ಫೆಬ್ರುವರಿ 14 ಎಂದರೆ ಸಾಕು ಬಹುತೇಕ ಎಲ್ಲರಿಗೂ ಪ್ರೇಮಿಗಳ ದಿನದ (Valentines Day) ಪರಿಕಲ್ಪನೆಯೇ ಕಣ್ಮುಂದೆ ಬರುತ್ತದೆ. ಆದ್ರೆ ಅದೊಂದೇ ಅಲ್ಲ, ಇದರ ಹೊರತಾಗಿಯೂ (Today In History) ಇತಿಹಾಸದಲ್ಲಿ ಫೆ. 14ನ್ನು (February 14) ಸಾಕಷ್ಟು ಕಾರಣಗಳಿಗಾಗಿ ನೆನಪಿಟ್ಟುಕೊಳ್ಳಲಾಗುತ್ತದೆ. ಭಾರತದಲ್ಲಿ ಹಾಗೆಯೇ ವಿಶ್ವದಲ್ಲಿ ಬಹಳಷ್ಟು ಐತಿಹಾಸಿಕ ಘಟನೆಗಳು ಈ ದಿನದಂದು ನಡೆದಿವೆ.
ಈ ದಿನ ಜಹಿರ್ ಉದ್-ದಿನ್ ಮುಹಮ್ಮದ್ ಬಾಬರ್, ಮೋಹನ್ ಧರಿಯಾ, ಮಧುಬಾಲಾ ಮತ್ತು ಸುಷ್ಮಾ ಸ್ವರಾಜ್ ಅವರ ಜನ್ಮದಿನವಾಗಿದೆ. ಅಲ್ಲದೇ ಫೆಬ್ರವರಿ 14 ರಂದು ವಿಟಿ ಕೃಷ್ಣಮಾಚಾರಿ ಮತ್ತು ವಿದ್ಯಾನಿವಾಸ್ ಮಿಶ್ರಾ ಅವರ ಪುಣ್ಯತಿಥಿಯೂ ಹೌದು. ಜೊತೆಗೆ ಇತಿಹಾಸದಲ್ಲಿ ಈ ದಿನ ಬಹಳಷ್ಟು ವಿಶೇಷ ಘಟನೆಗಳೂ ನಡೆದಿವೆ.
ಇದನ್ನೂ ಓದಿ: Online Transaction: ತಪ್ಪಾಗಿ ಬೇರೆ ಖಾತೆಗೆ ಹಣ ಕಳುಹಿಸಿದ್ದೀರಾ? ಹೀಗೆ ಮಾಡಿದರೆ 48 ಗಂಟೆಯೊಳಗೆ ನಿಮ್ಮ ಹಣ ವಾಪಸ್!
ಫೆ. 14 ಈ ಗಣ್ಯವ್ಯಕ್ತಿಗಳ ಜನ್ಮದಿನ
ಮೋಹನ್ ಧರಿಯಾ (14 -02- 1925 - 14 -10-2013): ಮಾಜಿ ಕೇಂದ್ರ ಸಚಿವ, ವಕೀಲ ಮತ್ತು ಭಾರತದ ಸಾಮಾಜಿಕ ಕಾರ್ಯಕರ್ತರಾಗಿದ್ದ ಮೋಹನ್ ಧರಿಯಾ ಜನಿಸಿದ್ದು ಫೆ. 14 ರಂದು. ಎರಡು ಬಾರಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಾಗಿರುವ ಮೋಹನ್ ಧರಿಯಾ ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಚಿರಪರಿಚಿತ ಹೆಸರು.
ಅವರು 1971 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ರಾಜ್ಯ ಸಚಿವರಾಗಿದ್ದರು. ಆದರೆ 1975 ರಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರ ಅವರು ಕಾಂಗ್ರೆಸ್ ತೊರೆದರು. ನಂತರ ಅವರು ಭಾರತೀಯ ಲೋಕದಳಕ್ಕೆ ಸೇರಿದರು. ಮತ್ತು 1977 ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಅಧಿಕಾರಾವಧಿಯಲ್ಲಿ ವಾಣಿಜ್ಯ ಸಚಿವರಾದರು. ಅಲ್ಲದೇ ಮೋಹನ್ ಧರಿಯಾ ಅವರು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿದ್ದರು.
ಸುಷ್ಮಾ ಸ್ವರಾಜ್ (14-02-1952 - 6 -08-2019): ಭಾರತ ಸರ್ಕಾರದ ಕೇಂದ್ರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು ಜನಿಸಿದ್ದು, 14 ಫೆಬ್ರವರಿ 1952 ರಂದು ಹರಿಯಾಣದ ಅಂಬಾಲಾ ಕಂಟೋನ್ಮೆಂಟ್‌ನಲ್ಲಿ. ಇವರು ಬಿಜೆಪಿಯ ಉನ್ನತ ಮಹಿಳಾ ನಾಯಕರಲ್ಲಿ ಒಬ್ಬರು. ಸುಷ್ಮಾ ಸ್ವರಾಜ್ ಹನ್ನೊಂದು, ಹನ್ನೆರಡನೇ ಮತ್ತು ಹದಿನೈದನೇ ಲೋಕಸಭೆಯ ಸದಸ್ಯರೂ ಆಗಿದ್ದರು.
2009 ರಲ್ಲಿ, ಅವರನ್ನು ಲೋಕಸಭೆ ಚುನಾವಣೆಗಾಗಿ ಬಿಜೆಪಿಯ 19 ಸದಸ್ಯರ "ಚುನಾವಣಾ ಪ್ರಚಾರ ಸಮಿತಿ" ಅಧ್ಯಕ್ಷರನ್ನಾಗಿ ಮಾಡಲಾಯಿತು. ಕೇಂದ್ರ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್, ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದರು. ಅವರು 26 ಮೇ 2014 ರಿಂದ 24 ಮೇ 2019 ರವರೆಗೆ ಭಾರತದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಮಧುಬಾಲಾ (14-02-1933 – 23-02-1969): ಪ್ರಸಿದ್ಧ ಭಾರತೀಯ ಚಲನಚಿತ್ರ ನಟಿ ಮಧುಬಾಲಾ ಜನಿಸಿದ್ದೂ ಫೆ. 14 ರಂದು, ದೆಹಲಿಯಲ್ಲಿ. ಅವರು ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಅತ್ಯುತ್ತಮ ನಟಿಯರಲ್ಲಿ ಒಬ್ಬರು ಎನಿಸಿಕೊಳ್ಳುತ್ತಾರೆ. ‘ಮುಘಲ್-ಎ-ಆಜಂ’, ‘ಹೌರಾ ಬ್ರಿಡ್ಜ್’, ‘ಕಾಲಾ ಪಾನಿ’ ಮತ್ತು ‘ಚಲ್ತಿ ಕಾ ನಾಮ್ ಗಾಡಿ’ ಸಿನಿಮಾಗಳು ಇಂದಿಗೂ ಸಿನಿಪ್ರಿಯರ ನೆನಪಿನಲ್ಲಿದೆ.
ಜಹೀರ್ ಉದ್-ದಿನ್ ಮುಹಮ್ಮದ್ ಬಾಬರ್ (14-02-1483 – 26-12-1530): ಭಾರತೀಯ ಇತಿಹಾಸದಲ್ಲಿ ಬಾಬರ್ ಎಂದೇ ಪ್ರಸಿದ್ಧರಾಗಿದ್ದ ಜಹೀರ್ ಉದ್-ದಿನ್ ಮುಹಮ್ಮದ್ ಬಾಬರ್ ಮೊಘಲ್ ಆಡಳಿತಗಾರನಾಗಿದ್ದ.
ಬಾಬರ್ ಭಾರತದಲ್ಲಿ ಮೊಘಲ್ ರಾಜವಂಶದ ಸ್ಥಾಪಕ ಕೂಡ ಹೌದು. ಅಂದಹಾಗೆ ಕ್ರಿ.ಶ 1526 ರಲ್ಲಿ ಮೊದಲ ಪಾಣಿಪತ್ ಕದನದಲ್ಲಿ ದೆಹಲಿ ಸುಲ್ತಾನರ (ಲೋಡಿ ರಾಜವಂಶ) ಕೊನೆಯ ರಾಜವಂಶದ ಸುಲ್ತಾನ್ ಇಬ್ರಾಹಿಂ ಲೋದಿಯ ಸೋಲಿನೊಂದಿಗೆ, ಭಾರತದಲ್ಲಿ ಮೊಘಲ್ ರಾಜವಂಶವನ್ನು ಸ್ಥಾಪಿಸಲಾಯಿತು.
ಇದನ್ನೂ ಓದಿ: Today in History: ಒಂದೆರಡಲ್ಲ, ಹತ್ತಾರು ಕಾರಣಗಳಿಗೆ ಫೆಬ್ರವರಿ 12 ವಿಶೇಷ! ಈ ದಿನದ ಮಹತ್ವ ಏನು ಗೊತ್ತಾ?
ಫೆ. 14 ರಂದು ಪ್ರಸಿದ್ಧ ವ್ಯಕ್ತಿಗಳ ಪುಣ್ಯತಿಥಿ
ವಿ.ಟಿ. ಕೃಷ್ಣಮಾಚಾರಿ (8.02.1881 – 14.02.1964): ವಿ.ಟಿ ಕೃಷ್ಣಮಾಚಾರಿ ಒಬ್ಬ ಭಾರತೀಯ ನಾಗರಿಕ ಸೇವಕ ಮತ್ತು ಆಡಳಿತಗಾರರಾಗಿದ್ದರು.
ಅವರು 1927 ರಿಂದ 1944 ರವರೆಗೆ ಬರೋಡಾದ ದಿವಾನರಾಗಿ ಮತ್ತು 1946 ರಿಂದ 1949 ರವರೆಗೆ ಆಗಿನ ಜೈಪುರ ರಾಜ್ಯದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು 1961 ರಿಂದ 1964 ರವರೆಗೆ ರಾಜ್ಯಸಭೆಯ ಸದಸ್ಯರೂ ಆಗಿದ್ದರು.
ವಿದ್ಯಾನಿವಾಸ್ ಮಿಶ್ರಾ (28.02.1926 – 14.02.2005): ಪ್ರಸಿದ್ಧ ಹಿಂದಿ ಸಾಹಿತಿ, ಯಶಸ್ವಿ ಸಂಪಾದಕ, ಸಂಸ್ಕೃತ ವಿದ್ವಾಂಸ ಮತ್ತು ಪ್ರಸಿದ್ಧ ಭಾಷಾಶಾಸ್ತ್ರಜ್ಞರಾಗಿದ್ದ ವಿದ್ಯಾನಿವಾಸ್ ಮಿಶ್ರಾ ತೀರಿಕೊಂಡ ದಿನವೂ ಫೆ. 14.
ಸಾಹಿತ್ಯ ವಿಮರ್ಶಕರ ಪ್ರಕಾರ, ಸಂಸ್ಕೃತದ ಜೊತೆಗೆ ಯಾವಾಗಲೂ ಹಿಂದಿಯಲ್ಲಿ ಪ್ರಾದೇಶಿಕ ಉಪಭಾಷೆಗಳ ಪದಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ವಿದ್ಯಾನಿವಾಸ್ ಮಿಶ್ರಾ ಅವರ ಪ್ರಕಾರ- "ಪ್ರಾದೇಶಿಕ ಉಪಭಾಷೆಗಳ ಪದಗಳನ್ನು ಹಿಂದಿಯಲ್ಲಿ ಪ್ರೋತ್ಸಾಹಿಸಿದರೆ, ಕಷ್ಟಕರವಾದ ಅಧಿಕೃತ ಭಾಷೆಯನ್ನು ತಪ್ಪಿಸಬಹುದು ಎನ್ನುವುದಾಗಿತ್ತು.
ಮಿಶ್ರಾ ಅವರ ಅಭೂತಪೂರ್ವ ಕೊಡುಗೆಗಾಗಿ ಭಾರತ ಸರ್ಕಾರವು ಅವರಿಗೆ 'ಪದ್ಮಶ್ರೀ' ಮತ್ತು 'ಪದ್ಮಭೂಷಣ' ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಭಾರತ ಹಾಗು ವಿಶ್ವ ಇತಿಹಾಸದಲ್ಲಿ ಫೆಬ್ರವರಿ 14 ರಂದು ನಡೆದ ಪ್ರಮುಖ ಘಟನೆಗಳು
ಪ್ರತಿದಿನವೂ ಒಂದಲ್ಲ ಒಂದು ಕಾರಣಗಳಿಗೆ ವಿಶೇಷವೇ ಆಗಿರುತ್ತದೆ. ಆದರೆ ಆಯಾ ದಿನ ನಡೆದ ಘಟನೆಗಳನ್ನು ದಾಖಲಿಸಿದರೆ ಅದು ಮುಂದಿನ ಪೀಳಿಗೆಯ ಜನರಿಗೆ ತಿಳಿಯಲು ಸಹಕಾರಿಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ