news18 Updated:May 7, 2020, 11:25 AM IST
ಸ್ಟೈರೀನ್ ಗ್ಯಾಸ್
- News18
- Last Updated:
May 7, 2020, 11:25 AM IST
ಆಂಧ್ರದ ವಿಶಾಖಪಟ್ನಂನಲ್ಲಿ ಇವತ್ತು ರಾಸಾಯನಿಕ ಕಾರ್ಖಾನೆಯೊಂದರಿಂದ ಅನಿಲ ಸೋರಿಕೆಯಾಗಿ ಹಲವು ಜನರು ಮೃತ ಪಟ್ಟಿದ್ದಾರೆ ಮತ್ತು ಸಾವಿರಾರು ಜನರು ನಿತ್ರಾಣಗೊಂಡು ಕುಸಿದುಬಿದ್ದಿದ್ದಾರೆ. ಅಷ್ಟಕ್ಕೂ ಎಲ್.ಜಿ. ಕೆಮಿಕಲ್ ಫ್ಯಾಕ್ಟರಿಯಿಂದ ಹೊರಹೊಮ್ಮಿದ ಇಷ್ಟು ಅಪಾಯಕಾರಿಯಾದ ಅನಿಲ ಯಾವುದು? ಸ್ಟೈರೀನ್ (Styrene). ಇದು ಪ್ಲಾಸ್ಟಿಕ್ ತಯಾರಿಕೆಗೆ ಉಪಯೋಗಿಸುವ ರಾಸಾಯನಿಕ ಸಂಯುಕ್ತ. ಬೆಂಜೀನ್ ರಾಸಾಯನಿಕರಿಂದ ಇದನ್ನು ಪಡೆಯಬಹುದು. ರಸಾಯನಶಾಸ್ತ್ರದಲ್ಲಿ ಇದಕ್ಕೆ ಇಥೆನೈಲ್ಬೆಂಜೀನ್, ವೀನೈಲ್ಬೆಂಜೀನ್ ಮತ್ತು ಫೀನೈಲ್ಈಥೀನ್ ಎನ್ನುತ್ತಾರೆ. ಇದರ ರಾಸಾಯನಿಕ ಸೂತ್ರ C6H5CH=CH2 ಇದೆ.
ಪಾಲಿಸ್ಟೈರೀನ್ ಪ್ಲಾಸ್ಟಿಕ್ ಮತ್ತು ಅಂಟುಗಳ ತಯಾರಿಕೆಗೆ ಈ ಸಂಯುಕ್ತವನ್ನು ಉಪಯೋಗಿಸಲಾಗುತ್ತದೆ. ಜಿಡ್ಡಿನಂತರುವ ಈ ಅನಿಲಕ್ಕೆ ಬಣ್ಣ ಇರುವುದಿಲ್ಲ. ಕೆಲವೊಮ್ಮೆ ಇದು ನಸು ಹಳದಿಯಂತೆ ತೋರಬಹುದು. ಇದನ್ನು ಆಘ್ರಾಣಿಸಿದರೆ ಸಿಹಿ ವಾಸನೆ ಬರುತ್ತದೆ. ರಾಸಾಯನಿಕ ಪ್ರಮಾಣ ಹೆಚ್ಚಾಗಿದ್ದರೆ ವಾಸನೆ ಕಠಿಣವಾಗಿರುತ್ತದೆ. ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಹಾಗೇ ಈ ರಾಸಾಯನಿಕವು ಗಾಳಿಗೆ ಬಂದರೆ ಬಹಳ ಬೇಗ ಆವಿಯಾಗಿಹೋಗುತ್ತದೆ.
ಇದನ್ನೂ ಓದಿ: Visakhapatnam Gas Leak: ವಿಶಾಖಪಟ್ಟಣಂ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; ಇಬ್ಬರು ಮಕ್ಕಳು ಸೇರಿ 8 ಸಾವು, 200ಕ್ಕೂ ಹೆಚ್ಚು ಜನ ಗಂಭೀರ
ಸ್ಟೈರೀನ್ ಅನಿಲ ಹೆಚ್ಚಾಗಿ ಸೇವಿಸಿದಾಗ ಏನಾಗುತ್ತದೆ?
ಸ್ಟೈರೀನ್ ಅನಿಲವನ್ನು ಉಸಿರಾಡಿದಾಗ ಕಣ್ಣು ಉರಿಯುತ್ತದೆ, ಗಂಟಲು ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಉಸಿರಾಟಕ್ಕೆ ತೊಂದರೆಯಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಈ ಗ್ಯಾಸನ್ನು ಉಸಿರಾಡಿದಾಗ ದೇಹದ ಮುಖ್ಯ ನರ ವ್ಯವಸ್ಥೆಯನ್ನು ಘಾಸಿಗೊಳಿಸಬಹುದು. ಇದರಿಂದ ತಲೆನೋವು, ಸುಸ್ತು, ಅಶಕ್ತಿ, ಖಿನ್ನತೆ, ಕಿವುಡು ಇತ್ಯಾದಿ ಬಾಧಿಸಬಹುದು. ಕೆಲ ಅಧ್ಯಯನಗಳಲ್ಲಿ ಲ್ಯೂಕೆಮಿಯಾ, ಲಿಂಫೋಮಾ ಮೊದಲಾದ ತೊಂದರೆಗಳಿಗೆ ಈ ಅನಿಲ ಕಾರಣವಾಗಬಹುದು ಎಂದು ತಿಳಿದುಬಂದಿದೆ.
ನಮ್ಮ ಸಹಜ ವಾತಾವರಣದಲ್ಲಿ ಆಮ್ಲಜನಕದಂತೆ ಹಲವು ಅನಿಲಗಳು ಇರುತ್ತವೆ. ಸ್ಟೈರೀನ್ ಕೂಡ ಇರುತ್ತದೆ. ಕಟ್ಟಡ ನಿರ್ಮಾಣ ವಸ್ತುಗಳು, ಬಳಕೆದಾರ ವಸ್ತುಗಳು, ತಂಬಾಕು ಹೊಗೆಯಿಂದ ಈ ಅನಿಲ ಬರಬಹುದು. ಪ್ಲಾಸ್ಟಿಕ್ ಕಾರ್ಖಾನೆಗಳಿಂದ ಇದು ಹೆಚ್ಚು ಹೊರಹೊಮ್ಮುವ ಸಾಧ್ಯತೆ ಇರುತ್ತದೆ. ವಿಶಾಖಪಟ್ಟಣಂನಲ್ಲಿ ಆಗಿರುವುದು ಇದೇ.
First published:
May 7, 2020, 11:15 AM IST