ಪಶ್ಚಿಮ ಬಂಗಾಳ ಪಂಚಾಯತಿ ಚುನಾವಣೆ: ಇಂದು ಮತದಾನ


Updated:May 14, 2018, 12:40 PM IST
ಪಶ್ಚಿಮ ಬಂಗಾಳ ಪಂಚಾಯತಿ ಚುನಾವಣೆ: ಇಂದು ಮತದಾನ
ಪಶ್ಚಿಮ ಬಂಗಾಳದಲ್ಲಿ ಮತ ಚಲಾಯಿಸಲು ಸಾಲಿನಲ್ಲಿ ನಿಂತಿರುವ ಜನರು

Updated: May 14, 2018, 12:40 PM IST
- ನ್ಯೂಸ್18 ಕನ್ನಡ

ಕೋಲ್ಕತಾ(ಮೇ 14): ತೃಣಮೂಲ ಕಾಂಗ್ರೆಸ್ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಇವತ್ತು ಪಂಚಾಯಿತಿ ಚುನಾವಣೆಯ ಕಲರವ. 38,616 ಪಂಚಾಯತ್ ಸ್ಥಾನಗಳಿಗೆ ಇಂದು ಮತದಾನವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿರುವ ಒಟ್ಟು 48,560 ಗ್ರಾ.ಪ. ಸ್ಥಾನಗಳ ಪೈಕಿ 16,814 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 9,217 ಪಂಚಾಯಿತಿ ಸಮಿತಿ ಸ್ಥಾನಗಳ ಪೈಕಿ 3050 ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿದೆ. 621 ಜಿಲ್ಲಾ ಪರಿಷತ್, 6,157 ಪಂಚಾಯಿತಿ ಸಮಿತಿ ಮತ್ತು 31,827 ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಈಗ ಚುನಾವಣೆಯಾಗುತ್ತಿದೆ.

ಇವತ್ತು ಬಂಗಾಳದ ಹಲವು ಕಡೆ ಹಿಂಸಾಚಾರಗಳು ನಡೆದಿರುವುದು ವರದಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಬಿಗಿಭದ್ರತೆ ನೀಡಲಾಗಿದ್ದರೂ ಮೊದಲ ಕೆಲ ಗಂಟೆಗಳಲ್ಲೇ 3ಕ್ಕೂ ಹೆಚ್ಚು ಮಂದಿ ಹಿಂಸಾಚಾರಗಳಿಗೆ ಬಲಿಯಾಗಿದ್ದಾರೆ. ಟಿಎಂಸಿ, ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಅಲ್ಲಲ್ಲಿ ಗಲಾಟೆಗಳಾಗಿವೆ. ನಾರ್ತ್ 24 ಪರಗಾಣ ಪ್ರದೇಶದಲ್ಲಿ ಹಲವು ಕಡೆ ಬೂತ್ ಕ್ಯಾಪ್ಚರಿಂಗ್ ಘಟನೆ ವರದಿಯಾಗಿದೆ.

ಸದ್ಯ, ಅವಿರೋಧವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಬಹುಪಾಲು ತೃಣಮೂಲ ಕಾಂಗ್ರೆಸ್ಸಿಗರೇ ಆಗಿದ್ಧಾರೆ. ಇವತ್ತು ಚುನಾವಣೆ ನಡೆಯುತ್ತಿರುವ ಸ್ಥಾನಗಳಿಗೆ ಬಿಜೆಪಿ ಮತ್ತು ಕಮ್ಯೂನಿಸ್ಟ್ ಪಕ್ಷಗಳು ತೃಣಮೂಲ ಕಾಂಗ್ರೆಸ್ಸಿಗೆ ತೀವ್ರ ಪೈಪೋಟಿ ನೀಡುತ್ತಿವೆ. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿರಂತರವಾಗಿ ಬೇರೂರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಪಂಚಾಯತಿ ಚುನಾವಣೆಯಲ್ಲಿ ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆ ನಡೆಯಬಹುದಾದರೂ ಬಹುಪಾಲು ಸೀಟು ಟಿಎಂಸಿ ಪಕ್ಷಕ್ಕೆ ಹೋಗುವ ಸಾಧ್ಯತೆ ಇದೆ ಎಂಬುದು ಚುನಾವಣಾ ಪೂರ್ವ ಸಮೀಕ್ಷೆಗಳ ಅಭಿಪ್ರಾಯವಾಗಿದೆ.
First published:May 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ