• Home
  • »
  • News
  • »
  • national-international
  • »
  • Disease X ಭೀತಿ ಹೆಚ್ಚಳ; ಅಜ್ಞಾತ ಸಾಂಕ್ರಾಮಿಕ ರೋಗದ ಬಗ್ಗೆ ತಜ್ಞರ ಎಚ್ಚರಿಕೆ

Disease X ಭೀತಿ ಹೆಚ್ಚಳ; ಅಜ್ಞಾತ ಸಾಂಕ್ರಾಮಿಕ ರೋಗದ ಬಗ್ಗೆ ತಜ್ಞರ ಎಚ್ಚರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೈದ್ಯಕೀಯ ತಜ್ಞರ ಪ್ರಕಾರ ನಾವು ಹೊಸ ಸಾಂಕ್ರಾಮಿಕ ಯುಗದಲ್ಲಿ ಜೀವಿಸುತ್ತಿದ್ದೇವೆ.  ಡಿಸೀಸ್ ಎಕ್ಸ್ ಎಂಬ ಹೊಸ ಖಾಯಿಕೆಯು ಜಗತ್ತಿನ ಯಾವುದೇ ಮೂಲೆಯಿಂದಲೂ ಅಪ್ಪಳಿಸಬಹುದು ಎಂದು ಎಚ್ಚರಿಸಿದ್ದಾರೆ.

  • Share this:

    ಕಳೆದ 6 ತಿಂಗಳುಗಳಲ್ಲಿ ಬ್ರಿಟನ್​ನಲ್ಲಿ ಸಾಂಕ್ರಾಮಿಕ ರೋಗಗಳ ಸರಮಾಲೆ ಕಂಡುಬರುತ್ತಿದ್ದು,  ಆರೋಗ್ಯ ತಜ್ಞರು 'ಡಿಸೀಸ್ ಎಕ್ಸ್' ಎಂಬ (Disease X) ಹೊಸ ಸಾಂಕ್ರಾಮಿಕ ರೋಗದ ಸಾಧ್ಯತೆಯ ಬಗ್ಗೆ ಎಚ್ಚರಿಸಿದ್ದಾರೆ. ತಜ್ಞರು ಬ್ರಿಟನ್​ನಲ್ಲಿ  ಡಿಸೀಸ್ ಎಕ್ಸ್ ಬಗ್ಗೆ ಎಚ್ಚರಿಕೆ ನೀಡುತ್ತಿರುವಾಗ, ಭವಿಷ್ಯದ ಅಜ್ಞಾತ ಸಾಂಕ್ರಾಮಿಕ ರೋಗದ ವಿರುದ್ಧ ತನ್ನ ಸಿದ್ಧತೆಗಳನ್ನು ಬಲಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಬ್ರಿಟನ್​ನಲ್ಲಿ(Britain) ಇತ್ತೀಚೆಗೆ ಹೆಚ್ಚುತ್ತಿರುವ ಮಂಕಿಪಾಕ್ಸ್ ಪ್ರಕರಣಗಳ ಬೆನ್ನಲ್ಲೇ ಡಿಸೀಸ್ ಎಕ್ಸ್ ವಿರುದ್ಧ ಎಚ್ಚರಿಕೆಯನ್ನು ಹೆಚ್ಚಿಸಲಾಗಿದೆ. ಜೂನ್ 23, 2022 ರವರೆಗೆ 910 ದೃಢಪಡಿಸಿದ ಪ್ರಕರಣಗಳೊಂದಿಗೆ ಬ್ರಿಟನ್ ಮಂಕಿಪಾಕ್ಸ್ ಹೆಚ್ಚುವ ಅಪಾಯದ ವಿರುದ್ಧ ಹೋರಾಡುತ್ತಿದೆ. ಈ ಪ್ರಕರಣಗಳಲ್ಲಿ 873 ಇಂಗ್ಲೆಂಡ್‌ನಲ್ಲಿ, 26 ಸ್ಕಾಟ್‌ಲ್ಯಾಂಡ್‌ನಲ್ಲಿ, ಎಂಟು ವೇಲ್ಸ್‌ನಲ್ಲಿ ಮತ್ತು ಮೂರು ಉತ್ತರ ಐರ್ಲೆಂಡ್‌ನಲ್ಲಿ ಪತ್ತೆಯಾಗಿವೆ.


    ಕಳೆದ ಆರು ತಿಂಗಳಲ್ಲಿ ಬ್ರಿಟನ್ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಎದುರಿಸಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್​ನ ಆರೋಗ್ಯ ಪರಿಣಿತರು ಈ ಎಚ್ಚರಿಕೆಯ ಸಂದೇಶದೊಂದಿಗೆ ಸೂಕ್ತ ಕ್ರಮಕ್ಕಾಗಿ ಅಲ್ಲಿನ ಸರ್ಕಾರವನ್ನು ಆಗ್ರಹಿಸಿದ್ದಾರೆ.


    ಸೋಂಕುಗಳ ಸರಮಾಲೆ
    Covid-19 ಮತ್ತು ಮಂಕಿಪಾಕ್ಸ್ ನಂತರ ಯುನೈಟೆಡ್ ಕಿಂಗ್‌ಡಮ್ ಕಳೆದ ಕೆಲವು ವರ್ಷಗಳಿಂದ ಸೋಂಕುಗಳ ಸರಮಾಲೆಗೆ ಸಾಕ್ಷಿಯಾಗಿದೆ. ಇದು ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಮತ್ತೊಂದು ಸೋಂಕಿಗೆ ಕಾರಣವಾಗಬಹುದು ಎನ್ನಲಾಗಿದೆ. ಬ್ರಿಟನ್‌ನ ತಜ್ಞರು ಮತ್ತೊಂದು ಹೊಸ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಸಿದ್ದಾರೆ.


    ಆರೋಗ್ಯ ಇಲಾಖೆಯನ್ನು ಸನ್ನದ್ಧರಾಗಿರಿಸಿ
    ಈ ಹೊಸ ವೈರಸ್ ವಿರುದ್ಧ ಹೋರಾಡಲು ಆರೋಗ್ಯ ಇಲಾಖೆಯ ಸನ್ನದ್ಧತೆಯನ್ನು ಹೆಚ್ಚಿಸಲು ಮತ್ತು ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಅಧಿಕಾರಿಗಳನ್ನು ಕೇಳಿದ್ದಾರೆ. ಈ ಹೊಸ ರೋಗವನ್ನು ಡಿಸೀಸ್ ಎಕ್ಸ್ ಎಂದು ಕರೆಯಲಾಗುತ್ತದೆ. ಲಂಡನ್‌ನಲ್ಲಿನ ಒಳಚರಂಡಿ ಮಾದರಿಗಳಲ್ಲಿ ಪೋಲಿಯೋವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ 'ಡಿಸೀಸ್ ಎಕ್ಸ್' ಕುರಿತು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. 


    ಹೊಸ ವೈರಸ್​ ಬರುವ ಸೂಚನೆಗಳು 


    1) ಕಳೆದ ವಾರ ಲಂಡನ್‌ನಲ್ಲಿ 40 ವರ್ಷಗಳಲ್ಲಿ ಮೊದಲ ಬಾರಿಗೆ ಒಳಚರಂಡಿ ಮಾದರಿಗಳಲ್ಲಿ ಪೋಲಿಯೊವೈರಸ್ ಪತ್ತೆಯಾಗಿದೆ. ಪೋಲಿಯೊ ವೈರಸ್ ಒತ್ತೆಯನ್ನು ಏಕಾಏಕಿ ರಾಷ್ಟ್ರೀಯ ಘಟನೆ ಎಂದು ಘೋಷಿಸಲಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.


    2) ಇದಕ್ಕೂ ಮೊದಲು, 2022 ರ ಜನವರಿಯಲ್ಲಿ ಮನುಷ್ಯರಲ್ಲಿ H5 ಬರ್ಡ್ ಫ್ಲೂ ಸ್ಟ್ರೈನ್ ಕಂಡುಬಂದಿದೆ ಮತ್ತು UK ನಲ್ಲಿ ಫೆಬ್ರವರಿಯಲ್ಲಿ ಲಾಸ್ಸಾ ಜ್ವರದ ಮೂರು ಪ್ರಕರಣಗಳು ಕಂಡುಬಂದವು. ಅವುಗಳಲ್ಲಿ ಓರ್ವರಿಗೆ ಮಾರಣಾಂತಿಕ ಮಟ್ಟದಲ್ಲಿ ಜ್ವರ ಪತ್ತೆಯಾಗಿತ್ತು.


    ಇದನ್ನೂ ಓದಿ: Assam Flood: 134 ಜನರನ್ನು ಸಾಯಿಸಿದ ಅಸ್ಸಾಂ ಪ್ರವಾಹದ ಭೀಕರ ಫೋಟೊಗಳನ್ನು ನೋಡಿ


    3) ಮಾರ್ಚ್ 2022 ರಲ್ಲಿ, ಮಧ್ಯ ಏಷ್ಯಾದಿಂದ ಬ್ರಿಟನ್​ಗೆ ಮಹಿಳೆಯೊಬ್ಬರು ಹಿಂದಿರುಗಿದ್ದರು. ಅವರಿಂದ ಕ್ರಿಮಿಯನ್-ಕಾಂಗೊ ಹೆಮರಾಜಿಕ್ ಜ್ವರ ಇಂಗ್ಲೆಂಡ್‌ ತಲುಪಿತು ಎನ್ನಲಾಗಿದೆ.


    4) ಈ ಸಾಂಕ್ರಾಮಿಕ ರೋಗಗಳ ಸರಮಾಲೆಗೆ ಮೇ ತಿಂಗಳಲ್ಲಿ ಒಂದು ಪ್ರಮುಖ ಸೇರ್ಪಡೆ ಕಂಡುಬಂದಿದೆ. ಬ್ರಿಟನ್​ ದೇಶದಲ್ಲಿ ಮಂಗನ ಕಾಯಿಲೆಯ ಮೊದಲ ಪ್ರಕರಣ ವರದಿಯಾಗಿದೆ. ಅಂದಿನಿಂದ ಇದು ಹರಡಿತು ಮತ್ತು ಇಲ್ಲಿಯವರೆಗೆ ಸುಮಾರು 800 ಪ್ರಕರಣಗಳು ದಾಖಲಾಗಿವೆ.


    Agnipath Recruitment: ಅಗ್ನಿಪಥ್ ನೇಮಕಾತಿ ದಾಖಲೆ! ಅಗ್ನಿವೀರರಾಗಲು 56,960 ಅರ್ಜಿ ಸಲ್ಲಿಕೆ


    Disease X ಬಗ್ಗೆ ತಜ್ಞರಿಂದ ಎಚ್ಚರಿಕೆ
    ಯುಕೆಯಲ್ಲಿನ ವೈದ್ಯಕೀಯ ತಜ್ಞರ ಪ್ರಕಾರ ನಾವು ಹೊಸ ಸಾಂಕ್ರಾಮಿಕ ಯುಗದಲ್ಲಿ ಜೀವಿಸುತ್ತಿದ್ದೇವೆ.  ಡಿಸೀಸ್ ಎಕ್ಸ್ ಎಂಬ ಹೊಸ ಖಾಯಿಕೆಯು ಜಗತ್ತಿನ ಯಾವುದೇ ಮೂಲೆಯಿಂದಲೂ ಅಪ್ಪಳಿಸಬಹುದು ಎಂದು ಎಚ್ಚರಿಸಿದ್ದಾರೆ.

    Published by:guruganesh bhat
    First published: