HOME » NEWS » National-international » WEST BENGAL CHIEF MINISTER MAMATA BANERJEE ATTACKS ON MODI ANDT AMITH SHAH SESR

ಅವರು ಗಡ್ಡ ಮಾತ್ರ ಬೆಳೆಸುತ್ತಿದ್ದಾರೆ; ಪ್ರಧಾನಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಅವರು ಕ್ರೀಡಾಂಗಣಗಳಿಗೆ ತಮ್ಮ ಹೆಸರನ್ನು ಮರು ನಾಮಕರಣ ಮಾಡಿಕೊಳ್ಳುತ್ತಿದ್ದಾರೆ. ಒಂದು ದಿನ ದೇಶವನ್ನೂ ಮಾರಿ ತಮ್ಮ ಹೆಸರನ್ನು ಇಡುತ್ತಾರೆ

news18-kannada
Updated:March 26, 2021, 7:30 PM IST
ಅವರು ಗಡ್ಡ ಮಾತ್ರ ಬೆಳೆಸುತ್ತಿದ್ದಾರೆ; ಪ್ರಧಾನಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
ಮಮತಾ ಬ್ಯಾನರ್ಜಿ.
  • Share this:
ಕೋಲ್ಕತ್ತಾ (ಮಾ. 26): ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ದಿನಗಣನೆ ಶುರುವಾಗಿದ್ದು, ಮತದಾರರ ಸೆಳೆಯುತ್ತಿರುವ ನಾಯಕರ ಪ್ರಚಾರ ತಾರಕಕ್ಕೆರಿದೆ. ಇದೇ ವೇಳೆ ಬಿಜೆಪಿ ಮತ್ತು ಟಿಎಂಸಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇಂದು ಪ್ರಚಆರ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಶಾ ವಿರುದ್ಧ ಹರಿಹಾಯ್ದಿದ್ದಾರೆ. ಟಿಎಂಸಿ ಕಮಿಷನ್​ ಸರ್ಕಾರ ಎಂಬ ಆರೋಪಕ್ಕೆ ತಿರುಗೇಟು ನೀಡಿದ ದೀದಿ, ಒಬ್ಬರು ದೆಹಲಿ ಮತ್ತು ಗುಜರಾತ್​ಗಳಲ್ಲಿ ಗಲಭೆಗೆ ಕಾರಣವಾಗುತ್ತಿದ್ದರೆ, ಮತ್ತೊಬ್ಬರು ಕೈಗಾರಿಕಾ ಬೆಳವಣಿಗೆಯನ್ನು ನಿಧಾನಗೊಳಿಸಿ, ತಮ್ಮ ಗಡ್ಡವನ್ನು ಮಾತ್ರ ಬೆಳೆಸಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ತಾವು ಗಾಂಧಿಜೀ, ರವೀಂದ್ರನಾಥ್​ ಟ್ಯಾಗೋರ್​ಗಿಂದ ಮೇಲೆ ಎಂದು ಭಾವಿಸುತ್ತಾರೆ. ಕೆಲವೊಮ್ಮೆ ತಮ್ಮನ್ನು ಸ್ವಾಮಿ ವಿವೇಕಾನಂದ ಎಂದು ಕರೆದುಕೊಳ್ಳುತ್ತಾರೆ ಎಂದು ಕುಟುಕಿದರು.

ಅವರು ಕ್ರೀಡಾಂಗಣಗಳಿಗೆ ತಮ್ಮ ಹೆಸರನ್ನು ಮರು ನಾಮಕರಣ ಮಾಡಿಕೊಳ್ಳುತ್ತಿದ್ದಾರೆ. ಒಂದು ದಿನ ದೇಶವನ್ನೂ ಮಾರಿ ತಮ್ಮ ಹೆಸರನ್ನು ಇಡುತ್ತಾರೆ. ಅವರ ತಲೆಯಲ್ಲಿ ಏನೋ ತಪ್ಪಾದಂತೆ ಇದೆ. ಬಹುಶಃ ಸ್ಕ್ರೂ ಲೂಸ್​ ಆದಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು

ಕ್ರೀಡಾಂಗಣಕ್ಕೆ ತಮ್ಮ ಹೆಸರನ್ನು ಇಡುತ್ತಾರೆ. ತಮ್ಮ ಛಾಯಚಿತ್ರವನ್ನು ಕೋವಿಡ್​ ಲಸಿಕಾ ಪತ್ರದಲ್ಲಿ ಹಾಕುತ್ತಾರೆ. ಇಸ್ರೋ ಅವರ ಚಿತ್ರವನ್ನು ಬಾಹ್ಯಾಕಾಶಕ್ಕೆ ಕಳುಹಿಸುವಂತೆ ಮಾಡುತ್ತಾರೆ. ದೇಶವನ್ನೇ ಮಾರಿ ಅದಕ್ಕೂ ತಮ್ಮ ಹೆಸರಿಡುವ ದಿನ ಬರುತ್ತದೆ ಎಂದು ದೀದಿ ಟೀಕಿಸಿದರು.

ಇದನ್ನು ಓದಿ: ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಜೈಲಿಗೆ ಹೋಗಿದ್ದೆ; ಪ್ರಧಾನಿ ಮೋದಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಎಂಸಿ ನೇರ ಹಣಾಹಣಿ ನಡೆಸುತ್ತಿದ್ದು, ಎರಡು ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಈಗಾಗಲೇ ಅನೇಕ ಟಿಎಂಸಿ ನಾಯಕರು ಬಿಜೆಪಿ ಸೇರುವ ಮೂಲಕ ದೀದಿಗೆ ಶಾಕ್​ ನೀಡಿದ್ದಾರೆ.

ಪುರುಲಿಯಾದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ  ಮಾತನಾಡಿದ್ದ  ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್​ ಘೋಷ್ದೀದಿ ಸೀರೆಯಲ್ಲಿ ಕಾಲನ್ನು ತೋರಿಸುವ ಮೂಲಕ ಬಂಗಾಳದ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರು ಸೀರೆ ಧರಿಸುತ್ತಾರೆ. ಸೀರೆ ಸಭ್ಯತೆಯ ಸಂಕೇತವಾಗಿದೆ. ಆದರೆ, ಸೀರೆ ಧರಿಸಿದಾಗ ಉದ್ದೇಶಪೂರ್ವಕವಾಗಿ ಅವರು ತಮ್ಮ ಕಾಲುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೋರಿಸುವುದು ಸರಿಯಲ್ಲ. ಮಹಿಳೆಯರು ಕೂಡ ಇದನ್ನು ಇಷ್ಟಪಡುವುದಿಲ್ಲ. ಇದು ಬಂಗಾಳದ ಸಂಸ್ಕೃತಿಯಲ್ಲ. ಇದನ್ನು ನಾನು ಪ್ರಶ್ನಿಸುತ್ತೇನೆ ಎಂದಿದ್ದಾರೆ. ಬಂಗಾಳದ ಸಂಸ್ಕೃತಿ ಬಗ್ಗೆ ಸಾಕಷ್ಟು ಮಾತನಾಡುವ ಸಿಎಂ ಅವರಿಂದ ಇಂತಹ ವರ್ತನೆ ನಿರೀಕ್ಷಿಸರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದರು
Published by: Seema R
First published: March 26, 2021, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories