ದಕ್ಷಿಣ ಕೊರಿಯಾ: ಚೀನಾದಲ್ಲಿ (China) ಕೋವಿಡ್-19 (Covid-19) ಹೊಸ ರೂಪಾಂತರಿ ತಳಿಯ ಹಾವಳಿ ನಡುವೆ, ದಕ್ಷಿಣ ಕೊರಿಯಾದಲ್ಲಿ (South Korea) ನೇಗ್ಲೇರಿಯಾ ಫೌಲೆರಿ ಸೋಂಕಿಗೆ (Naegleria fowleri infection) 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ನೇಗ್ಲೇರಿಯಾ ಫೌಲೆರಿ ಸೋಂಕಿಗೆ ಬಲಿಯಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ. ಅಮಿಬಾ (Amoeba) ರೀತಿ ಇರುವ ಇದು ಮೆದುಳು (Brain) ತಿನ್ನುವ ಡೆಡ್ಲಿ ವೈರಸ್ ಆಗಿದೆ ಎಂದು ಥೈಲ್ಯಾಂಡ್ನಲ್ಲಿ (Thailand) ವರದಿ ಮಾಡಿದೆ. ಕೊರಿಯಾಕ್ಕೆ ಹಿಂದಿರುಗುವ ಮುನ್ನ ನಾಲ್ಕು ತಿಂಗಳ ಕಾಲ ವ್ಯಕ್ತಿ ಥೈಲ್ಯಾಂಡ್ನಲ್ಲಿ ತಂಗಿದ್ದರು. ನಂತರ ಕೊರಿಯಾಗೆ ಆಗಮಿಸಿದ ವ್ಯಕ್ತಿ ಡಿಸೆಂಬರ್ 10 ರಂದು ಮೃತಪಟ್ಟಿದ್ದಾರೆ ಎಂದು ಕೊರಿಯಾ ರೋಗ ನಿಯಂತ್ರಣ (Korea Disease Control) ಮತ್ತು ತಡೆಗಟ್ಟುವಿಕೆ ಸಂಸ್ಥೆ (Prevention Agency ) (ಕೆಡಿಸಿಎ) ಸಂಶೋಧನೆ ಮೂಲಕ ದೃಢಪಡಿಸಿದೆ.
ಮೆದುಳನ್ನು ತಿನ್ನುವ ಅಮೀಬಾ ನೇಗ್ಲೇರಿಯಾ ಫೌಲೆರಿ ಎಂದರೇನು?
ನೇಗ್ಲೇರಿಯಾ ಏಕಕೋಶೀಯ ಜೀವಿಯಾಗಿದ್ದು ಅದು ಅಸ್ತಿತ್ವದಲ್ಲಿ ಸೂಕ್ಷ್ಮದರ್ಶಕವಾಗಿದೆ. ಸರೋವರಗಳು, ನದಿಗಳು ಮತ್ತು ಮಣ್ಣು ಸೇರಿದಂತೆ ಸಿಹಿನೀರಿನ ವ್ಯವಸ್ಥೆಗಳಾದ್ಯಂತ ಮುಕ್ತ-ಜೀವನದ ಅಮೀಬಾ ರೀತಿ ಕಂಡುಬರುತ್ತದೆ. ಹಾಗಾಗಿ ಇದನ್ನು ಅಮೀಬಾ ವೈರಸ್ ಅಂತಲೂ ಕರೆಯಲಾಗುತ್ತದೆ. ಆದರೆ ಎಲ್ಲಾ ಜಾತಿಯ ಅಮೀಬಾಗಳು ಕೊಲ್ಲುತ್ತದೆ ಎಂದು ಹೇಳಲಾಗುವುದಿಲ್ಲ. ಕೇವಲ ನೈಗ್ಲೇರಿಯಾ ಫೌಲೆರಿ ಸೋಂಕು ಮನುಷ್ಯನಿಗೆ ತಗುಲುತ್ತದೆ.
ನೇಗ್ಲೇರಿಯಾ ಫೌಲೆರಿ ಹೇಗೆ ಹರಡುತ್ತದೆ?
ಅಮೆರಿಕಾ ಮೂಲದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ನೇಗ್ಲೇರಿಯಾ ಫೌಲೆರಿ ಅಮೀಬಾ ಮೂಗಿನ ಮೂಲಕ ದೇಹವನ್ನು ಪ್ರವೇಶಿ ನಂತರ ಮೆದುಳಿನವರೆಗೂ ಚಲಿಸುತ್ತದೆ. ಬಳಿಕ ಅಂಗಾಂಗಗಳವರೆಗೂ ತಲುಪಿ, ಕೆಲವೊಮ್ಮೆ ನಮ್ಮ ದೇಹದಲ್ಲಿರುವ ನರಗಳಿಗೂ ಹಾನಿಯನ್ನುಂಟು ಮಾಡುತ್ತದೆ. ಇದು ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂಬ ವಿನಾಶಕಾರಿ ಸೋಂಕನ್ನು ಉಂಟುಮಾಡುತ್ತದೆ. ಇದು ಹೆಚ್ಚು ಮಾರಣಾಂತಿಕ ಕಾಯಿಲೆಯಾಗಿದೆ.
ಬಿಸಿಲು ಹೆಚ್ಚಿದಾಗ ಈ ಸೋಂಕು ಸಾಮಾನ್ಯವಾಗಿ ಹರಡುತ್ತದೆ, ಅಲ್ಲದೆ ನೀರಿನ ತಾಪಮಾನ ಹೆಚ್ಚಿದ್ದರೆ, ಇದು ನೀರಿನ ಮಟ್ಟವನ್ನು ಕಡಿಮೆ ಮಾಡುತ್ತದೆ.
ನೇಗ್ಲೇರಿಯಾ ಫೌಲೆರಿ ರೋಗ ಗುಣ ಲಕ್ಷಣಗಳು
ಏಕ-ಕೋಶದ ಒಳನುಸುಳುವಿಕೆ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಗೆ ಕಾರಣವಾಗುತ್ತದೆ. ಇದು ತಲೆಯ ಮುಂಭಾಗ ಹೆಚ್ಚು ನೋವನ್ನುಂಟು ಮಾಡುತ್ತದೆ. ಈ ರೋಗದ ಗುಣಲಕ್ಷಣಗಳು:
ನೇಗ್ಲೇರಿಯಾ ಫೌಲೆರಿ ಒಬ್ಬರಿಂದ ಒಬ್ಬರಿಗೆ ಹರಡುತ್ತಾ?
ಇಲ್ಲ, ನೇಗ್ಲೇರಿಯಾ ಫೌಲೆರಿ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಸಾಧ್ಯವಿಲ್ಲ.
ನೇಗ್ಲೇರಿಯಾ ಫೌಲೆರಿಗೆ ಚಿಕಿತ್ಸೆ ಇದ್ಯಾ?
ಈ ಸೋಂಕಿಗೆ ಕೆಲವು ಚಿಕಿತ್ಸೆಗಳಿದ್ದರೂ, ಹೆಚ್ಚು ದಿನಗಳವರೆಗೂ ಪರಿಣಾಮಕಾರಿಯಾಗಿರುವುದಿಲ್ಲ. ಪ್ರಸ್ತುತ ಈ ಸೋಂಕಿಗೆ ಆಂಫೋಟೆರಿಸಿನ್ ಬಿ, ಅಜಿಥ್ರೊಮೈಸಿನ್, ಫ್ಲುಕೋನಜೋಲ್, ರಿಫಾಂಪಿನ್, ಮಿಲ್ಟೆಫೋಸಿನ್ ಮತ್ತು ಡೆಕ್ಸಾಮೆಥಾಸೊನ್ ಸೇರಿದಂತೆ ಅನೇಕ ಔಷಧಿಗಳನ್ನು ಚಿಕಿತ್ಸೆ ರೂಪದಲ್ಲಿ ನೀಡಲಾಗುತ್ತಿದೆ ಎನ್ನಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಅಮಿಬಾ ವೈರಸ್ಗೆ ಅಮೆರಿಕದಲ್ಲಿ ಬಾಲಕ ಬಲಿ
ಕೆಲವು ತಿಂಗಳ ಹಿಂದೆ ಅಮೆರಿಕದಲ್ಲಿ ನೀರಿನಲ್ಲಿ ಈಜಲು ಹೋಗಿದ್ದ ಬಾಲಕನ ದೇಹಕ್ಕೆ ಅಮೀಬಾ (ನೇಗ್ಲೇರಿಯಾ ಫೌಲೆರಿ) ಹೆಸರಿನ ವೈರಸ್ ಸೇರಿಕೊಂಡಿತ್ತು. ಇದಾದ 5 ದಿನಗಳ ನಂತರ ಬಾಲಕನ ದೇಹದಲ್ಲಿ ರೋಗ ಲಕ್ಷಣಗಳು ಕಂಡುಬಂದಿತ್ತು. ಹೀಗಾಗಿ 48 ಗಂಟೆಗಳ ಬಳಿಕ ಪೋಷಕರು ಆಸ್ಪತ್ರೆಗೆ ಕರೆದೊಯ್ದರು. ಆದರೆ 10 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದನು.
ಇದನ್ನೂ ಓದಿ: Covid 19 In China: ಕೊರೊನಾ ತಾಂಡವಕ್ಕೆ ಜಿನ್ಪಿಂಗ್ ತತ್ತರ, ಹೆಚ್ಚುತ್ತಿರುವ ಸಾವಿನ ಬಗ್ಗೆ ಮೌನ ಮುರಿದ ಚೀನಾ ಅಧ್ಯಕ್ಷ!
ರೋಗಲಕ್ಷಣಗಳು ಕಾಣಿಸಿಕೊಂಡ 48 ಗಂಟೆಗಳ ಬಳಿಕ ಪೋಷಕರು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ದಾಖಲಾದ 10 ದಿನಗಳ ನಂತರ ಬಾಲಕ ಮೃತಪಟ್ಟಿದ್ದಾನೆ ಎಂದು ಯುಎಸ್ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ