Brazil: ಬ್ರೆಜಿಲ್​ ಗಾಜಿನ ಗೋಡೆಗಳ ಸೀಕ್ರೆಟ್​​ ಏನು ಗೊತ್ತಾ? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೆಟಲ್ ರೇಲಿಂಗ್‌ಗಳನ್ನು ಬಳಸಿ ನಿರ್ಮಿಸುತ್ತಿದ್ದ ಬೇಲಿಗಳು ಬ್ರೆಜಿಲ್ ನಗರದಲ್ಲಿ ಖ್ಯಾತವಾಗಿವೆ. ಇವುಗಳು ವಿವಿಧ ಆಕಾರಗಳನ್ನು ಹೊಂದಿದ್ದು ಅವುಗಳನ್ನು ಬೇರೆ ಬೇರೆ ಆಕಾರಗಳಲ್ಲಿ ಬೇಕಾದ ಹಾಗೆ ನಿರ್ಮಿಸಬಹುದು. ಅಂತೆಯೇ ಸಸ್ಯಗಳೊಂದಿಗೆ ಆಧಾರವಾಗಿ ಕೂಡ ಈ ರೇಲಿಂಗ್‌ಗಳನ್ನು ಉಪಯೋಗಿಸಬಹುದಾಗಿದೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

ಬೇಲಿಗಳನ್ನು, ತಡೆಗೋಡೆಗಳನ್ನು ಸಾಮಾನ್ಯವಾಗಿ ರಕ್ಷಣೆಗಾಗಿ (Safety) ಹಾಗೂ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳನ್ನು ವಿಭಾಗಿಸಲು ಬಳಸಲಾಗುತ್ತದೆ. ಬೇಲಿಗಳನ್ನು ಸಾಮಾನ್ಯವಾಗಿ ಸರಿಗೆ, ಮುಳ್ಳುತಂತಿ, ಬಿದಿರು, ಅಡಿಕೆಮರವನ್ನು ಬಳಸಿ ನಿರ್ಮಿಸುತ್ತಾರೆ. ಇನ್ನು ಕೊಂಚ ಆಧುನಿಕವಾಗಿ ಕಬ್ಬಿಣ, ಉಕ್ಕು ಬಳಸಿ ಕೂಡ ಬೇಲಿಗಳ ನಿರ್ಮಾಣಗಳನ್ನು ದೊಡ್ಡ ದೊಡ್ಡ ಕಟ್ಟಡಗಳು (Building) ಹಾಗೂ ನಗರಗಳಲ್ಲಿ (City) ನಿರ್ಮಿಸಲಾಗುತ್ತದೆ. ಇನ್ನು ಗೋಡೆಗಳ ನಿರ್ಮಾಣಕ್ಕೂ ಇಟ್ಟಿಗೆ, ಸಿಮೆಂಟ್, ಜಲ್ಲಿಗಳನ್ನು ಬಳಸುತ್ತಾರೆ. ಆದರೆ ಬ್ರೆಜಿಲ್‌ನ್‌ನಂತಹ ಮಹಾ ನಗರಗಳಲ್ಲಿ ತಡೆಗೋಡೆ ಮತ್ತು ಬೇಲಿಗಳನ್ನು ಗಾಜುಗಳಿಂದ (Glass) ನಿರ್ಮಿಸಲಾಗುತ್ತದೆ.


ಆಧುನೀಕತೆಯ ಮಾರ್ಪಾಡು ಎಂಬಂತೆ ಸುಂದರವಾಗಿ ನಿರ್ಮಿಸಿರುವ ಗಾಜಿನ ತಡೆಗೋಡೆ ಹಾಗೂ ಬೇಲಿಗಳು ನಗರದ ಸೌಂದರ್ಯವನ್ನು ಹೆಚ್ಚಿಸಿವೆ.


ಅಂದದ ಗಾಜಿನ ತಡೆಗೋಡೆ


ಅಲ್ಲಿರುವ ಕಟ್ಟಡಗಳು ಹಾಗೂ ರಸ್ತೆಗಳ ನಡುವಿನ ಪ್ರತ್ಯೇಕತೆಯನ್ನು ಎತ್ತರದ ಗಾಜಿನ ತಡೆಗೋಡೆಗಳು ಹಾಗೂ ಬೇಲಿಗಳು ಸೂಚಿಸುತ್ತವೆ ಹಾಗೂ ಅವುಗಳಿಗೊಂದು ಭಿನ್ನತೆಯನ್ನುಂಟು ಮಾಡುತ್ತವೆ. ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.


ದರಕಡಿಮೆ ಹಾಗೂ ನಿರ್ವಹಣೆ ಸುಲಭ


ಮೆಟಲ್ ರೇಲಿಂಗ್‌ಗಳನ್ನು ಬಳಸಿ ನಿರ್ಮಿಸುತ್ತಿದ್ದ ಬೇಲಿಗಳು ಬ್ರೆಜಿಲ್ ನಗರದಲ್ಲಿ ಖ್ಯಾತವಾಗಿವೆ. ಇವುಗಳು ವಿವಿಧ ಆಕಾರಗಳನ್ನು ಹೊಂದಿದ್ದು ಅವುಗಳನ್ನು ಬೇರೆ ಬೇರೆ ಆಕಾರಗಳಲ್ಲಿ ಬೇಕಾದ ಹಾಗೆ ನಿರ್ಮಿಸಬಹುದು. ಅಂತೆಯೇ ಸಸ್ಯಗಳೊಂದಿಗೆ ಆಧಾರವಾಗಿ ಕೂಡ ಈ ರೇಲಿಂಗ್‌ಗಳನ್ನು ಉಪಯೋಗಿಸಬಹುದಾಗಿದೆ. ಮೆಟಲ್ ರೇಲಿಂಗ್‌ನಂತೆಯೇ ನಂತರ ಉಕ್ಕನ್ನು ಬಳಸುತ್ತಿದ್ದರು.


ಇದನ್ನೂ ಓದಿ: Explained: ಸಿಂಧೂ ಜಲ ಒಪ್ಪಂದವನ್ನು ಮಾರ್ಪಡಿಸಲು ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸುತ್ತಿರುವುದೇಕೆ?


ಗಗನಕ್ಕೇರಿದ ಉಕ್ಕಿನ ಬೆಲೆ


ಹೆಚ್ಚಿನ ಬೇಲಿಗಳು ಹಾಗೂ ತಡೆಗೋಡೆಗಳಿಗೆ ಆಧಾರವಾಗಿರುವ ಉಕ್ಕು ವೆಚ್ಚ ಹಾಗೂ ದರದಲ್ಲಿ ಆಗಾಗ ಮಾರ್ಪಾಡುಗಳನ್ನು ಕಾಣುತ್ತಿರುತ್ತದೆ.  ಇದು ಎಷ್ಟು ದರದಲ್ಲಿ ದೊರೆಯುತ್ತದೆ ಎಂಬುದರ ಮೇಲೆ ಉಕ್ಕಿನ ಬೆಲೆ ನಿರ್ಧಾರಗೊಳ್ಳುತ್ತದೆ. ಅದೂ ಅಲ್ಲದೆ ಉಕ್ಕಿನ ದರ ಕೂಡ ಏರಿಕೆಯಾಗುತ್ತಿದೆ. ಈ ಸಮಯದಲ್ಲಿ ಈ ಉತ್ಪನ್ನದ ಪರ್ಯಾವನ್ನು ಬಳಸಲು ಪ್ರತಿಯೊಬ್ಬರೂ ಬಯಸುತ್ತಾರೆ. ಆ ಸಮಯದಲ್ಲಿಯೇ ಗಾಜಿನ ಬಳಕೆ ಮಾಡುವ ಪದ್ಧತಿ ಜಾರಿಯಾಯ್ತು.


ಉಕ್ಕಿನ ನಿರ್ವಹಣೆ ತುಂಬಾ ಕಷ್ಟ


ಉಕ್ಕಿನ ನಿರ್ವಹಣೆ ಹಾಗೂ ವೆಚ್ಚದ ಕಾರಣದಿಂದ ಇದನ್ನು ಬಳಸುವುದು ಕಡಿಮೆಯಾಯಿತು. ಹವಾಮಾನದ ಪರಿಣಾಮಕ್ಕೆ ಉಕ್ಕು ಹೆಚ್ಚಾಗಿ ಒಡ್ಡಿಕೊಳ್ಳುವುದರಿಂದ ಇದಕ್ಕೆ ಆಗಾಗ ಪೇಂಟಿಂಗ್ ಮಾಡುವುದೂ ಅಗತ್ಯವಾಗಿರುತ್ತದೆ.




ಪರ್ಯಾಯವಾಗಿ ಗಾಜಿನ ಬಳಕೆ


ಇದೀಗ ಈ ಎಲ್ಲಾ ಉತ್ಪನ್ನಗಳಿಗೂ ಪರ್ಯಾಯವಾಗಿ ಗಾಜನ್ನು ಹೆಚ್ಚು ಬಳಸಲಾಗುತ್ತಿದೆ. ವೆಚ್ಚ ಕಡಿಮೆ ಎಂಬುದು ಒಂದಂಶವಾದರೆ ಗಾಜಿನೊಂದಿಗೆ ಅಲ್ಯುಮಿನಿಯಂ ಪ್ರೊಫೈಲ್ ಅನ್ನು ಬಳಸುವುದು ಇದಕ್ಕೆ ಇನ್ನಷ್ಟು ಬೆಂಬಲವನ್ನು ಒದಗಿಸುತ್ತದೆ. ತಂತ್ರಜ್ಞಾನದ ಪ್ರಗತಿಯೊಂದಿಗೆ ಗಾಜು ಒಡೆಯುವುದರಿಂದ ಹಾಗೂ ಹಾನಿಗೆ ಒಳಗಾಗುವುದರಿಂದ ತಡೆಗಟ್ಟಬಹುದಾಗಿದೆ. ಆಂತರಿಕ ಭದ್ರತೆಗೆ ಕೂಡ ಇದು ಉಪಯುಕ್ತವಾಗಿದೆ.


ಸ್ಪಷ್ಟ ವೀಕ್ಷಣೆ ಮುಕ್ತ ಸಂವಹನ


ಇನ್ನು ರಸ್ತೆ ಹಾಗೂ ಕಟ್ಟಡಗಳ ಮಧ್ಯೆ ಬಳಕೆಯಾಗುವ ಗಾಜಿನ ಬೇಲಿ ಅಥವಾ ತಡೆಗೋಡೆಗಳು ಸ್ಪಷ್ಟವಾದ ವೀಕ್ಷಣೆಯನ್ನು ಒದಗಿಸುತ್ತವೆ ಹಾಗೂ ಪರಸ್ಪರ ಸಂವಹನಕ್ಕೂ ಅನುಕೂಲಕರವಾಗಿದೆ. ಇನ್ನು ನಿರ್ವಹಣೆಯ ವಿಷಯದಲ್ಲಿ ಕೂಡ ಗಾಜು ಕಡಿಮೆ ನಿರ್ವಹಣೆಯ ವಸ್ತುವಾಗಿದೆ. ಯಾವುದೇ ಹವಾಮಾನಕ್ಕೂ ಗಾಜು ಸ್ಥಿರವಾಗಿರುವುದರಿಂದ ಇದಕ್ಕೆ ಸರಳ ಹಾಗೂ ಕಡಿಮೆ ಪ್ರಮಾಣದ ವೆಚ್ಚ ಸಾಕಾಗುತ್ತದೆ.


ಸೌಂದರ್ಯ ಪ್ರಜ್ಞೆಯ ಸಂಕೇತ


ಆಧುನೀಕತೆ ಬೆಳೆದಂತೆ ಗಾಜಿನಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ದೃಢತೆ, ಗಾಜು ಒಡೆಯದಂತೆ ಮಾಡುವುದು, ಸ್ವಚ್ಛತೆಯನ್ನು ಮಾಡುವುದು ಹೀಗೆ ಗಾಜನ್ನು ಇನ್ನಷ್ಟು ಸುರಕ್ಷಿತಗೊಳಿಸಲಾಗುತ್ತಿದೆ. ಗಗನಚುಂಬಿ ಕಟ್ಟಡಗಳು ಮತ್ತು ಅವುಗಳ ಗಾಜಿನ ಮುಂಭಾಗಗಳು, ನಿರ್ಮಾಣದ ಕೈಗಾರಿಕೆಗಳೊಂದಿಗೆ ಸಮಾಜದಲ್ಲಿ ಅವು ಬಿಂಬಿತಗೊಳ್ಳುವ ಸೌಂದರ್ಯ ಪ್ರಜ್ಞೆಯನ್ನು ತೋರಿಸುತ್ತವೆ. ಒಟ್ಟಿನಲ್ಲಿ ಗಾಜಿನ ತಡೆಗೋಡೆ ಹಾಗೂ ಬೇಲಿಗಳು ನಗರಕ್ಕೆ ಮಹತ್ವವನ್ನು ನೀಡಿದ್ದು ಸೌಂದರ್ಯವನ್ನು ಹೆಚ್ಚಿಸಿವೆ.

First published: