ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ Sandhya Mukherjee; ಇಳಿವಯಸ್ಸಿನಲ್ಲಿ ಮಾಡುವ ಅವಮಾನ ಇದು ಎಂದ ಗಾಯಕಿ

ಈ ಇಳಿ ವಯಸ್ಸಿನಲ್ಲಿ ಪ್ರಶಸ್ತಿ ಸಿಕ್ಕಿರುವುದಕ್ಕೆ ಅವರು ಅವಮಾನ ಅನುಭವಿಸಿರುವುದಾಗಿ ತಿಳಿಸಿದ್ದಾರೆ.

ಸಂಧ್ಯಾ ಮುಖರ್ಜಿ

ಸಂಧ್ಯಾ ಮುಖರ್ಜಿ

 • Share this:
  ಕೋಲ್ಕತ್ತಾ (ಜ. 26): ಕೇಂದ್ರ ಸರ್ಕಾರ 128 ಮಂದಿಗೆ 2022ನೇ ಪದ್ಮ ಪ್ರಶಸ್ತಿ (Padma Award) ನೀಡಿ ಘೋಷಣೆ ಮಾಡಿದೆ. ಈ ಘೋಷಣೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಇಬ್ಬರು ಪುರಸ್ಕೃತರು ಪ್ರಶಸ್ತಿಯನ್ನು ನಿರಾಕರಿಸಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್​ ಭಟ್ಟಚಾರ್ಯ (Buddhadeb Bhattacharjee) ಬೆನ್ನಲ್ಲೇ ಇದೀಗ ಹಿರಿಯ ಗಾಯಕಿ ಸಂಧ್ಯಾ ಮುಖ್ಯೋಪಾದ್ಯಾಯ  ಎಂದೇ ಖ್ಯಾತಿಗೊಂಡಿರುವ ಸಂಧ್ಯಾ ಮುಖರ್ಜಿ (Sandhya Mukherjee)  ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಈ ಸಂಬಂಧ ಇಂದು ಅವರ ಮಗಳು, ಈ ಪ್ರಶಸ್ತಿಯನ್ನು ಅವರಿಗಿಂತ ಕಿರಿಯರಿಗೆ ಸಲ್ಲಬೇಕು ಎಂದು ತಿಳಿಸಿದ್ದಾರೆ

  ಈ ಸಂಬಂಧ ಮಾತನಾಡಿದ ಅವರ ಮಗಳು ಸೌಮಿ ಸೇನ್​​ ಗುಪ್ತಾ, ತನ್ನ ತಾಯಿಗೆ ದೆಹಲಿಯ ಕೆಲ ಹಿರಿಯ ಅಧಿಕಾರಿಗಳು ಕರೆ ಮಾಡಿ ಪ್ರಶಸ್ತಿ ಸಿಕ್ಕಿರುವುದಾಗಿ ತಿಳಿಸಿದರು. ಈ ಇಳಿ ವಯಸ್ಸಿನಲ್ಲಿ ಪ್ರಶಸ್ತಿ ಸಿಕ್ಕಿರುವುದಕ್ಕೆ ಅವರು ಅವಮಾನ ಅನುಭವಿಸಿರುವುದಾಗಿ ತಿಳಿಸಿದ್ದಾರೆ.

  ಪ್ರಶಸ್ತಿ ನಿರಾಕರಣೆಗೆ ಯಾವುದೇ ರಾಜಕೀಯ ಸಂಬಂಧವಿಲ್ಲ
  ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಯಾವುದೇ ರಾಜಕೀಯ ಸಂಬಂಧವಿಲ್ಲ. ತಮ್ಮ ತಾಯಿಯ ನಿರ್ಧಾರಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಂಧ್ಯಾ ಮುಖರ್ಜಿ ಅವರು ಬಿಜೆಪಿ ಸರ್ಕಾರದ ಕಡು ಟೀಕೆಗಾರರಾಗಿದ್ದಾರೆ.

  ಎಂಟು ದಶಕಗಳ ಸಂಗೀತ ಸೇವೆ
  ಸುಮಾರು ಎಂಟು ದಶಕಗಳ ಕಾಲದ ಗಾಯನ ವೃತ್ತಿಜೀವನ ನಡೆಸಿರುವ ಸಂಧ್ಯಾ ಮುಖರ್ಜಿ ಅವರನ್ನು 90ರ ಇಳಿವಯಸ್ಸಿನಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅವರ ಸ್ಥಾನಮಾನವನ್ನು ಅವಮಾನಿಸುವಂತಿದೆ. ಪದ್ಮಶ್ರೀಗೆ ಕಿರಿಯ ಕಲಾವಿದೆ ಹೆಚ್ಚು ಅರ್ಹರೇ ಹೊರತು 'ಗೀತಶ್ರೀ' ಸಂಧ್ಯಾ ಮುಖೋಪಾಧ್ಯಾಯರಲ್ಲ. ಅವರ ಹಾಡುಗಳ ಎಲ್ಲಾ ಪ್ರೇಮಿಗಳು ಅನುಭವಿಸುತ್ತಾರೆ ಎಂದಿದ್ದಾರೆ

  ಬಂಗಾ ಬಿಭೂಷಣ ಪುರಸ್ಕೃತರು

  ಬಂಗಾಳದಲ್ಲಿ ಸಂಗೀತದ ಪ್ರಮುಖರು ಎಂದು ಪರಿಗಣಿಸಲ್ಪಟ್ಟ ಗಾಯಕ ಎಸ್ ಡಿ ಬರ್ಮನ್, ಅನಿಲ್ ಬಿಸ್ವಾಸ್, ಮದನ್ ಮೋಹನ್, ರೋಷನ್ ಮತ್ತು ಸಲೀಲ್ ಚೌಧರಿ ಸೇರಿದಂತೆ ಹಲವಾರು ಹಿಂದಿ ಚಲನಚಿತ್ರ ಸಂಗೀತ ನಿರ್ದೇಶಕರಿಗೆ ಹಾಡಿದ್ದಾರೆ
  ಮುಖರ್ಜಿಯವರು ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಬಂಗಾ ಬಿಭೂಷಣ" ಪ್ರಶಸ್ತಿಯನ್ನು 2011 ರಲ್ಲಿ ಪಡೆದರು. 1970 ರಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

  ಇದನ್ನು ಓದಿ: ದೆಹಲಿಯ ಗಣರಾಜ್ಯೋತ್ಸವದಲ್ಲಿ ಏನೇನೆಲ್ಲಾ ಉಂಟು-ಇಲ್ಲಿದೆ ಸಂಪೂರ್ಣ ವಿವರ

  ಪ್ರಶಸ್ತಿ ತಿರಸ್ಕರ ಇದೆ ಮೊದಲಲ್ಲ
  ಭಾರತದ ಅತ್ಯುನ್ನತ ನಾಗರಿಕ ಗೌರವಗಳನ್ನು ತಿರಸ್ಕರಿಸುವ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಅನೇಕರು ಈ ರೀತಿಯ ಪ್ರಶಸ್ತಿ ತಿರಸ್ಕರಿಸಿದ್ದಾರೆ. ಇನ್ನು ಪ್ರಶಸ್ತಿ ಸ್ವೀಕರಕ್ಕೂ ಮುನ್ನ ಅರ್ಹರನನು ಸಂಪರ್ಕಿಸಿ ನಂತರ ಹೆಸರು ಘೋಷಣೆ ಮಾಡಲಾಗುವುದು
  ಚಲನಚಿತ್ರ ಬರಹಗಾರ ಸಲೀಂ ಖಾನ್ ಅವರು 2015 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅವರಿಗಿಂತ ಮೊದಲು, ಇತಿಹಾಸಕಾರ ರೊಮಿಲಾ ಥಾಪರ್ ಅವರು 2005 ರಲ್ಲಿ ಪದ್ಮಭೂಷಣವನ್ನು ನಿರಾಕರಿಸಿದ್ದರು, 1984 ರಲ್ಲಿ ಭಾರತೀಯ ಸೇನೆಯು ಗೋಲ್ಡನ್ ಟೆಂಪಲ್ ಅನ್ನು ಮುತ್ತಿಗೆ ಹಾಕಿದ ನಂತರ 1974 ರ ಪ್ರಶಸ್ತಿಯನ್ನು ಹಿಂದಿರುಗಿಸಿದರು.

  ಇದನ್ನು ಓದಿ: ರಾಜ್ಯದ ಐವರಿಗೆ ಪದ್ಮ ಪ್ರಶಸ್ತಿ; ಜ. ಬಿಪಿನ್ ರಾವತ್​ಗೆ ಮರಣೋತ್ತರ ಪದ್ಮ ವಿಭೂಷಣ

  ಲೇಖಕ ಖುಷ್ವಂತ್ ಸಿಂಗ್ ಅವರು ತಮ್ಮ 1974 ರ ಪದ್ಮಭೂಷಣವನ್ನು 1984 ರ ಬ್ಲೂ ಅಪರೇಷನ್ ಘಟನೆ ವಿಷಯಕ್ಕೆ ಹಿಂದಿರುಗಿಸಿದ್ದರು ಆದರೆ ಅವರು 2007 ರಲ್ಲಿ ಪದ್ಮವಿಭೂಷಣವನ್ನು ಸ್ವೀಕರಿಸಿದರು.

  ಕರ್ನಾಟಕದ ಐವರಿಗೂ ಪದ್ಮ ಪ್ರಶಸ್ತಿ

  ಕರ್ನಾಟಕದ ಐವರಿಗೆ ಈ ಬಾರಿ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ. ಸೈನ್ಸ್ ಅಂಡ್ ಇಂಜನಿಯರಿಂಗ್ ಕ್ಷೇತ್ರದ ಸೇವೆಗಾಗಿ ಸುಬ್ಬಣ್ಣ ಅಯ್ಯಪನ್, ಕಲಾ ಕ್ಷೇತ್ರಕ್ಕೆ ಎಚ್.ಆರ್. ಕೇಶವಮೂರ್ತಿ, ನಾವಿನ್ಯತೆ ಕ್ಷೇತ್ರಕ್ಕೆ ಅಬ್ದುಲ್ ಖಾದರ್ ನಡಕಟ್ಟಿನ್ , ಕೃಷಿ ಕ್ಷೇತ್ರದ ಸಾಧನೆಗಾಗಿ ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮ ಪ್ರಶಸ್ತಿ ನೀಡಲಾಗಿದ್ದು, ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ
  Published by:Seema R
  First published: