• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Covishield: ಕೋವಿಶೀಲ್ಡ್‌ನಿಂದ ಸೈಡ್‌ ಎಫೆಕ್ಟ್ ಆಗುತ್ತೆ ಅನ್ನೋದು ಸತ್ಯವೋ? ಸುಳ್ಳೋ? ಈ ಬಗ್ಗೆ ತಜ್ಞರು ಹೇಳೋದೇನು?

Covishield: ಕೋವಿಶೀಲ್ಡ್‌ನಿಂದ ಸೈಡ್‌ ಎಫೆಕ್ಟ್ ಆಗುತ್ತೆ ಅನ್ನೋದು ಸತ್ಯವೋ? ಸುಳ್ಳೋ? ಈ ಬಗ್ಗೆ ತಜ್ಞರು ಹೇಳೋದೇನು?

ಕೊರೊನಾದ ಸಮಯದಲ್ಲಿ ಎಲ್ಲರೂ ಸಾಮಾನ್ಯವಾಗಿ ಲಸಿಕೆಗಳನ್ನು ಹಾಕಿಸಿಕೊಂಡಿದ್ದೇವೆ. ಈ ಲಸಿಕೆ ಎಷ್ಟರ ಮಟ್ಟಿಗೆ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ ಅಂತ ಅನೇಕ ಸಂದೇಹಗಳು ಬಹುತೇಕರ ತಲೆಯಲ್ಲಿ ಓಡಾಡುತ್ತಿವೆ ಅಂತ ಹೇಳಬಹುದು. 

ಕೊರೊನಾದ ಸಮಯದಲ್ಲಿ ಎಲ್ಲರೂ ಸಾಮಾನ್ಯವಾಗಿ ಲಸಿಕೆಗಳನ್ನು ಹಾಕಿಸಿಕೊಂಡಿದ್ದೇವೆ. ಈ ಲಸಿಕೆ ಎಷ್ಟರ ಮಟ್ಟಿಗೆ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ ಅಂತ ಅನೇಕ ಸಂದೇಹಗಳು ಬಹುತೇಕರ ತಲೆಯಲ್ಲಿ ಓಡಾಡುತ್ತಿವೆ ಅಂತ ಹೇಳಬಹುದು. 

ಕೊರೊನಾದ ಸಮಯದಲ್ಲಿ ಎಲ್ಲರೂ ಸಾಮಾನ್ಯವಾಗಿ ಲಸಿಕೆಗಳನ್ನು ಹಾಕಿಸಿಕೊಂಡಿದ್ದೇವೆ. ಈ ಲಸಿಕೆ ಎಷ್ಟರ ಮಟ್ಟಿಗೆ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ ಅಂತ ಅನೇಕ ಸಂದೇಹಗಳು ಬಹುತೇಕರ ತಲೆಯಲ್ಲಿ ಓಡಾಡುತ್ತಿವೆ ಅಂತ ಹೇಳಬಹುದು. 

  • Trending Desk
  • 2-MIN READ
  • Last Updated :
  • Share this:

ಈಗಾಗಲೇ ಬಹುತೇಕರು ಕೋವಿಡ್-19 (Covid - 19) ಸಾಂಕ್ರಾಮಿಕ ರೋಗದ ಹಾವಳಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೋವಿಶೀಲ್ಡ್ ನ ಎರಡು ಡೋಸ್ ಗಳನ್ನು ಹಾಕಿಸಿಕೊಂಡಿದ್ದು, ಸಾಕಷ್ಟು ಮಂದಿ ಇದರ ಬೂಸ್ಟರ್ ಡೋಸ್ ಅನ್ನು ಸಹ ಹಾಕಿಸಿಕೊಂಡಿದ್ದಾರೆ ಅಂತ ಹೇಳಬಹುದು. ಹೀಗೆ ಬೂಸ್ಟರ್ ಡೋಸ್ ಹಾಕಿಸಿಕೊಂಡವರಲ್ಲಿ ಸ್ವಲ್ಪ ಮಟ್ಟಿಗಿನ ಅನಾರೋಗ್ಯ ಕಂಡಿದ್ದು, ಬಳಿಕ ಚೇತರಿಸಿಕೊಂಡಿದ್ದಾರೆ ಅಂತ ಹೇಳಬಹುದು. ಆದರೆ ಈಗ ಈ ಲಸಿಕೆ ಎಷ್ಟರ ಮಟ್ಟಿಗೆ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ ಅಂತ ಅನೇಕ ಸಂದೇಹಗಳು ಬಹುತೇಕರ ತಲೆಯಲ್ಲಿ ಓಡಾಡುತ್ತಿವೆ ಅಂತ ಹೇಳಬಹುದು. ಕೋವಿಶೀಲ್ಡ್ (Covishield) ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಹೃದ್ರೋಗ ತಜ್ಞರು  ಹೇಳಿದ್ದೇನು?  ಕೋವಿಶೀಲ್ಡ್ ಲಸಿಕೆಯ ಹೃದಯ ರಕ್ತನಾಳದ ಅಡ್ಡಪರಿಣಾಮಗಳನ್ನು ಪ್ರಸಿದ್ಧ ಬ್ರಿಟಿಷ್-ಭಾರತೀಯ ಹೃದ್ರೋಗ ತಜ್ಞರು ಗುರುತಿಸಿದ್ದಾರೆ ನೋಡಿ. ಡಾ.ಅಸೀಮ್ ಮಲ್ಹೋತ್ರಾ ಅವರ ಪ್ರಕಾರ, ಸೀರಮ್ ಇನ್ಸ್ಟಿಟ್ಯೂಟ್ (Institute) ಭಾರತದಲ್ಲಿ ತಯಾರಿಸಿದ ಲಸಿಕೆಯು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಕಾಳಜಿಗಳಿಗೆ ಬಂದಾಗ ಎಂಆರ್‌ಎನ್‌ಎ ಕೋವಿಡ್ -19 ಲಸಿಕೆಗಳಿಗಿಂತ ಕೆಟ್ಟದಾಗಿದೆ.


ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಜ್ಯಾಬ್ - ಭಾರತದಲ್ಲಿ ಪರಿಚಯಿಸಲಾದ ಮೊದಲ ಲಸಿಕೆಗಳಲ್ಲಿ ಒಂದಾಗಿದೆ. ಪ್ರಸ್ತುತ ಎರಡು ಡೋಸ್ ಮತ್ತು ಬೂಸ್ಟರ್ ಶಾಟ್ ಗೆ ಸಹ ಅನುಮೋದನೆಯನ್ನು ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಎರಡು ವರ್ಷಗಳ ಹಿಂದೆ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಕೋವಿಶೀಲ್ಡ್ ಬಳಕೆಗೆ ಹಸಿರು ನಿಶಾನೆ ತೋರಿತ್ತು.


ಆದಾಗ್ಯೂ, ಡಾ.ಮಲ್ಹೋತ್ರಾ ಅವರು ಈ ಲಸಿಕೆಯನ್ನು "ದೇಶದಲ್ಲಿ ಎಂದಿಗೂ ಬಿಡುಗಡೆ ಮಾಡಬಾರದಿತ್ತು" ಎಂದು ಹೇಳುತ್ತಾರೆ. "ನೀವು ಹೆಚ್ಚು ಹೆಚ್ಚು ಚುಚ್ಚುಮದ್ದುಗಳನ್ನು ಪಡೆದಷ್ಟೂ ಗಂಭೀರ ಅಡ್ಡಪರಿಣಾಮವನ್ನು ಅನುಭವಿಸುವ ಸಾಧ್ಯತೆ ಹೆಚ್ಚು" ಎಂದು ಹೇಳಿದ್ದಾರೆ.


ಕೋವಿಶೀಲ್ಡ್ ಬಳಕೆಯ ಬಗ್ಗೆ ಸಂಪೂರ್ಣ ಸುರಕ್ಷತಾ ಪರಿಶೀಲನೆಯನ್ನ ಒತ್ತಾಯಿಸಿದ ತಜ್ಞರು


ಎಂಆರ್‌ಎನ್ಎ ಕೋವಿಡ್-19 ಲಸಿಕೆಗಳನ್ನು ಸ್ಥಗಿತಗೊಳಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರೆ ನೀಡಿರುವ ಹೃದ್ರೋಗ ತಜ್ಞರು ಕೋವಿಶೀಲ್ಡ್ ಬಳಕೆಯ ಬಗ್ಗೆ ಸಂಪೂರ್ಣ ಸುರಕ್ಷತಾ ಪರಿಶೀಲನೆಯನ್ನು ಒತ್ತಾಯಿಸಿದ್ದಾರೆ.


ಪೀರ್-ರಿವೀವ್ಡ್ ಜರ್ನಲ್ ನಲ್ಲಿ ಪ್ರಕಟವಾದ ಜೂನ್ 2021 ರವರೆಗೆ ಮಾಡಲಾದ ಹೋಲಿಕೆಯನ್ನು ಉಲ್ಲೇಖಿಸಿ ತಜ್ಞರು, ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಹೃದಯ ರಕ್ತನಾಳದ ಪರಿಣಾಮಗಳು, ಹೃದಯಾಘಾತ, ಪಾರ್ಶ್ವವಾಯು ಮತ್ತು ಸಾವುಗಳ ವಿಷಯದಲ್ಲಿ ಫೈಜರ್ ನ ಎಂಆರ್‌ಎನ್ಎ ಜ್ಯಾಬ್ ಗಿಂತಲೂ ತುಂಬಾ ಕೆಟ್ಟದಾಗಿದೆ ಎಂದು  ಹೇಳಿದರು.


"ತೀವ್ರ ಅಡ್ಡಪರಿಣಾಮಗಳಿಂದಾಗಿ ಯುಕೆ ಮತ್ತು ಕೆಲವು ಯುರೋಪಿಯನ್ ದೇಶಗಳಲ್ಲಿ ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಅನ್ನು ಸ್ಥಗಿತಗೊಳಿಸಿದಾಗ ಭಾರತದಲ್ಲಿ ಏಕೆ ಈ ಲಸಿಕೆಯನ್ನು ಹಾಗೆಯೇ ನೀಡಲಾಯಿತು?


ಭಾರತವು ಇದನ್ನು ಏಕೆ ತಪ್ಪಾಗಿ ತೆಗೆದುಕೊಂಡಿದೆ ಎಂಬುದರ ಬಗ್ಗೆ ತನಿಖೆ ಮಾಡಬೇಕಾಗಿದ್ದು ತಕ್ಷಣ ಅಮಾನತು ಮಾಡಬೇಕಾಗಿದೆ" ಎಂದು  ಹೇಳಿದರು.


ಕೆಲವು ದೇಶಗಳು ಈ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯನ್ನು ಸ್ಥಗಿತಗೊಳಿಸಿದ್ದವು..


ಡೆನ್ಮಾರ್ಕ್, ನೆದರ್‌ಲ್ಯಾಂಡ್, ಥೈಲ್ಯಾಂಡ್, ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ಸೇರಿದಂತೆ ಹಲವಾರು ದೇಶಗಳು ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯನ್ನು ಸ್ಥಗಿತಗೊಳಿಸಿದ್ದವು. ಇದನ್ನು ಪಡೆದವರು ರಕ್ತ ಹೆಪ್ಪುಗಟ್ಟುವಿಕೆಯನ್ನು ಅನುಭವಿಸಿದ್ದಾರೆ, ಕೆಲವು ಮಾರಣಾಂತಿಕವಾಗಿವೆ ಎಂದು ಆತಂಕಕಾರಿ ವರದಿಗಳಿವೆ.


"ಲಸಿಕೆ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವ್ಯಕ್ತಿಗಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಈ ಹಿಂದೆ ಕೋವಿಡ್-19 ಹೊಂದಿದ್ದ ಜನರಿಗೆ ಅಸ್ಟ್ರಾಜೆನೆಕಾ ಲಸಿಕೆಯನ್ನು ನೀಡಬಹುದು.


ಇದನ್ನೂ ಓದಿ: 2 ವರ್ಷ ವಯಸ್ಸಿನ ಪೋರಿ, ಪಟ ಪಟಾ ಶ್ಲೋಕ ಪಠಿಸೋ ಟಪೋರಿ! ಬುಕ್‌ ಆಫ್‌ ಇಂಡಿಯಾದಲ್ಲೂ ಸೇರಿತು ಬಾಲಕಿ ಹೆಸರು


ಆದರೆ ಸೋಂಕಿನ ನಂತರ ವ್ಯಕ್ತಿಗಳು 3 ತಿಂಗಳವರೆಗೆ ವ್ಯಾಕ್ಸಿನೇಷನ್ ಅನ್ನು ವಿಳಂಬಗೊಳಿಸಲು ಆಯ್ಕೆ ಮಾಡಬಹುದು" ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೆಬ್ಸೈಟ್ ನಲ್ಲಿ ಲಸಿಕೆ ಪ್ರೊಫೈಲ್ ನಲ್ಲಿ ತಿಳಿಸಲಾಗಿದೆ.


ಲಸಿಕೆ ಹಾಕಿಸಿಕೊಂಡವರಲ್ಲಿ ಅನೇಕರು ಅಡ್ಡಪರಿಣಾಮಗಳಿಂದ ಬಳಲಿದ್ದಾರಂತೆ..


ವೈದ್ಯರ ಪ್ರಕಾರ, ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ವಿಷಯಕ್ಕೆ ಬಂದಾಗ 'ಅಭೂತಪೂರ್ವ' ಸಂಖ್ಯೆಯ ಪ್ರತಿಕೂಲ ವರದಿಗಳು ಬಂದಿವೆ. "9.7 ಮಿಲಿಯನ್ ಡೋಸ್ ಗಳನ್ನು ನೀಡಿದ ನಂತರ 8,00,000 ಪ್ರತಿಕೂಲ ಪರಿಣಾಮಗಳ ವರದಿಗಳು ಬಂದಿದೆ" ಎಂದು ಅವರು ಪ್ರತಿಪಾದಿಸಿದರು.


ಕೋವಿಡ್ -19 ಲಸಿಕೆಯನ್ನು ಹಿಂತೆಗೆದುಕೊಳ್ಳಲು ತಡವಾಗಿದ್ದರೂ, ಡಾ.ಮಲ್ಹೋತ್ರಾ ಅವರು 'ಲಸಿಕೆ ಪ್ರೇರಿತ ಗಾಯಗಳಿಂದ ಬಳಲುತ್ತಿರುವ ಅನೇಕ ಜನರಿಗೆ' ಅಥವಾ ಸಂಬಂಧಿಕರನ್ನು ಕಳೆದುಕೊಂಡವರಿಗೆ ಪರಿಹಾರ ನೀಡುವುದು ಅವಶ್ಯಕ ಎಂದು ಒತ್ತಿ ಹೇಳಿದರು. ದೇಶದ 90 ಪ್ರತಿಶತಕ್ಕಿಂತ ಹೆಚ್ಚು ಜನರು ಕೋವಿಡ್-19 ಗೆ ಒಡ್ಡಿಕೊಂಡಿದ್ದಾರೆ, ಇದು ವೈರಸ್ ಗೆ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದೆ.




"ಭಾರತದಲ್ಲಿ ಯಾರು ಲಸಿಕೆ ಪಡೆಯುವ ಅಗತ್ಯವಿಲ್ಲ ಮತ್ತು ಯಾರೂ ಬೂಸ್ಟರ್ ಡೋಸ್ ಪಡೆಯುವ ಅಗತ್ಯ ಸಹ ಇಲ್ಲ. ವಿಶೇಷವಾಗಿ ಅಡ್ಡಪರಿಣಾಮಗಳು ಹೆಚ್ಚುತ್ತಿವೆ ಎಂದು ನಮಗೆ ತಿಳಿದಿದೆ" ಎಂದು ಡಾ ಮಲ್ಹೋತ್ರಾ ಹೇಳಿದರು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು