• Home
  • »
  • News
  • »
  • national-international
  • »
  • Explainer: ಮುಟ್ಟಿನ ರಜೆ ಎಂದರೇನು? ಯಾವೆಲ್ಲಾ ದೇಶಗಳಲ್ಲಿ ಮಹಿಳೆಯರಿಗೆ ಈ ರಜೆಯ ಸೌಲಭ್ಯವಿದೆ?

Explainer: ಮುಟ್ಟಿನ ರಜೆ ಎಂದರೇನು? ಯಾವೆಲ್ಲಾ ದೇಶಗಳಲ್ಲಿ ಮಹಿಳೆಯರಿಗೆ ಈ ರಜೆಯ ಸೌಲಭ್ಯವಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡುವ ಸಾಮರ್ಥ್ಯ, ಏಕಾಗ್ರತೆ ಕಡಿಮೆ ಇರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರಿಗೆ ಕನಿಷ್ಠ ಎರಡು ದಿನವಾದರೂ ರಜೆ ನೀಡಬೇಕು ಎಂದು ಪ್ರಪಂಚದಾದ್ಯಂತ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಈ ವಿಚಾರವಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ ಕೂಡ. ತಿಂಗಳಿನಲ್ಲಿ ಸಾಮಾನ್ಯವಾಗಿ ಐದಾರು ದಿನಗಳವರೆಗೆ  ಋತು ಚಕ್ರವಿರುತ್ತದೆ. ಅದರಲ್ಲೂ ಪ್ರಾರಂಭದ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಮುಟ್ಟಿನ ನೋವನ್ನು ಅನುಭವಿಸುತ್ತಾರೆ.

ಮುಂದೆ ಓದಿ ...
  • Share this:

ಮಹಿಳೆಯರಿಗೆ (Women) ಸಂಬಳ (Salary) ಸಹಿತ ಮಾತೃತ್ವ ರಜೆಯನ್ನು (Menstrual Leave) ಎಲ್ಲಾ ದೇಶಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಈ ರಜೆಯನ್ನು ಕಂಪನಿಗಳು ಅಲ್ಲಗಳೆದರೆ ಸಹಜವಾಗಿಯೇ ಅಂತಹ ಕಂಪನಿಗಳು ಶಿಕ್ಷೆಗೆ ಗುರಿಯಾಗುತ್ತವೆ. ಹೆರಿಗೆ (Delivery), ಮಾತೃತ್ವದಲ್ಲಿ ಅನುಭವಿಸುವ ಮಹಿಳೆಯರ ಕಷ್ಟಗಳ ಪಟ್ಟಿಯಲ್ಲಿ ಈ ಮುಟ್ಟು ಕೂಡ ಒಂದು. ಮುಟ್ಟಿನ ಅವಧಿಯಲ್ಲಿ (Periods) ಪ್ರತಿ ಮಹಿಳೆಯು ಸಹ ಹೇಳಲಾರದಷ್ಟು ನೋವು, ಕಿರಿಕಿರಿ, ಒತ್ತಡವನ್ನು ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಅದರಲ್ಲೂ ಈ ಕೆಲಸಕ್ಕೆ ಹೋಗುವ ಅಥವಾ ವಿದ್ಯಾರ್ಥಿಗಳಿಗೆ ಈ ಐದು ದಿನಗಳು ಕಠಿಣವಾಗಿರುತ್ತವೆ.


menstrual leave
ಸಾಂದರ್ಭಿಕ ಚಿತ್ರ


ಮಹಿಳೆಯರ ಕಷ್ಟದ ದಿನ ಈ ಮುಟ್ಟು


ಈ ಕಾರಣದಿಂದಾಗಿ ಮುಟ್ಟಿನ ದಿನಗಳಲ್ಲಿ ಅವರ ಕೆಲಸದ ಸಾಮರ್ಥ್ಯ, ಏಕಾಗ್ರತೆ ಕಡಿಮೆ ಇರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರಿಗೆ ಕನಿಷ್ಠ ಎರಡು ದಿನವಾದರೂ ರಜೆ ನೀಡಬೇಕು ಎಂದು ಪ್ರಪಂಚದಾದ್ಯಂತ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಈ ವಿಚಾರವಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ ಕೂಡ. ತಿಂಗಳಿನಲ್ಲಿ ಸಾಮಾನ್ಯವಾಗಿ ಐದಾರು ದಿನಗಳವರೆಗೆ  ಋತು ಚಕ್ರವಿರುತ್ತದೆ. ಅದರಲ್ಲೂ ಪ್ರಾರಂಭದ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಮುಟ್ಟಿನ ನೋವನ್ನು ಅನುಭವಿಸುತ್ತಾರೆ.


ಈ ನೋವು ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ. ಇನ್ನೂ ಕೆಲವರಿಗೆ ಇದರ ಪರಿಣಾಮ ಮಿತಿಮೀರಿರುತ್ತದೆ. ವಾಂತಿ, ತಲೆ ಸುತ್ತು, ನೋವು ಸಹ ಉಂಟಾಗಬಹುದು. ಆ ಸಮಯದಲ್ಲಿ ಕಚೇರಿಗೆ ಹೋಗುವುದೇ ಬೇಡ, ಕೆಲಸ ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಬಳಲಿರುತ್ತಾರೆ. ಆದರೆ ಈ ಕಾರಣಕ್ಕೆ ಆಫೀಸ್‌ನಲ್ಲಿ ರಜೆ ಕೇಳಲು ಸಾಧ್ಯವಿಲ್ಲ. ಕೇಳಿದರೂ ಸಹ ರಜೆ ಸಿಗುವುದು ಒಮ್ಮೊಮ್ಮೆ ಕಷ್ಟವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಮಹಿಳೆಯರಿಗೆ ಆ ದಿನಗಳಲ್ಲಿ ಖುದ್ದು ಕಂಪನಿಯೇ ರಜೆ ಮೀಸಲಿಡುವಂತಹ ಅಂಶವು ಕಾನೂನಿನ ಚೌಕಟ್ಟಿನಲ್ಲಿ ಬರಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.


menstrual leave
ಸಾಂದರ್ಭಿಕ ಚಿತ್ರ


ಮುಟ್ಟಿನ ದಿನಗಳಲ್ಲಿ ರಜೆಗೆ ಅನುಮತಿ ನೀಡಿದ ಸ್ಪೇನ್‌


ಇನ್ನೂ ಕೆಲ ದೇಶಗಳು ಮಹಿಳೆಯರ ಅಹವಾಲು, ಅವರ ಕಷ್ಟವನ್ನು ಅರ್ಥೈಸಿಕೊಂಡು ಮುಟ್ಟಿನ ಅವಧಿಯಲ್ಲಿ ರಜೆಯನ್ನು ಸಹ ಮಂಜೂರು ಮಾಡಿದೆ. ಅಂತಹ ದೇಶಗಳಲ್ಲಿ ಮೊದಲನೇಯದು ಸ್ಪೇನ್.‌ ಹೌದು, ಸ್ಪೇನ್ ರಾಷ್ಟ್ರ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ರಜೆ ಘೋಷಿಸಿದ ಮೊದಲ ಪಾಶ್ಚಾತ್ಯ ರಾಷ್ಟ್ರವಾಗಿದೆ.


3 ದಿನಗಳ ಕಾಲ ರಜೆ


EuroNews ನ ವರದಿಯ ಪ್ರಕಾರ, ಸಂತಾನೋತ್ಪತ್ತಿ, ಆರೋಗ್ಯ ಮತ್ತು ಗರ್ಭಪಾತ ಹಕ್ಕುಗಳ ಕುರಿತಾದ ವಿಶಾಲ ಕರಡು ಮಸೂದೆಯ ಭಾಗವಾಗಿ ಸ್ಪ್ಯಾನಿಷ್ ಸರ್ಕಾರವು ಈ ಕ್ರಮವನ್ನು ಅನುಮೋದಿಸಿದೆ.


ಎಲ್ ಪೈಸ್ ಪತ್ರಿಕೆಯ ಪ್ರಕಾರ, ಪ್ರಸ್ತಾವಿತ ಕಾನೂನು ಪ್ರತಿ ತಿಂಗಳು ತೀವ್ರ ಮುಟ್ಟಿನ ನೋವಿನಿಂದ ಬಳಲುತ್ತಿರುವ ಮಹಿಳೆಯರಿಗೆ ಕನಿಷ್ಠ ಮೂರು ಅನಾರೋಗ್ಯದ ವಿಶೇಷ ರಜೆಯನ್ನು ನಿಗದಿಪಡಿಸಿದೆ. ಹಾಗಿದ್ದರೆ ಮುಟ್ಟಿನ ರಜೆ ಎಂದರೇನು? ಯಾವೆಲ್ಲಾ ದೇಶಗಳು ಇದನ್ನು ಈಗಾಗ್ಲೇ ಜಾರಿಗೆ ತಂದಿವೆ. ಭಾರತ ಈ ಪದ್ಧತಿಯ ಅನುಸರಣೆಯಲ್ಲಿ ಎಲ್ಲಿದೆ ಎಂಬುದನ್ನು ಇಲ್ಲಿ ತಿಳಿಯೋಣ.


ಮುಟ್ಟಿನ ರಜೆ ಎಂದರೇನು?


ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಜಾರಿಗೆ ತರಲು ಪ್ರಪಂಚದಾದ್ಯಂತ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಇದು ಒಂದು ರೀತಿಯ ರಜೆಯಾಗಿದ್ದು, ಮಹಿಳೆಯರು ಋತುಮತಿಯಾದಾಗ ತಮ್ಮ ಕೆಲಸದ ಸ್ಥಳದಿಂದ ಪಾವತಿಸಿದ ಅಥವಾ ಪಾವತಿಸದ ರಜೆಯನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರಬಹುದು.


menstrual leave
ಸಾಂದರ್ಭಿಕ ಚಿತ್ರ


ಇದನ್ನೇ ಮುಟ್ಟಿನ ರಜೆ ಎಂದು ಕರೆಯಲಾಗುತ್ತದೆ. ಮಹಿಳೆಯರು ತಮ್ಮ ಪಿರಿಯಡ್​ನ ಸಮಯದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತಾಗುತ್ತಾರೆ. ಹೀಗಾಗಿ ಅವರಿಗೆ ಮನೆಯಲ್ಲಿ ಆ ದಿನಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಈ ರಜೆಯನ್ನು ಮೀಸಲಿಡಲಾಗುತ್ತದೆ.


ಮುಟ್ಟಿನ ರಜೆಯನ್ನು ಯಾವೆಲ್ಲಾ ದೇಶಗಳು ಮತ್ತು ಎಷ್ಟು ದಿನ ನೀಡುತ್ತಿವೆ?


ಆಸಿಯಾನ್‌ ರಾಷ್ಟ್ರಗಳಲ್ಲಿ ಅಂದರೆ ಜಪಾನ್‌, ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಮತ್ತು ತೈವಾನ್ ಸೇರಿದಂತೆ ಕೆಲವು ಆಗ್ನೇಯ ಏಷ್ಯಾದ ದೇಶಗಳಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆಗಳನ್ನು ಅನುಮತಿಸಲಾಗಿದೆ. ಯುನೈಟೆಡ್‌ ಸ್ಟೇಟ್‌ನಲ್ಲೂ ಸಹ ಮುಟ್ಟಿನ ರಜೆ ಇದೆ ಆದರೆ ಆ ರಜೆಗೆ ಹಣ ಪಾವತಿಸಲಾಗುವುದಿಲ್ಲ.


ಇಂಡೋನೇಷ್ಯಾ


ಇಂಡೋನೇಷ್ಯಾ ಮಹಿಳೆಯರಿಗೆ ತಿಂಗಳಿಗೆ ಎರಡು ದಿನಗಳ ಮುಟ್ಟಿನ ರಜೆಯ ಹಕ್ಕನ್ನು ನೀಡುತ್ತದೆ, ಇವುಗಳು ಹೆಚ್ಚುವರಿ ರಜೆಗಳಲ್ಲ.


menstrual leave
ಸಾಂದರ್ಭಿಕ ಚಿತ್ರ


ಜಪಾನ್‌


ಇನ್ನೂ ಜಪಾನ್‌ನಲ್ಲಿ, ಶಾಸನವು ಬರೋಬ್ಬರಿ 70 ವರ್ಷಗಳಿಂದ ಜಾರಿಯಲ್ಲಿದೆ. 1947 ರಲ್ಲಿ ಅನುಮೋದಿಸಲಾದ ಲೇಬರ್ ಸ್ಟ್ಯಾಂಡರ್ಡ್ಸ್ ಕಾನೂನಿನ 68 ನೇ ವಿಧಿಯು ಹೇಳುವ ಪ್ರಕಾರ, ಮುಟ್ಟಿನ ಅವಧಿಯಲ್ಲಿ ಕೆಲಸ ಮಾಡುವ ಮಹಿಳೆ ವಿಶೇಷವಾಗಿ ಕಷ್ಟಕರವಾದಾಗ ರಜೆಗೆ ವಿನಂತಿಸಿದರೆ, ಉದ್ಯೋಗದಾತನು ಋತುಚಕ್ರದ ದಿನಗಳಲ್ಲಿ ಅಂತಹ ಮಹಿಳೆಗೆ ರಜೆ ನೀಡಬೇಕು ಎಂದಿದೆ.


2017 ರಲ್ಲಿ ಜಪಾನಿನ ಸರ್ಕಾರದ ಸಮೀಕ್ಷೆಯು ಕೇವಲ 0.9 ಪ್ರತಿಶತ ಮಹಿಳಾ ಉದ್ಯೋಗಿಗಳು ಮಾತ್ರ ಅವಧಿ ರಜೆಯನ್ನು ಕ್ಲೈಮ್ ಮಾಡಿದ್ದಾರೆ ಎಂದು ಕಂಡುಹಿಡಿದಿದೆ. ಕಾನೂನಿನ ಪ್ರಕಾರ ಕಂಪನಿಗಳು ಮಹಿಳೆಯರಿಗೆ ರಜೆ ತೆಗೆದುಕೊಳ್ಳಲು ಅವಕಾಶ ನೀಡಬೇಕಾಗಿದ್ದರೂ, ಮುಟ್ಟಿನ ಸಮಯದಲ್ಲಿ ಕೆಲಸ ಮಾಡಲು ಆಯ್ಕೆ ಮಾಡುವ ಮಹಿಳೆಯರಿಗೆ ವೇತನ ಸಹಿತ ರಜೆ ಅಥವಾ ಹೆಚ್ಚುವರಿ ವೇತನವನ್ನು ನೀಡುವುದನ್ನು ಕಡ್ಡಾಯಗೊಳಿಸಿಲ್ಲ.


ದಕ್ಷಿಣ ಕೊರಿಯಾ


ದಕ್ಷಿಣ ಕೊರಿಯಾದಲ್ಲಿ, ಮಹಿಳಾ ಉದ್ಯೋಗಿಗಳು ಮುಟ್ಟಿನ ರಜೆ ತೆಗೆದುಕೊಳ್ಳದಿದ್ದರೆ ಹೆಚ್ಚುವರಿ ವೇತನವನ್ನು ನೀಡಲಾಗುತ್ತದೆ. ದಕ್ಷಿಣಾ ಕೊರಿಯಾದಲ್ಲಿ ಕಂಪನಿಯ ಈ ಸವಲತ್ತನ್ನು ನಿರಾಕರಿಸಿರುವ ಮಹಿಳೆಯರು ಮುಟ್ಟಿನ ರಜೆಯನ್ನು ತೆಗೆದುಕೊಳ್ಳುತ್ತಿದ್ದಾರೆ. 2013 ರ ಸಮೀಕ್ಷೆಯಲ್ಲಿ, 23.6 ರಷ್ಟು ದಕ್ಷಿಣ ಕೊರಿಯಾದ ಮಹಿಳೆಯರು ರಜೆಯನ್ನು ಬಳಸಿದ್ದಾರೆ. ಆದರೆ 2017 ರ ಹೊತ್ತಿಗೆ, ಈ ದರವು ಶೇಕಡಾ 19.7 ಕ್ಕೆ ಕುಸಿತ ಕಂಡಿದೆ.


ತೈವಾನ್‌


ತೈವಾನ್‌ನಲ್ಲಿ, ಉದ್ಯೋಗದಲ್ಲಿ ಲಿಂಗ ಸಮಾನತೆಯ ಕಾಯಿದೆಯು ಮಹಿಳೆಯರಿಗೆ ವರ್ಷಕ್ಕೆ ಮೂರು ದಿನಗಳ "ಮುಟ್ಟಿನ ರಜೆ" ನೀಡುತ್ತದೆ, ಇದನ್ನು "ಸಾಮಾನ್ಯ ಅನಾರೋಗ್ಯ ರಜೆ" 30 ದಿನಗಳ ಕಡೆಗೆ ಲೆಕ್ಕ ಹಾಕಲಾಗುವುದಿಲ್ಲ.


menstrual leave
ಸಾಂದರ್ಭಿಕ ಚಿತ್ರ


ಆಫ್ರಿಕ


ಆಫ್ರಿಕನ್ ದೇಶವಾದ ಜಾಂಬಿಯಾದಲ್ಲಿ, "ಮದರ್ಸ್ ಡೇ" ಎಂದು ಕರೆಯಲ್ಪಡುವ ಅವರ ಋತುಚಕ್ರದ ರಜೆ ನೀತಿಯಿಂದಾಗಿ ಪ್ರತಿ ತಿಂಗಳು ಒಂದು ದಿನ ರಜೆ ತೆಗೆದುಕೊಳ್ಳಲು ಮಹಿಳೆಯರಿಗೆ ಕಾನೂನುಬದ್ಧವಾಗಿ ಅರ್ಹತೆ ಇದೆ. ರಜೆಯನ್ನು ನಿರಾಕರಿಸಿದರೆ ಮಹಿಳಾ ಉದ್ಯೋಗಿಯು ತನ್ನ ಉದ್ಯೋಗದಾತನ ವಿರುದ್ಧ ನ್ಯಾಯಸಮ್ಮತವಾಗಿ ಕಾನೂನು ಕ್ರಮ ಜರುಗಿಸಬಹುದು.


ಭಾರತದಲ್ಲಿ ಮುಟ್ಟಿನ ರಜೆ ಜಾರಿಯಲ್ಲಿದೆಯೇ?


ಮಹಿಳೆಯರಿಗೆ ಮುಟ್ಟಿನ ರಜೆ ತೆಗೆದುಕೊಳ್ಳುವ ಹಕ್ಕನ್ನು ಅನುಮತಿಸಲು ಭಾರತದಲ್ಲಿ ಯಾವುದೇ ಕಾನೂನು ಮೂಲಸೌಕರ್ಯವಿಲ್ಲ. ಆದಾಗ್ಯೂ, ಬೈಜುಸ್, ಜೊಮಾಟೊ ಮತ್ತು ಕಲ್ಚರ್ ಮ್ಯಾಗಜೀನ್ ಸೇರಿದಂತೆ ಕೆಲವು ಖಾಸಗಿ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಈ ಪ್ರಯೋಜನವನ್ನು ಒದಗಿಸಲು ಆರಂಭಿಸಿವೆ.


menstrual leave
ಸಾಂದರ್ಭಿಕ ಚಿತ್ರ


ಬಿಹಾರದಲ್ಲಿ ಸರ್ಕಾರಿ ಅನುಮೋದಿತ ಮುಟ್ಟಿನ ರಜೆ


ಭಾರತದಲ್ಲಿ ಸರ್ಕಾರದಿಂದ ಅನುಮೋದಿತ ಪೀರಿಯಡ್ಸ್ ರಜೆಗಳನ್ನು ಹೊಂದಿರುವ ದೇಶದ ಏಕೈಕ ರಾಜ್ಯವೆಂದರೆ ಅದು ಬಿಹಾರ. ಜನವರಿ, 1992 ರಲ್ಲಿ, ರಾಜ್ಯ ಸರ್ಕಾರದ ಆದೇಶವು ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ತಮ್ಮ ಸಾಮಾನ್ಯ ರಜೆಯ ಹೊರತಾಗಿ ಪ್ರತಿ ತಿಂಗಳು ಎರಡು ಸತತ ರಜೆಯನ್ನು ಘೋಷಿಸಿದೆ.


ಅರುಣಾಚಲ ಪ್ರದೇಶದಲ್ಲಿ "ದಿ ಮೆನ್ಸ್ಟ್ರುಯೇಶನ್ ಬೆನಿಫಿಟ್ಸ್ ಬಿಲ್, 2017'


2017 ರಲ್ಲಿ ಅರುಣಾಚಲ ಪ್ರದೇಶದ ಸಂಸದ ನಿನೊಂಗ್ ಎರಿಂಗ್ ಅವರು ಸಂಸತ್ತಿನಲ್ಲಿ 'ದಿ ಮೆನ್ಸ್ಟ್ರುಯೇಶನ್ ಬೆನಿಫಿಟ್ಸ್ ಬಿಲ್, 2017' ಅನ್ನು ಮಂಡಿಸಿದ್ದಾರೆ. ಮಸೂದೆಯ ಅಡಿಯಲ್ಲಿ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ನೋಂದಾಯಿಸಲಾದ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ದಿನಗಳ ಋತುಚಕ್ರದ ರಜೆಗೆ ಅರ್ಹರಾಗಿರುತ್ತಾರೆ, ಇದು ವಾರ್ಷಿಕವಾಗಿ 24 ದಿನಗಳ ರಜೆಯ ಮೊತ್ತವಾಗಿದೆ.


menstrual leave
ಸಾಂದರ್ಭಿಕ ಚಿತ್ರ


ಮುಟ್ಟಿನ ನೈರ್ಮಲ್ಯ, ಮುಟ್ಟಿನ ರಜೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದರೂ ಸಹ ಕೆಲ ದೇಶಗಳಲ್ಲಿ, ಪಂಗಡಗಳಲ್ಲಿ ಮುಟ್ಟಿನ ಬಗ್ಗೆ ಹೇಳಲು ಈಗಲೂ ಹಿಂಜರಿಯುತ್ತಾರೆ. ಮುಟ್ಟಿನ ದಿನಗಳಲ್ಲಿ ಎಷ್ಟೇ ನೋವಾದರೂ ಬೇರೆಯವರಿಗೆ ಹೇಳಲು ಅಂಜಿಕೆಯಾಗಿ ಕಷ್ಟಪಟ್ಟು ಆಫೀಸ್‌ಗೆ, ಕಾಲೇಜಿಗೆ ಬರುತ್ತಾರೆ. ಹೀಗಾಗಿ ಈ ರಜೆ ಸಿಕ್ಕರೆ ಮಹಿಳೆಯರು ಕಚೇರಿ ಕೆಲಸದಿಂದ ನಿರಾಳವಾಗಿ ವಿಶ್ರಾಂತಿ ಪಡೆಯಬಹುದು.


ಇದನ್ನೂ ಓದಿ: Periods Leave: ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಿದ ಕೇರಳ ಸರ್ಕಾರ
ಪರ-ವಿರೋಧ


ಮುಟ್ಟಿನ ರಜೆಗೆ ದೊಡ್ಡ ರೀತಿಯಲ್ಲಿ ಪರ-ವಿರೋಧಗಳು ಇವೆ. ಕೆಲವರು ಪ್ರತಿ ತಿಂಗಳು ನೀಡುವ ರಜೆ ಅವರ ಕೆಲಸದ ಮೇಲೆ ಮತ್ತು ಕಂಪನಿಯ ಮೇಲೆ ಪರಿಣಾಮ ಬೀರುತ್ತದೆ ಎಂದರೆ, ಇನ್ನು ಕೆಲವರು ಮುಟ್ಟಿನ ಸಮಯ ಮಹಿಳೆಯರಿಗೆ ತುಂಬಾ ಕಷ್ಟವಾಗಿರುವುದರಿಂದ ಆ ದಿನಗಳಲ್ಲಿ ರಜೆ ಕೊಟ್ಟು ಬೇರೆ ದಿನಗಳಲ್ಲಿ ಬಾಕಿಯುಳಿದ ಕೆಲಸ ಮಾಡಬಹುದು ಎಂದಿದ್ದಾರೆ. ಒಟ್ಟಾರೆ ಪರ-ವಿರೋಧಗಳು ತೀವ್ರವಾಗಿದ್ದು ಭಾರತದಲ್ಲಿ ಈ ಕಾನೂನು ಜಾರಿಗೆ ಬರುತ್ತದೆಯೇ ಎಂದು ಕಾದು ನೋಡಬೇಕಿದೆ.

Published by:Monika N
First published: