ಪ್ರತಿದಿನ ರೈಲುಗಳಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರ ಅನುಕೂಲಕ್ಕಾಗಿ ಸದಾ ಒಂದಲ್ಲ ಒಂದು ಹೊಸ ಸೇವೆಗಳನ್ನು ಭಾರತೀಯ ರೈಲ್ವೆ (Indian Railways) ಪರಿಚಯಿಸುತ್ತಲೇ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಕೆಲವೊಮ್ಮೆ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸೇವೆಗಳನ್ನು ಮತ್ತು ಸೌಲಭ್ಯಗಳನ್ನು ಹೆಚ್ಚಿಸಿದರೆ, ಇನ್ನೂ ಕೆಲವೊಮ್ಮೆ ರೈಲುಗಳ (Train Timings) ಸಮಯಗಳನ್ನು ಬದಲಾಯಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡುವಂತಹ ಕೆಲಸಗಳಿಗೆ ಮುಂದಾಗುತ್ತಿರುತ್ತದೆ ಅಂತ ಹೇಳಬಹುದು.
ಈಗ ಮತ್ತೊಮ್ಮೆ ಪ್ರಯಾಣಿಕರ ಅನುಕೂಲಕ್ಕಾಗಿ ಪಶ್ಚಿಮ ರೈಲ್ವೆ ಕೆಲವು ರೈಲುಗಳ ಸಮಯಗಳನ್ನು ಬದಲಾಯಿಸಲು ನಿರ್ಧರಿಸಿದೆ ನೋಡಿ.
ರೈಲುಗಳ ಸಮಯವನ್ನು ಬದಲಾಯಿಸಿದೆ ಪಶ್ಚಿಮ ರೈಲ್ವೆ
ಈ ಅಪ್ಡೇಟ್ ಅನ್ನು ಹಂಚಿಕೊಂಡಿರುವ ಪಶ್ಚಿಮ ರೈಲ್ವೆ, "ರೈಲುಗಳ ಸಮಯಪ್ರಜ್ಞೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೆಲವು ರೈಲುಗಳ ಸಮಯವನ್ನು ಪರಿಷ್ಕರಿಸಲು ಡಬ್ಲ್ಯುಆರ್ ಮುಂದಾಗಿದೆ. ಕೆಲವು ರೈಲುಗಳ ನಿರ್ಗಮನ ಸಮಯವನ್ನು ಬದಲಾಯಿಸಲಾಗಿದ್ದು, ಇತರ ಕೆಲವು ರೈಲುಗಳ ಮಾರ್ಗದ ನಿಲ್ದಾಣಗಳಲ್ಲಿ ಸಮಯವನ್ನು ಬದಲಾಯಿಸಲಾಗಿದೆ” ಎಂದು ಬರೆದುಕೊಂಡಿದೆ.
ಪಶ್ಚಿಮ ರೈಲ್ವೆ ರೈಲು ಸಂಖ್ಯೆಯೊಂದಿಗೆ ಪಟ್ಟಿಯ ಫೋಟೋವನ್ನು ಸಹ ಹಂಚಿಕೊಂಡಿದೆ. ಯಾವೆಲ್ಲಾ ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ ಅಂತ ಕೆಳಗಿನ ಪಟ್ಟಿಯಲ್ಲಿ ನೀವು ನೋಡಬಹುದು.
ಯಾವೆಲ್ಲಾ ರೈಲುಗಳ ಸಮಯದಲ್ಲಿ ಬದಲಾವಣೆಯಾಗಿದೆ ನೋಡಿ..
* . 22474 ಬಾಂದ್ರಾ ಟರ್ಮಿನಸ್ - ಬಿಕಾನೇರ್ ಎಕ್ಸ್‌ಪ್ರೆಸ್ ರೈಲು ಬಾಂದ್ರಾ ಟರ್ಮಿನಸ್ ನಿಂದ ಮಧ್ಯಾಹ್ನ 14.50 ಗಂಟೆಗೆ ಈ ಹಿಂದೆ ಹೊರಡುತ್ತಿದ್ದು, ಮಾರ್ಚ್ 28, 2023 ರಿಂದ ಈ ರೈಲು ಮಧ್ಯಾಹ್ನ 14.40 ಗಂಟೆಗೆ ಹೊರಡುತ್ತದೆ.
ಇದನ್ನೂ ಓದಿ: Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ
* 20923 ತಿರುನೆಲ್ವೇಲಿ-ಗಾಂಧಿಧಾಮ್ ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆ ಮಾರ್ಚ್ 30 ರಿಂದ ಜಾರಿಗೆ ಬರಲಿದೆ.
20931 ಕೊಚುವೇಲಿ-ಇಂದೋರ್ ಎಕ್ಸ್‌ಪ್ರೆಸ್ ನ ಸಮಯ ಬದಲಾವಣೆ ಮಾರ್ಚ್ 31 ರಿಂದ ಜಾರಿಗೆ ಬರಲಿದೆ. ಪ್ರಯಾಣಿಕರು ಈ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡುವ ಮೂಲಕ ಈ ರೈಲುಗಳ ವೇಳಾಪಟ್ಟಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ