ಲಂಡನ್​ನಲ್ಲಿ ಕ್ರೀಡಾ ವ್ಯವಹಾರಗಳ ಶೃಂಗಸಭೆ; ಇದರ ಉದ್ದೇಶವೇನು ಗೊತ್ತಾ ...?

ಭಾರತದ ಪರವಾಗಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದಲ್ಲಿನ ಕ್ರೀಡಾ ಅವಕಾಶಗಳು, ಪರಿಣತ ಕ್ರೀಡಾಪಟುಗಳು, ಅವರಿಗೆ ಅಗತ್ಯವಿರುವ ತರಬೇತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಅಭಿವೃದ್ಧಿ ಕುರಿತು ಚರ್ಚಿಸಲಿದ್ದಾರೆ.

MAshok Kumar | news18-kannada
Updated:October 8, 2019, 6:14 PM IST
ಲಂಡನ್​ನಲ್ಲಿ ಕ್ರೀಡಾ ವ್ಯವಹಾರಗಳ ಶೃಂಗಸಭೆ; ಇದರ ಉದ್ದೇಶವೇನು ಗೊತ್ತಾ ...?
ನೀತಾ ಅಂಬಾನಿ
  • Share this:
ಕ್ರೀಡಾ ಜಗತ್ತಿನಲ್ಲಿನಲ್ಲಾಗುತ್ತಿರುವ ಮಹತ್ವದ ಬದಲಾವಣೆಗಳು ಮತ್ತು ವಿಶ್ವಾದ್ಯಂತ ವಿವಿಧ ಹೊಸ ಹೊಸ ಕ್ರೀಡೆಗಳ ಜನಪ್ರಿಯತೆಯನ್ನು ಬಳಸಿಕೊಂಡು ಕ್ರೀಡೆ ಹಾಗೂ ಅದನ್ನು ಆಧರಿಸಿದ ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಲಂಡನ್​ನಲ್ಲಿ ಕ್ರೀಡಾ ವ್ಯವಹಾರಗಳ ಶೃಂಗಸಭೆಯನ್ನು ಆಯೋಜಿಸಲಾಗಿದೆ.

ಈ ಸಮ್ಮೇಳನದಲ್ಲಿ ವಿಶ್ವದಾದ್ಯಂತ ಕ್ರೀಡಾ ಕ್ಷೇತ್ರದ ವ್ಯಾಪಾರ ದೈತ್ಯರು ಭಾಗವಹಿಸುತ್ತಿದ್ದಾರೆ. ಸಮ್ಮೇಳನದಲ್ಲಿ ಮುಖ್ಯವಾಗಿ ಕ್ರೀಡೆಗಳಲ್ಲಿನ ಹೂಡಿಕೆಗಳು, ಕ್ರೀಡೆಗಳ ಪ್ರಸಾರ ಮತ್ತು ಕ್ರೀಡೆಯಲ್ಲಿ ತಾಂತ್ರಿಕ ಪರಿಣತಿಯನ್ನು ಹೆಚ್ಚಿಸುವುದರ ಕುರಿತ ಚರ್ಚೆಗಳು ನಡೆಯಲಿವೆ. ವಿಶ್ವದಾದ್ಯಂತ ತಮ್ಮ ವ್ಯವಹಾರಗಳನ್ನು ಹೊಂದಿರುವ ಖ್ಯಾತ ಕಾರ್ಪೊರೇಟ್ ದೈತ್ಯರು, ವಿವಿಧ ನಿಗಮಗಳು ಮತ್ತು ಉದ್ಯಮಿಗಳು ಈ ಸಮ್ಮೇಳನದ ಭಾಗವಾಗಲಿವೆ.

ಭಾರತದ ಪರವಾಗಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದಲ್ಲಿನ ಕ್ರೀಡಾ ಅವಕಾಶಗಳು, ಪರಿಣತ ಕ್ರೀಡಾಪಟುಗಳು, ಅವರಿಗೆ ಅಗತ್ಯವಿರುವ ತರಬೇತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಅಭಿವೃದ್ಧಿ ಕುರಿತು ಚರ್ಚಿಸಲಿದ್ದಾರೆ.ಭಾರತ ಖ್ಯಾತ ಉದ್ಯಮಿಯಾಗಿರುವ ನೀತಾ ಅಂಬಾನಿ ರಿಲಾಯನ್ಸ್​ ಪೌಂಡೇಶನ್ ಮೂಲಕ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಕ್ರೀಡಾಪಟುಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಇದೇ ಕಾರಣಕ್ಕೆ ಇವರನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಮೊದಲ ಭಾರತೀಯ ಮಹಿಳಾ ಸದಸ್ಯೆಯನ್ನಾಗಿಯೂ ನೇಮಿಸಲಾಗಿದೆ.

ಇದನ್ನೂ ಓದಿ : ಲಂಡನ್​ನ ದಿ ಸ್ಪೋರ್ಟ್ಸ್ ಬಿಸಿನೆಸ್ ಶೃಂಗಸಭೆ; ಸಂಜೆ 7ಕ್ಕೆ ವಿಷಯ ಮಂಡಿಸಿ ಮಾತನಾಡಲಿರುವ ನೀತಾ ಅಂಬಾನಿ

First published: October 8, 2019, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading