ಬಂಗಾಳ ಸಿಎಂ ಆಯೋಜಿಸಿದ್ದ ದುರ್ಗಾ ಪೂಜಾ ಉತ್ಸವದಲ್ಲಿ ನನಗೆ ಅವಮಾನವಾಯಿತು; ಗದ್ಗದಿತ ಧ್ವನಿಯಲ್ಲಿ ನೋವು ತೋಡಿಕೊಂಡ ರಾಜ್ಯಪಾಲ

ನಾಲ್ಕು ಗಂಟೆಗೂ ಹೆಚ್ಚು ಕಾಲ ನಾನು ಅಲ್ಲಿದ್ದೇನೆ. ರಾಜ್ಯದ ಪ್ರಥಮ ಪ್ರಜೆಯಾದ ನನಗೆ ವೇದಿಕೆಯ ಮೊದಲ ಸಾಲಿನಲ್ಲಿ ಕೂರಲು ಅವಕಾಶ ಮಾಡಿಕೊಡಲಿಲ್ಲ. ಟಿವಿಯಲ್ಲಿ ಒಂದು ಸೆಕೆಂಡ್​ ಕೂಡ ನನ್ನನ್ನು ತೋರಿಸಲಿಲ್ಲ. ನನಗೆ ಆದ ಅವಮಾನವನ್ನು ಬಂಗಾಳದ ಯಾವ ಪ್ರಜೆಯೂ ಮಾನ್ಯ ಮಾಡುವುದಿಲ್ಲ ಎಂದರು.

ರಾಜ್ಯಪಾಲ ಜಗದೀಪ್ ಧನ್ಕರ್

ರಾಜ್ಯಪಾಲ ಜಗದೀಪ್ ಧನ್ಕರ್

  • Share this:
ಕೋಲ್ಕತ್ತ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ದುರ್ಗಾ ಪೂಜಾ ಉತ್ಸವದಲ್ಲಿ ನನಗೆ ಅವಮಾನವಾಯಿತು. ಇದು ನನಗೆ ಅತೀವ ನೋವನ್ನು ಉಂಟು ಮಾಡಿದೆ ಎಂದು ಪಶ್ಚಿಮಬಂಗಾಳ ರಾಜ್ಯಪಾಲ ಜಗದೀಪ್ ಧನ್ಕಾರ್ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಶುಕ್ರವಾರ ಆಯೋಜಿಸಿದ್ದ ದುರ್ಗಾಪೂಜಾ ಉತ್ಸವದ ವೇದಿಕೆಯಲ್ಲಿ ರಾಜ್ಯಪಾಲರಿಗೆ ಆಸನದ ವ್ಯವಸ್ಥೆ ಮಾಡದಿರುವುದಕ್ಕೆ ರಾಜ್ಯಪಾಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಮುಖ್ಯಮಂತ್ರಿ ಬ್ಯಾನರ್ಜಿ ಅವರೊಂದಿಗೆ ವಿವಿಧ ಗಣ್ಯರು ವೇದಿಕೆ ಅಲಂಕರಿಸಿದ್ದರು. ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಇದ್ದ ರಾಜ್ಯಪಾಲರು ನಾಲ್ಕು ಗಂಟೆಗಳ ಕಾಲ ಕಾರ್ಯಕ್ರಮ ವೀಕ್ಷಿಸಿದ್ದರು. ಆದರೂ ಅಲ್ಲಿ ಅಳವಡಿಸಲಾಗಿದ್ದ ಟಿವಿ ಪರದೆ ಮೇಲೆ ರಾಜ್ಯಪಾಲರನ್ನು ಒಮ್ಮೆಯೂ ತೋರಿಸಲಿಲ್ಲ ಎಂಬುದು ಇವರ ನೋವಿಗೆ ಕಾರಣವಾಗಿದೆ.

ಉತ್ಸವದಲ್ಲಿ ನನಗೆ ತುಂಬಾ ಅವಮಾನವಾಯಿತು. ಇದರಿಂದ ನಾನು ತುಂಬಾ ನೊಂದಿದ್ದೇನೆ. ಈ ಅವಮಾನ ಕೇವಲ ನನಗೊಬ್ಬನಿಗೆ ಮಾಡಿದ್ದಲ್ಲ, ಬದಲಿಗೆ ಇಡೀ ಪಶ್ಚಿಮಬಂಗಾಳ ಜನರಿಗೆ ಮಾಡಿದ ಅವಮಾನ. ಈ ರೀತಿಯ ಅವಮಾನವನ್ನು ಅವರು ಎಂದಿಗೂ ಕ್ಷಮಿಸುವುದಿಲ್ಲ. ನಾನು ಪಶ್ಚಿಮಬಂಗಾಳ ಜನರ ಸೇವಕ. ನನ್ನ ಸಾಂವಿಧಾನಿಕ ಕೆಲಸವನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ರಾಜ್ಯಪಾಲ ಧನ್ಕರ್ ಅವರು ಇಂದು ಸುದ್ದಿಗಾರರಿಗೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡುವಾಗ ಗದ್ಗದಿತ ಧ್ವನಿಯಲ್ಲೇ ಮಾತನಾಡಿದ ಅವರು, ನಾನು ಹಾನಿಯಾದ ನನ್ನ ಹೃದಯದಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿದರು.

ಇದನ್ನು ಓದಿ: ಸಮಾಜವನ್ನು ವಿಭಜಿಸಲು ಯತ್ನಿಸುತ್ತಿರುವ ಆರ್​ಎಸ್​ಎಸ್​ ಸಂಘಟನೆಯನ್ನು ನಿಷೇಧಿಸಬೇಕು; ಸಿಖ್ ಪ್ರಧಾನ ಅರ್ಚಕ ಒತ್ತಾಯ

ನಾಲ್ಕು ಗಂಟೆಗೂ ಹೆಚ್ಚು ಕಾಲ ನಾನು ಅಲ್ಲಿದ್ದೇನೆ. ರಾಜ್ಯದ ಪ್ರಥಮ ಪ್ರಜೆಯಾದ ನನಗೆ ವೇದಿಕೆಯ ಮೊದಲ ಸಾಲಿನಲ್ಲಿ ಕೂರಲು ಅವಕಾಶ ಮಾಡಿಕೊಡಲಿಲ್ಲ. ಟಿವಿಯಲ್ಲಿ ಒಂದು ಸೆಕೆಂಡ್​ ಕೂಡ ನನ್ನನ್ನು ತೋರಿಸಲಿಲ್ಲ. ನನಗೆ ಆದ ಅವಮಾನವನ್ನು ಬಂಗಾಳದ ಯಾವ ಪ್ರಜೆಯೂ ಮಾನ್ಯ ಮಾಡುವುದಿಲ್ಲ ಎಂದರು.

First published: