Mamata Banerjee: ಆರ್​ಎಸ್​ಎಸ್​ ಹೊಗಳಿದ ಮಮತಾ ಬ್ಯಾನರ್ಜಿ; ಸಂಘದ ನಾಯಕರನ್ನು ಸೆಳೆಯುವ ಯತ್ನವೇ?

ಮಮತಾ ಬ್ಯಾನರ್ಜಿ ಗುರುವಾರ 2003 ರಲ್ಲಿಯೂ  ಆರ್‌ಎಸ್‌ಎಸ್ ಅನ್ನು 'ದೇಶಭಕ್ತರು' ಎಂದು ಕರೆದಿದ್ದರು. ಪ್ರತಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಮತಾ ಬ್ಯಾನರ್ಜಿ ಅವರನ್ನು ದುರ್ಗಾ ಎಂದು ಕರೆದಿತ್ತು ಎಂದು ಓವೈಸಿ ಹಳೆ ಘಟನೆ ಮೆಲುಕು ಹಾಕಿ ಟೀಕೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೋಲ್ಕತ್ತಾ:  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಶ್ಲಾಘಿಸಿದ್ದಾರೆ. ಹೌದು, ಆರೆಸ್ಸೆಸ್‌ನಲ್ಲಿರುವವರೆಲ್ಲರೂ ಕೆಟ್ಟವರಲ್ಲ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಬಿಜೆಪಿಯನ್ನು ಬೆಂಬಲಿಸದ ಅನೇಕರು ಇದ್ದಾರೆ ಎಂದು ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (West Bengal CM Mamata Banerjee) ಅವರು ಬುಧವಾರ ಹೇಳಿದ್ದು ಸಂಚಲನ ಮೂಡಿಸಿದ್ದಾರೆ. ಆದರೆ ಬಿಜೆಪಿಯ (BJP) ಮಮತಾ ಬ್ಯಾನರ್ಜಿ ಅವರ ಪ್ರಮಾಣಪತ್ರಗಳ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ರಾಜಕೀಯದಲ್ಲಿ ತೀವ್ರ ಬಿರುಗಾಳಿಯನ್ನೇ ಎಬ್ಬಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.

  ಹೈದರಾಬಾದ್ ಮೂಲದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರ್​ಎಸ್​ಎಸ್​ ಕುರಿತ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಗುರುವಾರ 2003 ರಲ್ಲಿಯೂ  ಆರ್‌ಎಸ್‌ಎಸ್ ಅನ್ನು 'ದೇಶಭಕ್ತರು' ಎಂದು ಕರೆದಿದ್ದರು. ಪ್ರತಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಮತಾ ಬ್ಯಾನರ್ಜಿ ಅವರನ್ನು ದುರ್ಗಾ ಎಂದು ಕರೆದಿತ್ತು ಎಂದು ಓವೈಸಿ ಹಳೆ ಘಟನೆ ಮೆಲುಕು ಹಾಕಿ ಟೀಕೆ ನಡೆಸಿದ್ದಾರೆ. ಸದ್ಯ ಮಮತಾ ಬ್ಯಾನರ್ಜಿ ಆರ್​ಎಸ್​ಎಸ್​ ಅನ್ನು ಹೊಗಳಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

  ದುರ್ಗಾ ಪೂಜೆಯ ಸಂಭ್ರಮಕ್ಕೆ ಯುನೆಸ್ಕೋ ಪುರಸ್ಕಾರ
  ಪಶ್ಚಿಮ ಬಂಗಾಳದಲ್ಲಿ ನಡೆಸುವ ದುರ್ಗಾ ಪೂಜೆ ಯುನೆಸ್ಕೋದ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿದೆ. ಈ ಸಂದರ್ಭವನ್ನು ಗುರುತಿಸಲು ಗುರುವಾರ ಮಧ್ಯಾಹ್ನ 2 ಗಂಟೆಗೆ ಐಕಾನಿಕ್ ಜೊರಾಸಂಕೊ ಠಾಕೂರ್ಬರಿಯಿಂದ ರೆಡ್ ರೋಡ್‌ವರೆಗೆ ಕನಿಷ್ಠ ಏಳು ವಾರ್ಡ್‌ಗಳನ್ನು ಒಳಗೊಂಡ ಬೃಹತ್ ರ್ಯಾಲಿಯನ್ನು ನಡೆಸಲಾಗಿದೆ. ಕಾರ್ನೀವಲ್‌ಗೆ ಸೂಕ್ತವಾದ ತಾಣವಾಗಿ ರೂಪಾಂತರಗೊಂಡಿರುವ ಕೋಲ್ಕತ್ತಾದ ಅತ್ಯಂತ ಜನನಿಬಿಡ ರಸ್ತೆಯು ಈಗ ದೊಡ್ಡ ವೇದಿಕೆಗಳು, ದುರ್ಗಾ ವಿಗ್ರಹ ಮತ್ತು ಪೋಸ್ಟರ್‌ಗಳೊಂದಿಗೆ ಹಬ್ಬವೇ ನಿರ್ಮಾಣವಾಗಿದೆ.

  ಯುನೆಸ್ಕೋಗೆ ಧನ್ಯವಾದ ಅರ್ಪಿಸಿದ ದೀದಿ
  ದುರ್ಗಾ ಪೂಜೆಯನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಗುರುತಿಸಿದ್ದಕ್ಕಾಗಿ ಮತ್ತು ಭಾಗವಹಿಸುವ ಪ್ರತಿಯೊಬ್ಬರ ಪ್ರೀತಿಯ ಶ್ರಮವನ್ನು ಗೌರವಿಸಿದ್ದಕ್ಕಾಗಿ ನಾನು UNESCO ಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧನ್ಯವಾದ ಅರ್ಪಿಸಿದ್ದಾರೆ.

  ಇದನ್ನೂ ಓದಿ: Arvind Kejriwal: ಅಗ್ನಿಪರೀಕ್ಷೆ ಗೆದ್ದ ಅರವಿಂದ; 62 ರಲ್ಲಿ 58 ಶಾಸಕರ ಮತ ಕೇಜ್ರಿವಾಲ್​ಗೆ

  ಇಂದು, ನಾವು ದುರ್ಗಾ ಪೂಜೆಯನ್ನು ಆಚರಿಸುವ ರ್ಯಾಲಿಯನ್ನು ಆಯೋಜಿಸಿದ್ದೇವೆ.  ಪ್ರಪಂಚದಾದ್ಯಂತ ಜನರನ್ನು ಒಂದುಗೂಡಿಸುವ ಹಬ್ಬ ಇದಾಗಿದೆ. ನಮ್ಮ ಜಾತಿ, ಮತ, ಧರ್ಮ, ಇತಿಹಾಸ ಅಥವಾ ಸಂಸ್ಕೃತಿಯ ಹೊರತಾಗಿ ಆಚರಣೆಯಲ್ಲಿ, ನಾವು ಒಗ್ಗಟ್ಟಿನಿಂದ ಇರುತ್ತೇವೆ. ಈ ಏಕತೆ, ಮಾನವೀಯತೆ ಮತ್ತು ಸಾಮರಸ್ಯದ ಮನೋಭಾವಕ್ಕೆ ನಾನು ನಮಸ್ಕರಿಸುತ್ತೇನೆ! ಎಂದು ಅವರು ತಿಳಿಸಿದ್ದಾರೆ.

  ಇದನ್ನೂ ಓದಿ: Ratan Tata vs Radia Tapes: ರತನ್ ಟಾಟಾ vs ನೀರಾ ರಾಡಿಯಾ; ಸುಪ್ರೀಂಕೋರ್ಟ್​ನಲ್ಲಿ ಏನಿದು ಪ್ರಕರಣ?

  ಬಂಗಾಳದ ಜನರಿಗೆ ದುರ್ಗಾ ಪೂಜೆ ಬರೀ ಹಬ್ಬವಲ್ಲ
  ಬಂಗಾಳದ ಜನರಿಗೆ, ದುರ್ಗಾ ಪೂಜೆ ಕೇವಲ ಹಬ್ಬವಲ್ಲ, ಅದು ಒಂದು ಭಾವನೆ. ನಾವು ದುರ್ಗಾ ಮಾತೆಯನ್ನು ನಮ್ಮ ಹೃದಯಕ್ಕೆ ನೇರವಾಗಿ ಸ್ವಾಗತಿಸುತ್ತೇವೆ ಮತ್ತು ಅವಳನ್ನು ಅತ್ಯಂತ ಪ್ರೀತಿ ಮತ್ತು ಪ್ರಾಮಾಣಿಕತೆಯಿಂದ ಪೂಜಿಸುತ್ತೇವೆ. ಈ ದಿನವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು! ನಿಮ್ಮ ಕೊಡುಗೆಯನ್ನು ಎಲ್ಲರೂ ಮೆಚ್ಚುತ್ತಾರೆ. ಪೂಜಾ ಸಮಿತಿಗಳ ಸದಸ್ಯರಿಂದ ಹಿಡಿದು ನಮ್ಮ ಪ್ರೀತಿಯ ರಾಜ್ಯದ ಮತ್ತು ಪ್ರಪಂಚದ ಜನರವರೆಗೆ, ನಿಮ್ಮ ಭಾಗವಹಿಸುವಿಕೆ ಬಹಳಷ್ಟು ಅರ್ಥವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧನ್ಯವಾದ ಅರ್ಪಿಸಿದ್ದಾರೆ.
  Published by:guruganesh bhat
  First published: