ಪಿಣರಾಯ್​​​​ ವಿಜಯನ್-ಕೆಸಿಆರ್​​ ಭೇಟಿ; ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿ ಬೆಳವಣಿಗೆ; ತೃತೀಯ ರಂಗಕ್ಕೆ ಸಿಕ್ತಾ ಚಾಲನೆ?​​​​​

ಇನ್ನು ಕಾಂಗ್ರೆಸ್​-ಬಿಜೆಪಿಯೇತರ ಪಕ್ಷಗಳು ಈ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಅಲ್ಲದೇ ಸರ್ಕಾರ ರಚನೆ ವೇಳೆ ಕೇಂದ್ರದಲ್ಲಿ ಪ್ರಮುಖ ಪಾತ್ರವಾಹಿಸಲಿದೆ ಎಂದು ಹೇಳಲಾಗುತ್ತಿದೆ.

Ganesh Nachikethu | news18
Updated:May 7, 2019, 7:33 AM IST
ಪಿಣರಾಯ್​​​​ ವಿಜಯನ್-ಕೆಸಿಆರ್​​ ಭೇಟಿ; ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿ ಬೆಳವಣಿಗೆ; ತೃತೀಯ ರಂಗಕ್ಕೆ ಸಿಕ್ತಾ ಚಾಲನೆ?​​​​​
ಕೆಸಿಆರ್​​, ಪಿಣರಾಯ್​​ ವಿಜಯನ್​​ ಭೇಟಿ
  • News18
  • Last Updated: May 7, 2019, 7:33 AM IST
  • Share this:
ನವದೆಹಲಿ(ಮೇ.07):  ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ತೃತೀಯ ರಂಗ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ತೃತೀಯ ರಂಗ ರಚನೆಗೆ ಮುಂದಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಸರ್ಕಾರ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.

ಸೋಮವಾರ(ನಿನ್ನೆ) ಸಂಜೆಯೇ ಸಿಎಂ ಕೆಸಿಆರ್​​ ತಿರುವನಂತಪುರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಈ ವೇಳೆ ತೃತೀಯ ರಂಗದ ಬಗ್ಗೆ ಚರ್ಚೆ ನಡೆಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿ ಬೆಳವಣಿಗೆಗೆ ಕಾರಣವಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಡಿಎಂಕೆ ಅಧ್ಯಕ್ಷ ಕೆ.ಸ್ಟಾಲಿನ್ ಸಿಎಂ ಕೆಸಿಆರ್​​ ಅವರನ್ನು ಭೇಟಿಯಾಗಲಿದ್ದಾರೆ. ಫಲಿತಾಂಶಕ್ಕೆ ಮುನ್ನವೇ ಕೆಸಿಆರ್​​​ ಪ್ರಾದೇಶಿಕ ಪಕ್ಷಗಳ ನಾಯಕರ ಜತೆ ಮಾತುಕತೆಗೆ ಮುಂದಾಗಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ನೀಟ್ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ; ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟನೆ

ಈ ಬೆನ್ನಲ್ಲೀಗ ಸಿಎಂ ಕುಮಾರಸ್ವಾಮಿ ಅವರನ್ನು ಕೆಸಿಆರ್​​ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಕಾಂಗ್ರೆಸ್​​ ಜತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್​​, ತೃತೀಯ ರಂಗಕ್ಕೆ ಬರಲಿದೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಕಾಂಗ್ರೆಸ್​ ಕೂಡ ಈ ಬಾರಿ ಲೋಕಸಭಾ ಚುನಾವಣೆಗೆ ಯಾವುದೇ ಮೈತ್ರಿಯಿಲ್ಲದೇ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿದೆ. ಕರ್ನಾಟಕದಲ್ಲಿ ಜೆಡಿಎಸ್​ ಹೊರತುಪಡಿಸಿದರೇ ಕಾಂಗ್ರೆಸ್​​, ಉತ್ತರಪ್ರದೇಶದಲ್ಲಿ ಎಸ್​​ಪಿ-ಬಿಎಸ್​​ಪಿ ಮತ್ತು ದೆಹಲಿಯಲ್ಲಿ ಆಪ್​​ ಜತೆಗೂ ಮೈತ್ರಿಯಾಗಿಲ್ಲ. ಹಾಗಾಗಿ ಕೆಸಿಆರ್​​ ಕಾಂಗ್ರೆಸ್ಸೇತರ ಪಕ್ಷಗಳ ಮೂಲಕ ತೃತೀಯ ರಂಗ ರಚನೆಗೆ ಓಡಾಟ ನಡೆಸುತ್ತಿದ್ದಾರೆ.

ಇನ್ನು ಕಾಂಗ್ರೆಸ್​-ಬಿಜೆಪಿಯೇತರ ಪಕ್ಷಗಳು ಈ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಅಲ್ಲದೇ ಸರ್ಕಾರ ರಚನೆ ವೇಳೆ ಕೇಂದ್ರದಲ್ಲಿ ಪ್ರಮುಖ ಪಾತ್ರವಾಹಿಸಲಿದೆ ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: ಮಹಿಳೆಯ ಮೇಲೆ ಅತ್ಯಾಚಾರ, ಬ್ಲ್ಯಾಕ್​ಮೇಲ್ ಆರೋಪ ಬಾಲಿವುಡ್ ನಟ ಅರೆಸ್ಟ್

First published: May 7, 2019, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading