West Bengal Election2021: ಪಶ್ಚಿಮ ಬಂಗಾಳ ಚುನಾವಣೆ 2021, ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ

ಕೇಂದ್ರ ಸಚಿವ ಅರ್ಜುನ್ ಮುಂಡಾ, ಜುವಾಲ್ ಓರಂ ಮತ್ತು ಬಾಬು ಲಾಲ್ ಮರಂಡಿ ಮುಂತಾದ ಬುಡಕಟ್ಟು ಸಮುದಾಯದ ನಾಯಕರ ಹೆಸರನ್ನು ಒಳಗೊಂಡಿರುವ ಒಟ್ಟು 40-ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.

ಅಮಿತ್ ಶಾ-ನರೇಂದ್ರ ಮೋದಿ.

ಅಮಿತ್ ಶಾ-ನರೇಂದ್ರ ಮೋದಿ.

 • Share this:
  ಕೋಲ್ಕತಾ (ಮಾರ್ಚ್​ 10): ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತನ್ನ 40-ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮಿಥುನ್ ಚಕ್ರವರ್ತಿ, ಯಶ್ ದಾಸ್‌ಗುಪ್ತಾ, ಶ್ರಬಂತಿ ಚಟರ್ಜಿ, ಪಾಯೆಲ್ ಸರ್ಕಾರ್ ಮತ್ತು ಹಿರಾನ್ ಚಟರ್ಜಿ ಸೇರಿದಂತೆ ಹಲವಾರು ಜನಪ್ರಿಯ ವ್ಯಕ್ತಿಗಳ ಹೆಸರುಗಳಿವೆ.ಈ ಪಟ್ಟಿಯಲ್ಲಿ ಮೊದಲ ಹೆಸರು ಪ್ರಧಾನಿ ನರೇಂದ್ರ ಮೋದಿಯವರ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಥಾನ ಪಡೆದಿದ್ದಾರೆ. ಇನ್ನೂ ಈ ಪಟ್ಟಿಯಲ್ಲಿ ನಾಲ್ಕನೇ ಹೆಸರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ಎಂಬುದು ಉಲ್ಲೇಖಾರ್ಹ.

  ಕೇಂದ್ರ ಸಚಿವ ಅರ್ಜುನ್ ಮುಂಡಾ, ಜುವಾಲ್ ಓರಂ ಮತ್ತು ಬಾಬು ಲಾಲ್ ಮರಂಡಿ ಮುಂತಾದ ಬುಡಕಟ್ಟು ಸಮುದಾಯದ ನಾಯಕರ ಹೆಸರನ್ನು ಒಳಗೊಂಡಿರುವ ಒಟ್ಟು 40-ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಇದಲ್ಲದೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಧರ್ಮೇಂದ್ರ ಪ್ರಧಾನ್ ಮತ್ತು ಸ್ಮೃತಿ ಇರಾನಿ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಲಾಗಿದೆ.

  bjp1
  ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಸ್ಟಾರ್​ ಪ್ರಚಾರಕರ ಪಟ್ಟಿ.


  ಮಂತ್ರಿ ಮಂಡಳದಲ್ಲಿರುವ ಪಶ್ಚಿಮ ಬಂಗಾಳ ನಾಯಕರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಡೆಬಸ್ರೀ ಚೌಧುರಿ, ಬಾಬುಲ್ ಸುಪ್ರಿಯೋ ಮತ್ತು ಪಶ್ಚಿಮ ಬಂಗಾಳದ ಇತರ ಸಂಸದರು ಸಹ ಈ ಪಟ್ಟಿಯಲ್ಲಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಪಶ್ಚಿಮ ಬಂಗಾಳದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.

  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ದೆಹಲಿ ಬಿಜೆಪಿ ಮುಖಂಡ ಮನೋಜ್ ತಿವಾರಿ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮಾರ್ಚ್ 27 ರಿಂದ ಪಶ್ಚಿಮ ಬಂಗಾಳ ಎಂಟು ಹಂತದ ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗಲಿದೆ. ಪಶ್ಚಿಮ ಬಂಗಾಳದ 16 ನೇ ವಿಧಾನಸಭೆಯ ಅಧಿಕಾರಾವಧಿ ಈ ವರ್ಷ ಮೇ 30 ಕ್ಕೆ ಕೊನೆಗೊಳ್ಳಲಿದೆ. ಪಶ್ಚಿಮ ಬಂಗಾಳದ 17 ನೇ ವಿಧಾನಸಭೆಗೆ ಒಟ್ಟು 7,34,07,832 ಮತದಾರರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ.

  ಇದನ್ನೂ ಓದಿ: West Bengal: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ; ಡಿಜಿಪಿ ವೀರೇಂದ್ರ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ

  ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, "ಪಶ್ಚಿಮ ಬಂಗಾಳ ವಿಧಾನಸಭೆಗೆ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಐದು ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರಗಳು ಮಾರ್ಚ್ 27 ರಂದು ಮೊದಲ ಹಂತದಲ್ಲಿ ಚುನಾವಣೆಯನ್ನು ಎದುರಿಸಲಿವೆ. ನಾಲ್ಕು ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರಗಳು ಏಪ್ರಿಲ್ 1 ರಂದು ಎರಡನೇ ಹಂತದಲ್ಲಿ ಮತದಾನಕ್ಕೆ ಅಣಿಯಾಗಲಿವೆ. ಮೂರನೇ ಹಂತದಲ್ಲಿ 3 ಜಿಲ್ಲೆಗಳ 31 ಕ್ಷೇತ್ರಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದೆ. ಐದು ಜಿಲ್ಲೆಗಳ 44 ಕ್ಷೇತ್ರಗಳು ಏಪ್ರಿಲ್ 10 ರಂದು ಮತದಾನಕ್ಕೆ ಹೋಗಲಿವೆ.

  "ಐದನೇ ಹಂತದಲ್ಲಿ ಆರು ಜಿಲ್ಲೆಗಳ 45 ಕ್ಷೇತ್ರಗಳು ಏಪ್ರಿಲ್ 17 ರಂದು ಮತದಾನಕ್ಕೆ ಸಾಕ್ಷಿಯಾಗಲಿವೆ. ಆರನೇ ಹಂತದಲ್ಲಿ ನಾಲ್ಕು ಜಿಲ್ಲೆಗಳ 43 ಕ್ಷೇತ್ರಗಳು ಏಪ್ರಿಲ್ 22 ರಂದು ಮತದಾನಕ್ಕೆ ಹೋಗಲಿವೆ. ಏಳನೇ ಹಂತದ ಐದು ಜಿಲ್ಲೆಗಳ 36 ಕ್ಷೇತ್ರಗಳು ಏಪ್ರಿಲ್‌ನಲ್ಲಿ ಮತದಾನಕ್ಕೆ ಹೋಗಲಿವೆ. ಎಂಟನೇ ಮತ್ತು ಅಂತಿಮ ಹಂತದಲ್ಲಿ ನಾಲ್ಕು ಜಿಲ್ಲೆಗಳ 35 ಕ್ಷೇತ್ರಗಳು ಏಪ್ರಿಲ್ 29 ರಂದು ಮತದಾನಕ್ಕೆ ಸಾಕ್ಷಿಯಾಗಲಿವೆ" ಎಂದು ವಿವರಿಸಿದ್ದಾರೆ.
  Published by:MAshok Kumar
  First published: