• Home
 • »
 • News
 • »
 • national-international
 • »
 • Russia: ಹೋರಾಡುವ ಹುಮ್ಮಸ್ಸನ್ನೇ ಕಳೆದುಕೊಂಡ ಸೇನೆ: ಇದಕ್ಕೇನು ಕಾರಣ? ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮರುಕಳಿಸುತ್ತಾ ಇತಿಹಾಸ?

Russia: ಹೋರಾಡುವ ಹುಮ್ಮಸ್ಸನ್ನೇ ಕಳೆದುಕೊಂಡ ಸೇನೆ: ಇದಕ್ಕೇನು ಕಾರಣ? ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮರುಕಳಿಸುತ್ತಾ ಇತಿಹಾಸ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

1914 ರ ಕ್ರಿಸ್ಮಸ್‌ನ ಮುನ್ನಾ ದಿನ ಜರ್ಮನ್ ಹಾಗೂ ಬ್ರಿಟಿಷ್ ಸೈನಿಕರು ಪರಸ್ಪರ ಯುದ್ಧಮಾಡುತ್ತಿದ್ದೇವೆ ಎಂಬುದನ್ನು ಮರೆತು ಕ್ರಿಸ್ಮಸ್ ಶುಭಾಶಯಗಳನ್ನು (Christmas Greetings) ವಿನಿಮಯ ಮಾಡಿಕೊಂಡಿದ್ದರು ಹಾಗೂ ಜರ್ಮನ್ ಸೈನಿಕರು ತಮ್ಮ ಬ್ರಿಟಿಷ್ ಸೈನಿಕರಿಗಾಗಿ ಕ್ಯಾರೋಲ್‌ಗಳನ್ನು ಹಾಡಿದ್ದರು.

ಮುಂದೆ ಓದಿ ...
 • Share this:

  ವಿಶ್ವಯುದ್ಧ I ರ (First World War) ಸಮಯದಲ್ಲಿ ಕ್ರಿಸ್ಮಸ್ ಮುನ್ನಾದಿನದಂದು ನಡೆದ ಘಟನೆಯೊಂದನ್ನು ಅಸಾಮಾನ್ಯ ಸಂಗತಿ ಎಂದು ಪರಿಗಣಿಸಲಾಗಿದ್ದು ಮಿಲಿಟರಿ ಇತಿಹಾಸದಲ್ಲಿಯೇ ಇದನ್ನು ವಿಚಿತ್ರವಾದ ಸಂಚಿಕೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. 1914 ರ ಕ್ರಿಸ್ಮಸ್‌ನ ಮುನ್ನಾ ದಿನ ಜರ್ಮನ್ ಹಾಗೂ ಬ್ರಿಟಿಷ್ ಸೈನಿಕರು (German And Britain Army) ಪರಸ್ಪರ ಯುದ್ಧಮಾಡುತ್ತಿದ್ದೇವೆ ಎಂಬುದನ್ನು ಮರೆತು ಕ್ರಿಸ್ಮಸ್ ಶುಭಾಶಯಗಳನ್ನು (Christmas Greetings) ವಿನಿಮಯ ಮಾಡಿಕೊಂಡಿದ್ದರು ಹಾಗೂ ಜರ್ಮನ್ ಸೈನಿಕರು ತಮ್ಮ ಬ್ರಿಟಿಷ್ ಸೈನಿಕರಿಗಾಗಿ ಕ್ಯಾರೋಲ್‌ಗಳನ್ನು ಹಾಡಿದ್ದರು.


  ದಣಿದಿದ್ದ ಸೈನಿಕರು


  ಕ್ರಿಸ್‌ಮಸ್ ಸಂಜೆಯಂದು ಮಂಜು ಮುಸುಕಿದ ವಾತಾವರಣದಲ್ಲಿ ಪರಸ್ಪರ ಹಸ್ತಲಾಘವ ಮಾಡಿದ್ದ ಅದೆಷ್ಟೋ ಸೈನಿಕರು ನಾಲ್ಕು ವರ್ಷಗಳ ಯುದ್ಧ ಮುಗಿಯುತ್ತಿದ್ದಂತೆಯೇ ಅಸುನೀಗಿದ್ದರು. ಯುದ್ಧದಲ್ಲಿ ಬದುಕುಳಿದವರು ಈ ಸ್ಮರಣೆಗಳನ್ನು ಪತ್ರಗಳ ಮೂಲಕ ಮೆಲುಕು ಹಾಕಿದ್ದು ಕಪ್ಪು-ಬಿಳುಪು ಭಾವಚಿತ್ರಗಳು ಇದು ನಡೆದದ್ದು ಸುಳ್ಳಲ್ಲ ಎಂಬುದನ್ನು ಸಾಬೀತುಪಡಿಸಿದವು.


  ಇದನ್ನೂ ಓದಿ: Explained: ನಿಜಕ್ಕೂ ಪರಮಾಣು ಪ್ರಯೋಗಿಸುತ್ತಾರಾ ಪುಟಿನ್? ರಷ್ಯಾದ ಎಚ್ಚರಿಕೆಯ ಪರಿಣಾಮಗಳೇನು?


  ಕ್ರಿಸ್‌ಮಸ್ ಕದನ ವಿರಾಮ


  ಎರಡೂ ಪಡೆಯ ಅಂದಾಜು 100,000 ಸೈನಿಕರು ಹೋರಾಡಲು ನಿರಾಕರಿಸಿದರು, ಏಕೆಂದರೆ ಯುದ್ಧದಿಂದ ಅವರುಗಳು ತುಂಬಾ ದಣಿದಿದ್ದರು. ಕೆಲವೆಡೆ ಹೊಸ ವರ್ಷದವರೆಗೆ ಕ್ರಿಸ್‌ಮಸ್ ಕದನ ವಿರಾಮವನ್ನು ಘೋಷಿಸಲಾಗಿತ್ತು. ಇದೇ ಕಥೆಯನ್ನು ರಷ್ಯಾ-ಉಕ್ರೇನ್ ಬಣಗಳ ನಡುವೆ ಹೋಲಿಸಿದಾಗ ಅದೇ ಸನ್ನಿವೇಶ ಇಲ್ಲಿ ಮರುಕಳಿಸುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು. ಕ್ರಿಸ್‌ಮಸ್ ಕದನ ವಿರಾಮವನ್ನು ಸಾರುವ ಈ ಕಥೆಯು ಉಕ್ರೇನ್‌ನಲ್ಲಿನ ರಷ್ಯಾದ ಸೈನ್ಯಕ್ಕೆ ಎಚ್ಚರಿಕೆ ನೀಡುವ ಯುದ್ಧದ ವಿಶಿಷ್ಟ ಲಕ್ಷಣಕ್ಕೆ ಒಂದು ಉದಾಹರಣೆಯಾಗಿದೆ ಎಂದೇ ವರದಿಯಾಗಿವೆ.


  ಯುದ್ಧದ ತೀವ್ರತೆಗೆ ಹೋರಾಡಲು ನಕಾರ


  ಇತಿಹಾಸದ ವಿಶ್ಲೇಷಣೆಯನ್ನು ನಡೆಸಿದಾಗ ಯುದ್ಧದ ತೀವ್ರತೆ ಹಾಗೂ ರಕ್ತಪಾತಕ್ಕೆ ಅದೆಷ್ಟೋ ಸೈನ್ಯಗಳು ಏಕಾಏಕಿ ಹೋರಾಡುವುದನ್ನು ನಿಲ್ಲಿಸಿದ ಉದಾಹರಣೆಗಳಿವೆ. ಆ ಸಮಯದಲ್ಲಿ ತಂಡಗಳು ಪರಸ್ಪರ ಸಮವಾಗಿ ಹೊಂದಾಣಿಕೆಯಾಗುತ್ತಿದ್ದವು ಇಲ್ಲವೇ ಶತ್ರು ಪಡೆಗಳಿಗಿಂತ ಸಂಖ್ಯಾತ್ಮಕವಾಗಿ ಹೆಚ್ಚಾಗಿದ್ದವು.


  ಯುದ್ಧಮಾಡುವ ಇಚ್ಛೆಯನ್ನು ಸೇನೆಗಳು ಕಳೆದುಕೊಳ್ಳಲು ಕಾರಣವೇನು? 


  ಗಲ್ಫ್ ಯುದ್ಧದ, ಯುದ್ಧ ಅನುಭವಿ ಮತ್ತು ಪೆನ್ಸಿಲ್ವೇನಿಯಾದ ಡಿಕಿನ್ಸನ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಭದ್ರತಾ ಅಧ್ಯಯನಗಳ ಸಂದರ್ಶಕ ಪ್ರಾಧ್ಯಾಪಕ ಜೆಫ್ ಮೆಕ್‌ಕಾಸ್‌ಲ್ಯಾಂಡ್ ಹೇಳುವಂತೆ ರಷ್ಯಾದ ಸೇನೆಯು ಕಳಪೆ ತರಬೇತಿಯನ್ನು ಪಡೆದುಕೊಂಡಿದ್ದು ಸೈನಿಕರು ಅನೇಕ ಸಂದರ್ಭಗಳಲ್ಲಿ ಹೋರಾಡುವ ಮನಸ್ಥಿತಿಯನ್ನು ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.


  ಸೇನೆಗೆ ಭಯ ಹಾಗೂ ದಿಗಿಲು ಕೋವಿಡ್‌ಗಿಂತಲೂ ಹೆಚ್ಚು ಭಯಾನಕ


  ಸೇನೆಗೆ ಭಯ ಹಾಗೂ ದಿಗಿಲು ಕೋವಿಡ್‌ಗಿಂತಲೂ ಹೆಚ್ಚು ಭಯಾನಕವಾಗಿರುತ್ತದೆ ಎಂದು ಹೇಳುವ ಮೆಕ್‌ಕಾಸ್‌ಲ್ಯಾಂಡ್, 21 ನೇ ಶತಮಾನದ ನಾಯಕರು ನಾಯಕತ್ವದ ಪಾಠಗಳನ್ನು ಅರಿತುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ. ಭಯ ಹಾಗೂ ದಿಗಿಲು ಎರಡಕ್ಕೂ ಮೂಲಗಳು ವೈವಿಧ್ಯಮಯವಾಗಿದ್ದರೂ ಮೆಕ್‌ಕಾಸ್‌ಲ್ಯಾಂಡ್ ಮತ್ತು ಇತರ ಇತಿಹಾಸಕಾರರು ಬಣ್ಣಿಸುವಂತೆ ಸೈನಿಕರು ಯುದ್ಧದಲ್ಲಿ ಆಸಕ್ತಿ ಕಳೆದುಕೊಳ್ಳಲು ಪ್ರಮುಖವಾಗಿರುವ ಕಾರಣಗಳನ್ನು ತಿಳಿಸಿದ್ದಾರೆ.


  ಉದ್ದೇಶದಲ್ಲಿ ನಂಬಿಕೆ ಕಳೆದುಕೊಳ್ಳುವುದು


  ಸೇನೆಯಲ್ಲಿ ಒಗ್ಗಟ್ಟು ಇಲ್ಲದೇ ಹೋದಾಗ ಅದು gಉರಿಯನ್ನು ಕಳೆದುಕೊಳ್ಳುತ್ತದೆ ಎಂಬುದು ಮೆಕ್‌ಕಾಸ್‌ಲ್ಯಾಂಡ್ ಮಾತಾಗಿದೆ. 1990-91 ರ ಗಲ್ಫ್ ಯುದ್ಧದ ಸಮಯದಲ್ಲಿ ಬೆಟಾಲಿಯನ್‌ಗೆ ಕಮಾಂಡರ್ ಆಗಿದ್ದ ಅವರು ಹಲವಾರು ಇರಾಕಿ ಸೈನಿಕರು ಶರಣಾಗುವುದನ್ನು ನೋಡಿದ್ದಾರೆ ಹಾಗೂ ಸೆರೆಹಿಡಿಯಲಾದ ಸೈನಿಕರಿಗೆ ನೀರು ನೀಡಿ ಅವರನ್ನು ಕಳುಹಿಸಿದ್ದೂ ಇದೆ ಎಂದು ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.


  ಸದ್ದಾಂ ಹುಸೇನ್ ನೇತೃತ್ವದ ಇರಾಕಿನ ಸೈನ್ಯವು ಕುವೈತ್ ಮೇಲೆ ದಾಳಿ ಮಾಡಿದಾಗ ಯುದ್ಧ ಪ್ರಾರಂಭವಾಯಿತು. ಆದರೆ ಅನೇಕ ಇರಾಕಿ ಸೈನಿಕರು ಕುವೈತ್ ಅಥವಾ ಇರಾಕ್‌ನ ಕ್ರೂರ ನಾಯಕನಿಗೆ ಸಾಯಲು ಯೋಗ್ಯರು ಎಂದು ಭಾವಿಸಿರಲಿಲ್ಲ.


  ಸೈನಿಕರು ತಮ್ಮ ನಾಯಕರುಗಳ ಮೇಲೆ ಭರವಸೆ ಕಳೆದುಕೊಳ್ಳುತ್ತಾರೆ


  ಪುಟಿನ್ ಅವರ ಇತ್ತೀಚಿನ ಫೋಟೋಗಳೇ ಅವರು ತಮ್ಮವರಿಂದ ಎಷ್ಟೊಂದು ಅಂತರವನ್ನು ಕಾಯ್ದುಕೊಂಡಿದ್ದರು ಎಂಬುದನ್ನು ಪ್ರತಿನಿಧಿಸಿದೆ. ಸೂಟ್‌ನಲ್ಲಿರುವ ನಾಯಕ, ಕಾನ್ಫರೆನ್ಸ್ ಕೋಣೆಯ ಟೇಬಲ್‌ನ ಒಂದು ಮೂಲೆಯಲ್ಲಿ ಅಧಿಕಾರ ಶಾಹಿ ಸ್ಥಿತಿಯಲ್ಲಿ ಕುಳಿತಿದ್ದರೆ ಇನ್ನೊಂದೆಡೆ ಅವರ ಅಧಿಕಾರಿಗಳು ಕುಳಿತಿದ್ದಾರೆ.


  ಇಬ್ಬರ ನಡುವೆಯೂ ಹೆಚ್ಚಿನ ಅಂತರವಿತ್ತು. ಈ ಚಿತ್ರಗಳಿಂದಲೇ ಪುಟಿನ್ ಹೇಗಿರುವ ನಾಯಕ ಎಂಬುದನ್ನು ಅರಿತುಕೊಳ್ಳಬಹುದು ಎಂದು ಸಿಬಿಎಸ್ ರೇಡಿಯೋ ಮತ್ತು ದೂರದರ್ಶನಕ್ಕಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಆಗಿರುವ ಮೆಕ್‌ಕಾಸ್‌ಲ್ಯಾಂಡ್ ತಿಳಿಸಿದ್ದಾರೆ.


  ನಾಯಕನ ವರ್ತನೆಯಿಂದ ಸೇನೆಗೆ ಬಲ


  ಒಬ್ಬ ನಾಯಕ ಯಾರಿಗಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಆಧರಿಸಿ ಆತನ ಸೇನೆಯು ಆತನಿಗಾಗಿ ಹೋರಾಡುತ್ತದೆ ಇಲ್ಲದಿದ್ದರೆ ಹೋರಾಡುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸಿದ್ದಾರೆ. ಸೈನ್ಯವು ತಮ್ಮ ನಾಯಕರಲ್ಲಿ ನಂಬಿಕೆಯನ್ನು ಕಳೆದುಕೊಂಡಾಗ ಹೋರಾಡುವ ಇಚ್ಛೆಯನ್ನು ಕಳೆದುಕೊಳ್ಳುತ್ತದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.


  vladimir putin has said that there will be no more missile attacks on ukraine
  ಉಕ್ರೇನ್-ರಷ್ಯಾ ಅಧ್ಯಕ್ಷರು


  ನಾಯಕನಿಗೆ ಸೈನಿಕರ ಕಾಳಜಿ ಅಗತ್ಯ 


  ತಮ್ಮ ಜನರಲ್ ಇಲ್ಲವೇ ನಾಯಕ ತಮ್ಮೊಂದಿಗೆ ಕದನದಲ್ಲಿ ಹೋರಾಡಬೇಕು ಎಂಬುದನ್ನು ಯಾವುದೇ ಸೈನಿಕ ಬಯಸುವುದಿಲ್ಲ. ಆದರೆ ಅವರು ತಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆಯೇ ಅವರ ತ್ಯಾಗವನ್ನು ಗೌರವಿಸುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ ಎಂಬುದು ಮೆಕ್‌ಕಾಸ್‌ಲ್ಯಾಂಡ್ ಅಭಿಪ್ರಾಯವಾಗಿದೆ. ನಾಯಕನು ಸೈನ್ಯವನ್ನು ಸಹಿಷ್ಣುತೆಯ ಮಟ್ಟಕ್ಕೆ ಹೇಗೆ ಪ್ರೇರೇಪಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಬಯಸಿದರೆ ಇತಿಹಾಸ ಕಂಡ ಶ್ರೇಷ್ಠ ಕಮಾಂಡರ್ ಆದ ಅಲೆಕ್ಸಾಂಡರ್ ದಿ ಗ್ರೇಟ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂಬುದು ಅವರ ಮಾತಾಗಿದೆ.'


  ಯುದ್ಧದಲ್ಲಿ ಎಂದಿಗೂ ಸೋಲು ಕಾಣದ ಅಲೆಕ್ಸಾಂಡರ್ 


  ಒಂದು ಬಾರಿ ಸೇನೆಯು ಮರುಭೂಮಿಯಲ್ಲಿ ಸಾಗುತ್ತಿದ್ದಾಗ ಅಲೆಕ್ಸಾಂಡರ್‌ಗೆ ತುಂಬಾ ಬಾಯಾರಿಕೆಯಾಗಿತ್ತು. ಅವರ ಸೈನಿಕರು ನಾಯಕನಿಗೆ ಕುಡಿಯಲೆಂದು ನೀರು ತಂದುಕೊಟ್ಟರು. ಆದರೆ ಸೈನಿಕರು ತಂದ ನೀರನ್ನು ನೆಲಕ್ಕೆ ಸುರಿದ ಅಲೆಕ್ಸಾಂಡರ್ ಸೇನೆಯ ಎಲ್ಲಾ ಸಿಬ್ಬಂದಿಗಳು ನೀರು ಕುಡಿಯುವವರೆಗೆ ತನಗೂ ನೀರು ಬೇಡ ಎಂದು ಹೇಳಿದನು. ತಮ್ಮ ನಾಯಕನ ಮಾತುಗಳು ಸೇನೆಯನ್ನು ಹುರಿದುಂಬಿಸಿದವು ಹಾಗೂ ತಮ್ಮ ಮೇಲೆ ಅಲೆಕ್ಸಾಂಡರ್ ಇಟ್ಟಂತಹ ಕಾಳಜಿ ಕಂಡು ಸೈನಿಕರು ಮೂಕವಿಸ್ಮಿತರಾದರು. ಅಲೆಕ್ಸಾಂಡರ್ ಯುದ್ಧದಲ್ಲಿ ಎಂದಿಗೂ ಸೋಲೇ ಕಾಣಲಿಲ್ಲ.


  ನಾಯಕನಿಗಿರಬೇಕಾದ ಮುಖ್ಯ ಧರ್ಮ ಇದಾಗಿದೆ ಎಂದು ಹೇಳುವ ಮೆಕ್‌ಕಾಸ್‌ಲ್ಯಾಂಡ್ ಸೇನೆಯು ತಮ್ಮ ನಾಯಕನ ಮೇಲೆ ಎಷ್ಟು ವಿಶ್ವಾಸವನ್ನಿರಿಸಿದೆ ಎಂಬುದಕ್ಕೆ ಅಲೆಕ್ಸಾಂಡರ್‌ನ ನಾಯಕತ್ವವು ಒಂದು ಉದಾಹರಣೆಯಾಗಿದೆ ಎಂದು ತಿಳಿಸುತ್ತಾರೆ.


  ದೇಶದ ಬೆಂಬಲವನ್ನು ಕಳೆದುಕೊಳ್ಳುವುದು


  ಅಮೆರಿಕನ್ ರಾಜಕೀಯದಲ್ಲಿ ಅನಿಯಂತ್ರಿತವಾಗಿರುವ ಮತ್ತು ವಾಸ್ತವಿಕವಾಗಿ ಪತ್ತೆಹಚ್ಚಲಾಗದ 'ಡಾರ್ಕ್‌ ಮನಿ'ಯ ಭ್ರಷ್ಟ ಶಕ್ತಿ ಹಾಗೂ ನಾಗರಿಕ ಮಾನದಂಡಗಳ ಸ್ಥಗಿತದ ಕುರಿತು ವ್ಯಾಖ್ಯಾನಕಾರರ ಎಚ್ಚರಿಕೆಯನ್ನು ನಾವು ಕೇಳಿದ್ದೇವೆ. ಯುದ್ಧದ ಸಮಯದಲ್ಲಿ ಈ ಪ್ರವೃತ್ತಿಗಳು ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಬಹುದು ಎಂದು ಹಲವರು ಭಾವಿಸುವುದಿಲ್ಲ. ಸರಳವಾಗಿ ಹೇಳುವುದಾದರೆ, ದೇಶವು ತುಂಬಾ ಭ್ರಷ್ಟವಾದಾಗ ಅಥವಾ ಅವರನ್ನು ಬೆಂಬಲಿಸಲು ವಿಭಜನೆಯಾದಾಗ ಸೈನ್ಯವನ್ನು ತೊರೆಯಬಹುದು.


  ಇದನ್ನೂ ಓದಿ:  Indian Army: ಚೀನಾಕ್ಕೆ ಸೆಡ್ಡು ಹೊಡಿಯಲು ಹೊಸ ಬಗೆಯ ಶಸ್ತ್ರಾಸ್ತ್ರದೊಂದಿಗೆ ಭಾರತ ರೆಡಿ!


  ದಕ್ಷಿಣ ವಿಯೆಟ್ನಾಮ್ ಸೈನ್ಯದ ಸಾಮೂಹಿಕ ಕುಸಿತ


  1975 ರ ವಸಂತಕಾಲದಲ್ಲಿ ದಕ್ಷಿಣ ವಿಯೆಟ್ನಾಮ್ ಸೈನ್ಯದ ಸಾಮೂಹಿಕ ಕುಸಿತವು ಇದಕ್ಕೆ ಶ್ರೇಷ್ಠ ಉದಾಹರಣೆಯಾಗಿದೆ. ವಿಯೆಟ್ ಕಾಂಗ್ ಮತ್ತು ಉತ್ತರ ವಿಯೆಟ್ನಾಮ್ ಸೈನ್ಯದ ವಿರುದ್ಧ ಹೋರಾಡಿದ ಯುಎಸ್ ಮಿಲಿಟರಿಯು ದಕ್ಷಿಣ ವಿಯೆಟ್ನಾಂನ ಫಲಾನುಭವಿಯಾಗಿತ್ತು. ಆದರೆ ದಕ್ಷಿಣ ವಿಯೆಟ್ನಾಂ ಸರ್ಕಾರವು ಭ್ರಷ್ಟಾಚಾರದಿಂದ ಕೂಡಿತ್ತು. ಅದರ ನಾಯಕರು ಮತ್ತು ಅವರ ಆಪ್ತರು ತಮ್ಮನ್ನು ತಾವು ಉತ್ಕೃಷ್ಟಗೊಳಿಸಲು ಮಿಲಿಟರಿ ಸಹಾಯವನ್ನು ಬಳಸಿಕೊಂಡರು ಮತ್ತು ಅವರು ಸೇವೆ ಸಲ್ಲಿಸಿದ ಜನರಲ್ಲಿ ಎಂದಿಗೂ ಜನಪ್ರಿಯ ಬೆಂಬಲವನ್ನು ನಿರ್ಮಿಸಲಿಲ್ಲ.


  ಯುದ್ಧಗಳು ಕೇವಲ ಸೈನಿಕರಿಂದ ಮಾತ್ರವೇ ನಡೆಯುವುದಿಲ್ಲ


  1973 ರಲ್ಲಿ ಯುಎಸ್ ಮಿಲಿಟರಿಯು ಯುದ್ಧ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ಉತ್ತರ ವಿಯೆಟ್ನಾಮೀಸ್ ಸೈನ್ಯವು ಎರಡು ವರ್ಷಗಳ ನಂತರ ಸೈಗಾನ್ ಮೇಲೆ ತನ್ನ ಅಂತಿಮ ಆಕ್ರಮಣವನ್ನು ಪ್ರಾರಂಭಿಸಿತು. ದಕ್ಷಿಣ ವಿಯೆಟ್ನಾಮೀಸ್ ಸೈನ್ಯವು ಹೋರಾಡಲು ನಿರಾಕರಿಸಿತು. ಇತಿಹಾಸಕಾರ ಮೈಕೆಲ್ ಬಟ್ಲರ್ ಹೇಳುವಂತೆ ಯುದ್ಧಗಳು ಕೇವಲ ಸೈನಿಕರಿಂದ ಮಾತ್ರವೇ ನಡೆಯುವುದಿಲ್ಲ. ಸೈನಿಕರು ಒಂದು ದೇಶ ಹಾಗೂ ಅಲ್ಲಿನ ಪ್ರಜೆಗಳು ಮತ್ತು ಅಲ್ಲಿನ ಸಂಸ್ಥೆಗಳಿಗಾಗಿ ಹೋರಾಡುತ್ತಾರೆ ಎಂದು ತಿಳಿಸಿದ್ದಾರೆ. ದೇಶದ ಸರಕಾರ, ಮಿಲಿಟರಿ ಮತ್ತು ಮಾಧ್ಯಮಗಳಿಗೂ ಯುದ್ಧದಲ್ಲಿ ಹೋರಾಡಲು ಸೈನಿಕನ ಇಚ್ಛೆಯಷ್ಟೇ ಇಚ್ಛೆ ಇರುವುದು ಮುಖ್ಯ ಎಂಬುದು ಬಟ್ಲರ್ ಮಾತಾಗಿದೆ.


  ಈ ಚಳಿಗಾಲದಲ್ಲಿ ರಷ್ಯಾದ ಪಡೆಗಳಿಗೆ ದೊಡ್ಡ ಪ್ರಶ್ನೆ


  ವಿಯೆಟ್ನಾಂನಲ್ಲಿ ಯುಎಸ್ ಮಿಲಿಟರಿ ಅರ್ಧ ಶತಮಾನದ ಹಿಂದೆ ನೈತಿಕತೆಯ ಬಿಕ್ಕಟ್ಟನ್ನು ಎದುರಿಸಿತು. ಅಮೆರಿಕಾದ ಸಾರ್ವಜನಿಕರು ಯುದ್ಧದ ವಿರುದ್ಧ ತಿರುಗಿದರು. ಯುದ್ಧವಿರೋಧಿ ಪ್ರತಿಭಟನೆಗಳು ದೇಶವನ್ನು ತಲ್ಲಣಗೊಳಿಸಿದವು. ತಮ್ಮ ದೇಶದ ರಾಜಕೀಯ ಮತ್ತು ಮಿಲಿಟರಿ ನಾಯಕರು ಯುದ್ಧದ ಉದ್ದೇಶ ಮತ್ತು ಯಶಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ತಿಳಿದಾಗ ಅಮೆರಿಕನ್ ಸಾರ್ವಜನಿಕರು ಕೋಪಗೊಂಡರು.


  ವಿಯೆಟ್ನಾಂನಿಂದ ಯುಎಸ್ ಹಠಾತ್ ವಾಪಸಾತಿ ಇತಿಹಾಸದಲ್ಲಿ ಅತ್ಯಂತ ಅವಮಾನಕರ


  ಅನೇಕ ಅಮೆರಿಕನ್ ಯುದ್ಧ ಸೈನಿಕರು ಹೋರಾಡುವ ಇಚ್ಛೆಯನ್ನು ಕಳೆದುಕೊಂಡರು. ವಿಯೆಟ್ನಾಂನಿಂದ ಯುಎಸ್ ಹಠಾತ್ ವಾಪಸಾತಿ ಇತಿಹಾಸದಲ್ಲಿ ಅತ್ಯಂತ ಅವಮಾನಕರ ಅಧ್ಯಾಯಗಳಲ್ಲಿ ಒಂದಾಗಿದೆ. ವಿಯೆಟ್ನಾಂನಲ್ಲಿ ಯುಎಸ್ ಯುದ್ಧದ ರಾಜಕೀಯ ಸನ್ನಿವೇಶವು ಉಕ್ರೇನ್ನಲ್ಲಿನ ಪ್ರಸ್ತುತ ಯುದ್ಧಕ್ಕಿಂತ ಭಿನ್ನವಾಗಿತ್ತು. ರಷ್ಯಾದಲ್ಲಿ, ಯುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕಲಾಯಿತು ಮತ್ತು ಪುಟಿನ್ ಅವರ ನಡವಳಿಕೆಯನ್ನು ಮಾಧ್ಯಮಗಳು ಹೆಚ್ಚಾಗಿ ಟೀಕಿಸಲಿಲ್ಲ.


  ಆದರೆ ಯುದ್ಧಭೂಮಿಯಲ್ಲಿ, ಅನೇಕ ರಷ್ಯಾದ ಸೈನಿಕರು ವಿಯೆಟ್ನಾಂನಲ್ಲಿ ಕೆಲವು ಅಮೆರಿಕನ್ ಸೈನಿಕರು ಅರಿತುಕೊಂಡದ್ದನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಸುಳ್ಳಿಗಾಗಿ ತಾವು ಹೋರಾಡುತ್ತಿದ್ದೇವೆ ಎಂಬುದನ್ನು ಅರಿತುಕೊಂಡಿದ್ದಾರೆ.

  Published by:Precilla Olivia Dias
  First published: