• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Viral News: 17 ರೂಪಾಯಿ ಇದ್ದ ಖಾತೆಯಲ್ಲೀಗ ಕೋಟಿ ಕೋಟಿ ಮೊತ್ತ, ದಿನ ಬೆಳಗಾಗ್ತಿದಂತೆ ಕುಬೇರನಾದ ಕೂಲಿ ಕಾರ್ಮಿಕ!

Viral News: 17 ರೂಪಾಯಿ ಇದ್ದ ಖಾತೆಯಲ್ಲೀಗ ಕೋಟಿ ಕೋಟಿ ಮೊತ್ತ, ದಿನ ಬೆಳಗಾಗ್ತಿದಂತೆ ಕುಬೇರನಾದ ಕೂಲಿ ಕಾರ್ಮಿಕ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನಕ್ಕೆ ಅಷ್ಟೋ ಇಷ್ಟೋ ದುಡಿದು ಮನೆಗೆ ಆ ದಿನಕ್ಕೆ ಬೇಕಾಗುವಷ್ಟು ತಂದು ಹಾಕುತ್ತಿದ್ದ ನಾಸಿರುಲ್ಲಾ ಅವರ ಬ್ಯಾಂಕ್‌ ಖಾತೆಯಲ್ಲಿದ್ದಿದ್ದು ಬರೀ 17 ರೂಪಾಯಿ ಮಾತ್ರ. ಅದು ಕೂಡ ಕಳೆದ ಅನೇಕ ವರ್ಷಗಳಿಂದ ಹಾಗೆಯೇ ಇದೆ.

 • News18 Kannada
 • 5-MIN READ
 • Last Updated :
 • West Bengal, India
 • Share this:

ಕೋಲ್ಕತ್ತಾ: ಪ್ರತಿಯೊಬ್ಬರೂ ತಾನು ಶ್ರೀಮಂತನಾಗಬೇಕು. ಒಂದೊಳ್ಳೆ ನೆಮ್ಮದಿಯ ಜೀವನವನ್ನು ಜೀವಿಸಬೇಕು. ಎಲ್ಲರ ಮುಂದೆ ತಲೆಯೆತ್ತಿ ಬದುಕುಬೇಕು ಎಂದು ಬಯಸುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅನೇಕರಿಗೆ ಇದು ಸಾಧ್ಯವಾಗುವುದಿಲ್ಲ. ದೇವ್ರೇ ನನ್ನನ್ನು ಏಕಾಏಕಿ ಶ್ರೀಮಂತ ಮಾಡಿಬಿಡಪ್ಪಾ ಅಂತಾ ಕನಸು ಕಾಣೋರು ಕೂಡ ನಮ್ಮ ಮುಂದೆಯೇ ಕೆಲವೊಬ್ಬರು ಇರುತ್ತಾರೆ. ಅದು ಕನಸಿನ ಮಾತು ಅನ್ನೋದು ಅವರಿಗೂ ಗೊತ್ತಿರುತ್ತೆ.


ಆದರೆ ಇಂತಹ ಕನಸು ಏಕಾಏಕಿ ನಿಜ ಆಗಿಬಿಟ್ರೆ ನಂಬ್ತೀರಾ? ಬಿಲ್‌ಕುಲ್ ಸಾಧ್ಯವಿಲ್ಲ. ಇಂತಹದ್ದೇ ಸನ್ನಿವೇಶವೊಂದರಲ್ಲಿ ಅವರಿವರ ಮನೆಯಲ್ಲಿ ದಿನಗೂಲಿ ನೌಕರನೊಬ್ಬ ರಾತ್ರಿ ಕಳೆದು ಬೆಳಗಾಗೋದರೊಳಗೆ 100 ಕೋಟಿಯ ಒಡೆಯ ಆಗಿರುವ ಅಪರೂಪದನ ಘಟನೆ ನಡೆದಿದೆ.


ಇದನ್ನೂ ಓದಿ: Teachers Fight: ಕಿಟಕಿ ವಿಚಾರಕ್ಕೆ ನೆಲದಲ್ಲಿ ಉರುಳಾಡಿ ಹೊಡೆದಾಡಿಕೊಂಡ ಶಿಕ್ಷಕಿಯರು! ವಿಡಿಯೋ ವೈರಲ್‌


ಹೌದು.. ಇದು ಕನಸಲ್ಲ ನಿಜಾನೇ. ಅಂದಹಾಗೆ ಇದು ನಡೆದಿರೋದು ಪಶ್ಚಿಮ ಬಂಗಾಳದಲ್ಲಿ. ಇಲ್ಲಿನ ದಿನಗೂಲಿ ನೌಕರ ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಎಂಬವರು ಕನಸಲ್ಲೂ ಊಹಿಸದ ವಾಸ್ತವ ಘಟನೆಗೆ ಸಾಕ್ಷಿಯಾಗಿದ್ದಾರೆ. ನಿಜ. ದಿನಕ್ಕೆ ಅಷ್ಟೋ ಇಷ್ಟೋ ದುಡಿದು ಮನೆಗೆ ಆ ದಿನಕ್ಕೆ ಬೇಕಾಗುವಷ್ಟು ತಂದು ಹಾಕುತ್ತಿದ್ದ ನಾಸಿರುಲ್ಲಾ ಅವರ ಬ್ಯಾಂಕ್‌ ಖಾತೆಯಲ್ಲಿದ್ದಿದ್ದು ಬರೀ 17 ರೂಪಾಯಿ ಮಾತ್ರ. ಅದು ಕೂಡ ಕಳೆದ ಅನೇಕ ವರ್ಷಗಳಿಂದ ಹಾಗೆಯೇ ಇದೆ. ಹೆಸರಿಗೊಂದು ಬ್ಯಾಂಕ್‌ ಖಾತೆ ಮಾಡಿಸಿಕೊಂಡು ಸುಮ್ಮನಾಗಿದ್ದ ನಾಸಿರುಲ್ಲ ಅವರಿಗೆ ಬ್ಯಾಂಕ್ ಖಾತೆಯ ಅಗತ್ಯವೇ ಬರುತ್ತಿರಲಿಲ್ಲ. ಯಾಕಂದ್ರೆ ಅವರು ದಿನಕ್ಕೆ ದುಡಿಯೋದು ಇನ್ನೂರೋ ಮುನ್ನೂರೋ ರೂಪಾಯಿ ಮಾತ್ರ. ಆ ಸಂಬಳ ಆ ದಿನಕ್ಕೆ ಸರಿಯಾಗೋದ್ರಿಂದ ಅಕೌಂಟ್‌ಗೆ ಹಾಕೋ ಯೋಚನೆನೂ ಮಾಡಕ್ಕಾಗಲ್ಲ. ಹಾಗಿದ್ದಾಗ ಏಕಾಏಕಿ 100 ಕೋಟಿ ತನ್ನ ಅಕೌಂಟ್‌ಗೆ ಬಿದ್ದಾಗ ಅವರಿಗೆ ಹೇಗಾಗ್ಬೇಡ.


ಇದನ್ನೂ ಓದಿ: Dating App Fraud: ಡೇಟಿಂಗ್ ಆ್ಯಪ್‌ ಬಳಸೋರೆ ಎಚ್ಚರ! ಸ್ವಲ್ಪ ಯಾಮಾರಿದರೂ ಕೈಗೆ ಚೊಂಬು ಸಿಗೋದು ಗ್ಯಾರಂಟಿ!


ತನ್ನ ಅಕೌಂಟ್‌ಗೆ ಹೇಳಹೆಸರಿಲ್ಲದೆ ಏಕಾಏಕಿ 100 ಕೋಟಿ ರೂಪಾಯಿ ಜಮೆ ಆದ್ರೆ ಯಾರಾದರೂ ಅದೃಷ್ಟ ಖುಲಾಯಿಸಿತು ಅಂತಾ ಖುಷಿ ಪಡ್ತಿದ್ದರೋ ಏನೋ. ಆದರೆ ನಾಸಿರುಲ್ಲಾ ಅವರಿಗೆ ಮಾತ್ರ ತನ್ನ ಅಕೌಂಟ್‌ಗೆ ಹಣ ಬಿದ್ದಾಗಿನಿಂದ ಸರಿಯಾಗಿ ನಿದ್ದೇನೇ ಬರ್ತಿಲ್ವಂತೆ. ಇದು ಎಲ್ಲಿಂದ ಬಂತು ಅಂತಾ ಯೋಚನೆ ಮಾಡಿ ಮಾಡಿ ತಲೆನೇ ಕೆಟ್ಟೋಗಿದ್ಯಂತೆ.  ಇನ್ನೊಂದು ಕಡೆ ಪೊಲೀಸರು ಕೂಡ ನಾಸಿರುಲ್ಲಾ ಅವರಿಗೆ ನೋಟಿಸ್ ನೀಡಿರೋದು ಅವರಲ್ಲಿ ಆತಂಕ ಹೆಚ್ಚಿಸಿದ್ದು, ತಾನು ಮಾಡದ ತಪ್ಪಿಗೆ ತನಗೆ ಏಕೆ ಈ ಶಿಕ್ಷೆ ಎಂದು ಅಲವತ್ತುಕೊಂಡಿದ್ದಾರೆ.
ಸದ್ಯ ಮುರ್ಷಿದಾಬಾದ್‌ನ ಜಂಗೀಪುರ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣದ ದಾಖಲಾಗಿದ್ದು, ಈ ಹಣದ ಮೂಲಗಳ ಬಗ್ಗೆ ತಿಳಿಯಲು ತನಿಖೆ ಕೈಗೆತ್ತಿಕೊಂಡಿದ್ದಾರೆ

First published: