ಕೊಲ್ಕತ್ತಾ: ಎಎಸ್ಸಿ ಹಗರಣದಿಂದ (School Service Commission Scam) ಆಡಳಿತಾರೂಢ ಟಿಎಂಸಿ (TMC) ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಮಮತಾ ಬ್ಯಾನರ್ಜಿ (CM Mamata Banerjee) ಸಂಪುಟದಲ್ಲಿ ಸಚಿವರಾಗಿದ್ದ ಪಾರ್ಥ ಚಟರ್ಜಿ (Partha Chatterjee) ಅವರು ಬಂಧನಕ್ಕೊಳಗಾಗಿದ್ದು, ಅವರನ್ನು ಸಚಿವ ಸ್ಥಾನದಿಂದಲೂ ವಜಾ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಆಗಿರುವ ಡ್ಯಾಮೇಜ್ ಅನ್ನು ಕಂಟ್ರೋಲ್ ಮಾಡಲು ದೀದಿ ಮುಂದಾಗಿದ್ದಾರೆ. ಪಾರ್ಥ ಚಟರ್ಜಿಯಿಂದ ತೆರವಾಗಿರುವ ಸಚಿವ ಸ್ಥಾನ ತುಂಬವ ಜೊತೆಗೆ, ಸಂಪುಟ ಪುನಾರಚನೆಗೂ (West Bengal Cabinet Reshuffle) ಬಂಗಾಳ ಸಿಎಂ ಮುಂದಾಗಿದ್ದಾರೆ. ಆಗಸ್ಟ್ 3ರಂದು ರಾಜ್ಯ ಸಚಿವ ಸಂಪುಟ ಪುನಾರಚನೆ ನಡೆಯಲಿದ್ದು, ಸುಮಾರು 4 ರಿಂದ 5 ಹೊಸ ಮುಖಗಳನ್ನು ಪರಿಚಯಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಇಡೀ ಸಚಿವಾಲಯವನ್ನು ಪುನರ್ರಚಿಸಲಾಗುವುದು ಎಂಬ ವರದಿಗಳನ್ನು ಅವರು ನಿರಾಕರಿಸಿದರು. ಅವರಲ್ಲಿ ಹಲವರು ಬಹಳಷ್ಟು ಬರೆಯುತ್ತಿದ್ದಾರೆ. ಇಡೀ ಸಚಿವಾಲಯವನ್ನು ವಿಸರ್ಜಿಸಿ ಹೊಸದನ್ನು ರಚಿಸುವ ಯೋಜನೆ ನಮಗಿಲ್ಲ. ಆದರೆ ಸಂಪುಟ ಪುನರ್ರಚನೆ ನಡೆಯಲಿದೆ ಎಂದು ದೀದಿ ಹೇಳಿದರು.
ಒಬ್ಬಂಟಿಯಾಗಿ ನಿಭಾಯಿಸಲು ಸಾಧ್ಯವಿಲ್ಲ
ಎಸ್‌ಎಸ್‌ಸಿ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಕಾರಣ ಸಚಿವ ಪಾರ್ಥ ಚಟರ್ಜಿ ಅವರನ್ನು ಪಶ್ಚಿಮ ಬಂಗಾಳದ ಕ್ಯಾಬಿನೆಟ್‌ನಲ್ಲಿನ ಎಲ್ಲಾ ಸಚಿವ ಹುದ್ದೆಗಳಿಂದ ಬಿಡುಗಡೆ ಮಾಡಿದ ಕೂಡಲೇ ಅವರ ಪ್ರಕಟಣೆ ಹೊರಬಿದ್ದಿದೆ. ನಾವು ಸಚಿವರಾದ ಸುಬ್ರತಾ ಮುಖರ್ಜಿ, ಸಾಧನ್ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಪಾರ್ಥ ಜೈಲಿನಲ್ಲಿದ್ದಾರೆ ಆದ್ದರಿಂದ ಅವರ ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ. ನಾನು ಒಬ್ಬಂಟಿಯಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಮಮತಾ ಇಂದು ಹೇಳಿದರು.
ಇದನ್ನೂ ಓದಿ: Arpita Mukherjee: ನಟಿ ಅರ್ಪಿತಾ ಮನೆಯಲ್ಲಿ ದುಬಾರಿ ಕಾರು! ಇವೆಲ್ಲವೂ ಪಾರ್ಥ ಚಟರ್ಜಿ ಕೊಟ್ಟ ಗಿಫ್ಟ್ ಅಂತೆ!
ಹಗರಣಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ
ಟಿಎಂಸಿ ನಾಯಕತ್ವವು ಪಾರ್ಥ ಚಟರ್ಜಿಯವರ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳಲಿದೆ, ಅವರ ಭವಿಷ್ಯಕ್ಕೆ ಚಟರ್ಜಿ ಅವರೇ ಜವಾಬ್ದಾರರು ಎಂದು ದೀದಿ ಖಡಕ್ ಹೇಳಿಕೆ ನೀಡಿದರು. ಅವರ ಬಂಧನದ ನಂತರ ಕಳೆದ ಕೆಲವು ದಿನಗಳಿಂದ ಅವರು ಏಕೆ ಮೌನವಾಗಿದ್ದರು? ನ್ಯಾಯಾಲಯವನ್ನು ಸಂಪರ್ಕಿಸಲು ಮತ್ತು ಅವರು ನಿರಪರಾಧಿ ಎಂದು ಸಾಬೀತುಪಡಿಸಲು ಅವರಿಗೆ ಎಲ್ಲ ಹಕ್ಕಿದೆ. ಈ ಹಗರಣಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೇಳಿಕೆಗಳ ಬಗ್ಗೆ ನಾವು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹೇಳಿದರು.
ಇದನ್ನೂ ಓದಿ: SSC Scam: ನಂದಲ್ಲ, ನಂದಲ್ಲ, ನಂದಲ್ಲ! ಇಡಿ ಆರೋಪ ನಿರಾಕರಿಸಿದ ಸಚಿವ ಪಾರ್ಥ ಚಟರ್ಜಿ
ಇಡಿ ವಶಪಡಿಸಿಕೊಂಡಿರುವ ಹಣ ನಂದಲ್ಲ..
ಬಹುಕೋಟಿ ಶಾಲಾ ಉದ್ಯೋಗ ಹಗರಣದ ಕೇಂದ್ರಬಿಂದುವಾಗಿರುವ ಬಂಧಿತ ಪಾರ್ಥ ಚಟರ್ಜಿ, ಜಾರಿ ನಿರ್ದೇಶನಾಲಯ (ಇಡಿ) ದಾಳಿಯಲ್ಲಿ ವಶಪಡಿಸಿಕೊಂಡ ಹಣವು ತನಗೆ ಸೇರಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಯಾರು ನನ್ನ ವಿರುದ್ಧ "ಪಿತೂರಿ" ಮಾಡಿದ್ದಾರೆ ಎಂಬುದನ್ನು ಸಮಯವೇ ಹೇಳುತ್ತದೆ ಎಂದರು. ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಯಿತು. ಈ ಸಮಯದಲ್ಲಿ ಚಟರ್ಜಿಯವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಇಡಿ ವಶಪಡಿಸಿಕೊಂಡಿರುವ ಹಣ ನನ್ನದಲ್ಲ ಎಂದು ಹೇಳಿದರು. ನಿಮ್ಮ ವಿರುದ್ಧ ಯಾರಾದರೂ ಪಿತೂರಿ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದಾಗ, "ಸಮಯ ಬಂದಾಗ ನಿಮಗೆ ತಿಳಿಯುತ್ತದೆ" ಎಂದು ಹೇಳಿದರು. ನಂತರ, ಆಸ್ಪತ್ರೆಯಿಂದ ನಿರ್ಗಮಿಸಿದ ನಂತರ, ಚಟರ್ಜಿ ಅವರು ಹಣವು ತನಗೆ ಸೇರಿದ್ದಲ್ಲ ಎಂದು ಪುನರುಚ್ಚರಿಸಿದರು. ನಾನು ಇಂತಹ ವ್ಯವಹಾರಗಳಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ ಎಂದರು.
ಬಂಗಾಳಕ್ಕೆ 7 ಹೊಸ ಜಿಲ್ಲೆಗಳ ಸೇರ್ಪಡೆ
ಇನ್ನು ಪಶ್ಚಿಮ ಬಂಗಾಳ ರಾಜ್ಯಕ್ಕೆ 7 ಹೊಸ ಜಿಲ್ಲೆಗಳನ್ನು ಸೇರಿಸಲಾಗುವುದು ಎಂದು ಬ್ಯಾನರ್ಜಿ ಇದೇ ವೇಳೆ ಘೋಷಿಸಿದರು. ಹಿಂದೆ ಬಂಗಾಳದಲ್ಲಿ 23 ಜಿಲ್ಲೆಗಳಿದ್ದವು ಈಗ ಅದನ್ನು 30 ಕ್ಕೆ ಹೆಚ್ಚಿಸಲಾಗಿದೆ. 7 ಹೊಸ ಜಿಲ್ಲೆಗಳು ಸೇರಿವೆ. ಸುಂದರ್ಬನ್, ಇಚೆಮಟಿ, ರಾಣಾಘಾಟ್, ಬಿಷ್ಣುಪುರ್, ಜಂಗಿಪುರ್, ಬೆಹ್ರಾಂಪುರ ಮತ್ತು ಇನ್ನೂ ಒಂದು ಜಿಲ್ಲೆಗೆ ಬಸಿರ್ಹತ್ ಎಂದು ಹೆಸರಿಸಲಾಗುವುದು ಎಂದು ಸಿಎಂ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ