Investment Tips: ಮಾರುಕಟ್ಟೆ ಪರಿಣಿತರಿಂದ ಉತ್ತಮ ಹೂಡಿಕೆ ಸಲಹೆಗಳು; ಹೇಗೆ ಹೂಡಿಕೆ ಮಾಡಬೇಕು?

Where to invest for better returns: ಇಂದಿನ ಲೇಖನದಲ್ಲಿ ಸ್ಟಾಕ್ ಮಾಹಿತಿಯ ಕುರಿತು ಕೆಲವೊಂದು ಬಳಕೆದಾರರು ಪರಿಣಿತರ ಸಲಹೆಯನ್ನು ಕೇಳಿದ್ದು ಇದು ಸಹಕಾರಿ ಎಂದೆನಿಸಲಿದೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  Tips to invest in stock market: ಯಾವ ಸ್ಟಾಕ್ ಅನ್ನು ಖರೀದಿಸಬೇಕು ಹಾಗೂ ಮಾರಾಟ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ನಿಮ್ಮೆಲ್ಲಾ ಸ್ಟಾಕ್ ಸಂಬಂಧಿತ ಗೊಂದಲಗಳಿಗೆ ಪ್ರಶ್ನೆಗಳಿಗೆ ಇಂದಿನ ಲೇಖನ ಉತ್ತರ ನೀಡಲಿದೆ. ಮಾರುಕಟ್ಟೆ ಪರಿಣಿತರಾದ ಕುನಾಲ್ ಬೋತಾರಾ ಹಾಗೂ ವಿಜಯ್ ಚೋಪ್ರಾ ಸ್ಟಾಕ್ (Investment Expert Kunal Botara, Vijay Chopra) ಖರೀದಿ ಹಾಗೂ ಮಾರಾಟದ ಕುರಿತು ವಿವರವಾದ ಮಾಹಿತಿ ನೀಡಲಿದ್ದು ಸ್ಟಾಕ್ ಕುರಿತ ಮಾಹಿತಿಯನ್ನು ನೀವು ಅರಿತುಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಸ್ಟಾಕ್ ಮಾಹಿತಿಯ ಕುರಿತು ಕೆಲವೊಂದು ಬಳಕೆದಾರರು ಪರಿಣಿತರ ಸಲಹೆಯನ್ನು ಕೇಳಿದ್ದು ಇದು ಸಹಕಾರಿ ಎಂದೆನಿಸಲಿದೆ.

  ಪ್ರ: ಕೊಯಂಬತ್ತೂರಿನ ಸಾಸ್ತಾಮನಿಯವರು ಗೋದ್ರೇಜ್ ಇಂಡಸ್ಟ್ರೀಸ್ ಅನ್ನು 3.5 ವರ್ಷಗಳ ಸ್ಟಾಕ್ ನನ್ನ ಬಳಿ ಇದೆ. ಸ್ಟಾಕ್ ಬೆಲೆ ರೂ 577.50 ಪ್ರಮಾಣ 170. ನಾನು ಮುಂದುವರಿಸುವುದೇ ಅಥವಾ ಮಾರುವುದೇ?

  ಉ: ಕುನಾಲ್ ಬೋತ್ರಾ: ಸ್ಟಾಕ್ ಮುಂದುವರಿಸುವುದು ಉತ್ತಮ ಎಂಬುದು ನನ್ನ ಅಭಿಪ್ರಾಯವಾಗಿದೆ. ಗೋದ್ರೇಜ್ ಕಂಪನಿಯ 2017-18 ರಲ್ಲಿ ಸರ್ವಾಕಾಲಿಕ ಹೆಚ್ಚು ಎಂದರೆ 650-660. ಅದಲ್ಲದೆ ಸ್ಟಾಕ್ ಇನ್ನೂ ಚೇತರಿಕೆಯ ಹಾದಿಯಲ್ಲಿದೆ. ಇದು ದೃಢವಾದ ಸ್ಟಾಕ್ ಆಗಿದೆ. ಮುಂದಿನ 6-9 ತಿಂಗಳಲ್ಲಿ ಇದು ಚೇತರಿಕೆಯನ್ನು ಕಾಣಲಿದ್ದು ಇದನ್ನು ಮುಂದುವರಿಸುವುದೇ ಉತ್ತಮವಾಗಿದೆ.

  ಪ್ರ: ಸುದೀಪ್: ಟಾಟಾ ಸ್ಟಾಕ್‌ಗಳಿಗೆ ಅಂದರೆ ಟಾಟಾ ಕೆಮಿಕಲ್ಸ್, ಟಾಟಾ ಎಕ್ಸೆಲ್ಸಿ ಅಥವಾ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್‌ಗಳಿಗೆ ದೀರ್ಘ ಅವಧಿಯ ಸ್ಟಾಕ್‌ಗಳಿವೆಯೇ? ಮುಂದಿನ 5-10 ವರ್ಷಗಳಿಗೆ ನಾವು ಹೂಡಿಕೆ ಮಾಡಬಹುದಾದ ಯೋಜನೆಗಳನ್ನು ತಿಳಿಸಿ

  ಉ: ವಿಜಯ್‌ ಚೋಪ್ರಾ: ತಿದ್ದುಪಡಿಯ ನಂತರ ಟಾಟಾ ಮೋಟಾರ್ಸ್ ಅಭಿವೃದ್ಧಿ ಹೊಂದಿದೆ. ಟಾಟಾ ಕೆಮಿಕಲ್ಸ್ ಕೂಡ ಉತ್ತಮವಾಗಿದೆ. ಡ್ರೋನ್ ಅಭಿವೃದ್ಧಿ ಮಾಡುವ ಕಂಪನಿಯಾದ ನಾಲ್ಕೋ ಉತ್ತಮ ದೃಷ್ಟಿಕೋನ ಹೊಂದಿರುವ ಸ್ಟಾಕ್ ಆಗಿದೆ. ಟಾಟಾ ಮೋಟಾರ್ಸ್ ಹಾಗೂ ಟಾಟಾ ಕೆಮಿಕಲ್ಸ್ ಉತ್ತಮ ಆಯ್ಕೆ.

  ಪ್ರ: ಸರ್ವಾಣಿ ಹೈದ್ರಾಬಾದ್: ಮೀಡಿಯಮ್ ಟರ್ಮ್‌ಗಾಗಿ APTUS ಹೌಸಿಂಗ್‌ನಲ್ಲಿ ನಾನು ಹೂಡಿಕೆ ಮಾಡಬಹುದೇ? ಇಲ್ಲದಿದ್ದರೆ ಮಧ್ಯಮ ಅವಧಿಯಲ್ಲಿ 20% ರಿಟರ್ನ್ ಬರುವ ಉತ್ತಮ ಸ್ಟಾಕ್ ಸೂಚಿಸಿ

  ಉ: ವಿಜಯ್ ಚೋಪ್ರಾ: ಇಂಡಿಯಾಬುಲ್ಸ್ ಹೌಸಿಂಗ್ ಎಸ್ಟೇಟ್ ಇನ್ನೂ ಹೆಚ್ಚಿನ ಆದಾಯವನ್ನು ನೀಡುವ ಸ್ಟಾಕ್ ಆಗಿದೆ ಹೌಸಿಂಗ್ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ದೊಡ್ಡ ಹೆಸರು ಮಾಡಿದೆ. ಇಂಡಿಯಾಬುಲ್ಸ್ ರಿಯಲ್ ಎಸ್ಟೇಟ್ ಉತ್ತಮ ಕಂಪನಿಯಾಗಿದೆ ಹಾಗಾಗಿ ದೀರ್ಘಾವಧಿಯ ದೃಷ್ಟಿಕೋನದಿಂದ ಇದು ಉತ್ತಮವಾಗಿದೆ.

  ಇದನ್ನೂ ಓದಿ: ನಿಮ್ಮ ಬಳಿ SBI Account ಇದ್ರೆ, ಈ ಕೆಲಸ ಮೊದಲು ಮಾಡಿ: ಇಲ್ಲದಿದ್ರೆ ನಿಮ್ಮ ಖಾತೆ ಸ್ಥಗಿತವಾಗುತ್ತೆ..!

  ಪ್ರ: ಪೂನಮ್ ಚಂದ್ರಮಣಿ: ನಾನು ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಹಾಗೂ ಫಿನಾನ್ಸ್ ಅನ್ನು ಜುಲೈನಲ್ಲಿ ರೂ 1437 ಕ್ಕೆ ಖರೀದಿಸಿದೆ. ಪ್ರಸ್ತುತ ಸ್ಟಾಕ್ ಕುಸಿತದಲ್ಲಿದೆ. ನಾನು ಇದನ್ನು ಮುಂದುವರಿಸಲೇ ಅಥವಾ ಶ್ರೀರಾಮ್ ಸಿಟಿ ಫಿನಾನ್ಸ್‌ಗೆ ಬದಲಾಯಿಸಲೇ?

  ಉ: ಕುನಾಲ್ ಬೋತ್ರಾ: ಎರಡೂ ಸ್ಟಾಕ್‌ಗಳು ಬಲವಾಗಿದೆ. ಶ್ರೀರಾಮ್ ಟ್ರಾನ್ಸ್‌ಪೋರ್ಟ್ ತನ್ನ ಸರಾಸರಿ ಸ್ಥಿತಿ 200 ಕ್ಕೆ ಮರಳಿದೆ. ಹಾಗಾಗಿ ಇನ್ನು 2-3 ತಿಂಗಳು ಇದೇ ಸ್ಟಾಕ್‌ನಲ್ಲಿ ಮುಂದುವರಿಯಬಹುದು. ಶ್ರೀರಾಮ್ ಟ್ರಾನ್ಸ್‌ಪೋರ್ಟ್‌ನಲ್ಲೇ ಮುಂದುವರಿಯುವುದು ಉತ್ತಮ. ಇದು ಗುಣಮಟ್ಟದ ಸ್ಟಾಕ್ ಆಗಿದ್ದು ಚೇತರಿಕೆ ಇದ್ದೇ ಇರುತ್ತದೆ. ಹಾಗಾಗಿ ಸ್ಟಾಕ್ ಹೋಲ್ಡ್ ಮಾಡಿ.

  ಇದನ್ನೂ ಓದಿ: Income Tax Return: ಎರಡನೇ ಕಂತಿನ ಮುಂಗಡ ತೆರಿಗೆ ಪಾವತಿಗೆ ನಾಳೆಯೇ ಕೊನೆಯ ದಿನ: ಇಲ್ಲಿದೆ ವಿವರ..

  ಪ್ರ: ಬಾಲಸುಬ್ರಹ್ಮಣ್ಯನ್ ನಮ್ಮ ಬಳಿ ಸರಾಸರಿ ಬೆಲೆ ರೂ 524 ರ 2043 ಸನ್ ಟಿವಿ ಸ್ಟಾಕ್ ಇದೆ. ನಾವು ಏನು ಮಾಡಬೇಕು? ಮಹೀಂದ್ರಾ ಹಾಲಿಡೇಸ್‌ಗೆ ಶಿಫ್ಟ್ ಆಗಬೇಕೇ ಅಥವಾ ನಿರೀಕ್ಷಿಸಬೇಕೇ ಇಲ್ಲದಿದ್ದರೆ ಐಟಿಸಿಯಂತಹ ಬೇರೆ ಸ್ಟಾಕ್‌ಗೆ ಹೋಗಬೇಕೇ?

  ಉ: ಕುನಾಲ್ ಬೋತ್ರಾ: ಇವು ಮೂರು ಬೇರೆ ಬೇರೆ ಸ್ಟಾಕ್‌ಗಳಾಗಿವೆ. ಸನ್ ಟಿವಿ ಸ್ಟಾಕ್ ಕಳಪೆ ಕಾರ್ಯಕ್ಷಮತೆಯನ್ನು ಹೊಂದಿದೆ. ಇದು ಒಮ್ಮೊಮ್ಮೆ 550-560 ವರೆಗೆ ಹೋಗಿದ್ದೂ ಇದೆ. ಆದರೆ ಮಾರಾಟದ ಸಮಯದಲ್ಲಿ ಒತ್ತಡಕ್ಕೆ ಒಳಗಾಗಿ ಸ್ಟಾಕ್ ಹಿಂದಿನ ಮಟ್ಟಗಳನ್ನು ಸ್ಪರ್ಶಿಸುವುದಿಲ್ಲ. ನಿಮ್ಮ ಹೋಲ್ಡಿಂಗ್‌ಗಳನ್ನು ಟ್ರಿಮ್ ಮಾಡಲು ಅಥವಾ ಸ್ಟಾಕ್‌ನಿಂದ ನಿರ್ಗಮಿಸಲು ನಾನು ಸಲಹೆ ನೀಡುತ್ತೇನೆ.

  ಮಹೀಂದ್ರ ಹಾಲಿಡೇಸ್ ಹಾಗೂ ಐಟಿಸಿ ವಿಭಿನ್ನವಾಗಿದೆ. ಮಹೀಂದ್ರ ಹಾಲಿಡೇಸ್ ಆಕರ್ಷಕವಾಗಿ ಕಂಡರೂ ಹೂಡಿಕೆ ಮಾಡುವ ಮುನ್ನ ವಿಮರ್ಶೆ ನಡೆಸಬೇಕಾಗುತ್ತದೆ. ಐಟಿಸಿ ದೀರ್ಘ ಅವಧಿಯದ್ದಾಗಿದ್ದು 3 ವರ್ಷಕ್ಕಿಂತ ಅಧಿಕ ಸಮಯವಾಧಿಯನ್ನು ಹೊಂದಿದೆ. ನಿಮಗೆ ನಿರೀಕ್ಷಿಸಲು ಸಾಧ್ಯವಿದ್ದಲ್ಲಿ ಐಟಿಸಿ ಮೇಲೆ ಹೂಡಿಕೆ ಮಾಡುವುದು ಉತ್ತಮವಾಗಿದೆ.
  Published by:Sharath Sharma Kalagaru
  First published: