Bomb Blast: ಬಿಜೆಪಿ ರ‍್ಯಾಲಿಯಲ್ಲಿ ಬಾಂಬ್ ಸ್ಫೋಟ; ಪಶ್ಚಿಮ ಬಂಗಾಳದಲ್ಲಿ ಏನಾಗ್ತಿದೆ?

ಈ ಮೆರವಣಿಗೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವ ಟಿಎಂಸಿ ನಾಯಕರನ್ನು ಬಂಧಿಸುವಂತೆ ಬಿಜೆಪಿ ಆಗ್ರಹಿಸಿತ್ತು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್‌ ಬೆಹಾರ್‌ನಲ್ಲಿ ಬಿಜೆಪಿ ನಡೆಸಿದ (BJP Rally In West Bengal) ಪ್ರತಿಭಟನಾ ರ‍್ಯಾಲಿಯಲ್ಲಿ ಹಲವಾರು ಕಚ್ಚಾ ನಿರ್ಮಿತ ಬಾಂಬ್‌ಗಳು ಸ್ಫೋಟಗೊಂಡಿದ್ದು, ಭಾರತೀಯ ಜನತಾ ಪಕ್ಷದ ಇಬ್ಬರು ಕಾರ್ಯಕರ್ತರು (BJP Workers Injured) ಗಾಯಗೊಂಡಿದ್ದಾರೆ. ಘಟನೆ ನಡೆದ ಕೂಡಲೇ ಟಿಎಂಸಿ ಕಾರ್ಯಕರ್ತರು (TMC Workers) ಬಾಂಬ್ ಎಸೆದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಕುಮಾರ್ ರಾಯ್ ಆರೋಪಿಸಿದ್ದಾರೆ. ಈ ಮೆರವಣಿಗೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವ ಟಿಎಂಸಿ ನಾಯಕರನ್ನು ಬಂಧಿಸುವಂತೆ ಬಿಜೆಪಿ ಆಗ್ರಹಿಸಿತ್ತು. 

  ಭಾನುವಾರ ಪಶ್ಚಿಮ ಬಂಗಾಳದ ಸಿತಾಲ್ಕುಚಿಯಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ರ‍್ಯಾಲಿಯಲ್ಲಿ ಬಾಂಬ್ ಸ್ಫೋಟದಿಂದ ಗಾಯಗೊಂಡ ಬಿಜೆಪಿ ಕಾರ್ಯಕರ್ತರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.

  ಇದನ್ನೂ ಓದಿ: Kohinoor Diamond: ಕೊಹಿನೂರ್ ವಜ್ರ ವಾಪಸ್ ಮಾಡಿ; ಭಾರತೀಯರ ಆಗ್ರಹ

  ನಮಗೂ ಬಾಂಬ್ ದಾಳಿಗೂ ಸಂಬಂಧವಿಲ್ಲ: ಟಿಎಂಸಿ ಸಂಸದ
  ಬಿಜೆಪಿ ನಾಯಕರ ಆರೋಪಗಳನ್ನು ತಳ್ಳಿಹಾಕಿದ ಟಿಎಂಸಿ ಸಂಸದ ಸಂತಾನು ಸೇನ್, ಬಿಜೆಪಿ  ರ‍್ಯಾಲಿಗಳಿಗೆ ಜನರು ಸೇರುತ್ತಿಲ್ಲ. ಬಿಜೆಪಿ ಕೇವಲ ಪ್ರಚಾರದಲ್ಲಿರಲು ಹಾಗೆ ಮಾಡುತ್ತಿದೆ ಎಂದು ಎಎನ್‌ಐಗೆ ತಿಳಿಸಿದ್ದಾರೆ.  ಬಿಜೆಪಿ  ರ‍್ಯಾಲಿ ಮೇಲೆ ಟಿಎಂಸಿ ದಾಳಿ ಮಾಡುವ ಅಗತ್ಯವಿಲ್ಲ. ಏಕೆಂದರೆ ಬಿಜೆಪಿ ಸ್ವಯಂ ವಿನಾಶಕಾರಿ ಪಕ್ಷವಾಗಿದೆ. ಟಿಎಂಸಿ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ. ನಮಗೂ ಈ ಬಾಂಬ್ ದಾಳಿಗೂ  ಯಾವುದೇ ಸಂಬಂಧವಿಲ್ಲ. ನಾವು ಯಾರನ್ನೂ ಪ್ರಚೋದಿಸುವುದಿಲ್ಲ ಆದರೆ ಬಿಜೆಪಿಯವರು ಜನರನ್ನು ಪ್ರಚೋದಿಸುತ್ತಾರೆ ಎಂದು ಅವರು ಆರೋಪ ಮಾಡಿದ್ದಾರೆ. 

  ಇತ್ತೀಚಿಗಷ್ಟೇ ತೃಣಮೂಲ ಕಾಂಗ್ರೆಸ್ ನಾಯಕನ ಬಂಧನವಾಗಿತ್ತು
  ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ ಅವರನ್ನು ಸಿಬಿಐ ಬಂಧಿಸಿದೆ. ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿರ್ಭುಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರಿಗೆ ಈಮುನ್ನ ಕೇಂದ್ರ ತನಿಖಾ ದಳ (ಸಿಬಿಐ) ಸಮನ್ಸ್ ನೀಡಿತ್ತು.

  ಇದನ್ನೂ ಓದಿ: HDK with KCR: ತೆಲಂಗಾಣ ಸಿಎಂ ಜೊತೆ ಕೈ ಜೋಡಿಸ್ತಾರಾ ಕರ್ನಾಟಕ ಮಾಜಿ ಸಿಎಂ? ಎಚ್‌ಡಿಕೆ-ಕೆಸಿಆರ್‌ 3 ಗಂಟೆ ಚರ್ಚಿಸಿದ್ದೇನು?

  ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಡೆಯುತ್ತಿರುವ ಬಹುಕೋಟಿ ಜಾನುವಾರು ಕಳ್ಳಸಾಗಣೆ ದಂಧೆಯಲ್ಲಿ ಸಿಬಿಐ ತನ್ನ ತನಿಖೆಯ ಭಾಗವಾಗಿ ಮೊಂಡಲ್ ಅವರನ್ನು ಎರಡು ಬಾರಿ ಪ್ರಶ್ನಿಸಿತ್ತು. 2020 ರಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿದ ನಂತರ ಮೊಂಡಲ್ ಅವರ ಹೆಸರು ಜಾನುವಾರು ಕಳ್ಳಸಾಗಣೆ ಹಗರಣದ ಪ್ರಕರಣದಲ್ಲಿ ಉಲ್ಲೇಖವಾಗಿತ್ತು.
  Published by:ಗುರುಗಣೇಶ ಡಬ್ಗುಳಿ
  First published: