Post Office Schemes: ಅಂಚೆ ಇಲಾಖೆಯ ಈ ಯೋಜನೆಗಳು ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸುತ್ತವೆ

Post Office Best Saving Schemes: ಕೆಲವೊಂದು ಪೋಸ್ಟ್ ಆಫೀಸ್ ಯೋಜನೆಗಳಿಂದ ಆದಾಯ ತೆರಿಗೆ ಪ್ರಯೋಜನಗಳು ದೊರೆಯುತ್ತಿದ್ದು ಆದಾಯ ತೆರಿಗೆ ಕಾಯ್ದೆ 80 ಸಿ ವ್ಯಾಪ್ತಿಯಲ್ಲಿ ವಿನಾಯಿತಿ (ಕಡಿತ) ಹೊಂದಿರುವ Post Office Schemes ಕೂಡ ಲಭ್ಯವಿವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಸ್ಥಿರ ಹಾಗೂ ಖಚಿತ ಆದಾಯ ಬಯಸುವವರು ನೀವಾಗಿದ್ದಲ್ಲಿ ಪೋಸ್ಟ್ ಆಫೀಸ್ ಯೋಜನೆಗಳು ಸೂಕ್ತವಾಗಿವೆ. ಅಂಚೆ ಕಚೇರಿ ಯೋಜನೆಗಳು ಹಿರಿಯ ನಾಗರಿಕರು ಹಾಗೂ ಹೆಣ್ಣುಮಕ್ಕಳಿಗೆ ಹಲವಾರು ಯೋಜನೆಗಳನ್ನು ಒದಗಿಸುತ್ತಿದ್ದು ಇವುಗಳ ಪ್ರಯೋಜನವನ್ನು ಹಿರಿಯ ನಾಗರಿಕರು ಹಾಗೂ ಹೆಣ್ಣುಮಕ್ಕಳು ಪಡೆದುಕೊಳ್ಳಬಹುದಾಗಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಕೌಂಟ್ ಅಥವಾ Public Provident Fund (ಸಾರ್ವಜನಿಕ ಭವಿಷ್ಯ ನಿಧಿ), ನ್ಯಾಶನಲ್ ಸೇವಿಂಗ್ ಸರ್ಟಿಫಿಕೇಟ್ (National Saving Certificate) ಹಾಗೂ Kisan Vikas Patra ಮೊದಲಾದವು Post Office ಒದಗಿಸುವ ಕೆಲವೊಂದು ಜನಪ್ರಿಯ ಯೋಜನೆಗಳಾಗಿವೆ. ಕೆಲವೊಂದು ಪೋಸ್ಟ್ ಆಫೀಸ್ ಯೋಜನೆಗಳಿಂದ ಆದಾಯ ತೆರಿಗೆ ಪ್ರಯೋಜನಗಳು ದೊರೆಯುತ್ತಿದ್ದು ಆದಾಯ ತೆರಿಗೆ ಕಾಯ್ದೆ 80 ಸಿ ವ್ಯಾಪ್ತಿಯಲ್ಲಿ ವಿನಾಯಿತಿ (ಕಡಿತ) ಹೊಂದಿರುವ Post Office Schemes ಕೂಡ ಲಭ್ಯವಿವೆ.

    ಹಿರಿಯ ನಾಗರಿಕರಿಗಾಗಿ ಪೋಸ್ಟ್ ಆಫೀಸ್ ಯೋಜನೆ (Post office schemes for Senior citizens):

    1. ಅಂಚೆ ಇಲಾಖೆ (Postal Department) ಹಿರಿಯ ನಾಗರಿಕರಿಗಾಗಿ ಉಳಿತಾಯ ಯೋಜನೆ (SCSS) ಒದಗಿಸುತ್ತದೆ.

    2. ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ವಾರ್ಷಿಕ ಶೇ 7.4% ರ ಬಡ್ಡಿದರ ಅನ್ವಯವಾಗುತ್ತದೆ. ಬಡ್ಡಿಯನ್ನು ತ್ರೈಮಾಸಿಕ ಆಧಾರದಲ್ಲಿ ಪಾವತಿಸಲಾಗುತ್ತದೆ ಮತ್ತು ಡಿಪಾಸಿಟ್ ದಿನಾಂಕವು ಮಾರ್ಚ್ 31/ಜೂನ್ 30/ಸೆಪ್ಟೆಂಬರ್ 30/ಡಿಸೆಂಬರ್ 31 ರವರೆಗೆ ಅನ್ವಯವಾಗುತ್ತದೆ.

    3. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಕನಿಷ್ಠ ಡಿಪಾಸಿಟ್ ರೂ 1000 ಮತ್ತು ರೂ 1000 ಕ್ಕಿಂತ ಹೆಚ್ಚಿರಬೇಕು, ಹಾಗೂ ಎಲ್ಲಾ SCSS ಖಾತೆಗಳಲ್ಲಿ ಗರಿಷ್ಠ ಮಿತಿ ರೂ 15 ಲಕ್ಷದವರೆಗೆ ಎಂಬುದನ್ನು ಗಮನಿಸಬೇಕಾಗುತ್ತದೆ. ಈ ಯೋಜನೆಯಡಿಯಲ್ಲಿನ ಹೂಡಿಕೆಯು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80 ಸಿ ಲಾಭಕ್ಕೆ ಅರ್ಹವಾಗಿದೆ.

    4. ಆದಾಗ್ಯೂ, ಎಲ್ಲಾ SCSS ಖಾತೆಗಳಲ್ಲಿನ ಒಟ್ಟು ಬಡ್ಡಿಯು ಒಂದು ಆರ್ಥಿಕ ವರ್ಷದಲ್ಲಿ ರೂ 50,000 ಮೀರಿದರೆ ಮತ್ತು ನಿಗದಿತ ದರದಲ್ಲಿ ಪಾವತಿಸಿದ ಒಟ್ಟು ಬಡ್ಡಿಯಿಂದ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. ಫಾರ್ಮ್ 15 G/15H ಸಲ್ಲಿಸಿದರೆ ಮತ್ತು ಸಂಚಿತ ಬಡ್ಡಿಯು ನಿಗದಿತ ಮಿತಿಗಿಂತ ಹೆಚ್ಚಿಲ್ಲದಿದ್ದರೆ ಯಾವುದೇ TDS ಅನ್ನು ಕಡಿತಗೊಳಿಸಲಾಗುವುದಿಲ್ಲ.


    ಹೆಣ್ಣು ಮಗುವಿಗಾಗಿ ಪೋಸ್ಟ್ ಆಫೀಸ್ ಯೋಜನೆ (Post Office Schemes for Girls):

    1. ಸುಕನ್ಯಾ ಸಮೃದ್ಧಿ ಖಾತೆ ರೂಪದಲ್ಲಿ ಪೋಸ್ಟ್ ಆಫೀಸ್ ಹೆಣ್ಣುಮಗುವಿಗೆ ಯೋಜನೆಗಳನ್ನು ಒದಗಿಸಿದೆ

    2. 10 ವರ್ಷದ ಒಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಪಾಲಕರು ಖಾತೆಯನ್ನು ತೆರೆಯಬಹುದು.

    3. ಹಣಕಾಸು ವರ್ಷದಲ್ಲಿ ಕನಿಷ್ಠ ಡಿಪಾಸಿಟ್ ರೂ 250 ಮತ್ತು ಗರಿಷ್ಠ ಡಿಪಾಸಿಟ್ ಅನ್ನು ರೂ 1.50 ಲಕ್ಷದವರೆಗೆ ಜೊತೆಯಾಗಿ ಅಥವಾ ಹಲವು ಕಂತುಗಳಲ್ಲಿ ಮಾಡಬಹುದು.

    4. ಠೇವಣಿ ತೆರೆಯುವ ದಿನಾಂಕದಿಂದ 15 ವರ್ಷಗಳು ಪೂರ್ಣಗೊಳ್ಳುವವರೆಗೆ ಗರಿಷ್ಠ ಡಿಪಾಸಿಟ್ ಮಾಡಬಹುದು.

    5. ಹೆಣ್ಣು ಮಗುವಿಗೆ 18 ವರ್ಷ ತುಂಬುವವರೆಗೂ ಖಾತೆಯನ್ನು ಪಾಲಕರು ನಿರ್ವಹಿಸಬೇಕಾಗುತ್ತದೆ.

    6. ಈ ಯೋಜನೆಗೆ ವಾರ್ಷಿಕ ಶೇ 7.6 % ಬಡ್ಡಿದರ ವಿಧಿಸಲಾಗುತ್ತದೆ. ಬಡ್ಡಿ ದರವನ್ನು ವಾರ್ಷಿಕವಾಗಿ ಮತ್ತು ವಾರ್ಷಿಕ ಮಿಶ್ರ ರೂಪದಲ್ಲಿ ಲೆಕ್ಕಹಾಕಲಾಗುತ್ತದೆ.

    7. ಸುಕನ್ಯಾ ಸಮೃದ್ಧಿ ಖಾತೆಯಲ್ಲಿನ ಠೇವಣಿಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ವ್ಯಾಪ್ತಿಯಲ್ಲಿ ಕಡಿತಕ್ಕೆ ಅರ್ಹತೆ ಪಡೆಯುತ್ತವೆ. ಆದಾಯ ತೆರಿಗೆ ಕಾಯ್ದೆಯಡಿ ಪಡೆಯುವ ಬಡ್ಡಿಯು ತೆರಿಗೆ ಮುಕ್ತವಾಗಿದೆ.


    ಪೋಸ್ಟ್ ಆಫೀಸ್ ಯೋಜನೆ - Post office National Savings Certificate:

    1. ಅಂಚೆ ಇಲಾಖೆಯು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳನ್ನು (NSC) ನೀಡುತ್ತಿದೆ.
      ಈ ಯೋಜನೆಗೆ ವಿಧಿಸುವ ಬಡ್ಡಿ ದರವು 6.8% ಆಗಿದೆ. ಮತ್ತು ಕಂಪೌಂಡಿಂಗ್ (ಹಿಂದಿನ ಗಳಿಕೆಯಿಂದ ಉತ್ಪಾದನೆಯಾದ ಗಳಿಕೆ) ಆವರ್ತನವು ವಾರ್ಷಿಕವಾಗಿರುತ್ತದೆ.
      ಹೂಡಿಕೆಯ ಕನಿಷ್ಠ ಮಿತಿ ರೂ 1000 ಆಗಿದ್ದರೂ, ಗರಿಷ್ಠ ಹೂಡಿಕೆಗೆ ಅಂತಹ ಯಾವುದೇ ಮಿತಿ ಇಲ್ಲ.

    2. ಡಿಪಾಸಿಟ್ ದಿನಾಂಕದಿಂದ ಐದು ವರ್ಷಗಳು ಪೂರ್ಣಗೊಂಡ ನಂತರ ಡಿಪಾಸಿಟ್ ಪಕ್ವವಾಗುತ್ತದೆ.

    3. NSC ನಲ್ಲಿನ ಡಿಪಾಸಿಟ್‌ಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ವ್ಯಾಪ್ತಿಯಲ್ಲಿ ಕಡಿತಕ್ಕೆ ಅರ್ಹವಾಗಿವೆ.


    Public Provident Fund (ಸಾರ್ವಜನಿಕ ಭವಿಷ್ಯ ನಿಧಿ):

    1. ಅಂಚೆ ಕಚೇರಿ ಸಾರ್ವಜನಿಕ ಭವಿಷ್ಯ ನಿಧಿಯನ್ನು ಒದಗಿಸುತ್ತಿದ್ದು ಇದನ್ನು ಜನಪ್ರಿಯವಾಗಿ ಪಿಪಿಎಫ್ ಎಂದು ಕರೆಯಲಾಗುತ್ತದೆ.

    2. ವಾರ್ಷಿಕ ಶೇ .7.1% ಬಡ್ಡಿದರವು ಯೋಜನೆಗೆ ಅನ್ವಯವಾಗುತ್ತದೆ ಮತ್ತು ಇದನ್ನು ವಾರ್ಷಿಕವಾಗಿ ಕಂಪೌಂಡ್ (ಹಿಂದಿನ ಗಳಿಕೆಯಿಂದ ಉತ್ಪಾದನೆಯಾದ ಗಳಿಕೆ) ಮಾಡಲಾಗುತ್ತದೆ.

    3. ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ಹೂಡಿಕೆಯು ರೂ 500 ಮತ್ತು ಗರಿಷ್ಠ ಒಂದು ಆರ್ಥಿಕ ವರ್ಷದಲ್ಲಿ ರೂ 1,50,000 ಆಗಿರಬಹುದು.

    4. ಡಿಪಾಸಿಟ್‌ಗಳನ್ನು ಒಂದೇ ಬಾರಿಗೆ ಅಥವಾ ಕಂತುಗಳಲ್ಲಿ ಮಾಡಬಹುದು.

    5. ಪಿಪಿಎಫ್‌ನಲ್ಲಿನ ಹೂಡಿಕೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ವ್ಯಾಪ್ತಿಯಲ್ಲಿ ಕಡಿತಕ್ಕೆ ಅರ್ಹವಾಗಿದ್ದರೂ, ಗಳಿಸಿದ ಬಡ್ಡಿಯು ಆದಾಯ ತೆರಿಗೆ ಕಾಯಿದೆಯಡಿ ತೆರಿಗೆ ಮುಕ್ತವಾಗಿರುತ್ತದೆ.


    ಕಿಸಾನ್ ವಿಕಾಸ್ ಪತ್ರ - Kisan Vikas Patra:

    1. ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರವನ್ನು ನೀಡುತ್ತದೆ, ಇದು ವಾರ್ಷಿಕವಾಗಿ 6.9 ಶೇಕಡಾ ಬಡ್ಡಿದರವನ್ನು ಹೊಂದಿದ್ದು ವಾರ್ಷಿಕವಾಗಿ ಹಿಂದಿನ ಗಳಿಕೆಯಿಂದ ಉತ್ಪಾದನೆಯಾದ ಗಳಿಕೆಯನ್ನು ಲೆಕ್ಕ ಮಾಡಲಾಗುತ್ತದೆ .

    2. ಗಮನಾರ್ಹವಾಗಿ, ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ ಮೊತ್ತವು 124 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ.


    80 ಸಿ ವ್ಯಾಪ್ತಿಗೆ ಒಳಪಡುವ ಪೋಸ್ಟ್ ಆಫೀಸ್ ಯೋಜನೆಗಳು:

    1. ಆದಾಯ ತೆರಿಗೆ ಕಾಯ್ದೆ ವಿಭಾಗ 80 ಸಿ ವ್ಯಾಪ್ತಿಯಲ್ಲಿ ಕಡಿತಕ್ಕೆ ಅರ್ಹವಾಗಿರುವ ಹಲವಾರು ಯೋಜನೆಗಳಿವೆ.

    2. ಈ ಯೋಜನೆಗಳೆಂದರೆ ಪೋಸ್ಟ್ ಆಫೀಸ್ 5 ವರ್ಷದ ಸಮಯ ಡಿಪಾಸಿಟ್ ಖಾತೆ (TD), ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಖಾತೆ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು.

    Published by:Sharath Sharma Kalagaru
    First published: