ನವದೆಹಲಿ: ದೇಶದ ಜನರ ಗಮನ ಸೆಳೆಯುವ ಮೂಲಕ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಪಂಚ ರಾಜ್ಯಗಳ ಚುನಾವಣೆಗಳು ಅಂತ್ಯಗೊಂಡಿದೆ. ಇಂದು ಪಶ್ಚಿಮ ಬಂಗಾಳದಲ್ಲಿ ಕಡೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಸಂಜೆ 7 ಗಂಟೆ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಪಂಚ ರಾಜ್ಯಗಳಾದ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ, ಕೇರಳದಲ್ಲಿ ಗೆಲುವಿನ ಲೆಕ್ಕಾಚಾರಗಳು ಶುರುವಾಗಲಿದೆ. ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಮತದಾನ ಮುಗಿದಿದ್ದು, ಇಂದು ಪಶ್ಚಿಮ ಬಂಗಾಳದಲ್ಲಿ ಮಾತ್ರ ಕಡೆಯ ಹಂತದ ಮತದಾನ ಮುಗಿದಿದ್ದು, ಎಲ್ಲರ ಹಣೆ ಬರೆಹ ಮೇ 2ರಂದು ಗೊತ್ತಾಗಲಿದೆ. ಅದಕ್ಕೂ ಮುನ್ನ ಹಲವು ಮಾಧ್ಯಮ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಪಶ್ಚಿಮಬಂಗಾಳದಲ್ಲಿ ದೀದಿ ವರ್ಸಸ್ ಮೋದಿ ಫೈಟ್ಗೆ ಸಾಕ್ಷಿಯಾಗಿತ್ತು. ಆಡಳಿತಾರೂಢ ಟಿಎಂಸಿಯನ್ನು ಅಧಿಕಾರದಿಂದ ಕಿತ್ತೆಸೆದು, ಬಿಜೆಪಿ ಅಧಿಪತ್ಯ ಸ್ಥಾಪನೆಗೆ ಭಾರೀ ಕಸರತ್ತು ನಡೆಸಿದರೆ, ಹಾಲಿ ಸಿಎಂ ಮಮತಾ ಬ್ಯಾನರ್ಜಿ ಅವರು ಕೇಸರಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವಲ್ಲಿ ಈ ಬಾರಿ ಮತ್ತೆ ಯಶಸ್ವಿಯಾಗಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
ಹೌದು, 294 ಸದಸ್ಯ ಬಲದ ಪಶ್ಚಿಮಬಂಗಾಳ ವಿಧಾನಸಭೆಗೆ ಒಟ್ಟು ಎಂಟು ಹಂತಗಳಲ್ಲಿ ಮತದಾನ ನಡೆದಿದೆ. ಮಾರ್ಚ್ 27ರಂದು ಮೊದಲ ಹಂತದ ಮತದಾನ ನಡೆದಿತ್ತು. ಇಂದು ಅಂದರೆ ಏಪ್ರಿಲ್ 29ರಂದು ಕೊನೆಯ ಹಂತದ ಮತದಾನ ನಡೆಯುವ ಮೂಲಕ ಚುನಾವಣೆ ಮುಕ್ತಾಯಗೊಂಡಿತು. ಈ ಬಾರಿಯ ಚುನಾವಣೆಯಲ್ಲಿ ಹಾಲಿ ಆಡಳಿತಾರೂಢ, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಸಮೀಕ್ಷಾ ಫಲಿತಾಂಶ ಹೀಗಿದೆ
ರಿಪಬ್ಲಿಕ್ ಸಿಎನ್ಎಕ್ಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ