Bulli Bai Row: ಮುಸ್ಲಿಂ ಮಹಿಳೆಯರ ಕೆಂಗಣ್ಣಿಗೆ ಗುರಿಯಾದ ಬುಲ್ಲಿ ಬಾಯ್ ಆ್ಯಪ್ ನ ಡೀಟೆಲ್ಸ್‌ ಇಲ್ಲಿದೆ

ಇನ್ನು 6 ತಿಂಗಳು ಕಳೆದರೂ ಸುಲ್ಲಿ ಡೀಲ್ಸ್ ಪ್ರಕರಣದಲ್ಲಿ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
2022 ಎಂಬುದು ಮುಸ್ಲಿಂ ಮಹಿಳೆಯರ ಪಾಲಿಗೆ ಕರಾಳ ವರ್ಷವಾಗಿ ಆರಂಭವಾಗಿದೆ. ಹೋಸ್ಟಿಂಗ್ ಪ್ಲಾಟ್‌ಫಾರ್ಮ್ ಗಿಟ್‌ಹಬ್‌ನಲ್ಲಿ ಬುಲ್ಲಿ ಬಾಯ್ (Bulli Bai ) ಹೆಸರಿನ ಆ್ಯಪ್ ಮೂಲಕ ಮುಸ್ಲಿಂ ಮಹಿಳೆಯರ    (Muslim women )ಒಪ್ಪಿಗೆ ಹಾಗೂ ಸಮ್ಮತಿ ಇಲ್ಲದೆ ಅವರನ್ನು ಹರಾಜು ಮಾಡಲಾಗಿದೆ ಎಂಬ ಮಾಹಿತಿ ದೊರಕಿದೆ. ಜುಲೈ 2021ರಂದು ಮುಸ್ಲಿಂ ಮಹಿಳೆಯರ ಒಪ್ಪಿಗೆ ಹಾಗೂ ಸಮ್ಮತಿ ಇಲ್ಲದೆ ಫೋಟೋಗಳನ್ನು ಅಪ್‌ಲೋಡ್ ಮಾಡಿ ಆನ್‌ಲೈನ್‌ನಲ್ಲಿ ಹರಾಜು ಮಾಡಿದ ಸುಲ್ಲಿ ಡೀಲ್ಸ್ (Sulli Deals) ಪ್ರಕರಣದ 6 ತಿಂಗಳ ನಂತರ ಇದು ಸಂಭವಿಸಿದೆ. ಈ ಸುದ್ದಿ ಕೂಡ ಗಿಟ್‌ಹಬ್‌ (Github) ನಲ್ಲಿ ಕಂಡುಬಂದಿದೆ.

ಮುಸ್ಲಿಂ ಮಹಿಳೆಯರೇ ಟಾರ್ಗೆಟ್:
ಸುಲ್ಲಿ ಡೀಲ್ಸ್ ಸಾಮಾಜಿಕ ಮಾಧ್ಯಮದಲ್ಲಿನ ಯಾದೃಚ್ಛಿಕ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದರೆ, ಬುಲ್ಲಿ ಬಾಯ್‌ ಆನ್‌ಲೈನ್‌ನಲ್ಲಿ ಅಸ್ತಿತ್ವ ಹೊಂದಿರುವ ಹಾಗೂ ಮುಕ್ತವಾಗಿ ಅಭಿವ್ಯಕ್ತಪಡಿಸುವ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ. ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಕ್ಕಾಗಿ ಈ ಮಹಿಳೆಯರ ಕೃತ್ರಿಮ (ಅವರದಲ್ಲದ) ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಪತ್ರಿಕೋದ್ಯಮಿ, ಸಾಮಾಜಿಕ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಗೂ ಹೆಸರಾಂತ ವ್ಯಕ್ತಿಗಳು ಸೇರಿದಂತೆ ಹೆಚ್ಚಿನವರನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗಿದ್ದು ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಇದನ್ನೂ ಓದಿ: Bulli Bai Row: 'ಬುಲ್ಲಿ ಬಾಯ್' ವಿವಾದ, ಬೆಂಗಳೂರಿನ ವ್ಯಕ್ತಿಯನ್ನು ವಶಕ್ಕೆ ಪಡೆದ ಮುಂಬೈ ಪೊಲೀಸ್..!

ಸುಲ್ಲಿ ಡೀಲ್ಸ್ ಹಾಗೂ ಬುಲ್ಲಿ ಬಾಯ್‌ ಆ್ಯಪ್ ಎಂದರೇನು?
ಮೊದಲನೆಯದಾಗಿ ಸುಲ್ಲಿ ಎಂಬುದು ಮಹಿಳೆಯರ ವಿರುದ್ಧ ಬಳಸುವ ಅವಹೇಳನಕಾರಿ ಪದವಾಗಿದ್ದು, ದಿನದ ಸುಲ್ಲಿ ಡೀಲ್ ಎಂಬ ಟ್ಯಾಗ್‌ಲೈನ್ ಅನ್ನು ಆ್ಯಪ್ ಒಳಗೊಂಡಿತ್ತು. ಆ್ಯಪ್ ಮುಸ್ಲಿಂ ಮಹಿಳೆಯರ ಕೃತ್ರಿಮ ಚಿತ್ರಗಳನ್ನು ಪ್ರದರ್ಶಿಸುತ್ತದೆ ಹಾಗೂ ಕಾನೂನು ಬಾಹಿರವಾಗಿ ಅವುಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಿತು.

ಆರು ತಿಂಗಳ ನಂತರ ಬುಲ್ಲಿ ಬಾಯ್‌ ಹೆಸರಿನ ಇಂತಹುದ್ದೇ ಆ್ಯಪ್ ಅನ್ನು ಇದೇ ಉದ್ದೇಶದಿಂದ ರಚಿಸಲಾಗಿದ್ದು ಟ್ವಿಟ್ಟರ್‌ನಲ್ಲಿ @bullibai ಹ್ಯಾಂಡಲ್ ನೇಮ್ ಮೂಲಕ ಪ್ರಚಾರಪಡಿಸಲಾಗಿದೆ. ಆ್ಯಪ್‌ನ ಡಿಸ್‌ಪ್ಲೇ ಚಿತ್ರವು ಖಾಲಿಸ್ತಾನಿ ಬೆಂಬಲಿಗರ ಚಿತ್ರವನ್ನು ಹೊಂದಿದೆ. ಬುಲ್ಲಿ ಬಾಯ್‌ ಕೂಡ ಸುಲ್ಲಿ ಡೀಲ್ಸ್ ಪ್ರಕಾರವೇ ಇದ್ದು ಆ್ಯಪ್ ಅನ್ನು ತೆರೆದಾಗ, ಬಲವಾದ ಟ್ವಿಟ್ಟರ್ ಅಸ್ತಿತ್ವವನ್ನು ಹೊಂದಿರುವ ಮಹಿಳೆಯರ ಮುಖ ಯಾದೃಚ್ಛಿಕವಾಗಿ ಗೋಚರಿಸುತ್ತದೆ.

ಐಟಿ ಸಚಿವಾಲಯವು
ಇದೀಗ ಈ ಸುದ್ದಿಯನ್ನು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಹಾಗೂ ಐಟಿ ಸಚಿವ ಅಶ್ವಿನಿ ವೈಷ್ಣವ್ ಟ್ವಿಟ್ಟರ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರಿಯಾಂಕಾ ಚತುರ್ವೇದಿ ಈ ವಿಷಯವನ್ನು ಮುಂಬೈ ಪೊಲೀಸರ ಗಮನಕ್ಕೆ ತಂದಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಷಯವನ್ನು ಅರಿತುಕೊಂಡು, ಐಟಿ ಸಚಿವಾಲಯವು ಕ್ರಮ ಕೈಗೊಂಡಿದೆ ಮತ್ತು ಬುಲ್ಲಿ ಬಾಯ್‌ ಅಪ್ಲಿಕೇಶನ್‌ನ ರಚನೆಕಾರರನ್ನು ನಿರ್ಬಂಧಿಸಿದೆ ಮತ್ತು ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮಂದಗತಿಯಲ್ಲಿ ಸಾಗುತ್ತಿರುವ ತನಿಖೆ:
ಬುಲ್ಲಿ ಬಾಯ್‌ ಆ್ಯಪ್‌ನಲ್ಲಿ ಪತ್ರಕರ್ತೆ ಇಸ್ಮತ್ ಅರಾ ಅವರ ಫೋಟೋ ಹಾಗೂ ಹೆಸರನ್ನು ಹಾಕಲಾಗಿದ್ದು ಈ ಕುರಿತು ಅವರು ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಪರಿಚಿತ ಜನರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವ ಆರೋಪಗಳನ್ನು ಒಳಗೊಂಡಿದೆ. ಹಲವಾರು ಮಹಿಳೆಯರ ಫೋಟೋಗಳನ್ನು ಬುಲ್ಲಿ ಬಾಯ್‌ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು ಇದು ಆಘಾತಕಾರಿ ಹಾಗೂ ಗಾಬರಿ ಹುಟ್ಟಿಸುವ ವಿಷಯವಾಗಿದೆ ಎಂಬುದಾಗಿ ಮಹಿಳೆಯರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Explained: ಏನಿದು Bulli Bai ಅಪ್ಲಿಕೇಶನ್? ಮುಸ್ಲಿಂ ಮಹಿಳೆಯರು ಇದರ ವಿರುದ್ಧ ಸಿಡಿದೆದ್ದಿರೋದು ಯಾಕೆ?

ಇನ್ನು 6 ತಿಂಗಳು ಕಳೆದರೂ ಸುಲ್ಲಿ ಡೀಲ್ಸ್ ಪ್ರಕರಣದಲ್ಲಿ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ತನಿಖೆಯಲ್ಲಿ ಯಾವುದೇ ರೀತಿಯ ಪ್ರಗತಿ ಉಂಟಾಗಿಲ್ಲವೆಂದು ಶೋಷಣೆಗೊಳಗಾದ ವ್ಯಕ್ತಿಗಳು ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.
Published by:vanithasanjevani vanithasanjevani
First published: