ಏನಿದು ಶಾರದಾ ಚಿಟ್​ ಫಂಡ್​ ಹಾಗೂ ರೋಸ್​ ವ್ಯಾಲಿ ಹಗರಣ? ಇಲ್ಲಿದೆ ಸಂಪೂರ್ಣ ವಿವರ

ಈ ಎರಡು ಹಗರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಕುಮಾರ್ ಮನೆಗೆ ತಲುಪುತ್ತಿದ್ದಂತೆ ಸಿಬಿಐ ಅಧಿಕಾರಿಗಳನ್ನೆ ಬಂಧಿಸುವ ಮೂಲಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೇಶದಲ್ಲಿ ಸುದ್ದಿಯಾಗಿರುವ ಈ ಹಗರಣಗಳು ಏನು ಎಂಬ ಮಾಹಿತಿ ಇಲ್ಲಿದೆ

Seema.R | news18
Updated:February 4, 2019, 12:22 PM IST
ಏನಿದು ಶಾರದಾ ಚಿಟ್​ ಫಂಡ್​ ಹಾಗೂ ರೋಸ್​ ವ್ಯಾಲಿ ಹಗರಣ? ಇಲ್ಲಿದೆ ಸಂಪೂರ್ಣ ವಿವರ
ಮಮತಾ ಬ್ಯಾನರ್ಜಿ
  • News18
  • Last Updated: February 4, 2019, 12:22 PM IST
  • Share this:
ಕೋಲ್ಕತ್ತಾ (ಫೆ.4): ಶಾರದಾ ಚಿಟ್ ಫಂಡ್ ಹಾಗೂ ರೋಸ್ ವ್ಯಾಲಿ ಹಗರಣಗಳು ಪಶ್ಚಿಮ ಬಂಗಾಳದ ಬಹುದೊಡ್ಡ ಹಗರಣಗಳಾಗಿವೆ. ಈ ಎರಡು ಹಗರಣಗಳಲ್ಲಿ ಕೋಲ್ಕತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಹೆಸರು ತಳುಕು ಹಾಕಿಕೊಂಡಿದೆ. ಈ ಎರಡು ಹಗರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಕುಮಾರ್ ಮನೆಗೆ ತಲುಪುತ್ತಿದ್ದಂತೆ ಸಿಬಿಐ ಅಧಿಕಾರಿಗಳನ್ನೆ ಬಂಧಿಸುವ ಮೂಲಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೇಶದಲ್ಲಿ ಸುದ್ದಿಯಾಗಿರುವ ಈ ಹಗರಣಗಳು ಏನು ಎಂಬ ಮಾಹಿತಿ ಇಲ್ಲಿದೆ

ಶಾರದಾ ಚಿಟ್ ಫಟ್ ಹಗರಣ: ಪಶ್ಚಿಮ ಬಂಗಾಳದ ಬಹುದೊಡ್ಡ ಆರ್ಥಿಕ ಹಗರಣದಲ್ಲಿ ಅತಿದೊಡ್ಡದು ಇದಾಗಿದೆ. ಅನೇಕ ದೊಡ್ಡ ನಾಯಕರ ಹೆಸರು ಕೂಡ ಈ ಹಗರಣದಲ್ಲಿ ಕೇಳಿ ಬಂದಿದೆ, ಅತಿ ಹೆಚ್ಚಿನ ಬಡ್ಡಿ ಆಮಿಷ ನೀಡಿ ಶಾರದಾ ಗ್ರೂಪ್ ಪೋಂಜಿ ಸ್ಕೀಮ್ ನಡೆಸಲು ಮುಂದಾಯಿತು 200ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಇದರಲ್ಲಿ ಶಾಮೀಲಾಗಿದೆ ನಿಮ್ಮ ಹಣವನ್ನು 34 ರಷ್ಟು ದುಪ್ಪಟ್ಟು ಮಾಡುವುದಾಗಿ ಜನರಿಗೆ ನಂಬಿಸಿದರು. ಇದನ್ನು ನಂಬಿ ಜನ ಕೂಡ ಹಣ ಹೂಡಲಾರಂಬಿಸಿದರು. 2013ರಲ್ಲಿ 17 ಲಕ್ಷ ಠೇವಣಿದಾರರಿಂದ ಸಂಸ್ಥೆಯು 200ರಿಂದ 300 ಶತಕೋಟಿ ರೂಪಾಯಿ ಸಂಗ್ರಹಿಸಿತ್ತು.

ಈ ಹಗರಣದಲ್ಲಿ ಯಾವಾಗ ದೊಡ್ಡ ಉದ್ಯಮಿ ಹಾಗೂ ರಾಜಕಾರಣಿಗಳ ಹೆಸರು ಕೇಳಿ ಬಂದಿತು ಆಗ ಪಶ್ಚಿಮ ಬಂಗಾಳ ಸರ್ಕಾರ ತನಿಖೆಗೆ ಮುಂದಾಯಿತು. ಅಲ್ಲದೆ, ಕಡಿಮೆ ಆದಾಯ ಹೂಡಿಕೆದಾರರಿಗೆ ಹಣವನ್ನು ಮರಳಿಸಲು 500 ಕೋಟಿ ರೂ. ನಿಧಿಯನ್ನು ಸ್ಥಾಪಿಸಿತು. ಈ ಹಗರಣದಲ್ಲಿ ಅಕ್ರಮ ಕಂಡು ಬಂದಾಗ ಸುಪ್ರೀಂ ಕೋರ್ಟ್ 2014ರಲ್ಲಿ ಎಲ್ಲ ತನಿಖೆಯನ್ನು ಸಿಬಿಐಗೆ ವಹಿಸಿತು.ಶಾರದಾ ಗ್ರೂಪ್ ನಾಲ್ಕು ವರ್ಷಗಳಲ್ಲಿ ಪಶ್ಚಿಮ ಬಂಗಾಳ ಸೇರಿ ಜಾರ್ಖಂಡ್, ಒರಿಸ್ಸಾ, ಈಶಾನ್ಯ ರಾಜ್ಯಗಳಲ್ಲಿ 300 ಕಚೇರಿಯನ್ನು ತೆರೆದಿತು.

ಚಿದಂಬರಂ ಹೆಂಡತಿ ವಿರುದ್ಧ ಜಾರ್ಜ್​ ಶೀಟ್​: 
ಈ ಪ್ರಕರಣ ಕುರಿತು ಚಾರ್ಜ್ ಶೀಟ್ ದಾಖಲಿಸಿದ ಸಿಬಿಐ ಪಿ ಚಿದಂಬರಂ ಹೆಂಡತಿ ನಳಿನಿ ಹೆಸರನ್ನು ದಾಖಲಿಸಿತು. ಶಾರದಾ ಸಮೂಹದ ಕಂಪನಿಗಳಿಂದ ನಳಿನಿ ಚಿದಂಬರಂ ಚಿಟ್ ಫಂಡ್ ಮುಖ್ಯಸ್ಥ ಸುದೀಪ್ತಾ ಸೇನ್ ಜೊತೆ ಸೇರಿ 1.4 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿತು.

ರಾಜೀವ್‌ ಕುಮಾರ್​ಗೂ ಪ್ರಕರಣಕ್ಕೂ ಏನು ಸಂಬಂಧ?
ಐಪಿಎಸ್​ ಅಧಿಕಾರಿ ರಾಜೀವ್​ ಕುಮಾರ್ ಅವರ ಹೆಸರು ಶಾರದಾ ಚಿಟ್​ ಫಂಡ್​ ಹಗರಣದಲ್ಲಿ ತಳುಕು ಹಾಕಿಕೊಂಡಿದೆ. 2013 ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರಕಾರ ರಚಿಸಿದ ತನಿಖಾ ಆಯೋಗವನ್ನು ಮುನ್ನೆಡೆಸಿದವರು ರಾಜೀವ್ ಕುಮಾರ್. ಈ ತನಿಖೆಯ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕಡತಗಳು ಮತ್ತು ದಾಖಲೆಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಲು ಸಿಬಿಐ ತಂಡ ರಾಜೀವ್‌ ಕುಮಾರ್‌ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಬಯಸುತ್ತಿದೆ. ಇತ್ತೀಚೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಚಿತ್ರ ನಿರ್ಮಾಪಕ ಶ್ರೀಕಾಂತ್‌ ಮೋಹಿತ ಅವರನ್ನು ಬಂಧಿಸಲಾಗಿತ್ತು.ರೋಸ್ ವ್ಯಾಲಿ ಹಗರಣ?
1990ರ ದಶಕದಲ್ಲಿ ಕಾಜಲ್ ಕುಂಡು ಎಂಬ ಎಲ್ಐಎಸಿ ಏಜೆಂಟ್ ರೋಸ್ ವ್ಯಾಲಿ ಹೆಸರಿನ ಕಂಪನಿ ಹುಟ್ಟುಹಾಕಿದ್ದ. ಇತನ ಬಳಿಕ ಇತನ ಸಹೋದರ ಗೌತಮ್ ಈ ಕಂಪನಿ ಬೆಳೆಸಿದ. ಜನರಿಗೆ ದೊಡ್ಡ ಕನಸುಗಳನ್ನು ತೋರಿಸಿ ವಂಚಿಸಲಾಯಿತು. ರೋಸ್ವ್ಯಾಲಿ ಹಾಲಿಡೇ ಮೆಂಬರ್ ಶಿಪ್ ಪ್ಲಾನ್ ಅಡಿ ಪ್ರತಿ ತಿಂಗಳು ಹಣ ಪಾವತಿಸಿ, ಕೊನೆಗೆ ಪ್ಯಾಕೇಜ್ ಪ್ರವಾಸ ಕರೆದುಕೊಂಡು ಹೋಗುವ ಯೋಜನೆ ಜಾರಿ ಮಾಡಲಾಗಿತ್ತು. ಇದರಡಿ ಹಣ ಕಟ್ಟಿದವರಿಗೆ ಪ್ಯಾಕೇಜ್ ಪ್ರವಾಸದೊಂದಿಗೆ ರೋಸ್ವ್ಯಾಲಿ ಹೋಟೆಲ್ ನಲ್ಲಿ ಉಳಕೊಳ್ಳುವ ವ್ಯವಸ್ಥೆ ಮಾಡುವುದಾಗಿ ಹೇಳಲಾಗಿತ್ತು.ಇಲ್ಲವಾದಲ್ಲಿ ಹೂಡಿಕೆದಾರರಿಗೆ ವಾರ್ಷಿಕ ಬಡ್ಡಿ ನೀಡಿ ಹಣ ವಾಪಸ್ ನೀಡುವುದಾಗಿ ಹೇಳಿತ್ತು.

ಇದನ್ನು ಓದಿ: ಕೋಲ್ಕತಾದ ಎಲ್ಲಾ ಸಿಬಿಐ ಕಚೇರಿ ಹಾಗೂ ಅಧಿಕಾರಿಗಳ ಮನೆಗಳಿಗೆ ಅರೆಸೇನಾ ಪಡೆ ನಿಯೋಜನೆ

2013ರಲ್ಲಿ ಇದು ಸೆಬಿ ಕಣ್ಣಿಗೆ ಬಿದ್ದಿದ್ದು, ಶೇ.11.2ರಿಂದ ಶೇ.17.65 ರಷ್ಟು ಹಣ ನೀಡುವುದಾಗಿ . ಅನುಮತಿ ಪಡೆಯದೇ ಈ ಯೋಜನೆ ನಡೆಸಿದ್ದು ಬೆಳಕಿಗೆ ಬಂದಿತು. ಈ ಅಕ್ರಮದಲ್ಲಿ ಭಾರೀ ಪ್ರಮಾಣದ ಅಕ್ರಮ ಹಣ ವರ್ಗಾವಣೆ, ಅಕ್ರಮ ನಡೆಸಲು ರಾಜಕಾರಣಿಗಳಿಗೆ ಲಂಚ  ನೀಡಲಾಗಿದೆ ಎಂದು ಹೇಳಲಾಗಿದೆ.

First published: February 4, 2019, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading