ಒಬ್ಬಂಟಿಯಾಗಿರಲು ಬಯಸುವ ಜನರು ಒಂದು ರೀತಿಯ ಮಾನಸಿಕ ಖಿನ್ನತೆಯಾದ ಹಿಕಿಕೊಮೊರಿ ಜಪಾನ್‌ನಲ್ಲಿ ವೇಗವಾಗಿ ಹರಡುತ್ತಿದೆ ಎಂದು ಸಮೀಕ್ಷೆ ಮಾಡಲಾಗಿದೆ. 1.5 ಮಿಲಿಯನ್‌ನಷ್ಟು (Million) ವಯಸ್ಕರು ಏಕಾಂತದಲ್ಲಿಯೇ ದಿನದೂಡುತ್ತಿದ್ದಾರೆ ಅದೇ ರೀತಿ ಸಾಮಾಜಿಕವಾಗಿ ಬೆರೆಯುವುದಿಲ್ಲ ಎಂದು ಸಮೀಕ್ಷೆಯ ವರದಿ (Report) ಮಾಡಿದೆ. 20% ನಷ್ಟು ಪ್ರಕರಣಗಳು ಕೋವಿಡ್-19 ಸಾಂಕ್ರಾಮಿಕದ ಒತ್ತಡದಿಂದ ಉಂಟಾಗಿದೆ. ಹಿಕಿಕೊಮೆರಿ ಕಾಯಿಲೆಯು ನೀವು ಹೆಚ್ಚಾಗಿ ಬೆರೆಯುವ ಜನರೊಂದಿಗೆ ಸಂಪರ್ಕವನ್ನು (Communication) ಕಡಿತಗೊಳಿಸುತ್ತದೆ ಮತ್ತು ನೀವು ಹೆಚ್ಚು ಆನಂದಿಸುವ ಚಟುವಟಿಕೆಗಳನ್ನು ಮುಳುವಾಗಿಸುತ್ತದೆ. ಈ ಸಮಯದಲ್ಲಿ ಪ್ರತ್ಯೇಕವಾಗಿರಲು ಬಯಸುತ್ತಾರೆ, ಕುಟುಂಬದವರು ಮತ್ತು ನಿಕಟ ಸ್ನೇಹಿತರಿಂದ ದೂರವಿರಲು ಬಯಸುತ್ತಾರೆ. ಒಟ್ಟಿನಲ್ಲಿ ಒಬ್ಬಂಟಿಯಾಗಿರಲು ಸದಾ ಮನ ಬಯಸುತ್ತದೆ.
ಕ್ಯಾಬಿನೆಟ್ ಕಚೇರಿಯ ಸಮೀಕ್ಷೆ ಏನು ಹೇಳಿದೆ?
ಕ್ಯಾಬಿನೆಟ್ ಕಚೇರಿಯು ಕಳೆದ ನವೆಂಬರ್‌ನಲ್ಲಿ ಜಪಾನ್‌ನಾದ್ಯಂತ 10 ಮತ್ತು 69 ವರ್ಷ ವಯಸ್ಸಿನ 30,000 ಜನರನ್ನು ಸಮೀಕ್ಷೆ ನಡೆಸಿತು ಹಾಗೂ 15-62 ವರ್ಷ ವಯಸ್ಸಿನ 2% ರಷ್ಟು ಜನರಲ್ಲಿ ಹಿಕಿಕೊಮೊರಿಯನ್ನು ಪತ್ತೆ ಮಾಡಿದ್ದಾರೆ.
ಸಂಬಂಧಗಳ ಸಮಸ್ಯೆಗಳಿಂದ ಕೆಲವರು ಸಮಾಜದಿಂದ ಹಿಂದೆ ಸರಿಯಲು ಪ್ರಾರಂಭಿಸಿದ್ದರೆ ಇನ್ನು ಕೆಲವರು ಉದ್ಯೋಗ ಕಳೆದುಕೊಂಡ ನಂತರ ಒಬ್ಬಂಟಿಗರಾಗಿರಲು ಬಯಸಿರುವುದಾಗಿ ಕ್ಯಾಬಿನೆಟ್ ಕಚೇರಿ ವರದಿ ಮಾಡಿದೆ.
ಒಬ್ಬಂಟಿಗರಾಗಿ ವಾಸಿಸುತ್ತಿರುವ ಜಪಾನಿಗರು
40-64 ವಯಸ್ಸಿನ ಜನರಲ್ಲಿ, 44.5% ಜನರು ಉದ್ಯೋಗ ಕಳೆದುಕೊಂಡ ನಂತರ ಒಬ್ಬಂಟಿಗರಾಗಿರುವುದನ್ನು ತಿಳಿಸಿದ್ದು, 20.6% ಜನರು ತಮ್ಮ ಈ ಸ್ಥಿತಿಗೆ ಕೋವಿಡ್ ಕಾರಣ ಎಂದು ತಿಳಿಸಿದ್ದಾರೆ. ಏಕಾಂತವಾಸಿಗಳಾಗಿ ವಾಸಿಸುವ ಜನರ ಸಂಖ್ಯೆ ಹೆಚ್ಚಿನದಾಗಿದ್ದು, ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಹಿಂದೂ ದೇಗುಲಕ್ಕೆ 1 ಎಕರೆ ಜಮೀನು ಕೊಟ್ಟ ಮುಸ್ಲಿಂ ಕುಟುಂಬ! ತಂದೆಯ ಕೊನೆಯ ಆಸೆ ತೀರಿಸಿದ ಮಕ್ಕಳು
ಟೋಕಿಯೋದಲ್ಲಿನ ಎಡೋಗಾವಾ ವಾರ್ಡ್‌ನಲ್ಲಿ ಹಿಕಿಕೊಮೊರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವಿವಿಧ ಸಮಾಜೀಕರಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
2021 ರ ಸಮೀಕ್ಷೆಯ ಪ್ರಕಾರ, ಈ ವಾರ್ಡ್‌ನಲ್ಲಿ 9,000 ಹೆಚ್ಚು ಜನರು ನೆಲೆಸಿದ್ದಾರೆ, ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ ವಿದ್ಯಾರ್ಥಿಗಳು, ತಮಗೆ ಹಿಕಿಕೊಮೊರಿ ಬಾಧಿಸಿದೆ ಎಂದು ಹೇಳಿಕೊಂಡಿದ್ದಾರೆ.
ಹಿಕಿಕೊಮೊರಿ ಎಂದರೇನು?
ಹಿಕಿಕೊಮೊರಿ ಎಂಬುದು ಸಾಮಾಜಿಕವಾಗಿ ಪಾಲ್ಗೊಳ್ಳದೇ ಒಬ್ಬಂಟಿಗರಾಗಿರುವ ವಿದ್ಯಮಾನ ಮತ್ತು ಪ್ರಸ್ತುತ ಜಪಾನ್‌ನಲ್ಲಿ ಪ್ರಚಲಿತವಾಗಿದೆ. ಸಾಮಾನ್ಯವಾಗಿ ಯುವ ಜನರು ಸಾಮಾಜಿಕ ಸಂವಹನದಿಂದ ಹಿಂದೆ ಸರಿಯುತ್ತಾರೆ ಹಾಗೂ ಮನೆಗಳಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡು ವಾಸವಾಗುತ್ತಾರೆ.
ಹಿಕಿಕೊಮೊರಿಯು ಸಾಮಾನ್ಯವಾಗಿ ಆತಂಕ, ಖಿನ್ನತೆ ಮತ್ತು ಸಾಮಾಜಿಕ ಫೋಬಿಯಾದ ಭಾವನೆಗಳೊಂದಿಗೆ ಮಿಳಿತಗೊಂಡಿದೆ. ಹಿಕಿಕೊಮೊರಿಯ ಪರಿಣಾಮವು ಪ್ರಭಾವಿತ ವ್ಯಕ್ತಿಗಳಿಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಗಮನಾರ್ಹವಾಗಿದೆ.
ಇದರಿಂದಾಗುವ ಪರಿಣಾಮ?
ಸಾಮಾಜಿಕ ಪ್ರತ್ಯೇಕತೆಯು ಸಮಸ್ಯೆ ಮತ್ತು ಆತಂಕ ಸೇರಿದಂತೆ ಮತ್ತಷ್ಟು ಮಾನಸಿಕ ಆರೋಗ್ಯಕ್ಕೆ ಮತ್ತು ವ್ಯಕ್ತಿಗಳಿಗೆ ಹೆಚ್ಚುವರಿ ಬೆರೆಯಲು ಅಡ್ಡಿಯನ್ನುಂಟು ಮಾಡಬಹುದು.
View this post on Instagram
ಇದನ್ನೂ ಓದಿ: ತಮಿಳುನಾಡು ಯುವಕನ ಜೊತೆ ಮೆಕ್ಸಿಕನ್ ಯುವತಿ ವಿವಾಹ! ಭಾರತೀಯ ಸಂಸ್ಕೃತಿಗೆ ಮನಸೋತ ವಿದೇಶಿ ಕುಟುಂಬ
ಹಿಕಿಕೊಮೆರಿಯಿಂದ ಉಂಟಾಗುವ ಇತರ ತೊಂದರೆಗಳು
ಜಪಾನ್‌ನಲ್ಲಿ, ಹೆಚ್ಚಿನ ಮಟ್ಟದ ಒತ್ತಡ ಮತ್ತು ಸ್ಪರ್ಧೆ, ಸಾಮಾಜಿಕ ಬೆಂಬಲ ನೆಟ್‌ವರ್ಕ್‌ಗಳ ಕೊರತೆ ಮತ್ತು ವಿಶಾಲ ಸಮಾಜದಿಂದ ಸಂಪರ್ಕ ಕಡಿತದ ಭಾವನೆ ಸೇರಿದಂತೆ ವ್ಯಾಪಕವಾದ ಸಾಮಾಜಿಕ ಸಮಸ್ಯೆಗಳ ಲಕ್ಷಣವಾಗಿ ಹಿಕಿಕೊಮೊರಿ ಕಂಡುಬರುತ್ತದೆ.
ಈ ವಿದ್ಯಮಾನವು ಆರ್ಥಿಕ ನಿಶ್ಚಲತೆ ಮತ್ತು ಜಪಾನ್ ಎದುರಿಸುತ್ತಿರುವ ವ್ಯಾಪಕ ಸಾಮಾಜಿಕ ಮತ್ತು ರಾಜಕೀಯ ಸವಾಲುಗಳಿಗೆ ಸಂಬಂಧಿಸಿದೆ. ಈ ವಿದ್ಯಮಾನವು ಆರ್ಥಿಕ ನಿಶ್ಚಲತೆ ಮತ್ತು ಜಪಾನ್ ಎದುರಿಸುತ್ತಿರುವ ವ್ಯಾಪಕ ಸಾಮಾಜಿಕ ಮತ್ತು ರಾಜಕೀಯ ಸವಾಲುಗಳಿಗೆ ಸಂಬಂಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ