HOME » NEWS » National-international » WEST BENGAL BJP LEADER MANISH SHUKLA SHOT DEAD IN WEST BENGAL GOVERNOR SUMMONS CM MAMATA BANERJEE SCT

West Bengal: ಪಶ್ಚಿಮ ಬಂಗಾಳದ ಬಿಜೆಪಿ ನಾಯಕನಿಗೆ ಗುಂಡಿಕ್ಕಿ ಹತ್ಯೆ; ಮಮತಾ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

Kolkata News: ನಿನ್ನೆ ಸಂಜೆ ಬೈಕ್​ನಲ್ಲಿ ಬಂದ ಇಬ್ಬರು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಮನೀಷ್ ಶುಕ್ಲಾ ಅವರಿಗೆ ತಿತಾಘರ್ ಪೊಲೀಸ್ ಠಾಣೆಯ ಎದುರಲ್ಲೇ ಗುಂಡು ಹಾರಿಸಿ, ಕೊಲೆ ಮಾಡಿದ್ದಾರೆ.

Sushma Chakre | news18-kannada
Updated:October 5, 2020, 8:28 AM IST
West Bengal: ಪಶ್ಚಿಮ ಬಂಗಾಳದ ಬಿಜೆಪಿ ನಾಯಕನಿಗೆ ಗುಂಡಿಕ್ಕಿ ಹತ್ಯೆ; ಮಮತಾ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ
ಮನೀಷ್ ಶುಕ್ಲಾ
  • Share this:
ಕೊಲ್ಕತಾ (ಅ. 5): ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಮನೀಷ್ ಶುಕ್ಲಾ ಅವರ ಮೇಲೆ ಭಾನುವಾರ ಇಬ್ಬರು ಅಪರಿಚಿತರು ಗುಂಡು ಹಾರಿಸಿ, ಹತ್ಯೆ ಮಾಡಿದ್ದರು. ಈ ಹತ್ಯೆಯನ್ನು ಖಂಡಿಸಿ ಇಂದು ಪಶ್ಚಿಮ ಬಂಗಾಳದ ಬಾರಖ್​ಪುರದಲ್ಲಿ ಇಂದು 12 ಗಂಟೆಗಳ ಕಾಲ ಬಂದ್​ಗೆ ಕರೆನೀಡಿರುವುದಾಗಿ ಬಿಜೆಪಿ ತಿಳಿಸಿದೆ. ನಿನ್ನೆ ಸಂಜೆ ಬೈಕ್​ನಲ್ಲಿ ಬಂದ ಇಬ್ಬರು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಮನೀಷ್ ಶುಕ್ಲಾ ಅವರಿಗೆ ತಿತಾಘರ್ ಪೊಲೀಸ್ ಠಾಣೆಯ ಎದುರಲ್ಲೇ ಗುಂಡು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟರಲ್ಲಿ ಅವರ ಪ್ರಾಣ ಹೋಗಿತ್ತು.

ಮನೀಷ್​ ಶುಕ್ಲಾ ಅವರನ್ನು ಭೇಟಿಯಾಗಲು ಇಂದು ಕೇಂದ್ರ ಬಿಜೆಪಿ ನಾಯಕರ ತಂಡ ಪಶ್ಚಿಮ ಬಂಗಾಳಕ್ಕೆ ಆಗಮಿಸಲಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ್ ಸಿಂಗ್, ಸಂಸದರಾದ ಅರ್ಜುನ್ ಸಿಂಗ್, ಸೌಮಿತ್ರ ಖಾನ್, ಜಗನ್ನಾಥ್ ಸರ್ಕಾರ್, ಶಂಕು ದೇಬ್ ಪಾಂಡಾ ಅವರ ತಂಡ ಇಂದು ಬೆಳಗ್ಗೆ ಮನೀಷ್ ಶುಕ್ಲಾ ಮನೆಗೆ ಭೇಟಿ ನೀಡಿ, ಅವರ ಕುಟುಂಬಸ್ಥರೊಂದಿಗೆ ಮಾತನಾಡಲಿದೆ.
ಒಂದೆಡೆ ಬಿಜೆಪಿ ನಾಯಕರು ಈ ಹತ್ಯೆಯನ್ನು ಖಂಡಿಸಿ, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕಾರ್ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸ್ಪಷ್ಟನೆ ಕೇಳಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಡಿಜಿಪಿಗೆ ಸಮನ್ಸ್​ ಜಾರಿಗೊಳಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಈ ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.


ನಿನ್ನೆ ಸಂಜೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಮನೀಷ್ ಶುಕ್ಲಾ ತಮ್ಮ ಪಕ್ಷದ ಇತರೆ ನಾಯಕರೊಂದಿಗೆ ಹೋಗುತ್ತಿದ್ದಾಗ ಬೈಕ್​ನಲ್ಲಿ ಬಂದ ಇಬ್ಬರು ಗುಂಡು ಹಾರಿಸಿದ್ದರು. ಮಾಸ್ಕ್​ನಿಂದ ಅವರು ಮುಖ ಮುಚ್ಚಿಕೊಂಡಿದ್ದರು. ಮನೀಷ್ ಶುಕ್ಲಾ ಅವರ ಜೊತೆಗಿದ್ದ ಇನ್ನಿಬ್ಬರು ನಾಯಕರಿಗೂ ಈ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಪಶ್ಚಿಮ ಬಂಗಾಳದಲ್ಲಿ ಕೊಲೆಗಳು ಸಾಮಾನ್ಯ ಎಂಬಂತಾಗಿದೆ. ಟಿಎಂಸಿ (ತೃಣಮೂಲ ಕಾಂಗ್ರೆಸ್) ಗೂಂಡಾಗಳಿಂದ ಮನೀಷ್ ಶುಕ್ಲಾ ಹತ್ಯೆಯಾಗಿದೆ ಎಂದು ಬಿಜೆಪಿ ನಾಯಕರು ಟ್ವಿಟ್ಟರ್​ ಮೂಲಕ ದೀದಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Published by: Sushma Chakre
First published: October 5, 2020, 8:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories