ಪಶ್ಚಿಮ ಬಂಗಾಳದ ಸಚಿವ ಜಾಕೀರ್ ಹುಸೇನ್ ಮೇಲೆ ಬಾಂಬ್ ದಾಳಿ; ಸಿಐಡಿ ತನಿಖೆಗೆ ಆದೇಶ

ಪಶ್ಚಿಮ ಬಂಗಾಳದ ಕಾರ್ಮಿಕ ಸಚಿವರಾಗಿರುವ ಜಾಕೀರ್ ಹುಸೇನ್ ಮೇಲೆ ಅಪರಿಚಿತ ವ್ಯಕ್ತಿಗಳು ಇದ್ದಕ್ಕಿದ್ದಂತೆ ಮುರ್ಷಿದಾಬಾದ್​ನಲ್ಲಿ ನಿನ್ನೆ ಸಂಜೆ ಬಾಂಬ್ ದಾಳಿ ನಡೆಸಿದ್ದಾರೆ.

ಸಚಿವ ಜಾಕೀರ್ ಹುಸೇನ್

ಸಚಿವ ಜಾಕೀರ್ ಹುಸೇನ್

 • Share this:
  ಕೊಲ್ಕತ್ತಾ (ಫೆ. 18): ಪಶ್ಚಿಮ ಬಂಗಾಳದ ಟಿಎಂಸಿ ಸಚಿವ ಜಾಕೀರ್ ಹುಸೇನ್ ಅವರ ಮೇಲೆ ಬಾಂಬ್ ದಾಳಿ ನಡೆದಿದ್ದು, ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪಶ್ಚಿಮ ಬಂಗಾಳದ ಕಾರ್ಮಿಕ ಸಚಿವರಾಗಿರುವ ಜಾಕೀರ್ ಹುಸೇನ್ ಮೇಲೆ ಅಪರಿಚಿತ ವ್ಯಕ್ತಿಗಳು ಇದ್ದಕ್ಕಿದ್ದಂತೆ ಮುರ್ಷಿದಾಬಾದ್​ನಲ್ಲಿ ನಿನ್ನೆ ಸಂಜೆ ಬಾಂಬ್ ದಾಳಿ ನಡೆಸಿದ್ದಾರೆ.

  ಸಚಿವ ಜಾಕೀರ್ ಅವರ ಕೈ, ಕಾಲುಗಳಿಗೆ ಗಾಯವಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣದ ಕುರಿತು ತನಿಖೆ ನಡೆಸಿ, ವರದಿ ನೀಡುವಂತೆ ಸಿಐಡಿಗೆ ವಹಿಸಿದೆ.  ನಿನ್ನೆ ಕೊಲ್ಕತ್ತಾದಲ್ಲಿ ನಿಮ್ತಿತ ರೈಲು ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿದ್ದ ಸಚಿವ ಜಾಕೀರ್ ಮೇಲೆ ಅಪರಿಚಿತರು ಬಾಂಬ್ ದಾಳಿ ನಡೆಸಿದ್ದರು. ಅವರ ಜೊತೆಗಿದ್ದ ಇನ್ನೊಬ್ಬರು ಟಿಎಂಸಿ ನಾಯಕರಿಗೂ ಗಾಯಗಳಾಗಿತ್ತು. ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ, ಸಚಿವ ಜಾಕೀರ್ ಅವರ ಆರೋಗ್ಯ ವಿಚಾರಿಸಿದ್ದಾರೆ.

  ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲೇ ಸಚಿವರ ಮೇಲೆ ಬಾಂಬ್ ದಾಳಿ ನಡೆದಿರುವುದು ಅನುಮಾನ ಹೆಚ್ಚಿಸಿದೆ. ಹೀಗಾಗಿ, ಈ ಕುರಿತು ತನಿಖೆ ನಡೆಸುವಂತೆ ಸಿಐಡಿಗೆ ವಹಿಸಲಾಗಿದೆ.
  Published by:Sushma Chakre
  First published: