Superbugs: ಏನಿವು ಸೂಪರ್ ಬಗ್ಸ್? ಐಸಿಯು ರೋಗಿಗಳು 14 ದಿನಗಳಲ್ಲಿ ಸಾವನ್ನಪ್ಪಿದ್ದಾರಂತೆ!

ಪ್ರತಿಯೊಂದು ಆಸ್ಪತ್ರೆಗಳು ತಮ್ಮದೇ ಆದ ವಾತಾವರಣ ಹೊಂದಿರುತ್ತವೆ ಹಾಗೂ ಇದು ಬೇರೆ ಸಹಜ ಪ್ರದೇಶಗಳಿಂದ ವಿಭಿನ್ನವಾಗಿರುತ್ತದೆ. ಅಂತೆಯೇ, ಹಾಸ್ಪಿಟಲ್ ಅಕ್ವೈರ್ಡ್ ಇನ್ಫೆಕ್ಷನ್ಸ್ ಎಂಬ ಪದಬಳಕೆಯನ್ನೂ ಸಹ ನೀವು ಕೇಳಿರಬಹುದು. ಹೌದು, ಇದು ಆಸ್ಪತ್ರೆಗಳ ವಾತಾವರಣದಲ್ಲಿ ಅಭಿವೃದ್ಧಿಗೊಂಡಂತಹ (Developed) ಹಲವು ಅನಾಮಧೇಯ ಚಿಕ್ಕ ಪುಟ್ಟ ಜೀವಿಗಳ ಉಪಸ್ಥಿತಿಯಿಂದ ಬರುವ ಸೋಂಕುಗಳಾಗಿರುತ್ತವೆ.

ಸೂಪರ್ ಬಗ್ಸ್

ಸೂಪರ್ ಬಗ್ಸ್

  • Share this:
ವೈದ್ಯಕೀಯ ಕ್ಷೇತ್ರ (Medical field) ಎಂಬುದು ಬಲು ಸೂಕ್ಷ್ಮವಾದದ್ದು. ನೀವು ಗಮನಿಸಿರಬಹುದು ಯಾವುದಾದರೂ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ (Hospital) ಭೇಟಿ ನೀಡಿದಾಗ ನಿಮಗಲ್ಲಿ ಒಂದು ರೀತಿಯ ನಿರ್ದಿಷ್ಟ ವಾತಾವರಣದ ಅನುಭವವಾಗುತ್ತದೆ. ಆ ಅನುಭವ ಹೇಗಿರುತ್ತದೆ ಎಂದರೆ ನೀವು ಕಣ್ಣು ಮುಚ್ಚಿಯೂ ಇದು ಆಸ್ಪತ್ರೆಯೋ ಅಥವಾ ಸಣ್ಣ ದವಾಖಾನೆಯೋ ಇರಬಹುದೆಂದು ಊಹಿಸಬಹುದು. ಹೌದು, ಪ್ರತಿಯೊಂದು ಆಸ್ಪತ್ರೆಗಳು ತಮ್ಮದೇ ಆದ ವಾತಾವರಣ ಹೊಂದಿರುತ್ತವೆ ಹಾಗೂ ಇದು ಬೇರೆ ಸಹಜ ಪ್ರದೇಶಗಳಿಂದ ವಿಭಿನ್ನವಾಗಿರುತ್ತದೆ. ಅಂತೆಯೇ, ಹಾಸ್ಪಿಟಲ್ ಅಕ್ವೈರ್ಡ್ ಇನ್ಫೆಕ್ಷನ್ಸ್ ಎಂಬ ಪದಬಳಕೆಯನ್ನೂ ಸಹ ನೀವು ಕೇಳಿರಬಹುದು.  ಹೌದು, ಇದು ಆಸ್ಪತ್ರೆಗಳ ವಾತಾವರಣದಲ್ಲಿ ಅಭಿವೃದ್ಧಿಗೊಂಡಂತಹ (Developed) ಹಲವು ಅನಾಮಧೇಯ ಚಿಕ್ಕ ಪುಟ್ಟ ಜೀವಿಗಳ ಉಪಸ್ಥಿತಿಯಿಂದ ಬರುವ ಸೋಂಕುಗಳಾಗಿರುತ್ತವೆ.

ಈಗ ಇದಕ್ಕೆ ಸಂಬಂಧಿಸಿದಂತಹ ಸುದ್ದಿಯೊಂದು ಬೆಳಕಿಗೆ ಬಂದಿದೆ.  ಸಮೀಕ್ಷೆ ನಡೆಸಲಾಗಿರುವ ದೇಶಾದ್ಯಂತದ 120 ಐಸಿಯುಗಳಲ್ಲಿ ಆಸ್ಪತ್ರೆ ವಾತಾವರಣಗಳಿಂದ ಉಂಟಾದ ಸೋಂಕುಗಳ ಸಂಖ್ಯೆಯೇ ಗಮನಾರ್ಹವಾಗಿ ಇದ್ದದ್ದು ಕಂಡುಬಂದಿದೆ.

ಸೂಪರ್ ಬಗ್ಸ್ ಎಂದರೇನು?
ಕಾಲಾನುಕ್ರಮವಾಗಿ ಆಸ್ಪತ್ರೆಯ ವಾತಾವರಣದಲ್ಲಿ ನಡೆಯುವ ಅನೇಕ ರೀತಿಯ ವೈದ್ಯಕೀಯ ಚಟುವಟಿಕೆಗಳಿಂದಾಗಿ ಔಷಧ ನಿರೋಧಕ ಗುಣ ಹೊಂದಿರುವಂತಹ ಸಣ್ಣ ಸಣ್ಣ ಜೀವಿಗಳು ಅಭಿವೃದ್ಧಿಗೊಂಡಿರಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಜೀವಿಗಳನ್ನೇ ಸೂಪರ್ ಬಗ್ಸ್ ಎಂದು ಕರೆಯಲಾಗುತ್ತದೆ. ಇದೀಗ ಭಾರತದಲ್ಲಿ ಹೊಸದಾಗಿ ರಚನೆಯಾಗಿರುವ ಆರೋಗ್ಯ ಸಂಬಂಧಿತ ಸೋಂಕುಗಳ ಮೇಲೆ ನಿಗಾ ಇಡುವ ಅಧ್ಯಯನದ ಪ್ರಕಾರ ಅನುಗುಣವಾಗಿ ಇಲ್ಲಿಯವರೆಗೂ 3,080 ರಕ್ತದ ಮಾದರಿಗಳು ಹಾಗೂ 792 ಮೂತ್ರದ ಮಾದರಿಗಳಲ್ಲಿ ಈ ಸೂಪರ್ ಬಗ್ಸ್ ಇರುವಿಕೆ ಕಂಡುಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ:  India Issues Advisory: ಚೀನೀ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಿಸುವ ವಿದ್ಯಾರ್ಥಿಗಳೇ ಇಲ್ಲೊಮ್ಮೆ ನೋಡಿ!

ಮುಖ್ಯವಾಗಿ, ದೇಹದಲ್ಲಿ ಸೂಪರ್ ಬಗ್ಸ್ ಉಪಸ್ಥಿತಿಯು ಈ ಹಿಂದೆ ತೆಗೆದುಕೊಳ್ಳಲಾಗುತ್ತಿದ್ದ ಆಂಟಿ ಬಯೋಟಿಕ್ಸ್ ಔಷಧಿಗಳಿಗೆ ವಿರೋಧದ ವಾತಾವರಣ ನಿರ್ಮಾಣವಾಗಿರುವಿಕೆಯನ್ನು ಸೂಚಿಸುತ್ತದೆ. ಈ ಹಂತ ತಲುಪಿದಾಗ ಇನ್ನಷ್ಟು ತೀವ್ರತೆಯುಳ್ಳ ಆಂಟಿ ಬಯೋಟಿಕ್ ಮಾತ್ರೆಗಳನ್ನು ಇಂಟ್ರಾ ವೈನ್ಸ್ ಮೂಲಕ ಕೊಡುವುದೊಂದೇ ಮಾರ್ಗ ಉಳಿಯುತ್ತದೆ. ಆದರೆ, ಇತ್ತೀಚಿಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಅಂತಹ ಕೆಲವು ತೀವ್ರತೆಯುಳ್ಳ ಆಂಟಿ ಬಯೋಟಿಕ್ ಗಳನ್ನು ಸಾರ್ವಜನಿಕರ ಆರೋಗ್ಯಕ್ಕೆ ಅತಿ ದೊಡ್ಡ ಬೆದರಿಕೆ ಎಂದು ಘೋಷಿಸಿದೆ.

ಈಗ ಹೊಸದಾಗಿ ಸೋಂಕುಗಳ ಮೇಲೆ ನಿಗಾ ಇಡುವ HAI-Surveillance ಕೇಂದ್ರ ಸರ್ಕಾರ ಹಾಗೂ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS), ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ (ICMR), ಹಾಗೂ ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಇವುಗಳ ನಡುವಿನ ಪ್ರಯತ್ನವಾಗಿದೆ. HAI (Hospital Acquired Infection) ಎಂಬುದು ಸುದೀರ್ಘ ಕಾಲದವರೆಗೆ ಆಸ್ಪತ್ರೆಗಳ ವಾತಾವರಣದಲ್ಲಿ ಒಡ್ಡಿಕೊಳ್ಳುವಿಕೆಯಿಂದ ಬರಬಹುದಾದ ಸೋಂಕಾಗಿದೆ.

ಗ್ರಾಮ್-ನೆಗೆಟಿವ್ ಜೀವಿಗಳು 
ಆಸ್ಪತ್ರೆಗಳಲ್ಲಿ ದೀರ್ಘ ಕಾಲದವರೆಗೆ ಕ್ಯಾಥೇಟರ್ ಅಥವಾ ವೆಂಟಿಲೇಟರ್ ಮೇಲೆ ಇರುವಂತಹ ರೋಗಿಗಳು ಸಾಮಾನ್ಯವಾಗಿ ಗ್ರಾಮ್-ನೆಗೆಟಿವ್ ಜೀವಿಗಳಿಂದ ಬಾಧಿತರಾಗುವ ಸಾಧ್ಯತೆ ಹೆಚ್ಚು ಎಂಬ ಅರಿವು ಸಾಮಾನ್ಯವಾಗಿ ವೈದ್ಯರಲ್ಲಿರುತ್ತದೆ ಹಾಗೂ ಗ್ರಾಮ್-ಪಾಸಿಟಿವ್ ಜೀವಿಗಳಿಗೆ ಹೋಲಿಸಿದರೆ ಗ್ರಾಮ್-ನೆಗೆಟಿವ್ ಜೀವಿಗಳಿಂದ ಬಾಧಿತರಾದ ರೋಗಿಗಳನ್ನು ಉಪಚರಿಸುವುದು ಬಲು ಕಠಿಣವಾಗಿರುತ್ತದೆ.

ಸಮೀಕ್ಷೆಯಲ್ಲಿ ತಿಳಿದು ಬಂದಿರುವುದೇನು? 
ಇದೀಗ ದೇಶದಲ್ಲಿ ನಡೆಸಲಾಗಿರುವ ಈ ಸಮೀಕ್ಷೆಯು ಗ್ರಾಮ್-ನೆಗೇಟಿವ್ ಜೀವಿಗಳಿಂದ ಸೋಂಕುಗಳಿರುವುದನ್ನು ಹೆಚ್ಚು ದೃಢಪಡಿಸಿವೆ ಎಂದು ಏಮ್ಸ್ ಸಂಸ್ಥೆಯ ಮುಖ್ಯಸ್ಥರಾದ ಡಾ. ಪೂರ್ವಾ ಮಾಥೂರ್ ಹೇಳಿದ್ದಾರೆ. ಸಮೀಕ್ಷೆಯಲ್ಲಿ ತಪಾಸಣೆ ಮಾಡಲಾದ ರಕ್ತದ ಮಾದರಿಗಳಲ್ಲಿ 73.3% ರಷ್ಟು ಹಾಗೂ 53.1% ರಷ್ಟು ಯುಟಿಐ ಪ್ರಕರಣಗಳು ಭಾರತದಾದ್ಯಂತ ಐಸಿಯುಗಳಲ್ಲಿ ಕಂಡುಬಂದಿವೆ ಎಂದು ತಿಳಿದುಬಂದಿದೆ. ಅಲ್ಲದೆ, ರಕ್ತದ ಸೋಂಕುಗಳಿಂದ ಬಳಲುತ್ತಿದ್ದ ರೋಗಿಗಳಲ್ಲಿ 38.1% ರಷ್ಟು ರೋಗಿಗಳು ಹಾಗೂ ಮೂತ್ರನಾಳಗಳಿಂದ ಸೋಂಕಿತರಾಗಿದ್ದವರಲ್ಲಿ 27.9% ರಷ್ಟು ರೋಗಿಗಳು 14 ದಿನಗಳಲ್ಲೇ ಸಾವಿಗೀಡಾಗಿದ್ದಾರೆ ಎಂಬ ಆಘಾತಕಾರಿ ಅಂಶವೂ ಸಮೀಕ್ಷೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ:  Doctor Assault: ಕ್ಲಿನಿಕ್ ಬಾಗಿಲು ಬೇಗ ತೆಗೆಯಲಿಲ್ಲ ಎಂದು ವೈದ್ಯರ ಮೇಲೆ ಹಲ್ಲೆ

ಒಟ್ಟಿನಲ್ಲಿ ಇದೊಂದು ಚಿಂತಾಜನಕ ವಿಷಯವಾಗಿದ್ದು ಈ ಬಗ್ಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆಯಿದೆ ಎಂಬಂಶವು ಎದ್ದು ಕಾಣುತ್ತಿದೆ. ಈ ರೀತಿಯ ಸಮೀಕ್ಷೆ ಮುಂದೆ ಆಸ್ಪತ್ರೆಗಳು ತಮ್ಮಲ್ಲೆ ಕೈಗೊಳ್ಳಬೇಕಾದ ನಿರ್ದಿಷ್ಟ ಸ್ವಚ್ಛತೆ ಹಗೂ ಶಿಸ್ತಿನ ಕ್ರಮಗಳ ಬಗ್ಗೆ ಹೆಚ್ಚಿನ ಗಮನವಹಿಸುವಂತೆ ಮಾಡಲು ಮೈಲಿಗಲ್ಲಾಗಲಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.
Published by:Ashwini Prabhu
First published: