Noida Twin Towers Demolition: ಕಟ್ಟಡ ಉರುಳಿಸಿದ ಬಳಿಕ ಧೋಳೋ ಧೂಳು! ಸ್ಥಳದಲ್ಲಿ ಸ್ವೀಟ್ ಹಂಚಿ ಸಂಭ್ರಮಾಚರಣೆ!

ಸ್ಫೋಟಕಗಳು ಸಿಡಿಯುತ್ತಿದ್ದಂತೆ ಕಟ್ಟಡಗಳು ಉರುಳಿವೆ. ಕಟ್ಟಡ ಕುಸಿಯುತ್ತಿರುವ ಶಬ್ದವು 10 ಕಿಲೋಮೀಟರ್ ದೂರದಲ್ಲಿ ಕೇಳುತ್ತಿತ್ತು ಅಂತ ನೋಯ್ಡಾ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ನಗರದ ಸಂಚಾರ ವ್ಯವಸ್ಥೆ, ವಿದ್ಯುತ್ ಸಂಪರ್ಕಗಳನ್ನು ಪುನಾರಂಭ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಟ್ಟಡ ಧರೆಗುರುಳಿದ ನಂತರದ ದೃಶ್ಯ

ಕಟ್ಟಡ ಧರೆಗುರುಳಿದ ನಂತರದ ದೃಶ್ಯ

  • Share this:
ನೋಯ್ಡಾ: ಇಡೀ ದೇಶದ ಗಮನ ಸೆಳೆದಿದ್ದ ನೋಯ್ಡಾದ (Noida) ಗಗನಚುಂಬಿ ಅವಳಿ ಕಟ್ಟಡ (Twin Towers) ಧರಾಶಾಹಿಯಾಗಿದೆ. ಇಂದು ಮಧ್ಯಾಹ್ನ 2.30ಕ್ಕೆ ಕೇವಲ ಒಂಬತ್ತೇ ಸೆಕೆಂಡ್‌ಗಳಲ್ಲೇ (9 Seconds) 337 ಅಡಿ ಎತ್ತರದ ಬೃಹತ್ ಕಟ್ಟಡ ಧರಾಶಾಹಿಯಾಗಿದೆ. 3,700 ಕೆಜಿ ಸ್ಫೋಟಕ (Explosive) ಬಳಸಿ ಕಟ್ಟಡಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಅವಳಿ ಕಟ್ಟಡ ಉರುಳಿಸುವ ಕಾರ್ಯಾಚರಣೆ ಆರಂಭಗೊಂಡಿದ್ದು, ಮಧ್ಯಾಹ್ನ 2.30ಕ್ಕೆ ಸರಿಯಾಗಿ ಅವಳಿ ಕಟ್ಟಡಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಇದೀಗ ಕಟ್ಟಡ ಇದ್ದ ಸ್ಥಳದ ಸುತ್ತಮುತ್ತ ಧೂಳು ಇನ್ನೂ ಕಡಿಮೆಯಾಗಿಲ್ಲ. ಕಟ್ಟಡ ಧರಾಶಾಹಿ ಆಗಿರುವುದನ್ನು ಅತೀ ಹೆಚ್ಚು ಜನ ನೋಡಿ ಕಣ್ತುಂಬಿಕೊಂಡಿದ್ದಲ್ಲದೇ, ಈಗಲೂ ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಕಟ್ಟಡ ಕೆಡವಿದ ಸ್ಥಳದಲ್ಲಿ ಧೋಳೋ ಧೂಳು

ಕಟ್ಟಡವನ್ನು ಧರೆಗೆ ಉರುಳಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಕಟ್ಟಡ ಉರುಳಿದ ಬಳಿಕ ಎದ್ದ ದಟ್ಟ ಧೂಳು ಇಡೀ ಪ್ರದೇಶದ ತುಂಬಾ ಆವರಿಸಿಕೊಂಡಿತ್ತು. ಕಟ್ಟಡ ಬರೀ 9 ಸೆಕೆಂಡ್‌ಗಳಲ್ಲಿ ಧರೆಗೆ ಉರುಳಿದ್ದರೆ, ಅದರಿಂದ ಎದ್ದ ಧೂಳು ಸುತ್ತಮುತ್ತಲ ಪ್ರದೇಶಕ್ಕೆ ಹರಡಿದ್ದು, ಅದು ಕಂಟ್ರೋಲ್‌ಗೆ ಬರುವುದಕ್ಕೆ 12 ನಿಮಿಷಗಳೇ ಬೇಕಾಯ್ತು ಅಂತ ಮೂಲಗಳು ತಿಳಿಸಿವೆ.10 ಕಿಲೋ ಮೀಟರ್‌ವರೆಗೆ ಕೇಳಿದ ಶಬ್ದ!


ಇನ್ನು ಸ್ಫೋಟಕಗಳು ಸಿಡಿಯುತ್ತಿದ್ದಂತೆ ಕಟ್ಟಡಗಳು ಉರುಳಿವೆ. ಕಟ್ಟಡ ಕುಸಿಯುತ್ತಿರುವ ಶಬ್ದವು 10 ಕಿಲೋಮೀಟರ್ ದೂರದಲ್ಲಿ ಕೇಳುತ್ತಿತ್ತು ಅಂತ ನೋಯ್ಡಾ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ನಗರದ ಸಂಚಾರ ವ್ಯವಸ್ಥೆ, ವಿದ್ಯುತ್ ಸಂಪರ್ಕಗಳನ್ನು ಪುನಾರಂಭ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಟ್ಟಡ ಕೆಡವಿದ ಬಳಿಕ ದಟ್ಟ ಹೊಗೆ


ಇದನ್ನೂ ಓದಿ: Noida Twin Towers Demolition: ನೋಯ್ಡಾದ ಬೃಹತ್ ಅವಳಿ ಕಟ್ಟಡ ನೆಲಸಮ! 9 ಸೆಕೆಂಡ್‌ಗಳಲ್ಲಿ ಡೆಮಾಲಿಷನ್

ಮಹಾನಗರ ಪಾಲಿಕೆಯಿಂದ ನಗರ ಸ್ವಚ್ಛತೆ ಕಾರ್ಯ

ಇನ್ನು ಕಟ್ಟಡ ಧರೆಗೆ ಉರುಳುತ್ತಿದ್ದಂತೆ ಸುತ್ತುಮುತ್ತಲ ಪ್ರದೇಶಗಳೆಲ್ಲ ಧೂಳು ಮಯವಾಗಿದ್ದವು. ಕಟ್ಟಡದ ಹತ್ತಿರದಲ್ಲಿದ್ದ ರಸ್ತೆ, ಸೇತುವೆಗಳು, ಪಾರ್ಕ್‌ಗಳ ಮೇಲೆಲ್ಲಾ ಧೂಳು ಮುತ್ತಿಕೊಂಡಿವೆ. ಸದ್ಯ ನೋಯ್ಡಾ ಮಹಾನಗರ ಪಾಲಿಕೆ ಇಡೀ ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದೆ. ಎಲ್ಲಾ ಧೂಳುಗಳನ್ನು ಕ್ಲೀನ್ ಮಾಡಲಾಗುತ್ತಿದ್ದು, ನಗರದಾದ್ಯಂತ ನೀರು ಚಿಮುಕಿಸಲಾಗುತ್ತಿದೆ.

ಕಟ್ಟಡ ಕೆಡವಿದ ಬಳಿಕ ಸ್ಥಳದಲ್ಲಿನ ಪರಿಸ್ಥಿತಿ


ಸ್ಥಳದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

ಇನ್ನು ಈ ಟ್ವಿನ್ ಟವರ್ ಹೋರಾಟ ಸತತವಾಗಿ ನಡೆಯುತ್ತಿತ್ತು. ಕಳೆದ 9 ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಇಂದು ಫುಲ್ ಸ್ಟಾಪ್ ಬಿದ್ದಿದೆ. ಜೊತೆಗೆ ಯಾವುದೇ ಅಪಾಯಗಳು, ಅನಾಹುತಗಳು ಇಲ್ಲದೇ ಬಹುಮಹಡಿ ಕಟ್ಟಡ ಧರೆಗೆ ಉರುಳಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಿಹಿ ಹಂಚಿ, ಸಂಭ್ರಮಾಚರಣೆ ಕೂಡ ನಡೆಸಲಾಗಿದೆ.

ಸ್ಫೋಟಕ್ಕೆ 20 ಕೋಟಿ ರೂಪಾಯಿ ಖರ್ಚು!

ಇಂದು ಮಧ್ಯಾಹ್ನ 2:30ಕ್ಕೆ ಕೇವಲ 9 ಸೆಂಕೆಡ್​​​ಗಳಲ್ಲಿ ಅವಳಿ ಗೋಪುರ ಸ್ಫೋಟಗೊಂಡು ಧರೆಗೆ ಉರುಳಿದೆ. ಈ ವೇಳೆ ಎನ್​​ಡಿಆರ್​​ಎಫ್​, ಸಿಬಿಆರ್​​ಐ ಸೇರಿದಂತೆ ಇತರೆ ಅಧಿಕಾರಿಗಳ ಉಪಸ್ಥಿತರಿದ್ದರು. ಇನ್ನು ಈ ಬಹಳ ಅಪಾಯಕಾರಿ ಹಾಗೂ ಸಾಹಸಮಯ ಕಾರ್ಯಾಚರಣೆಗಾಗಿ ಬರೋಬ್ಬರಿ 20 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

ಕಾರ್ಯಾಚರಣೆಗೆ 3700 ಕೆಜಿ ಸ್ಫೋಟಕ ಬಳಕೆ 

ಸುಮಾರು 100 ಮೀಟರ್ ಎತ್ತರದ ಕಟ್ಟಡಗಳನ್ನು  ಮಧ್ಯಾಹ್ನ 2:30 ಕ್ಕೆ ನೆಲಸಮ ಮಾಡಲಾಗಿದೆ. ಎರಡು ಟವರ್‌ಗಳಲ್ಲಿ 3,700 ಕೆಜಿ ಸ್ಫೋಟಕಗಳನ್ನು ಸಜ್ಜುಗೊಳಿಸಲಾಗಿತ್ತು. ಕಂಬಗಳಲ್ಲಿನ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಅಳವಡಿಸಲಾಗಿತ್ತು. ಜೊತೆಗೆ 20,000 ಸರ್ಕ್ಯೂಟ್‌ಗಳನ್ನು ಹೊಂದಿಸಲಾಗಿತ್ತು.

ಇದನ್ನೂ ಓದಿ: Supertech Twin Towers ಉರುಳಿಸಲಿರುವ ಆ ಬ್ಲಾಸ್ಟರ್‌ ಯಾರು? ಇದು ಅವರ ಬದುಕಿನ ಮಹತ್ವದ ಘಳಿಗೆಯಂತೆ!

ಸೂಪರ್ಟೆಕ್ಕಂಪನಿಗೆ ಸೇರಿದ್ದ ಕಟ್ಟಡ

ಸೂಪರ್‌ಟೆಕ್ ಕಂಪೆನಿಯ ಎಮರಾಲ್ಡ್ ಕೋರ್ಟ್ ಪ್ರಾಜೆಕ್ಟ್‌ನ ಭಾಗವಾಗಿ, ನೋಯ್ಡಾ- ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಸಮೀಪ 40 ಅಂತಸ್ತಿನ ಎರಡು ಬೃಹತ್ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಸುಮಾರು 7.5 ಲಕ್ಷ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ 900ಕ್ಕೂ ಹೆಚ್ಚು ಫ್ಲ್ಯಾಟ್‌ಗಳು ಈ ಕಟ್ಟಡದಲ್ಲಿತ್ತು.
Published by:Annappa Achari
First published: