• Home
  • »
  • News
  • »
  • national-international
  • »
  • DY Chandrachud: ತಂದೆ ನೀಡಿದ್ದ ಎರಡು ತೀರ್ಪುಗಳನ್ನೇ ರದ್ದುಗೊಳಿಸಿದ್ದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್!

DY Chandrachud: ತಂದೆ ನೀಡಿದ್ದ ಎರಡು ತೀರ್ಪುಗಳನ್ನೇ ರದ್ದುಗೊಳಿಸಿದ್ದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್!

ನ್ಯಾಯಮೂರ್ತಿ ಡಿವೈ ಚಂದ್ರಚೂಡ್

ನ್ಯಾಯಮೂರ್ತಿ ಡಿವೈ ಚಂದ್ರಚೂಡ್

ನವೆಂಬರ್ 8 ರಂದು ನಿವೃತ್ತರಾಗಲಿರುವ ನ್ಯಾಯಮೂರ್ತಿ ಯುಯು ಲಲಿತ್ ನಂತರ ಡಿವೈ ಚಂದ್ರಚೂಡ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಮ್ಮ ತಂದೆ ವೈವಿ ಚಂದ್ರಚೂಡ್ ಅವರ ತೀರ್ಪುಗಳನ್ನು ಎರಡು ಬಾರಿ ರದ್ದುಗೊಳಿಸಿದ ವಿಶಿಷ್ಟ ವೃತ್ತಿ ವೈಶಿಷ್ಟ್ಯತೆಯನ್ನು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೊಂದಿದ್ದಾರೆ.

ಮುಂದೆ ಓದಿ ...
  • Share this:

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Justice DY Chandrachud) ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿದ್ದು ಇವರ ತಂದೆ ವೈವಿ ಚಂದ್ರಚೂಡ್ ಕೂಡ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಯಾಗಿದ್ದರು. ನವೆಂಬರ್ 8 ರಂದು ನಿವೃತ್ತರಾಗಲಿರುವ ನ್ಯಾಯಮೂರ್ತಿ ಯುಯು ಲಲಿತ್ (UU Lalit) ನಂತರ ಡಿವೈ ಚಂದ್ರಚೂಡ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಮ್ಮ ತಂದೆ ವೈವಿ ಚಂದ್ರಚೂಡ್ ಅವರ ತೀರ್ಪುಗಳನ್ನು ಎರಡು ಬಾರಿ ರದ್ದುಗೊಳಿಸಿದ ವಿಶಿಷ್ಟ ವೃತ್ತಿ ವೈಶಿಷ್ಟ್ಯತೆಯನ್ನು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೊಂದಿದ್ದಾರೆ. 2017 ರಲ್ಲಿ ಗೌಪ್ಯತೆಯ ಹಕ್ಕು ಎಂಬುದು ಮೂಲಭೂತ ಹಕ್ಕು (Fundamental right) ಎಂಬುದಾಗಿ ದೃಢೀಕರಿಸುವ ಸಂದರ್ಭದಲ್ಲಿ ಒಂಭತ್ತು ನ್ಯಾಯಾಧೀಶರ ಪೀಠದ ಭಾಗವಾಗಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು 1975 ರ ತುರ್ತು ಪರಿಸ್ಥಿತಿಯನ್ನು (emergency situation) ಬೆಂಬಲಿಸುವ ವಿವಾದಾತ್ಮಕ ಆದೇಶವನ್ನು ರದ್ದುಗೊಳಿಸಿದರು.


ವಿವಾದಾತ್ಮಕ ಆದೇಶ ರದ್ದತಿ
ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ತೀವ್ರವಾಗಿ ನಿರ್ಬಂಧಿಸಿದ, ವಿರೋಧ ಪಕ್ಷದ ಹಲವಾರು ನಾಯಕರನ್ನು ಜೈಲಿಗೆ ತಳ್ಳಿದ ಮತ್ತು ಮಾಧ್ಯಮದ ಮೇಲೆ ಹಿಡಿತ ಸಾಧಿಸಿದ ಅವಧಿಯಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸುವ ರಾಷ್ಟ್ರಪತಿಗಳ ಆದೇಶವನ್ನು ಅವರ ತಂದೆ ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ್ ಬೆಂಬಲಿಸಿದರು.


ಇದನ್ನೂ ಓದಿ:  Muzaffarnagar Riots: ಗಲಭೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಸೇರಿ 12 ಮಂದಿ ದೋಷಿ, ಜೈಲು ಶಿಕ್ಷೆ!


ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಬಹುದು


ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಬಹುದು ಮತ್ತು ಜನರು ತಮ್ಮ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯಗಳನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎಂದು 1976 ರಲ್ಲಿ ತೀರ್ಪು ನೀಡಿದ ಐವರು ನ್ಯಾಯಾಧೀಶರ ಪೀಠದ ನಾಲ್ವರು ನ್ಯಾಯಾಧೀಶರಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಕೂಡ ಒಬ್ಬರಾಗಿದ್ದರು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಎಚ್‌ಆರ್ ಖನ್ನಾ ಕಾನೂನಿನ ನಿಯಮವು ಅಪಾಯದಲ್ಲಿದೆ ಹಾಗಾಗಿ ಇಲ್ಲಿರುವ ಪ್ರಶ್ನೆಯೆಂದರೆ ನ್ಯಾಯಾಲಯದ ಅಧಿಕಾರದ ಮೂಲಕ ಕಾನೂನಿನ ಬಾಯಿ ಮುಚ್ಚಿಸಲಾಗುತ್ತಿದೆಯೇ ಹಾಗೂ ಮೌನಗೊಳಿಸಲಾಗುತ್ತಿದೆಯೇ ಎಂದು ಕೇಳಿದ್ದರು.


Supreme court on Election Contest in not fundamental right
ಸುಪ್ರೀಂಕೋರ್ಟ್


41 ವರ್ಷಗಳ ನಂತರ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಆದೇಶವನ್ನು "ಗಂಭೀರವಾಗಿ ದೋಷಪೂರಿತ" ಎಂದು ಉಲ್ಲೇಖಿಸಿದರು ಮತ್ತು ನ್ಯಾಯಮೂರ್ತಿ ಖನ್ನಾ ಅವರ ದೃಷ್ಟಿಕೋನವನ್ನು ಹೊಗಳಿದರು. ಹಾಗೂ ಆಲೋಚನೆಗಳ ಶಕ್ತಿ ಮತ್ತು ಧೈರ್ಯವನ್ನು ಗೌರವದಿಂದ ಸ್ವೀಕರಿಸಬೇಕು ಎಂದು ತಿಳಿಸಿದರು.


ತಂದೆಯ ತೀರ್ಪುಗಳನ್ನು ರದ್ದುಗೊಳಿಸಿದ ಪುತ್ರ
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ತಮ್ಮ ತಂದೆಯೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಎರಡನೇ ಪ್ರಕರಣ ದಾಂಪತ್ಯ ದ್ರೋಹಕ್ಕೆ ಸಂಬಂಧಿಸಿದ್ದಾಗಿದೆ. 2018 ರಲ್ಲಿ ದಾಂಪತ್ಯ ದ್ರೋಹವು ಒಬ್ಬ ವ್ಯಕ್ತಿ ಇನ್ನೊಬ್ಬರ ವಿರುದ್ಧ ಮಾಡಿದ ಅಪರಾಧವೆಂದು ಪರಿಗಣಿಸುವ ಕಾನೂನನ್ನು ಸರ್ವಾನುಮತದಿಂದ ತಳ್ಳಿಹಾಕಿದ ಪೀಠದ ಭಾಗವಾಗಿದ್ದರು. ಆ ಆದೇಶದೊಂದಿಗೆ ದಾಂಪತ್ಯ ದ್ರೋಹವೆಂಬುದು ಅಪರಾಧವಲ್ಲ ವಿಚ್ಛೇದನಕ್ಕೆ ಆಧಾರವಾಗಿದೆ ಎಂಬ ತೀರ್ಪನ್ನಿತ್ತರು.


ದಾಂಪತ್ಯ ದ್ರೋಹದ ಕಾನೂನನ್ನು ಸಾಂವಿಧಾನಿಕವಾಗಿ ಮಾನ್ಯವೆಂದು ಪರಿಗಣಿಸಿದ್ದರು


1985 ರಲ್ಲಿ ನ್ಯಾಯಮೂರ್ತಿ ವೈವಿ ಚಂದ್ರಚೂಡ್ ಅವರು ದಾಂಪತ್ಯ ದ್ರೋಹದ ಕಾನೂನನ್ನು ಸಾಂವಿಧಾನಿಕವಾಗಿ ಮಾನ್ಯವೆಂದು ಪರಿಗಣಿಸಿದ್ದರು. ಕಾನೂನು - ಸೆಕ್ಷನ್ 497 – ಉಲ್ಲೇಖಿಸಿರುವಂತೆ ತನಗೆ ತಿಳಿದಿರುವ ಅಥವಾ ಇನ್ನೊಬ್ಬ ಪರ ಪುರುಷನ ಪತ್ನಿಯೊಂದಿಗೆ ಲೈಂಗಿಕ ಸಂಭೋಗವನ್ನು ಹೊಂದಿದ್ದರೆ, ಆ ಪುರುಷನ ಒಪ್ಪಿಗೆ ಅಥವಾ ಸಮ್ಮತಿಯಿಲ್ಲದೆ, ಅಂತಹ ಲೈಂಗಿಕ ಸಂಭೋಗವು ಅತ್ಯಾಚಾರದ ಅಪರಾಧಕ್ಕೆ ಸಮನಾಗಿರುವುದಿಲ್ಲ, ಬದಲಿಗೆ ದಾಂಪತ್ಯ ದ್ರೋಹದ ಅಪರಾಧವಾಗಿದೆ ಎಂದು ತಿಳಿಸಿದೆ.


ಇದನ್ನೂ ಓದಿ: Eknath Shinde: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಬೆದರಿಕೆ ಕರೆ: ಪೊಲೀಸರಿಂದ ತೀವ್ರ ತನಿಖೆ


ಸೆಕ್ಷನ್ 497 ಅನ್ನು ತಿದ್ದುಪಡಿ ಮಾಡಬೇಕೇ ಬೇಡವೇ ಎಂಬುದನ್ನು ಶಾಸಕಾಂಗವು ಪರಿಗಣಿಸಬೇಕು


ಇದಕ್ಕೆ ಪ್ರತ್ಯುತ್ತರವಾಗಿ ವೈವಿ ಚಂದ್ರಚೂಡ್ ಪುರುಷರೇ ಸಾಮಾನ್ಯವಾಗಿ ಇನ್ನೊಬ್ಬರ ಮೇಲೆ ಆಕರ್ಷಿತರಾಗುವವರು ಹಾಗೂ ಮಹಿಳೆಯಲ್ಲ ಎಂಬುದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾದ ವಿಷಯವಾಗಿದೆ. ಆದರೆ ಇದು ಹೀಗೆಯೇ ಇರಬೇಕೆಂದೇನಿಲ್ಲ ಮೋಹಿಸುವವರು ಮಹಿಳೆಯೂ ಆಗಬಹುದು ಹಾಗಾಗಿ ಸಮಾಜದ ಪರಿವರ್ತನೆಯನ್ನು ಆಧರಿಸಿ ಸೆಕ್ಷನ್ 497 ಅನ್ನು ತಿದ್ದುಪಡಿ ಮಾಡಬೇಕೇ ಬೇಡವೇ ಎಂಬುದನ್ನು ಶಾಸಕಾಂಗವು ಪರಿಗಣಿಸಬೇಕು ಎಂದು ಉಲ್ಲೇಖಿಸಿದ್ದರು.


ತೀರ್ಪುಗಳು ಸಮಯಕ್ಕೆ "ಸಂಬಂಧಿತ"ವಾಗಿರಬೇಕು


ದಶಕಗಳ ನಂತರ, ತೀರ್ಪುಗಳು ಸಮಯಕ್ಕೆ "ಸಂಬಂಧಿತ"ವಾಗಿರಬೇಕು ಎಂಬುದಾಗಿ ಮಗ ಡಿವೈ ಚಂದ್ರಚೂಡ್ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ಸೆಕ್ಷನ್ 497 ಮಹಿಳೆಯ ಅಧೀನ ಸ್ವಭಾವವನ್ನು ವಿವಾಹದಲ್ಲಿ ಕಾರ್ಯಗತಗೊಳಿಸುತ್ತದೆ ಎಂಬುದಾಗಿದೆ.  ಆಗಾಗ್ಗೆ ವಿವಾಹವು ಕೊನೆಗೊಂಡಾಗ ಮತ್ತು ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿರುವಾಗ ದಾಂಪತ್ಯ ದ್ರೋಹ ಸಂಭವಿಸುತ್ತದೆ. ಯಾರಾದರೂ ಇನ್ನೊಂದು ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅದನ್ನು ಸೆಕ್ಷನ್ 497 ರ ಅಡಿಯಲ್ಲಿ ಶಿಕ್ಷಿಸಬೇಕೇ?" - ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪ್ರಶ್ನಿಸಿದ್ದರು.

Published by:Ashwini Prabhu
First published: