HOME » NEWS » National-international » WHAT IS BIPOLAR DISORDER THAT SUSHANTH ALLEGED TO HAVE AFFECTED WITH SNVS

Bipolar Disorder - ಸುಶಾಂತ್ ಸಿಂಗ್​ಗೆ ಬೈಪೋಲಾರ್ ಡಿಸಾರ್ಡರ್ ಇತ್ತಾ? ಏನಿದು ಕಾಯಿಲೆ?

ಬೈಪೋಲಾರ್ ಡಿಸಾರ್ಡರ್ ಎಂದರೆ ಎರಡು ಅತಿರೇಕದ ಹಾಗೂ ವೈರುದ್ಧ್ಯ ಮನಃಸ್ಥಿತಿ. ಒಬ್ಬ ವ್ಯಕ್ತಿ ತೀರಾ ಡಿಪ್ರೆಷನ್​ಗೆ ಜಾರಬಹುದು. ಹಾಗೆಯೇ ತೀರಾ ಹೈಪರ್ ಆ್ಯಕ್ಟಿವ್ ಸ್ಥಿತಿಗೆ ಏರಬಹುದು.

news18
Updated:September 8, 2020, 4:14 PM IST
Bipolar Disorder - ಸುಶಾಂತ್ ಸಿಂಗ್​ಗೆ ಬೈಪೋಲಾರ್ ಡಿಸಾರ್ಡರ್ ಇತ್ತಾ? ಏನಿದು ಕಾಯಿಲೆ?
ಸುಶಾಂತ್​ ಸಿಂಗ್​
  • News18
  • Last Updated: September 8, 2020, 4:14 PM IST
  • Share this:
ಸುಶಾಂತ್ ಸಿಂಗ್ ರಾಜಪೂತ್ ಸಾವು ಪ್ರಕರಣ ಹಲವರ ಖಾಸಗಿ ವಿಚಾರಗಳನ್ನ ಬಯಲಿಗೆ ತಂದಿದೆ. ಸದಾ ಲವಲವಿಕೆಯಿಂದ ಇರುತ್ತಿದ್ದ ನಟ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಅನೇಕರಿಗೆ ಅಚ್ಚರಿ ತಂದಿತ್ತು. ಅದರ ಜೊತೆಗೆ ಆತನಿಗೆ ಮಾನಸಿಕ ಕಾಯಿಲೆಗಳಿದ್ದವು ಎಂಬ ವಿಚಾರ ಕೂಡ ಬಹಳ ಮಂದಿಗೆ ಆಘಾತ ತಂದಿದೆ. ಸುಶಾಂತ್ ಸಿಂಗ್ ಬೈಪೋಲಾರ್ ಡಿಸಾರ್ಡರ್​ನಿಂದ ಬಳಲುತ್ತಿದ್ದರು ಎಂದು ರಿಯಾ ಚಕ್ರಬರ್ತಿ ಹೇಳಿದ್ದಾರೆ. ಸುಶಾಂತ್ ಸಿಂಗ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದರೆನ್ನಲಾದ ವೈದ್ಯರೂ ಕೂಡ ಇದನ್ನ ದೃಢಪಡಿಸಿದ್ದಾರೆಂಬುದು ಈ ಮೊದಲೇ ಗೊತ್ತಾಗಿರುವ ಸಂಗತಿ. ಹಾಗೆಯೇ, ಸುಶಾಂತ್ ಸಿಂಗ್ ಅವರ ಸಹೋದರಿಯೊಬ್ಬರು ವಾಟ್ಸಾಪ್​ನಲ್ಲಿ ಮಾನಸಿಕ ಕಾಯಿಲೆಗೆ ಔಷಧದ ವಿವರ ಕಳುಹಿಸಿರುವ ವಿಚಾರವೂ ಬೆಳಕಿಗೆ ಬಂದಿದೆ. ರಿಯಾ ಚಕ್ರಬರ್ತಿ ಅವರು ಸುಶಾಂತ್ ಅವರ ಇಬ್ಬರು ಸಹೋದರಿಯರು ಹಾಗೂ ಔಷಧ ಪ್ರಿಸ್​ಕ್ರೈಬ್ ಮಾಡಿದ ದೆಹಲಿಯ ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಾಗೆಯೇ ಸುಶಾಂತ್ ಸಿಂಗ್ ಡ್ರಗ್ ವ್ಯಸನಿಯಾಗಿದ್ದರು ಎಂಬ ವಿಚಾರವನ್ನೂ ರಿಯಾ ತಿಳಿಸಿದ್ದಾರೆ. ಸುಶಾಂತ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದುದರ ಜೊತೆಗೆ ತನಗೂ ತೆಗೆದುಕೊಳ್ಳುವಂತೆ ಬಲವಂತ ಮಾಡುತ್ತಿದ್ದರು. ಆತನ ಒತ್ತಾಯಕ್ಕೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಸಿಬಿಐ ವಿಚಾರಣೆಯ ವೇಳೆ ರಿಯಾ ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ಅವರಿಗೆ ಇತ್ತೆನ್ನಲಾದ ಬೈಪೋಲಾರ್ ಡಿಸಾರ್ಡರ್ ಎಂದರೆ ಏನು? ಸುಶಾಂತ್ ಸಿಂಗ್ ತೆಗೆದುಕೊಳ್ಳುತ್ತಿದ್ದ ಡ್ರಗ್ಸ್​ಗೂ ಈ ಮಾನಸಿಕ ಕಾಯಿಲೆಗೂ ಸಂಬಂಧ ಇದೆಯಾ? ಈ ಪ್ರಶ್ನೆಗಳು ಮೂಡುವುದು ಸಹಜ. ಬೈಪೋಲಾರ್ ಡಿಸಾರ್ಡರ್ ಎಂದರೆ ವೈರುದ್ಧ್ಯ ಮನಸ್ಥಿತಿ. ಇದೊಂದು ಮಾನಸಿಕ ಖಿನ್ನತೆಯ ಒಂದು ಅತಿರೇಕ ಸ್ವರೂಪ. ಎರಡು ವೈರುದ್ಧ್ಯ ಹಾಗೂ ಅತಿರೇಕ ಮನಸ್ಥಿತಿ ಇದು. ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಅಲ್ಲ. ಆದರೆ, ಒಬ್ಬ ವ್ಯಕ್ತಿ ಕೆಲ ಕಾಲ ಅತಿಯಾಗಿ ಲವಲವಿಕೆಯಿಂದ ಇರುತ್ತಾನೆ. ಮತ್ತೆ ಕೆಲ ಕಾಲ ಆತನಲ್ಲಿ ಸಂಪೂರ್ಣ ಬದಲಾವಣೆಯಾಗಿ ತೀರಾ ಖಿನ್ನತೆಗೊಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಇದನ್ನೇ ಬೈಪೋಲಾರ್ ಡಿಸಾರ್ಡರ್ ಎನ್ನುವುದು.

ಇದನ್ನೂ ಓದಿ: ಸುಶಾಂತ್ ಪ್ರಕರಣಕ್ಕೆ ಟ್ವಿಸ್ಟ್‌; ಸಾವಿಗೆ ಕಾರಣ ನಟನ ಸಹೋದರಿ ಪ್ರಿಯಾಂಕ, ನಟಿ ರಿಯಾ ದೂರಿನ ಅನ್ವಯ ಕೇಸ್ ದಾಖಲು

ಬೈಪೋಲಾರ್ ಡಿಸಾರ್ಡರ್ ಕಾಯಿಲೆ ಬಂದರೆ ಬಿಪಿ, ಶುಗರ್​ನಂತೆ ಜೀವನಪರ್ಯಂತ ನಮ್ಮ ಸಂಗಾತಿಯಾಗಿರುತ್ತದೆ. ಇದನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣವಾಗಿ ಗುಣಮುಖರನ್ನಾಗಿ ಮಾಡಲು ಕಷ್ಟಸಾಧ್ಯ. ನಿಮ್ಮ ಮನಸ್ಥಿತಿ ಬದಲಾವಣೆ ದಿಢೀರ್ ಆಗಿ ಆಗುವುದಾಗಲೀ ಅಥವಾ ಒಂದೇ ದಿನದಲ್ಲಿ ಹಲವು ಬಾರಿ ಬದಲಾವಣೆಯಾಗಲೀ ಆಗುವುದಿಲ್ಲ. ವರ್ಷದಲ್ಲಿ ಎರಡು ಮೂರು ಬಾರಿಯೋ ಆಗಬಹುದು. ಕೆಲವರಿಗೆ ತೀರಾ ಅಪರೂಪಕ್ಕೆ ಇಂಥ ಮೂಡ್ ಸ್ವಿಂಗ್​ಗಳು ಆಗಬಹುದು. ಒಮ್ಮೆ ಖಿನ್ನತೆಯ ಹಂತಕ್ಕೆ ಜಾರಿದರೆ ಅದರಿಂದ ಹೊರಬರಲು ಕೆಲವರಿಗೆ ತಿಂಗಳುಗಳೇ ಬೇಕಾಗಬಹುದು. ಇಂಥ ಮೂಡ್ ಸ್ವಿಂಗ್ ಆದಾಗ ವ್ಯಕ್ತಿಯ ಸಮಚಿತ್ತತೆ ಕುಂದುತ್ತದೆ. ನಿದ್ರೆ, ಕೆಲಸ, ವಿವೇಚನೆ ಕೆಡುತ್ತದೆ. ನಮ್ಮ ಯೋಚನಾಲಹರಿಯಲ್ಲಿ ಸ್ಪಷ್ಟತೆ ಇರುವುದಿಲ್ಲ. ಸಂಪೂರ್ಣ ಖಿನ್ನತೆಯ ಸ್ಥಿತಿಗೆ ಬಂದಾಗ ಆತ್ಮಹತ್ಯೆಯ ಯೋಚನೆಗಳು ಬಹಳ ಸಹಜವಾಗಿ ಬರಬಹುದು. ಅತಿರೇಕದ ಉನ್ಮಾದ ಸ್ಥಿತಿಯೂ ಕೂಡ ಮನುಷ್ಯನ ವಿವೇಚನೆ ಕೆಡಿಸುತ್ತದೆ. ಉತ್ಸಾಹದಿಂದ ಆತ ಪುಟಿದೇಳುತ್ತಿದ್ದರೂ ತರ್ಕಬದ್ಧವಾಗಿ ಯೋಚನೆ ಮಾಡುವ ಸಂಯಮ ಕಳೆದುಕೊಳ್ಳಬಹುದು.

ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆ ಕೂಡ ಬೈಪೋಲಾರ್ ಡಿಸಾರ್ಡರ್ ಕಾಯಿಲೆಯ ತೀವ್ರತೆಯನ್ನು ಹೆಚ್ಚಿಸುತ್ತದೆ. ಕಾಯಿಲೆ ಪುನಾವರ್ತನೆ ಪ್ರಮಾಣ ಕೂಡ ಹೆಚ್ಚುತ್ತದೆ ಎಂದು ವೈದ್ಯರು ಹೇಳುತ್ತಾರೆ.
Published by: Vijayasarthy SN
First published: September 8, 2020, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories