ಯಾಕೆ ಸುಳ್ಳು ಹೇಳ್ತೀರಿ?; ಮತ್ತೆ ಜೆಡಿಯು ಸೇರಿಲ್ಲ ಎಂದು ನಿತೀಶ್​ ಕುಮಾರ್​ ಅವರನ್ನು ತರಾಟೆ ತೆಗೆದುಕೊಂಡ ಪ್ರಶಾಂತ್ ಕಿಶೋರ್​

ಜೆಡಿಯು ಪಕ್ಷದಿಂದ ಹೊರ ನಡೆದಿದ್ದ ಪ್ರಶಾಂತ್ ಕಿಶೋರ್ ಇದೀಗ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪರವಾಗಿ ಚುನಾವಣಾ ರಣತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮಂಗಳವಾರ ಸಿಎಂ ನಿತೀಶ್ ಕುಮಾರ್ ನೀಡಿರುವ ಆ ಒಂದು ಹೇಳಿಕೆ ಇದೀಗ ಇಬ್ಬರೂ ನಾಯಕರ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಿದೆ.

ಪ್ರಶಾಂತ್​ ಕಿಶೋರ್​.

ಪ್ರಶಾಂತ್​ ಕಿಶೋರ್​.

  • Share this:
ನವದೆಹಲಿ (ಜನವರಿ 29): ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್ಆರ್​ಸಿ ಜಾರಿಗೆ ತರಲು ಮುಂದಾದ ದಿನದಿಂದ ಮೈತ್ರಿ ಪಕ್ಷವಾದ ಜೆಡಿಯುನಲ್ಲಿ ಎಲ್ಲವೂ ಸರಿಯಿಲ್ಲ ಎನ್ನಲಾಗುತ್ತಿದೆ. ಒಂದೆಡೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಕಾಯ್ದೆಗಳಿಗೆ ಸಮ್ಮತಿ ಸೂಚಿಸಿದ್ದರೆ, ಮತ್ತೊಂದೆಡೆ ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಸಂಸತ್​ನಲ್ಲಿ ಈ ಕಾಯ್ದೆಗಳನ್ನು ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೆ, ಬಿಜೆಪಿ ಏತರ ಸಿಎಂಗಳು ಈ ದೇಶ ವಿರೋಧಿ ಕಾಯ್ದೆಯ ವಿರುದ್ಧ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಇದರ ಬೆನ್ನಿಗೆ ಪಕ್ಷದಿಂದ ಹೊರ ನಡೆದಿದ್ದ ಪ್ರಶಾಂತ್ ಕಿಶೋರ್ ಇದೀಗ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪರವಾಗಿ ಚುನಾವಣಾ ರಣತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮಂಗಳವಾರ ಸಿಎಂ ನಿತೀಶ್ ಕುಮಾರ್ ನೀಡಿರುವ ಆ ಒಂದು ಹೇಳಿಕೆ ಇದೀಗ ಇಬ್ಬರೂ ನಾಯಕರ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಿದೆ.

ಮಂಗಳವಾರ ಹೇಳಿಕೆ ನೀಡಿದ್ದ ನಿತೀಶ್ ಕುಮಾರ್, “ಬಿಜೆಪಿ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಅವರ ನಿರ್ದೇಶನದ ಮೇರೆಗೆ ಜೆಡಿಯು ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರನ್ನು ಮತ್ತೆ ಜೆಡಿಯು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದರು.
ಆದರೆ, ನಿತೀಶ್ ಕುಮಾರ್ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಟ್ವಿಟ್ ಮೂಲಕ ತಿರುಗೇಟು ನೀಡಿರುವ ಪ್ರಶಾಂತ್ ಕಿಶೋರ್ ನಿತೀಶ್ ಹೇಳಿಕೆ ‘ಸುಳ್ಳು’ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, “ನೀವು ನನ್ನನ್ನು ಏಕೆ ಮತ್ತು ಹೇಗೆ ಜೆಡಿಯು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿರಿ ಎಂಬುದರ ಬಗ್ಗೆ ಸುಳ್ಳು ಹೇಳಿಕೆ ನೀಡಲು ನಿಮಗೆ ಏನಾಗಿದೆ. ನನ್ನನ್ನೂ ನಿಮ್ಮಂತೆಯೇ ಬಣ್ಣ ಬದಲಿಸುವವನು ಎಂದು ನಿರೂಪಿಸಲು ನಿಮ್ಮ ಕಡೆಯಿಂದ ವಿಫಲ ಪ್ರಯತ್ನ ನಡೆಯುತ್ತಿದೆ. ಮತ್ತು ನೀವು ಸತ್ಯವನ್ನೇ ಹೇಳುತ್ತಿದ್ದೀರಿ ಎಂದಾದರೂ, ಅಮಿತ್ ಶಾ ಶಿಫಾರಸು ಮಾಡಿದ ಯಾರೊಬ್ಬರ ಮಾತನ್ನು ಕೇಳದಿರಲು ನಿಮಗೆ ಇನ್ನೂ ಧೈರ್ಯವಿದೆ ಎಂದು ಯಾರು ನಂಬುತ್ತಾರೆ? ಎಂದು ಲೇವಡಿ ಮಾಡಿದ್ದಾರೆ.ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ ಅಧಿಕ ಸ್ಥಾನ ಗಳಿಸುವಲ್ಲಿ ಪ್ರಶಾಂತ್ ಕಿಶೋರ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಪ್ರಸ್ತುತ ಬಿಹಾರದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಇಂತಹ ಸಂದರ್ಭದಲ್ಲಿ ಅವರು ಪಕ್ಷದಿಂದ ಹೊರನಡೆದಿರುವುದು ಹಾಗೂ ಸಿಎಎ ಮತ್ತು ಎನ್ಆರ್​ಸಿ ವಿಚಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರ ನಿಲುವಿನ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವುದು ಪಕ್ಷಕ್ಕೆ ಚುನಾವಣೆಯಲ್ಲಿ ದುಬಾರಿಯಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ದೆಹಲಿ ವಿಧಾನಸಭೆ ಚುನಾವಣೆ; ಏನೋ ಮಾಡಲು ಹೋಗಿ ಮುಖಭಂಗ ಮಾಡಿಕೊಂಡ ಬಿಜೆಪಿ ಸಂಸದ ಗೌತಮ್ ಗಂಭೀರ್
First published: