ಇತ್ತೀಚಿನ ಕೆಲ ಸಮಯದಿಂದ ಜಗತ್ತಿನೆಲ್ಲೆಡೆ ನಾವು ವ್ಯತಿರಿಕ್ತವಾದ ಹವಾಮಾನ (Climate) ನೋಡುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಬೇಸಿಗೆಯಲ್ಲಿ (Winter) ಅತಿಯಾದ ಬಿಸಿಲು, ಚಳಿಯಲ್ಲಿ (Cold) ಸಹಜಕ್ಕಿಂತಲೂ ಹೆಚ್ಚಾಗಿರುವ ಚಳಿ ಮತ್ತು ಮಳೆಗಾಲದಲ್ಲಂತೂ ಎಂದೂ ಕೇಳರಿಯದಂತಹ ರೌದ್ರಾವತಾರದ ಮಳೆ. ಇದು ಮನುಷ್ಯನು ಪ್ರಕೃತಿಯೊಂದಿಗೆ (Nature) ಚೆಲ್ಲಾಟ ಆಡುತ್ತಿರುವುದರಿಂದ ಆಗುತ್ತಿದೆಯೋ ಅಥವಾ ಬೇರೆ ಯಾವುದಾದರೂ ಕಾರಣಗಳಿಮ್ದಾಗುತ್ತಿದೆಯೋ ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟವಾದರೂ ಇದರ ಪರಿಣಾಮ ಮಾತ್ರ ಆಘಾತಕರವಾಗಿದೆ (Dangerous).
ಪ್ರಸ್ತುತ ಅಮೆರಿಕ ಈಗ ತನ್ನ ಇತಿಹಾಸದಲ್ಲೇ ಬಲು ಆಘಾತಕಾರಿಯಾದ ಹವಾಮಾನ ವೈಪರಿತ್ಯದಿಂದ ಅಕ್ಷರಶಃ ನಲುಗಿ ಹೋಗುತ್ತಿದೆ. ಪಶ್ಚಿಮ ನ್ಯೂಯಾರ್ಕ್ ಪ್ರದೇಶವಂತೂ ಅತ್ಯಂತ ಕೃರ ಎನ್ನಬಹುದಾದಂತಹ ಚಳಿಗಾಲಕ್ಕೆ ಸಾಕ್ಷಿಯಾಗಿದ್ದು ಬಫಾಲೋ ನಗರದಲ್ಲಿ ಈ ಭಯಾನಕ ಹವಾಮಾನದಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 27 ಅನ್ನು ತಲುಪಿದೆ.
ಈ ಘಾತಕಮಯವಾದ ಚಳಿಗಾಲವು ಕೇವಲ ಅಮೆರಿಕ ಮಾತ್ರವಲ್ಲದೆ ಪಕ್ಕದಲ್ಲೇ ಇರುವ ಕೆನಡಾದ ಮೇಲೆಯೂ ತನ್ನ ಬಾಹುಗಳನ್ನು ಚಾಚಿದ್ದು ಎರಡೂ ದೇಶಗಳ ಜನರು ತತ್ತರಿಸಿ ಹೋಗುತ್ತಿದ್ದಾರೆ. ಇದರ ತೀವ್ರತರ ಪರಿಣಾಮ ಉಂಟು ಮಾಡುವಿಕೆಯನ್ನು ಗಮನಿಸಿರುವ ತಜ್ಞರು ಇದನ್ನು "ಬಾಂಬ್ ಸೈಕ್ಲೋನ್" ಎಂದೇ ಕರೆದಿದ್ದಾರೆ.
ಏನಿದು ಬಾಂಬ್ ಸೈಕ್ಲೋನ್?
ಬಾಂಬ್ ಸೈಕ್ಲೋನ್ ಎಂಬ ವಿದ್ಯಮಾನ ವಾತಾವರಣದಲ್ಲಿ ಉಂಟಾಗಲು ಅದಕ್ಕೆ ಕೆಲ ನಿರ್ದಿಷ್ಟ ಮಾನದಂಡಗಳಿದ್ದು ಅದು ಪೂರ್ತಿಯಾದಾಗ ಮಾತ್ರ ಪರಿಸ್ಥಿತಿಯನ್ನು ಬಾಂಬ್ ಸೈಕ್ಲೋನ್ ಎನ್ನುತ್ತಾರೆ. ಅದಕ್ಕನುಸಾರವಾಗಿ, ಸತತ 24 ಗಂಟೆಗಳ ಕಾಲ ವಾತಾವರಣದಲ್ಲಿನ ಕಡಿಮೆ ಒತ್ತಡದ ಸಾಂದ್ರತೆಯಲ್ಲಿ ಒತ್ತಡ ನಷ್ಟವು ಕನಿಷ್ಠ 24 ಮಿಲ್ಲಿಬಾರ್ ಗಳಷ್ಟು ಇದ್ದರೆ ಆ ವಿದ್ಯಮಾನ ಅಥವಾ ಪರಿಸ್ಥಿತಿಯನ್ನು ಬಾಂಬ್ ಸೈಕ್ಲೋನ್ ಎಂದು ವ್ಯಾಖ್ಯಾನಿಸಲಾಗುತ್ತದೆ.
ಇದರ ಪರಿಣಾಮದಿಂದಾಗಿ ಎರಡು ಪ್ರತ್ಯೇಕ ವಾಯು ಭಾರಗಳ ಮಧ್ಯೆ ವ್ಯತ್ಯಾಸ ಅಥವಾ ಒತ್ತಡಗಳ ವ್ಯತ್ಯಾಸ ತ್ವರಿತವಾಗಿ ಏರಿ ಗಾಳಿಯ ವೇಗವನ್ನು ಪ್ರಚೋದಿಸುತ್ತದೆ. ಈ ರೀತಿಯಾಗಿ ಗಾಳಿಯು ತ್ವರಿತವಾಗಿ ವೇಗದ ಗತಿಯನ್ನು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಬೊಂಬೋಜೆನೆಸಿಸ್ ಎಂದು ಕರೆಯಲಾಗುತ್ತದೆ.
ಈ ರೀತಿ ಉದ್ಭವವಾಗುವ ಬಲವಾದ ಗಾಳಿ ಬೀಸುವಿಕೆಯು ಸಾಮಾನ್ಯ ಎಂದು ಹೇಳಲಾಗುವುದಿಲ್ಲ. ಇವು ಮಳೆಯನ್ನು ಇಲ್ಲವೇ ಹಿಮಪಾತವನ್ನು ಹೆಚ್ಚು ಹೆಚ್ಚು ಆಗುವಂತೆ ಪ್ರಚೋದಿಸುತ್ತವೆ. ಇದರಿಂದಾಗಿಯೇ ಸದ್ಯ ಈಗ ಅಮೆರಿಕದಲ್ಲಿ ತೀವ್ರವಾದಂತಹ ಹಿಮಪಾತ ಆಗುತ್ತಿರುವುದನ್ನು ನೋಡಬಹುದಾಗಿದೆ.
ಭೂಮಿಯ ತಿರುಗುವಿಕೆ ಹಾಗೂ ಗಾಳಿಯ ಚಲನೆಯ ಪರಿಣಾಮದಿಂದಾಗಿ ಸೈಕ್ಲೋನ್ ರೂಪಗೊಂಡಿದ್ದು ಇದು ಉತ್ತರ ಗೋಳಾರ್ಧದಲ್ಲಿ ಆಂಟಿ-ಕ್ಲಾಕ್ ವೈಸ್ ಆಗಿ ತಿರುಗುತ್ತಿದೆ. ಇನ್ನು ಬಾಂಬ್ ಸೈಕ್ಲೋನ್ ರೂಪಗೊಳ್ಳಲು ಅನುಕೂಲಕರವಾಗಿರುವ ಎಲ್ಲ ಅಂಶಗಳು ದೊಡ್ಡ ಕೆರಗಳ ಮೇಲೆ ಏರ್ಪಟ್ಟಿವೆ ಎಂಬುದಾಗಿ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ:Climate Change: ಹವಾಮಾನ ಬದಲಾವಣೆ! ಭೂಮಿ ಮೇಲಿನ 65% ಕೀಟಗಳು ನಾಶ
ಈ ರೀತಿ ದೊಡ್ಡ ಕೆರೆಗಳ ಮೇಲೆ ರೂಪಗೊಂಡ ಪ್ರಬಲ ಸುಂಟರಗಾಳಿಯು ವಾತಾವರಣದಲ್ಲಿ ಕುಸಿತಗೊಂಡ ಒತ್ತಡದ ಪರಿಣಾಮವಾಗಿ ಪ್ರದೇಶದಲ್ಲಿ ವಿಚಿತ್ರ ರೀತಿಯ ಸ್ಥಿತಿ-ಗತಿಗಳು ಸೃಷ್ಟಿಯಾಗುವಂತೆ ಮಾಡಿದ್ದು ತೀವ್ರವಾದ ಹಿಮಪಾತಕ್ಕೆ ಕಾರಣವಾಗಿರುವುದಾಗಿ ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಭಾವ
ಈ ಹವಾಮಾನ ವೈಪರಿತ್ಯದ ಪ್ರಭಾವವು ಸದ್ಯ ಕೆನಡಾದ ದೊಡ್ಡ ಕೆರೆಗಳ ಪ್ರದೇಶದಿಂದ ಹಿಡಿದು ಮೆಕ್ಸಿಕೋ ಗಡಿಯಲ್ಲಿರುವ ರಿಯೋ ಗ್ರಾಂಡೇ ವರೆಗೂ ಚಾಚಿದೆ ಎನ್ನಲಾಗಿದೆ. ಅಮೆರಿಕದ ಸುಮಾರು 60 ಪ್ರತಿಶತ ಜನರು ಈಗ ಚಳಿಗಾಲದ ಎಚ್ಚರಿಕೆಯಂತಹ ಪರಿಸ್ಥಿತಿಯಲ್ಲಿ ದಿನದೂಡುವಂತಾಗಿದೆ.
ಆದರೆ, ಈ ಮಧ್ಯೆ ಅಮೆರಿಕದ ಬಹುತೇಕ ಪ್ರದೇಶವನ್ನು ವ್ಯಾಪಿಸುವ ಆರ್ಕ್ಟಿಕ್ ಗಾಳಿಯು ಮುಂದಿನ ಕೆಲ ದಿನಗಳಲ್ಲಿ ಸಂಭವಿಸಲಿದ್ದು ಅದರಿಂದಾಗಿ ಸದ್ಯದ ಪರಿಸ್ಥಿತಿಯು ಸಾಕಷ್ಟು ನಿಯಂತ್ರಣಕ್ಕೆ ಬರಲಿದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ.
ಒಟ್ಟಿನಲ್ಲಿ ಪ್ರಸ್ತುತ ಅಮೆರಿಕದಲ್ಲಿ ಈ ಬಾಂಬ್ ಸೈಕ್ಲೋನ್ ನಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದು ಸಾವಿರಾರು ಜನರು ನಿತ್ಯ ಪರದಾಡುವಂತಾಗಿದೆ. ಎಲ್ಲಿ ನೋಡಿದರಲ್ಲಿ ರಸ್ತೆಗಳು, ಕಟ್ಟಡಗಳು, ವಾಹನಗಳು ಹಿಮದಿಂದ ಆವೃತವಾಗಿದ್ದು ಜನರು ಹಾಗೂ ಕರ್ಮಚಾರಿಗಳ ನಿತ್ಯದ ಗೋಳು ಹೇಳತೀರದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ