ಜಲ ಪ್ರತಿಜ್ಞೆ ದಿವಸ ಎಂದರೇನು?; ಅದು ಮುಖ್ಯವೇಕೆ ಮತ್ತು ಯಾರು ಇದರ ಭಾಗವಾಗಲಿದ್ದಾರೆ?

ಆರೋಗ್ಯಕರ ಭಾರತ ನಿರ್ಮಾಣ ಮಾಡುವುದು ಮಿಷನ್​ ಪಾನಿಯ ಮುಖ್ಯ ಉದ್ದೇಶವಾಗಿದೆ. ಬಾಲಿವುಡ್ ನಟ ಹಾಗೂ ಸಾಮಾನ್ಯ ವ್ಯಕ್ತಿಗಳ ಹೀರೋ ಅಕ್ಷಯ್​ ಕುಮಾರ್​ ನಮ್ಮ ಆಂದೋಲನಕ್ಕೆ ಸ್ವ ಇಚ್ಛೆಯಿಂದ ಕೈ ಜೋಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಆರಂಭದಿಂದಲೂ ಮಿಷನ್ ಪಾನಿ ಇದು ಜನರ ಆಂದೋಲನವಾಗಿದೆ. ಇದು ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯವನ್ನು ಉತ್ತೇಜಿಸುವ ಸಾಂಸ್ಥಿಕ ಪ್ರಯತ್ನಗಳಿಗೆ ಒಂದು ವೇದಿಕೆಯಾಗಿದೆ. ಪ್ರತಿಯೊಬ್ಬ ಭಾರತೀಯನಿಗೆ ಶುದ್ಧ ನೀರು ಸಿಗಬೇಕು ಎನ್ನುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಈ ಉದ್ದೇಶಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದ್ಧತೆಯನ್ನು ತೋರಿಸಬೇಕಿದೆ.

  ನವೆಂಬರ್​ 19ನ್ನು ವಿಶ್ವ ಶೌಚಾಲಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇದೇ ದಿನವನ್ನು ಜಲ ಪ್ರತಿಜ್ಞೆ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಜಲ ಪ್ರತಿಜ್ಞೆ ದಿನದಂದು ದೇಶದ ಮಾಜಿ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಕೂಡ ಉಪಸ್ಥಿರಿರುತ್ತಾರೆ. ಈ ಮೂಲಕ ಮಿಷನ್​ ಪಾನಿ ಆಂದೋಲನಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಇದರ ಜೊತೆಗೆ ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಕೂಡ ಈ ಕಾರ್ಯಕ್ರಮದಲ್ಲಿ ಪಾಳ್ಗೊಳ್ಳುತ್ತಿದ್ದಾರೆ.

  ಇದರ ಜೊತೆ ಈ ಕಾರ್ಯಕ್ರಮದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಪ್ರಶಸ್ತಿ ಪುರಸ್ಕೃತ ಪರಿಸರವಾದಿ ಅಲ್​ಜಾರ್ಜ್​, ವಿಶ್ವ ಶೌಚಾಲಯ ಆರ್ಗನೈಸೇಷನ್​ ಸ್ಥಾಪಕ ಜಾಕ್​ ಸಿಮ್ ಹಾಗೂ ನಟ ಅಕ್ಷಯ್​ ಕುಮಾರ್ ಕಾರ್ಯಕ್ರಮದಲ್ಲಿರುತ್ತಾರೆ. ಇದರ ಜೊತೆ ಮಿಷನ್​ ಪಾನಿ ಗೀತೆ ಬರೆದ ಪ್ರಸೂನ್​ ಜೋಶಿ ಹಾಗೂ ಸಂಗೀತ ಸಂಯೋಜಕ ಎಆರ್​ ರೆಹ್ಮಾನ್​ ಕೂಡ ಕಾರ್ಯಕ್ರಮದಲ್ಲಿರುತ್ತಾರೆ.

  ನ್ಯೂಸ್​18 ಹಾಗೂ ಹಾರ್ಪಿಕ್​ ಇಂಡಿಯಾ  ಒಟ್ಟಾಗಿ ಮಿಷನ್​ ಪಾನಿಯ ಭಾಗವಾಗಿ ಜಲ ಪ್ರತಿಜ್ಞೆ ದಿನವನ್ನು ಆಚರಿಸುತ್ತಿವೆ. ಶಾಲಾ ವಿದ್ಯಾರ್ಥಥಿಗಳು, ಶಿಕ್ಷಕರು ಸೇರಿ ಅನೇಕರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

  ಈ ಪ್ರತಿಜ್ಞೆಯು ವ್ಯಕ್ತಿಗಳಲ್ಲಿ ಹಾಗೂ ಪ್ರತಿಯೊಬ್ಬರಲ್ಲಿ ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯ ಚಳುವಳಿ ಪ್ರಾರಂಭಿಸುವ ಪ್ರಯತ್ನಗಳಿಗೆ ಪ್ರೇರಣೆ ನೀಡಿದೆ. ಇದರಿಂದ ನೈರ್ಮಲ್ಯ ಹಾಗೂ ಆರೋಗ್ಯಕರ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಿದೆ.  ಇದು ವ್ಯಕ್ತಿಯ ಜವಾಬ್ದಾರಿಗಳಿಗೆ ವಿನಿಯೋಗಿಸಬಹುದಾದ ಕ್ರಿಯಾ ಯೋಜನೆಯ ಅಗತ್ಯವಿರುತ್ತದೆ ಮತ್ತು ಈ ದೇಶದ ಪ್ರತಿಯೊಬ್ಬ ನಾಗರಿಕನು ತಮ್ಮ ನಿಷ್ಠೆಯನ್ನು ಪದಗಳಲ್ಲಿ ಮತ್ತು ಕ್ರಿಯೆಯಲ್ಲಿ ಪ್ರತಿಜ್ಞೆ ಮಾಡುವ ಗುರಿಯನ್ನು ಹೊಂದಿದೆ.

  ಆರೋಗ್ಯಕರ ಭಾರತ ನಿರ್ಮಾಣ ಮಾಡುವುದು ಮಿಷನ್​ ಪಾನಿಯ ಮುಖ್ಯ ಉದ್ದೇಶವಾಗಿದೆ. ಬಾಲಿವುಡ್ ನಟ ಹಾಗೂ ಸಾಮಾನ್ಯ ವ್ಯಕ್ತಿಗಳ ಹೀರೋ ಅಕ್ಷಯ್​ ಕುಮಾರ್​ ನಮ್ಮ ಆಂದೋಲನಕ್ಕೆ ಸ್ವ ಇಚ್ಛೆಯಿಂದ ಕೈ ಜೋಡಿಸಿದ್ದಾರೆ. ಅಕ್ಷಯ್​ ಕುಮಾರ್ ಹೇಳಿರುವ ಸಂದೇಶವನ್ನು ಈ ಕೇಳಗೆ ನೋಡಬಹುದಾಗಿದೆ.

  ನೀವು ಕೂಡ ಈ ಕಾರ್ಯಕ್ರಮದಲ್ಲಿ ಪಾಳ್ಗೊಳ್ಳಬಹುದು. ನವೆಂಬರ್​ 19ರಂದು ಬೆಳಗ್ಗೆ 11:30ರಿಂದ ಕಾರ್ಯಕ್ರಮ News18.com ಸೇರಿ ನಮ್ಮ ಚಾನೆಲ್​ನ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಲೈವ್​ ನೋಡಬಹುದಾಗಿದೆ.

  ನೀವು ಕೂಡ ಜಲ ಪ್ರತಿಜ್ಞೆ ತೆಗೆದುಕೊಳ್ಳಬಹುದು. ನೀವು ಪ್ರತಿಜ್ಞೆ ತೆಗೆದುಕೊಂಡಿರುವುದನ್ನು ವಿಡಿಯೋ ಮಾಡಿ. ಮತ್ತು #MeriJalPratigya  ಹ್ಯಾಶ್​ಟ್ಯಾಗ್​ ಹಾಕಿ ಮತ್ತು   @CNNNews18 and @Harpic_India ಗೆ ಟ್ಯಾಗ್​ ಮಾಡಿ. ಹೆಚ್ಚಿನ ಮಾಹಿತಿಗೆ  www.news18.com/mission-paani ಲಾಗಿನ್​ ಆಗಿ.
  Published by:Rajesh Duggumane
  First published: