ಸಿಎಎ ವಿಚಾರವಾಗಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ವಿಷಾದನೀಯ; ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಪಾಕಿಸ್ತಾನ, ಅಘ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡುವ ಪ್ರಸ್ತಾವ ಹೊಂದಿದೆ. ಎರಡು ಸದನಗಳಲ್ಲಿ ಮಸೂದೆ ಅಂಗೀಕಾರಗೊಂಡು, ರಾಷ್ಟ್ರಪತಿಯವರ ಅಂಕಿತವನ್ನು ಪಡೆದು, ಕಾಯ್ದೆಯಾಗಿದೆ.

HR Ramesh | news18-kannada
Updated:January 14, 2020, 3:15 PM IST
ಸಿಎಎ ವಿಚಾರವಾಗಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ವಿಷಾದನೀಯ; ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ
ಸತ್ಯ ನಾಡೆಲ್ಲಾ.
  • Share this:
ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ, ಭಾರತೀಯ ಮೂಲದ ಸತ್ಯ ನಾಡೆಲ್ಲಾ ಅವರು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಿಎಎ ವಿಚಾರವಾಗಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ವಿಷಾದನೀಯವಾದದ್ದು ಎಂದು ಹೇಳಿದ್ದಾರೆ.

ಮೈಕ್ರೋಸಾಫ್ಟ್ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ಮೂಲದ ಬುಜ್​ಫೀಡ್​  ಸುದ್ದಿಸಂಸ್ಥೆ  ಸಂಪಾದಕರೊಂದಿಗೆ ಮಾತನಾಡಿರುವ ಸತ್ಯ ನಾಡೆಲ್ಲಾ ಅವರು, ವಿವಾದಾತ್ಮಕ ಸಿಎಎ ವಿಚಾರವಾಗಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ವಿಷಾದನೀಯ. ಮತ್ತು ಬಾಂಗ್ಲಾದೇಶದ ವಲಸಿಗರು ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿ ಮುನ್ನಡೆಸುವುದರನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಪಾಕಿಸ್ತಾನ, ಅಘ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡುವ ಪ್ರಸ್ತಾವ ಹೊಂದಿದೆ. ಎರಡು ಸದನಗಳಲ್ಲಿ ಮಸೂದೆ ಅಂಗೀಕಾರಗೊಂಡು, ರಾಷ್ಟ್ರಪತಿಯವರ ಅಂಕಿತವನ್ನು ಪಡೆದು, ಕಾಯ್ದೆಯಾಗಿದೆ.

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ವಿಷಾದನೀಯ, ಇದು ಕೆಟ್ಟದು ಕೂಡ. ಬಾಂಗ್ಲಾದೇಶದ ವಲಸಿಗರು ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಯನ್ನು ಮುನ್ನಡೆಸುವುದನ್ನು ಅಥವಾ ಇನ್ಫೋಸಿಸ್​ನ ಮುಂದಿನ ಸಿಇಒ ಆಗುವುದನ್ನು ನಾನು ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ.

ಮೈಕ್ರೋಸಾಫ್ಟ್ ಭಾರತದ ಘಟಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸತ್ಯ ನಾಡೆಲ್ಲಾ ಅವರು, ಪ್ರತಿಯೊಂದು ದೇಶಗಳು ತನ್ನ ಗಡಿಯ ಮಿತಿ, ರಕ್ಷಣೆ, ದೇಶದ ಭದ್ರತೆಯನ್ನು ನಿರ್ಧರಿಸಿಕೊಂಡಿವೆ. ಅದೇ ರೀತಿ ನಿರಾಶ್ರಿತರ ನೀತಿಯನ್ನು ರೂಪಿಸಿಕೊಂಡಿರುತ್ತವೆ. ಮತ್ತು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಕೆಲವು ವಿಚಾರಗಳನ್ನು ಜನರು ಮತ್ತು ಸರ್ಕಾರಗಳು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ನಾನು ಭಾರತದ ಪರಂಪರೆಯಿಂದ ಬೆಳೆದಿದ್ದೇನೆ. ಭಾರತದ ಬಹುಸಂಸ್ಕೃತಿಯಲ್ಲಿ  ಬೆಳೆದು ಅಮೆರಿಕದಲ್ಲಿ ವಲಸಿಗನಾಗಿ ಅನುಭವ ಗಳಿಸಿದ್ದೇನೆ. ಭಾರತದಲ್ಲಿ ಅತ್ಯುತ್ತಮ ಸ್ಟಾರ್ಟ್​ಅಪ್​ ಆರಂಭಿಸುವ ಮಹತ್ವಾಕಾಂಕ್ಷೆ ವಲಸಿಗನಲ್ಲಿ ಇರಬಹುದು. ಅಥವಾ ಬಹುರಾಷ್ಟ್ರೀಯ ಕಂಪನಿ ಮುನ್ನಡೆಸಬಹುದು. ಇದರಿಂದ ಭಾರತದ ಸಮಾಜ ಮತ್ತು ಆರ್ಥಿಕತೆಗೆ ದೊಡ್ಡ ಪ್ರಮಾಣದ ಲಾಭವಾಗಲಿದೆ ಎಂದು ಸತ್ಯ ನಾಡೆಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೆಹಲಿ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಸತ್ಯ ನಾಡೆಲ್ಲಾ ಹೇಳಿಕೆಗೆ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. "ಸತ್ಯ ನಾಡೆಲ್ಲಾ ಅವರ ಹೇಳಿಕೆಗೆ ಅವರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಸ್ವಂತ ಐಟಿ ಮುಖ್ಯಸ್ಥರುಗಳಲ್ಲಿ ಒಬ್ಬರು ಇಂತಹ ಹೇಳಿಕೆ ನೀಡುವ ಧೈರ್ಯ ಮತ್ತು ಬುದ್ಧಿವಂತಿಕೆ ಮೆಚ್ಚುತ್ತೇನೆ," ಎಂದು ಹೇಳಿದ್ದಾರೆ.


First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading