HOME » NEWS » National-international » WEST BENGAL CM MAMATA BANERJEE STANDS IN QUEUE TO COLLECT SWASTHYA SATHI CARD RHHSN

ಜನ ಸಾಮಾನ್ಯರ ಜೊತೆ ಸಾಲಿನಲ್ಲಿ ನಿಂತು ಸ್ವಸ್ಥ್ಯ ಸಾಥಿ ಕಾರ್ಡ್ ಪಡೆದ ಸಿಎಂ ಮಮತಾ ಬ್ಯಾನರ್ಜಿ

ಸ್ವಸ್ಥ್ಯ ಸಾಥಿ ಎಂಬುದು ಟಿಎಂಸಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮುಂಚೂಣಿ ಕಾರ್ಯಕ್ರಮವಾಗಿದ್ದು, ಫಲಾನುಭವಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷದವರೆಗಿನ ವೆಚ್ಚದ ವೈದ್ಯಕೀಯ ಸೌಲಭ್ಯದ ಭರವಸೆ ನೀಡಲಿದೆ.

news18-kannada
Updated:January 5, 2021, 2:40 PM IST
ಜನ ಸಾಮಾನ್ಯರ ಜೊತೆ ಸಾಲಿನಲ್ಲಿ ನಿಂತು ಸ್ವಸ್ಥ್ಯ ಸಾಥಿ ಕಾರ್ಡ್ ಪಡೆದ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
  • Share this:
ಕೋಲ್ಕತ್ತ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಇಲ್ಲಿನ ಕಾಳಿಘಾಟ್ ಪ್ರದೇಶದಲ್ಲಿ ಸ್ಥಳೀಯ ಪಾಲಿಕೆ ಕೇಂದ್ರದ ಬಳಿ ಸಾಮಾನ್ಯ ಜನರ ಜೊತೆಗೆ ಸಾಲಿನಲ್ಲಿ ನಿಂತು ಸ್ವಸ್ಥ್ಯ ಸಾಥಿ ಯೋಜನೆಯ ಸ್ಮಾರ್ಟ್ ಕಾರ್ಡ್​ ಪಡೆದರು. ಅಷ್ಟೇ ಅಲ್ಲದೇ ರಾಜ್ಯದ ಎಲ್ಲ ಸಚಿವರು ಸಹ ಸ್ವಸ್ಥ್ಯ ಕಾರ್ಡ್ ಪಡೆಯಬೇಕು ಎಂದು ಬ್ಯಾನರ್ಜಿ ಅವರು ಹೇಳಿದ್ದಾರೆ.

ಟಿಎಂಸಿ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ನಗರಾಭಿವೃದ್ಧಿ ಖಾತೆ ಸಚಿವ ಫಿರಾದ್ ಹಕೀಂ ಮತ್ತು ಇತರೆ ಸರ್ಕಾರಿ ಅಧಿಕಾರಿಗಳ ಜೊತೆಗೂಡಿ ಕೇಂದ್ರದ ಜೈ ಹಿಂದ್ ಭವನಕ್ಕೆ ಬಂದು ಬೆಳಗ್ಗೆ 11.45ಕ್ಕೆ ಕಾರ್ಡ್ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಹಕೀಂ ಅವರು, ಮುಖ್ಯಮಂತ್ರಿ ಅವರು ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಕಾರ್ಡ್ ಪಡೆದಿದ್ದಾರೆ. ಅವರೂ ಕೂಡ ಇತರೆ ನಾಗರಿಕರಂತೆ ಒಬ್ಬರು ಎಂಬುದನ್ನು ಇದು ಬಿಂಬಿಸುತ್ತದೆ ಎಂದು ಹೇಳಿದರು.

ಇದನ್ನು ಓದಿ: ಕೊರೋನಾ ಲಸಿಕೆಯ ನಡುವೆ ಕುಸಿಯುತ್ತಿರುವ ದೇಶದ ಆರ್ಥಿಕತೆ ಬಗ್ಗೆಯೂ ಗಮನವಿರಲಿ; ಸುಬ್ರಮಣ್ಯಂ ಸ್ವಾಮಿ

ಸ್ವಸ್ಥ್ಯ ಸಾಥಿ ಎಂಬುದು ಟಿಎಂಸಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮುಂಚೂಣಿ ಕಾರ್ಯಕ್ರಮವಾಗಿದ್ದು, ಫಲಾನುಭವಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷದವರೆಗಿನ ವೆಚ್ಚದ ವೈದ್ಯಕೀಯ ಸೌಲಭ್ಯದ ಭರವಸೆ ನೀಡಲಿದೆ.
Youtube Video

ಮುಖ್ಯಮಂತ್ರಿ ಅವರ ಈ ನಡೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಇದೊಂದು ಶುದ್ಧ ನಾಟಕ ಎಂದು ಟೀಕಿಸಿದ್ದಾರೆ.
Published by: HR Ramesh
First published: January 5, 2021, 2:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories