ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ಪಶ್ಚಿಮ ಬಂಗಾಳ ಸರ್ಕಾರ; ಒಡೆದು ಆಳುವ ಗುರಿಗೆ ಬೆಂಬಲವಿಲ್ಲ ಎಂದ ದೀದಿ

ಬಂಗಾಳಲದಲ್ಲಿ ನಾವು ಸಿಎಎ, ಎನ್​ಪಿಆರ್​ ಮತ್ತು ಎನ್​ಸಿಆರ್​ ಗೆ ಅವಕಾಶ ನೀಡುವುದಿಲ್ಲ, ಶಾಂತಿಯುತವಾಗಿ ನಾವು ಪ್ರತಿಭಟನೆ ಮಾಡುತ್ತೇವೆ. ಸಿಎಎ ಪ್ರಕಾರ ವಿದೇಶಿಗರು ಭಾರತೀಯರಾಗಿತ್ತಾರೆ. ಇದು ಭಯಾನಕ ಆಟ, ಜನರನ್ನು ಸಾವಿಗೆ ನೂಗುವಂತಹದ್ದು. ಇದರ ಜಾಲಕ್ಕೆ ಬೀಳಬೇಡಿ

Seema.R | news18-kannada
Updated:January 27, 2020, 6:23 PM IST
ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ಪಶ್ಚಿಮ ಬಂಗಾಳ ಸರ್ಕಾರ; ಒಡೆದು ಆಳುವ ಗುರಿಗೆ ಬೆಂಬಲವಿಲ್ಲ ಎಂದ ದೀದಿ
ಸಾಂದರ್ಭಿಕ ಚಿತ್ರ
  • Share this:
ಕೋಲ್ಕತ್ತಾ (ಜ.27): ದೇಶಾದ್ಯಾಂತ ಪ್ರತಿಭಟನೆಗೆ ಕಾರಣವಾಗಿದ್ದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ನಿರ್ಣಯ ಅಂಗೀಕರಿಸಿದೆ.

ಕೇರಳ, ಪಂಜಾಬ್​, ರಾಜಸ್ಥಾನದ ಬಳಿಕ ಸಿಎಎ ವಿರುದ್ಧ ನಿರ್ಣಯ ಕೈಗೊಂಡ ನಾಲ್ಕನೇ ರಾಜ್ಯ ಪಶ್ಚಿಮ ಬಂಗಾಳವಾಗಿದೆ. ವಿಧಾನಸಭೆಯಲ್ಲಿ ಒಮ್ಮತದ ಮೂಲಕ ನಿರ್ಣಯ ಅಂಗೀಕಾರವಾದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ಅಲ್ಪ ಸಂಖ್ಯಅತರಿಗೆ ಮಾತ್ರವಲ್ಲ. ಪ್ರತಿಭಟನೆ ಮುಂದಾಳತ್ವವಹಿಸಿದ ಹಿಂದೂ ಸ್ನೇಹಿತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂಧರು.

ಬಂಗಾಳದಲ್ಲಿ ನಾವು ಸಿಎಎ, ಎನ್​ಪಿಆರ್​ ಮತ್ತು ಎನ್​ಸಿಆರ್​ ಗೆ ಅವಕಾಶ ನೀಡುವುದಿಲ್ಲ, ಶಾಂತಿಯುತವಾಗಿ ನಾವು ಪ್ರತಿಭಟನೆ ಮಾಡುತ್ತೇವೆ. ಸಿಎಎ ಪ್ರಕಾರ ವಿದೇಶಿಗರು ಭಾರತೀಯರಾಗಿತ್ತಾರೆ. ಇದು ಭಯಾನಕ ಆಟ, ಜನರನ್ನು ಸಾವಿಗೆ ನೂಗುವಂತಹದ್ದು. ಇದರ ಜಾಲಕ್ಕೆ ಬೀಳಬೇಡಿ ಎಂದರು.

ಇನ್ನು ಈ ಅನುಮೋದನೆಗೆ ಕಾಂಗ್ರೆಸ್​ ಮತ್ತು ಎಡಪಂಥೀಯ ಪಕ್ಷಗಳು ಬೆಂಬಲ ನೀಡಿದವು.

ಇದನ್ನು ಓದಿ: ಕೇರಳ, ಪಂಜಾಬ್ ಬಳಿಕ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜಸ್ಥಾನ ಸರ್ಕಾರ

ಜನವರಿ 20 ರಂದು ರಾಜ್ಯ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ಅನುಮೋದನೆ ಮಂಡನೆ ಮಾಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದರು. ಸೋಮವಾರ ಅನುಮೋದನೆ ಮಂಡಿಸಿದ ಮಮತಾ ಬ್ಯಾನರ್ಜಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್​ ನಾಯಕರು ತಮ್ಮ ಸಂಕುಚಿತ ರಾಜಕಾರಣವನ್ನು ಬದುಗಿರಿಸಿ ಇದಕ್ಕೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದ್ದರು.
First published:January 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ