Union budget 2021: ಈ ಬಾರಿ ಬಜೆಟ್​ನಲ್ಲಿ ಯಾವುದು ದುಬಾರಿ? ಯಾವುದು ಇಳಿಕೆ?

ಈ ಬಾರಿ ಬಜೆಟ್​ನಲ್ಲಿ ಯಾವುದರ ದರ ಏರಿದೆ. ಯಾವುದರ ದರ ಇಳಿದಿದೆ ಎಂಬ ಕುರಿತ ವಿವರ ಇಲ್ಲಿದೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

 • Share this:
  ನವದೆಹಲಿ (ಫೆ.1): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮೂರನೇ ಬಾರಿ ಪೂರ್ಣ ಬಜೆಟ್​ ಮಂಡಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಬಂಭತ್ತನೇ ಬಜೆಟ್​ ಇದಾಗಿದೆ. ಬಜೆಟ್​ನಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡಾವಳ ವೆಚ್ಚವನ್ನು 4.39 ಲಕ್ಷ ಕೋಟಿ ರೂಗಳಿಂದ ಮುಂದಿನ ಹಣಕಾಸು ವರ್ಷಕ್ಕೆ ಈ ಬಂಡವಾಳವನ್ನು 5.54 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ, ಅಲ್ಲದೇ ಈ ಬಾರಿ ಬಜೆಟ್​ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್​ಗಳಲ್ಲಿ ಯಾವುದೇ ಬದಲಾವಣೆಯಾಗದ ಹಿನ್ನಲೆ ಈ ಬಾರಿ ಬಜೆಟ್​ನಿಂದ ಮಧ್ಯಮ ವರ್ಗಕ್ಕೆ ಯಾವುದೇ ಲಾಭಾ ಸಿಗಲಿಲ್ಲ. ಇನ್ನು ಈ ಬಾರಿ ಬಜೆಟ್​ನಲ್ಲಿ ಯಾವುದರ ದರ ಏರಿದೆ. ಯಾವುದರ ದರ ಇಳಿದಿದೆ ಎಂಬ ಕುರಿತ ವಿವರ ಇಲ್ಲಿದೆ.

  ದುಬಾರಿ ಯಾವುದು?
  ಹತ್ತಿ, ಹತ್ತಿ ತ್ಯಾಜ್ಯ,
  ಕಚ್ಚಾ ರೇಷ್ಮೆ, ರೇಷ್ಮೆ ನೂಲು
  ಈಥೈಲ್​ ಆಲ್ಕೋಹಾಲ್​,
  ಸೀಗಡಿ ಉತ್ಪನ್ನ
  ಮೀನಿನ ಆಹಾರ
  ಕಾರ್ಬಲ್​ ಕಪ್ಪು
  ಲ್ಯಾಪ್ಸ್​
  ಉತ್ಪಾದನೆ ಪ್ಲಾಸ್ಟಿಕ್​, ಚಾರ್ಜರ್​, ಅಡ್ಪಟರ್​​
  ಸೋಲಾರ್​ ಬಂಡಾವಳ

  ಯಾವುದು ಇಳಿಕೆ ?
  ಚಿನ್ನ , ಬೆಳ್ಳಿ ಕಸ್ಟಮ್ಸ್​ ಸುಂಕ
  ವಿದೇಶಿ ಬಟ್ಟೆಗಳ ಕಸ್ಟಮ್ಸ್​ ಸುಂಕ
  ನೈಲನ್​ ಚಿಪ್ಸ್​
  ನೈಲನ್​ ಫೈಬರ್​ ಮತ್ತು ನೂಲು
  ಕಬ್ಬಿಣ್ಣ, ಸ್ಟೀಲ್​ ಸ್ಟೇನ್ಲೆಸ್​ ಸ್ಟೀಲ್​,
  ಮಿಶ್ರ ಲೋಹವಲ್ಲದ ಪ್ರಾಥಾಮಿ/ ಅರೆ ಸಿದ್ಧ ಉತ್ಪನ್ನ
  ಸಿಆರ್​ಜಿಒ ಸ್ಟೀಲ್​ ತಯಾರಿಕೆಯಲ್ಲಿ ಬಳಸುವ ಕಚ್ಛಾ ವಸ್ತುಗಳು
  ತಾಮ್ರ, ಪ್ಲಾಟಿನಂ, ಪಲ್ಲಿಡಮ್​
  ಅಮೂಲ್ಯ ಲೋಹಗಳ ತ್ಯಾಜ್ಯ
  ಹೈನುಗಾರಿಕೆ ಆಹಾರ
  Published by:Seema R
  First published: