿತ್ತು.

2015ರ ಪ್ರೇಮಿಗಳ ದಿನ

2015ರಲ್ಲಿ ಚುನಾವಣೆಯಲ್ಲಿ 67 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಆಪ್​ ಮತ್ತೊಮ್ಮೆ ಗೆಲುವಿನ ನಗೆ ಬೀರಿತು.  ಫೆ. 14ರಂದು ಕೇಜ್ರಿವಾಲ್​ ರಾಮಲೀಲಾ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

2018 ಪ್ರೇಮಿಗಳ ದಿನ

ತಮ್ಮ ಸರ್ಕಾರ ರಚಿಸಿದ ಮೂರು ವರ್ಷವಾದ ಹಿನ್ನೆಲೆ 2018ರ ಪ್ರೇಮಿಗಳ ದಿನದಂದು ಕೇಜ್ರಿವಾಲ್​ ವಿಶೇಷ ಕಾರ್ಯಕ್ರಮ ರೂಪಿಸಿದರು. ಈ ಮೂಲಕ ಈ ದಿನಕ್ಕೂ ತಮಗೂ ನಂಟಿದೆ ಎಂದರು.

2020 ಪ್ರೇಮಿಗಳ ದಿನ

ಈಗ ಮೂರನೇ ಬಾರಿ ದೆಹಲಿ ಗದ್ದುಗೆ ಏರಲು ಸಜ್ಜಾದ ಸಿಎಂ  ಇದೇ ದಿನದಂದು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
First published: