ಪಾಟ್ನಾ: ಮಹಾರಾಷ್ಟ್ರದ (Maharashtra) ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Deputy Chief Minister Devendra Fadnavis) ಅವರ ಪತ್ನಿ ಅಮೃತಾ ಫಡ್ನವಿಸ್ (Amruta Fadnavis) ಇತ್ತೀಚೆಗಷ್ಟೇ ಭಾರತ (India) ಇಬ್ಬರು ರಾಷ್ಟ್ರಪಿತಾರನ್ನು (National Father) ಹೊಂದಿದೆ. ಒಬ್ಬರು ಮಹಾತ್ಮ ಗಾಂಧಿ ಜೀ (Mahatma Gandhi Ji) ಆಗಿದ್ದರೆ ಮತ್ತೊಬ್ಬರು ಪ್ರಧಾನಿ ನರೇಂದ್ರ ಮೋದಿ (Prim Minister Narendra Modi) ಎಂದು ಹೇಳಿದ್ದರು. ಇದೀಗ ಈ ಹೇಳಿಕೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಅವರು ನವ ಭಾರತದ (New India) ರಾಷ್ಟ್ರಪಿತ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ನಿತೀಶ್ ಕುಮಾರ್ ಅವರು, ಸ್ವಾತಂತ್ರ್ಯದ ಹೋರಾಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ (Freedom Fight) ಆರ್ಎಸ್ಎಸ್ (RSS) ಯಾವುದೇ ಕೊಡುಗೆ (Contribution) ನೀಡಿಲ್ಲ. ನಾವು ರಾಷ್ಟ್ರದ ಹೊಸ ಪಿತಾಮಹ ಬಗ್ಗೆ ಓದಿದ್ದೇವೆ. ನವ ಭಾರತದ ನವ ರಾಷ್ಟ್ರಪಿತ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.
#WATCH | They had nothing to do with the fight for Independence. RSS didn't have any contribution towards the fight for Independence...we read about the remark of 'New father of nation'...what has the 'new father' of 'new India' done for nation?: Bihar CM Nitish Kumar
(31.12) pic.twitter.com/5RdJmrasIP
— ANI (@ANI) January 1, 2023
ನಮಗೆ ಇಬ್ಬರು ರಾಷ್ಟ್ರ ಪಿತರಿದ್ದಾರೆ ಎಂದಿದ್ದ ಅಮೃತಾ ಫಡ್ನವಿಸ್
ಡಿಸೆಂಬರ್ 21 ರಂದು ಪ್ರಧಾನಿ ಮೋದಿ ಅವರನ್ನು 'ನವ ಭಾರತದ ರಾಷ್ಟ್ರಪಿತ' ಎಂದು ಅಮೃತಾ ಫಡ್ನವಿಸ್ ಕರೆದಿದ್ದರು. ನಮಗೆ ಇಬ್ಬರು ರಾಷ್ಟ್ರ ಪಿತರಿದ್ದಾರೆ. ನರೇಂದ್ರ ಮೋದಿ ಅವರು ನವ ಭಾರತದ ಪಿತಾಮಹ ಮತ್ತು ಮಹಾತ್ಮ ಗಾಂಧಿ ಅವರು ಹಿಂದಿನ ಕಾಲದ ರಾಷ್ಟ್ರದ ಪಿತಾಮಹರಾಗಿದ್ದಾರೆ ಎಂದು ಹೇಳಿದ್ದರು.
ಗಾಂಧಿಯನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ
ಈ ಹೇಳಿಕೆಗೆ ಮರುಪ್ರಶ್ನೆ ಮಾಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು, ಮಹಾತ್ಮ ಗಾಂಧಿಯನ್ನು ಯಾರೊಂದಿಗೂ ಹೋಲಿಸುವುಕ್ಕೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯ "ನವ ಭಾರತ" ಕುರಿತಂತೆ ವನ್ನು ವ್ಯಂಗ್ಯವಾಡಿದರು.
'ನವ ಭಾರತ' ಕೇವಲ ಕೆಲವು ಸ್ನೇಹಿತರನ್ನು ಶ್ರೀಮಂತರನ್ನಾಗಿಸಿದೆ
ರಾಷ್ಟ್ರಪಿತನನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಅವರ (ಬಿಜೆಪಿ) 'ನವ ಭಾರತ' ಕೇವಲ ಕೆಲವು ಸ್ನೇಹಿತರನ್ನು ಮಾತ್ರ ಶ್ರೀಮಂತರನ್ನಾಗಿ ಮಾಡುತ್ತಿದೆ. ಆದರೆ ಉಳಿದ ಜನರು ದೀನದಲಿತರು ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ. ನಮಗೆ ಈ ನವ ಭಾರತ ಅಗತ್ಯವಿಲ್ಲ. ಕೆಲವೇ ಶ್ರೀಮಂತ ಉದ್ಯಮಿಗಳಿಗಾಗಿ ಮೋದಿ ಅವರನ್ನು ನವಭಾರತದ 'ರಾಷ್ಟ್ರಪಿತ’ರನ್ನಾಗಿ ಮಾಡಲು ಅವರು ಬಯಸಿದರೆ ಅವರು ಮಾಡಲಿ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಲೇವಡಿ ಮಾಡಿದ್ದಾರೆ.
ದೇಶಕ್ಕೆ ಒಬ್ಬರೇ ರಾಷ್ಟ್ರಪಿತ ಅಂದ ಪ್ರಮೋದ್ ತಿವಾರಿ
ಮತ್ತೊಂದೆಡೆ ಹಿರಿಯ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರು, ಬಿಜೆಪಿಯಲ್ಲಿ ಇಬ್ಬರು ಪಿತಾಮಹರಿರಬಹುದು ಆದರೆ ದೇಶದಲ್ಲಿ ಅಲ್ಲ. ದೇಶಕ್ಕೆ ಒಬ್ಬರೇ ರಾಷ್ಟ್ರಪಿತ ಎಂದು ಮಾತಿನ ಮೂಲಕ ತಿವಿದಿದ್ದಾರೆ.
ಅಮೃತಾ ಫಡ್ನವೀಸ್ ವಿರುದ್ಧ ಕೈ ನಾಯಕಿ ಟೀಕೆ
ಕುರಿತಂತೆ ಕಾಂಗ್ರೆಸ್ ನಾಯಕಿ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವೆ ಯಶೋಮತಿ ಠಾಕೂರ್ ಅಮೃತಾ ಫಡ್ನವೀಸ್ ಅವರ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Narendra Modi: ಭಾರತದಲ್ಲಿ ಇಬ್ಬರು ರಾಷ್ಟ್ರಪಿತರಿದ್ದಾರೆ, ಮೋದಿ ಕೂಡ ರಾಷ್ಟ ಪಿತಾಮಹಾ; ಅಮೃತಾ ಫಡ್ನವೀಸ್
ಬಿಜೆಪಿ ಮತ್ತು ಆರ್ಎಸ್ಎಸ್ ಸಿದ್ಧಾಂತವನ್ನು ಅನುಸರಿಸುತ್ತಿರುವ ಜನರು ಗಾಂಧೀಜಿಯನ್ನು ಮತ್ತೆ ಮತ್ತೆ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳನ್ನು ಪುನರಾವರ್ತಿಸುವ ಮತ್ತು ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳನ್ನು ನಿಂದಿಸುವ ಮೂಲಕ ಇತಿಹಾಸವನ್ನು ಬದಲಾಯಿಸುವ ಗೀಳು ಹೊಂದಿರುವ ಇವರು ಇಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ