ಈ ಹಿಂದೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ರೈತನೊಬ್ಬನಿಗೆ ಜಮೀನಿನಲ್ಲಿ ವಜ್ರದ ಹರಳು ಸಿಕ್ಕಿ ರಾತ್ರೋರಾತ್ರಿ ಲಕ್ಷಾಧಿಪತಿಯಾದ ವಿಚಾರ ಭಾರೀ ಸುದ್ದಿಯಾಗಿತ್ತು. ಸದ್ಯ ಇದೇ ರೀತಿ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ನಡೆದಿದೆ. ಅಂದಾಜು 50 ಲಕ್ಷ ಮೌಲ್ಯದ 10.69 ಕ್ಯಾರೆಟ್ನ ವಜ್ರವು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಣಿಪುರ ಪ್ರದೇಶದಲ್ಲಿ 35 ವರ್ಷದ ಆನಂದಿಲಾಲ್ ಖುಷ್ವಾ ಎಂಬುವವರು ಗಣಿಯನ್ನು ಭೋಗ್ಯಕ್ಕೆ ಪಡೆದಿದ್ದು, ಅವರು 10.69 ಕ್ಯಾರೆಟ್ ನ ವಜ್ರವನ್ನು ಸ್ಥಳೀಯ ವಜ್ರದ ಕಚೇರಿಯಲ್ಲಿ (ಹೀರಾ ಕಾರ್ಯಾಲಯ) ನೀಡಿದ್ದಾರೆ ಎಂದು ಸ್ಥಳೀಯ ಅಧಿಕಾರಿ ಆರ್.ಕೆ. ಪಾಂಡೆ ಮಾಹಿತಿ ನೀಡಿದ್ದಾರೆ.
ಇತ್ತ ಖುಷ್ವಾ 70 ಸೆಂಟ್ ವಜ್ರವನ್ನು ಡೆಪಾಸಿಟ್ ಮಾಡಿದ್ದರು ಎಂದು ತಿಳಿಸಲಾಗಿದ್ದು, ಜಿಲ್ಲೆಯಲ್ಲಿ ಕೊರೋನಾ ಲಾಕ್ಡೌನ್ ವಿನಾಯಿತಿ ನೀಡಿದ ಮೇಲೆ ಸಿಕ್ಕಂಥ ಮೊದಲ ದೊಡ್ಡ ವಜ್ರ ಇದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಫೋಟೋ ಕ್ಲಿಕ್ಕಿಸಿ ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿದ್ರೆ ರೆಸ್ಟೋರೆಂಟ್ನಲ್ಲಿ ಸಿಗತ್ತೆ ಉಚಿತ ಊಟ
ಇನ್ನೂ ಈ ವಜ್ರವನ್ನು ಮೌಲ್ಯಮಾಪನ ಮಾಡಿಲ್ಲ. ಆದರೆ, ಸ್ಥಳೀಯ ತಜ್ಞರು ಹೇಳುವಂತೆ, ಈ ವಜ್ರದ ಗುಣಮಟ್ಟ ಆಧರಿಸಿ 50 ಲಕ್ಷ ರುಪಾಯಿ ತನಕ ಹಣ ಬರಬಹುದು. ಖುಷ್ವಾ ಅವರು ಮಾಧ್ಯಮಗಳ ಜತೆ ಮಾತನಾಡಿ, ನಾನು ಹಾಗೂ ನನ್ನ ಪಾರ್ಟನರ್ ಗಳು ಕಳೆದ ಆರು ತಿಂಗಳಿಂದ ಗಣಿಯಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೀವೆ. ಈಗ ಸಿಕ್ಕಿರುವ ವಜ್ರದಿಂದ ಬಹಳ ಖುಷಿ ಆಗಿದ್ದೇವೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ