ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (Trinamool Congress) ಕಾರ್ಯಕರ್ತರ ದಾಳಿ ನಡೆಸಿರುವ ಆರೋಪದ ಹಿನ್ನೆಲೆ ಭಾರತೀಯ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ( Indian Secular Front ) ಕಾರ್ಯಕರ್ತರು ಹಾಗೂ ಕೋಲ್ಕತ್ತಾ ಪೊಲೀಸರ (Kolkata police) ನಡುವೆ ಪಶ್ಚಿಮ ಬಂಗಾಳದ (West Bengal) ಎಸ್ಪ್ಲೇನೇಡ್ ಪ್ರದೇಶದಲ್ಲಿ (Esplanade Area) ಸಂಘರ್ಷ ನಡೆದಿದೆ. ಪ್ರತಿಭಟನೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಐಎಸ್ಎಫ್ (ISF) ಶಾಸಕ ನೌಶಾದ್ ಸಿದ್ದಿಕ್ ಅವರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಘಟನೆ ವೇಳೆ ಹಲವಾರು ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.
#WATCH | Clash broke out between ISF (Indian Secular Front) activists and Kolkata police at the Esplanade area of Kolkata, West Bengal pic.twitter.com/GbLDjk0ZLF
— ANI (@ANI) January 21, 2023
ಜವಾಹರಲಾಲ್ ನೆಹರು ರಸ್ತೆ ತಡೆದು ISF ಕಾರ್ಯಕರ್ತರ ಪ್ರತಿಭಟನೆ
ಜವಾಹರಲಾಲ್ ನೆಹರು ರಸ್ತೆಯನ್ನು ತಡೆದು ISF ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿದ್ದರಿಂದ ರಸ್ತೆ ತೆರವುಗೊಳಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಈ ವೇಳೆ ದಾರಿ ಬಿಡಲು ಪ್ರತಿಭಟನಾಕಾರರು ನಿರಾಕರಿಸಿದ್ದಾರೆ. ಅಲ್ಲದೇ ಭಾಂಗಾರ್ನಲ್ಲಿ ಕಾರ್ಯಕರ್ತರ ಮೇಲಿನ ದಾಳಿ ನಡೆಸಿದವರನ್ನು ಬಂಧಿಸುವಂತೆ ಒತ್ತಾಯಿಸಿದರು ಈ ವೇಳೆ ಘಟನೆ ಸಂಭವಿಸಿದೆ ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಪ್ರತಿಭಟನೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಪೋಲೀಸರ ಗಾರ್ಡ್ರೇಲ್ಗಳನ್ನು ಹಾನಿಗೊಳಿಸಿದ್ದಾರೆ ಮತ್ತು ಹಲವಾರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿದರು ಮತ್ತು ಗುಂಪನ್ನು ಚದುರಿಲಸಲು ಲಾಠಿ ಪ್ರಹಾರ ನಡೆಸಲಾಯಿತು.
ಸೂಕ್ಷ್ಮಾಣು ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್
ಇದೀಗ ತರಲು ಆರ್ಎಎಫ್ ಮತ್ತು ಶಸ್ತ್ರಸಜ್ಜಿತ ಪೊಲೀಸರನ್ನು ಒಳಗೊಂಡ ಪ್ರಬಲ ಪೊಲೀಸ್ ಪಡೆಯನ್ನು ಪ್ರದೇಶದಲ್ಲಿ ಸೂಕ್ಷ್ಮಾಣು ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಒಂದು ಗಂಟೆಯ ಬಳಿಕ ಜವಾಹರಲಾಲ್ ನೆಹರು ರಸ್ತೆಯನ್ನು ತೆರವುಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಹೀಗಿದ್ದರೂ ಕೆಲ ಹೊತ್ತು ಕಲ್ಲು ತೂರಾಟ ಮುಂದುವರೆದಿತ್ತು ಎಂದು ಹೇಳಿದ್ದಾರೆ.
ಕೊನೆಗೂ ರಸ್ತೆ ತೆರವುಗೊಳಿಸುವಲ್ಲಿ ಪೊಲೀಸರು ಯಶಸ್ವಿ
ಒಂದು ಗಂಟೆಯ ನಂತರ, ಪೊಲೀಸರು ಜವಾಹರಲಾಲ್ ನೆಹರು ರಸ್ತೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು ಮತ್ತು ಪ್ರತಿಭಟನಾಕಾರರನ್ನು ಓಡಿಸಿದರು ಆದರೆ ಪಿಟಿಐ ವರದಿಗಳ ಪ್ರಕಾರ ಕಲ್ಲು ತೂರಾಟದ ದಾರಿತಪ್ಪಿ ಘಟನೆಗಳು ಸ್ವಲ್ಪ ಸಮಯದವರೆಗೆ ಮುಂದುವರೆದವು.
ಒಂದು ದಿನದ ಹಿಂದೆಯಷ್ಟೇ ಭಾಂಗಾರ್ನಲ್ಲಿ ISF ಪಕ್ಷದ ಕಚೇರಿಗಳನ್ನು ಟಿಎಂಸಿ ಕಾರ್ಯಕರ್ತರು ಸುಟ್ಟು ಹಾಕಿದ್ದರು. ಕಳೆದ ಕೆಲವು ದಿನಗಳಿಂದ ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ಈ ದಾಳಿಯಿಂದ ಐಎಸ್ಎಫ್ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಹದಗೆಟ್ಟಿದೆ ಎಂದು ಪಕ್ಷ ಆರೋಪಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ