Indian Railway: ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್; ಕೊರೊನಾದಿಂದ ಸ್ಥಗಿತಗೊಂಡಿದ್ದ ಸೇವೆ ಪುನರಾರಂಭ

ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ದೀರ್ಘ ಪ್ರಯಾಣದ ರೈಲುಗಗಳಲ್ಲಿ ಕೊರೊನಾದಿಂದ ಸ್ಥಗಿತಗೊಂಡಿದ್ದ ಸೇವೆಯನ್ನು ಪುನರಾರಂಭ ಮಾಡುತ್ತಿದೆ. ಹೊಸತನದೊಂದಿಗೆ ಈ ಸೇವೆ ಆರಂಭವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ರೈಲ್ವೆ ಪ್ರಯಾಣ (Railway Journey) ಸುಂದರ ಹಾಗೂ ಅನಾಯಾಸಕರ. ಹಾಗಾಗಿಯೇ ಸಾಮಾನ್ಯವಾಗಿ ಜನರು ತುಂಬಾ ದೂರ ಹೋಗಬೇಕಾದಲ್ಲಿ ರೈಲ್ವೆ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಂತಹ ವೇಳೆ ಬೆಡ್‍ಶೀಟ್, ದಿಂಬು ಒಯ್ಯುವುದು ಕಷ್ಟಕರ. ಇಂತಹ ತೊಂದರೆ ಇನ್ನು ಮುಂದೆ ಪಶ್ಚಿಮ ರೈಲ್ವೆಗಳಲ್ಲಿ ಕಂಡು ಬರುವುದಿಲ್ಲ. ಏಕೆಂದರೆ ಪಶ್ಚಿಮ ರೈಲ್ವೆ ಉಪಯೋಗಿಸಿ ಬಿಸಾಡಬಹುದಾದ ಬೆಡ್‍ಶೀಟ್, ದಿಂಬು, ದಿಂಬಿನ ಕವರ್ (Disposable Bedroll) ಸೇರಿದಂತೆ ಇತರೆ ವಸ್ತುಗಳನ್ನು ನೀಡುತ್ತಿದೆ.ಹೌದು ನವೆಂಬರ್ 27ರಿಂದ ಬಿಸಾಡಬಹುದಾದ ಲಿನಿನ್ ಸೇವೆಯನ್ನು ಪ್ರಾರಂಭಿಸಿದ್ದು, ರೈಲಿನೊಳಗೆಯೇ ಕೇವಲ 150 ರೂ.ಗೆ ಬೆಡ್‍ಶೀಟ್, ದಿಂಬು, ದಿಂಬಿನ ಕವರ್, ಮಾಸ್ಕ್, ಸ್ಯಾನಿಟೈಸರ್, ಏರ್ ದಿಂಬುಗಳನ್ನು ಕೊಂಡುಕೊಳ್ಳಬಹುದಾಗಿದೆ.


ಶನಿವಾರದಿಂದ, ಬಿಸಾಡಬಹುದಾದ ಲಿನಿನ್ ಪ್ಯಾಕೆಟ್‍ಗಳನ್ನು 12951 ಮುಂಬೈ-ದೆಹಲಿ ರಾಜಧಾನಿ, 12953 ಆಗಸ್ಟ್ ಕ್ರಾಂತಿ ಎಕ್ಸ್‌ಪ್ರೆಸ್ ಮತ್ತು 12903 ಗೋಲ್ಡನ್ ಟೆಂಪಲ್ ಮೇಲ್ ರೈಲುಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅವರು ನವೆಂಬರ್ 28ರಂದು ಮತ್ತೊಂದು ರೈಲು 12925 ಪಾಸ್ಚಿಮ್ ಎಕ್ಸ್‌ಪ್ರೆಸ್‍ಗೆ ಈ ಸೇವೆಯನ್ನು ವಿಸ್ತರಿಸಿದರು.


ಪಶ್ಚಿಮ ರೈಲ್ವೆ ಮೂಲಗಳ ಪ್ರಕಾರ, ರೈಲ್ವೆಯು ಈ ನಾಲ್ಕು ರೈಲುಗಳಲ್ಲಿ ಬೆಡ್‍ರೋಲ್ ಕಿಟ್‍ಗಳನ್ನು (Bedroll Kit) ಮಾರಾಟ ಮಾಡಲು ಖಾಸಗಿ ಗುತ್ತಿಗೆದಾರರನ್ನು ನೇಮಿಸಿದೆ.




 Western Railways to provide disposable travel kit for long-distance journeys
ಬೆಡ್ ರೋಲ್ ಕಿಟ್

ಬೆಡ್‍ರೋಲ್‍ಗಳು ಮತ್ತು ಲಿನಿನ್ ಬೆಲೆ 150 ರೂಪಾಯಿ


“ನಾವು ನವೆಂಬರ್ 15-16ರ ಸುಮಾರಿಗೆ ಈ ಬಿಸಾಡಬಹುದಾದ ಬೆಡ್‍ರೋಲ್‍ಗಳನ್ನು ಮಾರಾಟ ಮಾಡಲು ಗುತ್ತಿಗೆದಾರರಿಗೆ ಅನುಮತಿ ನೀಡಿದ್ದೇವೆ. ಈ ಖಾಸಗಿ ಗುತ್ತಿಗೆದಾರರಿಂದ ನೇಮಿಸಲ್ಪಟ್ಟ ಕನಿಷ್ಠ ಇಬ್ಬರು ವ್ಯಕ್ತಿಗಳು ರೈಲುಗಳನ್ನು ಹತ್ತುತ್ತಾರೆ ಮತ್ತು ಈ ಬಿಸಾಡಬಹುದಾದ ಬೆಡ್‍ರೋಲ್‍ಗಳು ಮತ್ತು ಲಿನಿನ್ ಅನ್ನು ಪ್ರಯಾಣಿಕರಿಗೆ ಪ್ಯಾಕೆಟ್‍ಗೆ 150 ರೂ.ಗೆ ಮಾರಾಟ ಮಾಡುತ್ತಾರೆ.


ಇದನ್ನೂ ಓದಿ:  ಶತಾಬ್ದಿ ರೈಲನ್ನು ಹಿಂದಿಕ್ಕಿದ ‘ಟ್ರೈನ್ 18’; ಇದು ಭಾರತದ ಅತಿ ವೇಗದ ರೈಲು!

ಬಳಕೆ ಬಳಿಕ ವಿಲೇವಾರಿ

ಪ್ರಯಾಣಿಕರು, ಖರೀದಿಸಿದ ನಂತರ, ಅದನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು ಅಥವಾ ಪ್ರಯಾಣದ ಕೊನೆಯಲ್ಲಿ ಅದನ್ನು ಹಸ್ತಾಂತರಿಸಬಹುದು, ನಂತರ ಅದನ್ನು ಸರಿಯಾಗಿ ವಿಲೇವಾರಿ ಮಾಡಲಾಗುತ್ತದೆ ”ಎಂದು ಪಶ್ಚಿಮ ರೈಲ್ವೆಯ ಅಧಿಕಾರಿಯೊಬ್ಬರು ವಿವರಿಸಿದರು.




 Western Railways to provide disposable travel kit for long-distance journeys
ಬೆಡ್ ರೋಲ್ ಕಿಟ್


ಕೊರೊನಾದಿಂದ ಸ್ಥಗಿತಗೊಂಡಿದ್ದ ಸೇವೆ

ಕೊರೋನಾ ಎಂಬ ಮಹಾಮಾರಿಯಿಂದಾಗಿ ಪ್ರಯಾಣಿಕರಿಗೆ ನೈರ್ಮಲ್ಯದ ಪ್ರಯಾಣದ ಅನುಭವ ಒದಗಿಸಲು ರೈಲುಗಳಲ್ಲಿ ಮರುಬಳಕೆ ಮಾಡಬಹುದಾದ ಕಂಬಳಿಗಳು, ಬೆಡ್‍ಶೀಟ್‍ಗಳು ಮತ್ತು ದಿಂಬುಗಳನ್ನು ಒದಗಿಸುವ ಅಭ್ಯಾಸವನ್ನು ಭಾರತೀಯ ರೈಲ್ವೆ ಸ್ಥಗಿತಗೊಳಿಸಿತ್ತು.


ಬದಲಾಗಿ, ರೈಲುಗಳಲ್ಲಿ ಪ್ರಯಾಣಿಸುವಾಗ ತಮ್ಮ ಹೊದಿಕೆಗಳನ್ನು ತೆಗೆದುಕೊಂಡು ಬರಲು ಪ್ರಯಾಣಿಕರನ್ನು ಪ್ರೋತ್ಸಾಹಿಸಲಾಯಿತು. ಆದರೂ, ರೈಲ್ವೆ ಪ್ರಯಾಣಿಕರ ಸಂಘಗಳ ಪ್ರಕಾರ, ತಮ್ಮ ಹೊದಿಕೆ ಜೊತೆಗೆ ಹೆಚ್ಚುವರಿ ಸಾಮಾನುಗಳನ್ನು ಸಾಗಿಸಬೇಕಾಗುತ್ತದೆ. ಇದು ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡುತ್ತದೆ.


ಇದನ್ನೂ ಓದಿ:  Ramayan Express: ಸ್ವಾಮೀಜಿಗಳ ಒತ್ತಡಕ್ಕೆ ಮಣಿದು ಡ್ರೆಸ್ ಕೋಡ್ ಬದಲಿಸಿದ ಭಾರತೀಯ ರೈಲ್ವೆ

ಬೆಲೆ ಕಡಿಮೆ ಮಾಡುವಂತೆ ಒತ್ತಾಯ

"ಬಿಸಾಡಬಹುದಾದ ಕಿಟ್ ಒದಗಿಸಲು ಇದು ಉತ್ತಮ ಕ್ರಮವಾಗಿದೆ, ಆದರೂ, 150 ರೂ. ಸ್ವಲ್ಪ ದುಬಾರಿಯಾಗಿದೆ ಮತ್ತು ಅದರ ಮೊತ್ತವನ್ನು ಕಡಿಮೆ ಮಾಡಬೇಕು" ಎಂದು ರೈಲ್ ಯಾತ್ರಿ ಪರಿಷತ್ತಿನ ಅಧ್ಯಕ್ಷ ಸುಭಾಷ್ ಗುಪ್ತಾ ಹೇಳಿದರು.


ಈ ಬಿಸಾಡಬಹುದಾದ ಪ್ರಯಾಣ ಕಿಟ್‍ನಲ್ಲಿ ಏನೇನು ಇದೆ?


ಪ್ರತಿ ಪ್ಯಾಕೆಟ್ ಬಿಳಿ ಬಣ್ಣದ ಬೆಡ್‍ಶೀಟ್ (1220ಎಂಎಂ*1905ಎಂಎಂ), ಬೂದು/ನೀಲಿ ಬಣ್ಣದ ಹೊದಿಕೆ (1370ಎಂಎಂ*1980ಎಂಎಂ), ಗಾಳಿ ತುಂಬಬಹುದಾದ ಬಿಳಿ ಬಣ್ಣದ ಗಾಳಿಯ ದಿಂಬು ಮತ್ತು ದಿಂಬಿನ ಕವರ್, ಫೇಸ್ ಟವೆಲ್/ ನ್ಯಾಪ್ಕಿನ್, ಮೂರು ಪದರಗಳ ಮಾಸ್ಕ್ ಮತ್ತು ಸ್ಯಾನಿಟೈಸರ್ ಸ್ಯಾಚೆಟ್ ಅನ್ನು ಹೊಂದಿರುತ್ತದೆ.


ಪಶ್ಚಿಮ ರೈಲ್ವೆ ಅಧಿಕಾರಿಗಳು ಈ ವರ್ಷದ ಆರಂಭದಲ್ಲಿ ಮುಂಬೈ ಸೆಂಟ್ರಲ್‍ನಲ್ಲಿ ಯುವಿ ಆಧಾರಿತ ಲಗೇಜ್ ಸ್ಯಾನಿಟೈಸೇಶನ್ ಯಂತ್ರ ಪ್ರಾರಂಭಿಸಿದ್ದರು, ಜನರಿಂದ ಉತ್ತಮ ಪ್ರತಿಕ್ರಿಯೆ ಬಾರದ ಕಾರಣ ಅದನ್ನು ಮುಚ್ಚಲಾಗಿದೆ.


Published by:Mahmadrafik K
First published: