• Home
 • »
 • News
 • »
 • national-international
 • »
 • Smart Phone: ರಕ್ತ ಕೊಟ್ಟು ಮೊಬೈಲ್ ಖರೀದಿಸಲು ಬಂದ ಬಾಲಕಿ! ಸಿಕ್ತಾ ಸ್ಮಾರ್ಟ್ ಫೋನ್?

Smart Phone: ರಕ್ತ ಕೊಟ್ಟು ಮೊಬೈಲ್ ಖರೀದಿಸಲು ಬಂದ ಬಾಲಕಿ! ಸಿಕ್ತಾ ಸ್ಮಾರ್ಟ್ ಫೋನ್?

West bengal Minor girl tries to sell blood to buy new smart phone leaves netizens shocked

West bengal Minor girl tries to sell blood to buy new smart phone leaves netizens shocked

ಇಂದಿನ ಮಕ್ಕಳಿಗೆ ಸ್ಮಾರ್ಟ್ ಫೋನ್ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿ ಘಟನೆಯೊಂದು ವರದಿಯಾಗಿದೆ. ಅಪ್ರಾಪ್ತ ಬಾಲಕಿ ರಕ್ತ ಮಾರಾಟ ಮಾಡೋಕೆ ಹೊರಟ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

 • News18 Kannada
 • Last Updated :
 • West Bengal, India
 • Share this:

  ಮೊಬೈಲ್ ಫೋನ್‌ಗಳು (Mobile Phones) ಅದರಲ್ಲೂ ಸ್ಮಾಟ್‌ ಫೋನ್‌ಗಳಿಲ್ಲದೆ (Smart Phone) ಯುವಜನತೆ ಬದುಕುವುದು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ (Situation) ಇಂದು ನಿರ್ಮಾಣವಾಗಿದೆ. ಶಾಲಾ (School) ಮೆಟ್ಟಿಲು ಹತ್ತುವುದಕ್ಕೂ ಮುಂಚೆಯೇ ಕೈಯಲ್ಲಿ ಸ್ಮಾಟ್‌ ಫೋನ್‌ಗಳಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪಶ್ಚಿಮ ಬಂಗಾಳದಲ್ಲಿ (West Bengal) ಆತಂಕಕಾರಿ ಘಟನೆಯೊಂದು ವರದಿಯಾಗಿದೆ.
  ಪಶ್ಚಿಮ ಬಂಗಾಳದ ಯುವತಿ ಸ್ಮಾರ್ಟ್‌ಫೋನ್‌ಗಾಗಿ ಹಣ (Money) ಪಾವತಿಸಲು ತನ್ನ ರಕ್ತವನ್ನು ಮಾರಾಟ (Blood Sale) ಮಾಡಲು ಮುಂದಾಗಿದ್ದಾರೆ. ಈ ರೀತಿ ರಕ್ತ ನೀಡಲು ಈಕೆ ಸುಮಾರು 30 ಕಿಮೀ ಪ್ರಯಾಣಿಸಿರುವ (30 Km Travel) ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಯುವಜನತೆಯಲ್ಲಿರುವ (Young generations) ಮೊಬೈಲ್ ಹುಚ್ಚಿನ ಬಗ್ಗೆ ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ ಈ ಘಟನೆ.


  ರಕ್ತ ಮಾರೋದನ್ನು ನೋಡಿ ಶುರುವಾಯ್ತು ಡೌಟ್


  ರಕ್ತ ಏಕೆ ಮಾರುತ್ತಿದ್ದಿಯಾ ಎಂಬ ಪ್ರಶ್ನೆಗಳಿಗೆ ತನ್ನ ಪೋಷಕರು ಸಾವನ್ನಪ್ಪಿದ್ದಾರೆ ಎಂದು ಬಾಲಕಿ ಏನೇನೋ ಕಾರಣಗಳನ್ನು ನೀಡಿದ್ದಾರೆ. ಆದರೆ ಸಂದೇಹಗೊಂಡ ಸಿಬ್ಬಂದಿ ಮತ್ತಷ್ಟು ಪ್ರಶ್ನೆ ಮಾಡಿದಾಗ ಅಸಲಿ ವಿಚಾರ ಬಯಲಾಗಿದೆ. ಬಾಲಕಿ 9,000 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿರುವುದಾಗಿಯೂ ಅದಕ್ಕೆ ಪಾವತಿಸಲು ಹಣದ ಅಗತ್ಯವಿದೆ. ಅದಕ್ಕಾಗಿ ತನ್ನ ರಕ್ತ ಮಾರಾಟ ಮಾಡಲು ಹೊರಟಿದ್ದರು ಎಂಬುದನ್ನು ಒಪ್ಪಿಕೊಂಡಿದ್ದಾರೆ.


  ಸಾಂದರ್ಭಿಕ ಚಿತ್ರ


  ರಕ್ತ ನೀಡುತ್ತೇನೆ ಹಣ ಕೋಡುತ್ತೀರಾ ಎಂದಾ ಅಪ್ರಾಪ್ತೆ


  ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಅಪ್ರಾಪ್ತ ಬಾಲಕಿ ಬಸ್‌ನಲ್ಲಿ 30 ಕಿಮೀ ಪ್ರಯಾಣಿಸಿ ನೇರವಾಗಿ ಬಲೂರ್‌ಘಾಟ್ ಜಿಲ್ಲಾ ಆಸ್ಪತ್ರೆ ತಲುಪಿದ್ದಾರೆ. ಅಲ್ಲಿ ಹೋಗಿ ತನ್ನ ರಕ್ತವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ರಕ್ತ ಮಾರಿ ಮೊಬೈಲ್ ಫೋನ್‌ ತೆಗೆದುಕೊಳ್ಳುವ ಯತ್ನದಲ್ಲಿದ್ದ ಬಾಲಕಿ ಕೊನೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಹಣಕ್ಕಾಗಿ ರಕ್ತ ತೆಗೆದುಕೊಳ್ಳುವುದಿಲ್ಲ ಎಂದು ಎಂದು ಆಸ್ಪತ್ರೆಯ ಅಧಿಕಾರಿಗಳು ಬಾಲಕಿಗೆ ವಿವರಿಸಿ ಬುದ್ಧಿ ಹೇಳಿದ್ದಾರೆ.


  ಇದನ್ನೂ ಓದಿ:  Facebook: ಈ ಆ್ಯಪ್ಸ್ ನಿಮ್ ಮೊಬೈಲ್​ನಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ! ಫೇಸ್ಬುಕ್ ಸೆಕ್ಯುರಿಟಿ ಅಲರ್ಟ್


  ಬಾಲಕಿಗೆ ಕೌನ್ಸಲಿಂಗ್ 


  ವಿಷಯವು ಆಸ್ಪತ್ರೆಯ ರಕ್ತನಿಧಿಯ ಸಿಬ್ಬಂದಿಯ ಗಮನಕ್ಕೆ ಬಂದ ತಕ್ಷಣ ಅಧಿಕಾರಿಗಳು ಬಾಲಕಿಯನ್ನು ಕರೆದು ಮಾತನಾಡಿಸಿದ್ದಾರೆ. ಬಳಿಕ ಮಕ್ಕಳ ಸುರಕ್ಷತೆಗಾಗಿ ಕೆಲಸ ಮಾಡುವ ಎನ್‌ಜಿಒ ಚೈಲ್ಡ್‌ಲೈನ್ ಇಂಡಿಯಾಗೆ ಕರೆ ಮಾಡಿದ್ದಾರೆ. ಕೌನ್ಸಲಿಂಗ್ ಮಾಡಿದ ಬಳಿಕ  ಆಕೆಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.


  ಬಾಲಕಿ ಮಾತು ಕೇಳಿ  ಆಸ್ಪತ್ರೆ ಸಿಬ್ಬಂದಿ ಶಾಕ್


  ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ಗೆ ಆರ್ಡರ್ ಮಾಡಿದ್ದೇನೆ. ಹಣ ಬೇಕಾಗಿದ್ದು, ಆಸ್ಪತ್ರೆಗೆ ರಕ್ತದಾನ ಮಾಡುವ ಮೂಲಕ ಹಣ ಪಡೆದು ಮೊಬೈಲ್ ಕೊಳ್ಳಬಹುದು ಎಂದು ಯೋಚಿಸಿದೆ ಎಂದಿರುವ ಬಾಲಕಿ ಮಾತು ಕೇಳಿ ಸಿಬ್ಬಂದಿಗಳೇ ದಂಗಾಗಿದ್ದಾರೆ.


  ತಂದೆ-ತಾಯಿ ಮೃತಪಟ್ಟಿದ್ದಾರೆ ಎಂದ ಬಾಲಕಿ


  ತನಗೆ ವಿದ್ಯಾಭ್ಯಾಸ ಮಾಡಲು ಹಣಕಾಸಿನ ತೊಂದರೆಯಿದೆ. ತನ್ನ ತಂದೆ-ತಾಯಿ ಸತ್ತಿದ್ದಾರೆ ಎಂದು ಸಳ್ಳು ಹೇಳಿದ್ದಾರೆ ಈ ಬಾಲಕಿ. ಬದುಕಿದ್ದ ತಂದೆ-ತಾಯಿಗೆ ಗಂಭೀರ ಆರೋಗ್ಯ ಸಮಸ್ಯೆಗಳಿವೆ ಎಂಬ ಹಲವಾರು ಕಾರಣಗಳನ್ನು ನೀಡಿದ್ದಾರೆ. ಹಲವು ಬಾರಿ ಪ್ರಶ್ನೆ ಮಾಡಿದ ಬಳಿಕ ಆಕೆ ಆನ್‌ಲೈನ್‌ನಲ್ಲಿ ಮೊಬೈಲ್ ಫೋನ್ ಬುಕ್ ಮಾಡಿದ್ದು ಹಣದ ಅಗತ್ಯವಿದೆ ಎಂಬುದನ್ನು ಹೇಳಿದ್ದಾರೆ.


  ಇದನ್ನೂ ಓದಿ: Facebook: ಈ ಆ್ಯಪ್ಸ್ ನಿಮ್ ಮೊಬೈಲ್​ನಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ! ಫೇಸ್ಬುಕ್ ಸೆಕ್ಯುರಿಟಿ ಅಲರ್ಟ್


  ರಕ್ತ ಮಾರಲು ಬಂದ ವಿಷಯ  ತಂದೆಗೆ ಗೊತ್ತಿಲ್ಲ


  ಚೈಲ್ಡ್ ಲೈನ್ ಸಿಬ್ಬಂದಿ ಅಪ್ರಾಪ್ತ ಬಾಲಕಿಯ ಜವಾಬ್ದಾರಿ ತೆಗೆದುಕೊಂಡು ತರಕಾರಿ ವ್ಯಾಪಾರ ಮಾಡುವ ಆಕೆಯ ತಂದೆಗೆ ಈ ವಿಷಯ ತಿಳಿಸಿದ್ದಾರೆ.


  ತಂದೆ ಎನಂದ್ರು ಗೊತ್ತಾ?


  ಬಾಲಕಿ ಬಳಿ ಸಾಮಾನ್ಯ ಫೋನ್ ಇದ್ದು, ಕೆಲ ದಿನಗಳ ಹಿಂದೆ ಅದು ಹಾಳಾಗಿತ್ತು. ಹೀಗಾಗಿ ಭಾನುವಾರ ಸ್ನೇಹಿತೆಯೊಬ್ಬರ ಮೊಬೈಲ್‌ನಿಂದ ಆನ್‌ಲೈನ್‌ನಲ್ಲಿ 9,000 ರೂಪಾಯಿಯ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ್ದರು ಎಂದರು. ಏನಾಯಿತು ಎಂದು ನನಗೆ ತಿಳಿದಿಲ್ಲ, ನಾನು ಇಲ್ಲಿಗೆ ಬಂದಾಗ ಮಗಳು ರಕ್ತ ಮಾರಾಟ ಮಾಡಿ, ಮೊಬೈಲ್ ಖರೀದಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಯಿತು ಎಂದು ಬಾಲಕಿಯ ತಂದೆ ಹೇಳಿದ್ದಾರೆ.

  Published by:Harshith AS
  First published: