• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Hypersensitivity Pneumonia: ಪ್ರಾಣಿ-ಪಕ್ಷಿಗಳಿಂದಲೂ ಹರಡುತ್ತೆ ಸೋಂಕು! ಅಂತರ ಕಾಪಾಡಿಕೊಳ್ಳುವಂತೆ ತಜ್ಞರ ಎಚ್ಚರಿಕೆ

Hypersensitivity Pneumonia: ಪ್ರಾಣಿ-ಪಕ್ಷಿಗಳಿಂದಲೂ ಹರಡುತ್ತೆ ಸೋಂಕು! ಅಂತರ ಕಾಪಾಡಿಕೊಳ್ಳುವಂತೆ ತಜ್ಞರ ಎಚ್ಚರಿಕೆ

ಪಾರಿವಾಳ

ಪಾರಿವಾಳ

ಪ್ರಸ್ತುತ ದೇಶದಲ್ಲಿ ಹೈಪರ್ಸೆನ್ಸಿಟಿವ್ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ. ಹೈಪರ್ಸೆನ್ಸಿಟಿವ್ ನ್ಯುಮೋನಿಯಾ ಎಂದು ಕರೆಯಲಾಗುವ ಈ ಆರೋಗ್ಯ ಸಮಸ್ಯೆ ಪ್ರಾಣಿ, ಸೂಕ್ಷ್ಮಜೀವಿಗಳು, ಪಕ್ಷಿಗಳ ಹಿಕ್ಕೆಗಳು ಮತ್ತು ಗರಿಗಳ ಮೂಲಕ ಅಥವಾ ರಾಸಾಯನಿಕ ಕ್ರಿಯೆಗಳಿಂದ ಹರಡುವ ರೋಗವಾಗಿದ್ದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ.

ಮುಂದೆ ಓದಿ ...
  • Share this:

    ಸಾಮಾನ್ಯವಾಗಿ ಕೆಮ್ಮು, ಕಫ ಇದ್ದಾಗ ಈ ಉಸಿರಾಟ ಸಮಸ್ಯೆ ಸ್ವಲ್ಪ ಸಹಜವಾಗಿರುತ್ತದೆ. ಆದಾಗ್ಯೂ ದೀರ್ಘಕಾಲ ಇದ್ದರೆ ಅದನ್ನು ಅಸ್ತಮಾ ಎಂದು ಕರೆಯುತ್ತಾರೆ. ದಿನನಿತ್ಯ ಔಷಧಿಯನ್ನು (Medicines) ತೆಗೆದುಕೊಳ್ಳುವ ಮೂಲಕ ಇದನ್ನು ನಿಯಂತ್ರಿಸಬಹುದು. ಆದರೆ ಇದೆಲ್ಲವನ್ನೂ ಮೀರಿ ಉಸಿರಾಟದ ಸಮಸ್ಯೆ (Breathing Problem) ಕಾಣಿಸಿಕೊಂಡರೆ ಅದನ್ನು ಅತಿಸೂಕ್ಷ್ಮ ನ್ಯುಮೋನಿಯಾ ಅಥವಾ ಹೈಪರ್ಸೆನ್ಸಿಟಿವ್ ನ್ಯುಮೋನಿಯಾ (Pneumonia) ಎನ್ನಲಾಗುತ್ತದೆ.


    ಇತ್ತೀಚೆಗಂತೂ ದೇಶದ ಜನರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ. ಇದನ್ನು ಅರಿತಂತಹ ತಜ್ಞರು ಜನರಿಗೆ ಸಲಹೆಯನ್ನು ನೀಡಿದ್ದಾರೆ.


    ಹೈಪರ್​​ ಸೆನ್ಸಿಟಿವ್ ನ್ಯುಮೋನಿಯಾ


    ಪ್ರಸ್ತುತ ದೇಶದಲ್ಲಿ ಹೈಪರ್ಸೆನ್ಸಿಟಿವ್ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ. ಹೈಪರ್ಸೆನ್ಸಿಟಿವ್ ನ್ಯುಮೋನಿಯಾ ಎಂದು ಕರೆಯಲಾಗುವ ಈ ಆರೋಗ್ಯ ಸಮಸ್ಯೆ ಪ್ರಾಣಿ, ಸೂಕ್ಷ್ಮಜೀವಿಗಳು, ಪಕ್ಷಿಗಳ ಹಿಕ್ಕೆಗಳು ಮತ್ತು ಗರಿಗಳ ಮೂಲಕ ಅಥವಾ ರಾಸಾಯನಿಕ ಕ್ರಿಯೆಗಳಿಂದ ಹರಡುವ ರೋಗವಾಗಿದ್ದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ.


    ಇದನ್ನೂ ಓದಿ: 


    ಇನ್ನೂ ಮಹಾರಾಷ್ಟ್ರದ ಥಾಣೆಯಲ್ಲಿ ಅತಿಸೂಕ್ಷ್ಮ ನ್ಯುಮೋನಿಯಾ ಪ್ರಕರಣಗಳು ಏರಿಕೆ ಕಾಣುತ್ತಿದ್ದಂತೆ, ಪುರಸಭೆಯ ಅಧಿಕಾರಿಗಳು ವಸತಿ ಪ್ರದೇಶಗಳ ಬಳಿ ಪಾರಿವಾಳಗಳಿಗೆ ಆಹಾರ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಪಾರಿವಾಳಗಳಿಗೆ ಆಹಾರ ನೀಡುವವರಿಗೆ ₹500 ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯೊಂದಿಗೆ ಅಧಿಕಾರಿಗಳು ವಿವಿಧೆಡೆ ಭಿತ್ತಿಪತ್ರಗಳನ್ನು ಸಹ ಅಂಟಿಸಿದ್ದಾರೆ.


    ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುವ ಪಕ್ಷಿಗಳೆಂದರೆ ಅದು ಪಾರಿವಾಳ. ಹೀಗಾಗಿ ಪಾರಿವಾಳ ಮತ್ತು ಇತರೆ ಪಕ್ಷಿಗಳ ಗರಿಗಳು ಮತ್ತು ಕೊಕ್ಕುಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಸೋಂಕಿನ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ಅತಿಸೂಕ್ಷ್ಮ ನ್ಯುಮೋನಿಯಾ ಪ್ರಕರಣಗಳನ್ನು ಹೆಚ್ಚಿಸುತ್ತದೆ. ಹಕ್ಕಿಗಳ ಮೂಲಕ ಸೋಂಕು ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ. ಮನೋಜ್ ಶರ್ಮಾ ವಿವರಿಸಿದ್ದಾರೆ.


    ಪಾರಿವಾಳ


    “ಹಕ್ಕಿ ಹಿಕ್ಕೆಗಳು ಮತ್ತು ಗರಿಗಳಿಂದ ಉತ್ಪತ್ತಿಯಾಗುವ ಇನ್ಹೇಲ್ಡ್ ಪ್ರತಿಜನಕಗಳು ಶ್ವಾಸಕೋಶವನ್ನು ಪ್ರವೇಶಿಸಿ ಹಾನಿಗೊಳಿಸುತ್ತದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದಿದ್ದಾರೆ.


    ಅತಿಸೂಕ್ಷ್ಮ ನ್ಯುಮೋನಿಯಾದ ಲಕ್ಷಣಗಳು
    -ಉಸಿರಾಟದ ತೊಂದರೆ
    - ಸ್ನಾಯು ನೋವು
    -ಒಣ ಕೆಮ್ಮು,
    - ಎದೆ ನೋವು
    - ಶೀತ, ಜ್ವರ, ಆಯಾಸ
    - ತೂಕ ನಷ್ಟ


    ಅತಿಸೂಕ್ಷ್ಮ ನ್ಯುಮೋನಿಯಾ ಗಂಭೀರವಾಗಬಹುದೇ?


    ನ್ಯೂಮೋನಿಯಾ ಸಮಸ್ಯೆ ಜಾಸ್ತಿಯಾದ ಸಂದರ್ಭದಲ್ಲಿ ಅಥವಾ ಚಿಕಿತ್ಸೆ ನೀಡದೆ ಹಾಗೆ ಬಿಟ್ಟಂತಹ ಸಂದರ್ಭದಲ್ಲಿ ಶ್ವಾಸಕೋಶಗಳು ಊದಿಕೊಂಡು ತುಂಬಾ ನೋವು ಉಂಟು ಮಾಡುತ್ತವೆ. ನ್ಯೂಮೋನಿಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾದಂತೆ ಶ್ವಾಸಕೋಶಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ತುಂಬಿಕೊಂಡು ಆಮ್ಲಜನಕದ ಕೊರತೆ ಉಂಟಾಗುತ್ತದೆ.


    ಅತಿಸೂಕ್ಷ್ಮ ನ್ಯುಮೋನಿಯಾಗೆ ಕಾರಣವಾಗುವ ಅಲರ್ಜಿನ್‌ಗಳಿಗೆ ಒಡ್ಡಿಕೊಂಡರೆ ನಿಮ್ಮ ಶ್ವಾಸಕೋಶದಲ್ಲಿನ ಉರಿಯೂತವು ನಿಮ್ಮ ಆರೋಗ್ಯವನ್ನು ಗಂಭೀರವಾಗಿ ಹಾನಿಗೊಳಿಸಬಹುದು. ಇದು ಹಲವು ರೋಗಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಹೃದಯ ವೈಫಲ್ಯ, ಉಸಿರಾಟದ ತೊಂದರೆಗೆ ಕಾರಣವಾಗಿದೆ.


    ಅತಿಸೂಕ್ಷ್ಮ ನ್ಯುಮೋನಿಯಾ ರೋಗನಿರ್ಣಯ ಹೇಗೆ?


    ನಿಮ್ಮ ರೋಗಲಕ್ಷಣಗಳ ಆಧಾರದ ಮೇಲೆ ರಕ್ತ ಪರೀಕ್ಷೆ ಸೇರಿ ಅಲರ್ಜಿ ಪರೀಕ್ಷೆ, ಶ್ವಾಸಕೋಶದ ಕಾರ್ಯ ಪರೀಕ್ಷೆ, ಬೊಂಕೋಸ್ಕೋಪಿ ಇಮೇಜಿಂಗ್‌ನಂತಹ ಕೆಲ ಹೆಚ್ಚುವರಿ ಪರೀಕ್ಷೆಗಳ ಆಧಾರದ ಮೇಲೆ ಅತಿಸೂಕ್ಷ್ಮ ನ್ಯುಮೋನಿಯಾವನ್ನು ಪತ್ತೆ ಹಚ್ಚಲಾಗುತ್ತದೆ.


    ಹೈಪರ್​​ ಸೆನ್ಸಿಟಿವ್ ನ್ಯುಮೋನಿಯಾವನ್ನು ತಡೆಯುವುದು ಹೇಗೆ?


    • ಹೈಪರ್ಸೆನ್ಸಿಟಿವ್ ನ್ಯುಮೋನಿಯಾ ಕ್ರಮೇಣ ಗಂಭಿರವಾಗುವುದರಿಂದ ಮೊದಲೇ ಕಾಳಜಿ ಮಾಡುವುದು ಅವಶ್ಯ. ಇದನ್ನು ತಡೆಗಟ್ಟಲು ಮೊದಲಿಗೆ, ಶ್ವಾಸಕೋಶದ ಉರಿಯೂತವನ್ನು ಉಂಟುಮಾಡುವ ಅಲರ್ಜಿಗಳು ಆಗದಂತೆ ನೋಡಿಕೊಳ್ಳಬೇಕು.

    • ನಿಮ್ಮ ಸುತ್ತಲೂ ಹಲವಾರು ಪಕ್ಷಿಗಳು ಅಥವಾ ಪ್ರಾಣಿಗಳಿದ್ದರೆ ಸುರಕ್ಷತಾ ದೃಷ್ಟಿಯಿಂದ ಮಾಸ್ಕ್‌ ಧರಿಸಿಕೊಳ್ಳಿ.




    • ಆರ್ದ್ರಕಗಳು, ಬಿಸಿನೀರಿನ ತೊಟ್ಟಿಗಳು, ನೀರನ್ನು ತುಂಬಿಡುವ ಸ್ಥಳಗಳನ್ನು ಯಾವಾಗಲೂ ಮುಚ್ಚಿಡಿ ಮತ್ತು ಸ್ವಚ್ಛವಾಗಿರಿಸಿಕೊಳ್ಳಿ.

    • ಪಕ್ಷಿ ಗರಿಗಳನ್ನು ಸ್ಪರ್ಶಿಸಬೇಡಿ

    • ಮನೆಯ ಅಕ್ಕಪಕ್ಕ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಿ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು