ಲಕ್ನೋ: ಪೊಲೀಸ್ ಸಿಬ್ಬಂದಿ (Police) ನೀಡಿದ ಚಹಾ (Tea) ಸೇವಿಸಲು ಉತ್ತರ ಪ್ರದೇಶದ (Uttar Pradesh) ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav ) ಅವರು ನಿರಾಕರಿಸಿದ್ದಾರೆ. ಅಲ್ಲದೇ ತಮಗೆ ನೀಡುತ್ತಿರುವ ಚಹಾದಲ್ಲಿ ವಿಷ ಬೆರೆಸಿರಬಹುದು ಎಂಬ ಭಯವಿದೆ ಎಂದು ಹೇಳಿದ್ದಾರೆ. ಬಿಜೆಪಿ ಮುಖಂಡರು ಮತ್ತು ಪತ್ರಕರ್ತರ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪದಡಿ ಪಕ್ಷದ ಸಹೋದ್ಯೋಗಿ ಮನೀಶ್ ಜಗನ್ ಅಗರ್ವಾಲ್ (Manish Jagan Agarwal) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ವಿರೋಧಿಸಿ ಪಕ್ಷದ ಕಾರ್ಯಕರ್ತರು ಲಕ್ನೋ ಪೊಲೀಸ್ ಪ್ರಧಾನ ಕಚೇರಿ (Lucknow Police Headquarters) ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
#WATCH समाजवादी पार्टी प्रमुख अखिलेश यादव ने पुलिस मुख्यालय में चाय पीने से इंकार किया।
उन्होंने कहा,"हम यहां की चाय नहीं पियेंगे। हम अपनी (चाय) लाएंगे, कप आपका ले लेंगे। हम नहीं पी सकते, ज़हर दे दोगे तो? हमें भरोसा नहीं। हम बाहर से मंगा लेंगे।"
(वीडियो सोर्स: समाजवादी पार्टी) pic.twitter.com/zwlyMp8Q82
— ANI_HindiNews (@AHindinews) January 8, 2023
ನೀವು ವಿಷ ಬೆರೆಸಿದ್ದರೆ ಏನು ಮಾಡಲಿ?
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಅಖಿಲೇಶ್ ಯಾದವ್ ಅವರಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಚಹಾ ನೀಡುತ್ತಾರೆ. ಆಗ ನಾನು ಇಲ್ಲಿ ಚಹಾವನ್ನು ಕುಡಿಯುವುದಿಲ್ಲ. ಒಂದು ವೇಳೆ ಚಹಾ ಕುಡಿಯಬೇಕೆನಿಸಿದರೆ, ನಾನೇ ಚಹಾ ತೆಗೆದುಕೊಂಡು ಬಂದು ಸೇವಿಸುತ್ತೇನೆ. ಜೊತೆಗೆ ನಿಮ್ಮದೇ ಕಪ್ ಅನ್ನು ಕೂಡ ತೆಗೆದುಕೊಳ್ಳುತ್ತೇನೆ. ಆದರೆ ಇಲ್ಲಿ ನೀಡುವ ಚಹಾವನ್ನು ಮಾತ್ರ ನಾನು ಕುಡಿಯಲು ಸಾಧ್ಯವಿಲ್ಲ. ನೀವು ವಿಷ ಬೆರೆಸಿದ್ದರೆ ಏನು ಮಾಡಲಿ? ಖಂಡಿತವಾಗಿಯೂ ನನಗೆ ನಂಬಿಕೆ ಇಲ್ಲ. ನಾನು ಚಹಾವನ್ನು ಹೊರಗೆ ಕುಡಿಯುತ್ತೇನೆ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳುತ್ತಾರೆ. ಅಲ್ಲದೇ ಪಕ್ಷದ ಕಾರ್ಯಕರ್ತರಿಗೆ ಹೊರಗಿನಿಂದ ಚಹಾ ತರುವಂತೆ ಹೇಳುತ್ತಾರೆ. ಸದ್ಯ ಈ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
समाजवादी पार्टी के कार्यकर्ता मनीष जगन अग्रवाल को लखनऊ पुलिस के द्वारा गिरफ्तार करना , निंदनीय एवं शर्मनाक!
सपा कार्यकर्ता को अविलंब रिहा करे पुलिस।
— Samajwadi Party (@samajwadiparty) January 8, 2023
ಮನೀಶ್ರನ್ನು ಯಾವ ಆಧಾರದ ಮೇಲೆ ಬಂಧಿಸಿದ್ದೀರಾ?
ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಖಿಲೇಶ್ ಯಾದವ್ ಅವರು ಪೊಲೀಸ್ ಪ್ರಧಾನ ಕಚೇರಿಯನ್ನು ತಲುಪಿದರು ಮತ್ತು ತಮ್ಮ ಪಕ್ಷದ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿರುವ ಮನೀಶ್ ಜಗನ್ ಅಗರ್ವಾಲ್ ಅವರನ್ನು ಯಾವ ಆಧಾರದ ಮೇಲೆ ಬಂಧಿಸಿದ್ದೀರಾ ಎಂದು ಪ್ರಶ್ನಿಸಿದರು.
ನನ್ನ ಜೊತೆಗೆ ಮಾತನಾಡಲು ಯಾವುದೇ ಹಿರಿಯ ಪೊಲೀಸ್ ಅಧಿಕಾರಿ ಇಲ್ಲ ಎಂದು ಕಿಡಿಕಾರಿದರು. ಜೊತೆಗೆ ಪಕ್ಷದ ಹಲವು ಕಾರ್ಯಕರ್ತರು ಹೊರಗೆ ಜಮಾಯಿಸಿ, ಸುಮಾರು ಎರಡು ಗಂಟೆಗಳ ಕಾಲ ಪೊಲೀಸ್ ಪ್ರಧಾನ ಕಚೇರಿಯಲ್ಲಿಯೇ ಇದ್ದರು.
ರಿಚಾ ರಜಪೂತ್ ವಿರುದ್ಧ ಎಸ್ಪಿ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ದೂರು
ನಂತರ ಬಿಜೆಪಿ ಐಟಿ ಸೆಲ್ ಕಾರ್ಯಕರ್ತೆ ರಿಚಾ ರಜಪೂತ್ ಅವರು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಅವರು, ರಿಚಾ ರಜಪೂತ್ ವಿರುದ್ಧ ದೂರು ದಾಖಲಿಸಿದರು. ಉನ್ನತ ಪೊಲೀಸ್ ಅಧಿಕಾರಿಗಳು ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Akhilesh and Shivpal: ಒಂದಾಗ್ತಾರಾ ಅಖಿಲೇಶ್, ಶಿವಪಾಲ್ ಯಾದವ್? ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿಗೆ ಲಾಭ
ಕೆಲದಿನಗಳ ಹಿಂದೆ ಪಠಾಣ್ ಚಿತ್ರದ ಬಗ್ಗೆ ರಿಯಾಕ್ಷನ್ ನೀಡಿದ್ದ ಅಖಿಲೇಶ್
ಕೆಲದಿನಗಳ ಹಿಂದೆಯಷ್ಟೇ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ ಹೇಳಿಕೆ ಮತ್ತು ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡಿನ ಕುರಿತಾಗಿ ವಿರೋಧದ ಕುರಿತಾಗಿ ಅಖಿಲೇಶ್ ಯಾದವ್ ಮಾತನಾಡಿದ್ದರು. ಎಲ್ಲಾ ಬಣ್ಣಗಳಿಗೆ ಪ್ರಾಮುಖ್ಯತೆ ಇದೆ, ಎಲ್ಲಾ ಬಣ್ಣಗಳಿಗೆ ಗೌರವವಿದೆ.ಎಲ್ಲಾ ಬಣ್ಣಗಳ ಮೇಲೆ ಪ್ರೀತಿ ಇದೆ ಎಂದಿದ್ದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ